Bigg Boss Kannada: ತುತ್ತು ಅನ್ನಕ್ಕೂ ಮನೆಯಲ್ಲಿ ಜಗಳ; ಸುರೇಶ್‌, ಐಶ್ವರ್ಯ ನಡುವೆ ಮಾತಿನ ಚಕಮಕಿ
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada: ತುತ್ತು ಅನ್ನಕ್ಕೂ ಮನೆಯಲ್ಲಿ ಜಗಳ; ಸುರೇಶ್‌, ಐಶ್ವರ್ಯ ನಡುವೆ ಮಾತಿನ ಚಕಮಕಿ

Bigg Boss Kannada: ತುತ್ತು ಅನ್ನಕ್ಕೂ ಮನೆಯಲ್ಲಿ ಜಗಳ; ಸುರೇಶ್‌, ಐಶ್ವರ್ಯ ನಡುವೆ ಮಾತಿನ ಚಕಮಕಿ

ಬಿಗ್‌ ಬಾಸ್‌ ಮನೆಯಲ್ಲಿಇ ತುತ್ತು ಅನ್ನಕ್ಕೂ ಜಗಳ ಆಗುವಂತಾಗಿದೆ. ಬಿಗ್ ಬಾಸ್‌ ಮನೆಯ ರೇಷನ್ ಕಡಿಮೆ ಇದೆ ಎಂದು ಸುರೇಶ್‌ ಹೇಳುತ್ತಾರೆ. ಎರಡನೇ ಬಾರಿ ಊಟ ಹಾಕಿಸಿಕೊಳ್ಳಲು ಬಂದಾಗ ಐಶ್ಚರ್ಯ ಬೇಸರ ಮಾಡಿಕೊಂಡಿದ್ದಾರೆ.

ಸುರೇಶ್‌, ಐಶ್ವರ್ಯ ನಡುವೆ ಮಾತಿನ ಚಕಮಕಿ
ಸುರೇಶ್‌, ಐಶ್ವರ್ಯ ನಡುವೆ ಮಾತಿನ ಚಕಮಕಿ

ಬಿಗ್‌ ಬಾಸ್‌ ಮನೆಯಲ್ಲಿ ದಿನಗಳು ಕಳೆಯುತ್ತಿದ್ದಂತೆ ಆಟ ಕಠಿಣವಾಗುತ್ತಾ ಹೋಗುತ್ತದೆ. ಅಷ್ಟೇ ಅಲ್ಲ ಮನೆಯ ರೇಷನ್ ಮಿತಿ ಕೂಡ ಕಡಿಮೆ ಆಗುತ್ತದೆ. ಅದೇ ರೀತಿ ಕೊನೆಯ ದಿನಗಳಲ್ಲಿ ಮನೆಯವರಿಗೆ ಊಟದ ಬಗ್ಗೆ ಮನಸ್ತಾಪ ಆಗುತ್ತದೆ. ಐಶ್ವರ್ಯ ಹಾಗೂ ಸುರೇಶ್‌ ಮಧ್ಯವೂ ಇದೇ ರೀತಿ ಆಗಿದೆ. ಐಶ್ವರ್ಯ ಎರಡನೇ ಬಾರಿ ತನಗೆ ಊಟ ಬೇಕು ಎಂದು ಬರುತ್ತಾರೆ. ಆದರೆ ಸುರೇಶ್‌ ಊಟ ನೀಡಲು ಒಪ್ಪುವುದಿಲ್ಲ. ಭವ್ಯಾ ಗೌಡ ಎಲ್ಲರಿಗೂ ಊಟ ಕೊಡುತ್ತಾ ಇರುತ್ತಾರೆ. ಆದರೆ ಆ ಸಂದರ್ಭದಲ್ಲಿ ಜಗಳ ಆಗುತ್ತದೆ.

ಬಿಗ್‌ ಬಾಸ್‌ ಮನೆಯ ಇತರ ಸ್ಪರ್ಧಿಗಳು ಊಟಕ್ಕೆ ಕುಳಿತಿರುತ್ತಾರೆ. ಅಡುಗೆ ಮಾಡುವ ತಂಡದವರು ಎಲ್ಲರಿಗೂ ಎಷ್ಟು ಬೇಕೋ ಅಷ್ಟನ್ನು ತಯಾರಿಸಿರುತ್ತಾರೆ. ನಂತರ ಎಲ್ಲರಿಗೂ ಊಟ ನೀಡುತ್ತಿರುತ್ತಾರೆ. ಐಶ್ಚರ್ಯ ತನಗೆ ಎರಡನೇ ಬಾರಿ ಸ್ವಲ್ಪ ಬೇಕು ಎಂದು ಕೇಳುತ್ತಾ ಬಂದಾಗ ಸುರೇಶ್‌ ಇಲ್ಲ ಎಲ್ಲರಿಗೂ ಒಂದೊಂದೇ ಬೌಲ್ ನೀಡೋದು ಇನ್ನೂ ಎಂಟು ಜನ ಊಟ ಮಾಡಬೇಕಿದೆ ಎಂದು ಹೇಳುತ್ತಾರೆ.

ಆ ಮಾತನ್ನು ಕೇಳಿ ಐಶ್ವರ್ಯ ಅವರಿಗೆ ಬೇಸರ ಆಗುತ್ತದೆ. ನಮ್ಮ ಪಾಳಿ ಇದ್ದಾಗ ನಾವು ಯಾರಿಗೂ ಈ ರೀತಿ ಮಾಡಿಲ್ಲ. ಇದೇನಿದು ನಿಮ್ಮದು ಹೊಸ ರೂಲ್ಸ್‌ ಎಂದು ಪ್ರಶ್ನೆ ಮಾಡುತ್ತಾರೆ. ಬೇಡ ಬಿಡಿ ಎಂದು ಹೇಳುತ್ತಾ ಊಟವನ್ನು ಮತ್ತೆ ತಟ್ಟೆಯಿಂದ ಪಾತ್ರೆಗೆ ಹಾಕಲು ಮುಂದಾಗುತ್ತಾರೆ. ಆಗ ಎಲ್ಲರಿಗೂ ಬೇಸರ ಆಗುತ್ತದೆ. ಇಲ್ಲ ನೀವು ತಗೋಳಿ ಎಂದು ಭವ್ಯಾ ಹೇಳುತ್ತಾರೆ.

ನಾನು ತಗೊಂಡಿದ್ದೇ ಸ್ವಲ್ಪ ಎಂದು ಐಶ್ವರ್ಯ ಹೇಳುತ್ತಾರೆ. ಉಗ್ರಂ ಮಂಜು ಸುರೇಶ್‌ ಅವರ ವಿರುದ್ಧ ಮಾತಾಡುತ್ತಾರೆ. ಯಾರಾದ್ರೂ ತಟ್ಟೆ ಎತ್ತಿಕೊಂಡು ಬಂದ್ರೆ ಒಂದು ತುತ್ತು ಬೇಕು ಅಂದ್ರೆ ಹಾಕು ಎಂದು ವಾದ ಮಾಡುತ್ತಾರೆ. ಆದರೆ ಅಷ್ಟರಲ್ಲಾಗಲೇ ಐಶ್ವರ್ಯ ಅವರಿಗೆ ತುಂಬಾ ಬೇಸರ ಆಗಿರುತ್ತದೆ. ಊಟಕ್ಕೂ ಇಷ್ಟೊಂದು ಮಾತು ಬೇಕಾ ಎಂದು ಕೇಳುತ್ತಾರೆ. ಆಗ ಸುರೇಶ್ ನಿನ್ನಿಂದ ನಾನು ಏನೂ ಕಲಿಬೇಕಾಗಿಲ್ಲ ಎಂದು ಹೇಳುತ್ತಾರೆ. ನೀವು ಸುಮ್ನೆ ಇರಿ ಮಾತಾಡ್ಬೇಡಿ ಎಂದು ಮತ್ತೆ ಐಶ್ವರ್ಯ ಹೇಳುತ್ತಾರೆ. ಹೀಗೆಲ್ಲ ಆಗಿ ಮತ್ತೆ ಸಾಕಷ್ಟು ಚರ್ಚೆಯಾಗುತ್ತದೆ.

ನೇರ ನಾಮಿನೇಷನ್ ಆರಂಭ

ಬಿಗ್‌ ಬಾಸ್‌ ಮನೆಯಲ್ಲಿ ನೇರ ನಾಮಿನೇಷನ್ ಆರಂಭವಾಗಿದೆ. ಈ ನೇರ ನಾಮಿನೇಷನ್‌ನಲ್ಲಿ ಧರ್ಮ ಅವರು ಅನುಷಾ ಹೆಸರನ್ನು ತೆಗೆದುಕೊಂಡಿರುವುದು ಎಲ್ಲರಿಗೂ ಆಶ್ಚರ್ಯ ಎನಿಸಿದೆ. ಇಷ್ಟು ದಿನ ಒಬ್ಬರೊಟ್ಟಿಗೆ ಇನ್ನೊಬ್ಬರು ಅನ್ಯೂನ್ಯವಾಗಿದ್ದರು.

ಬಿಗ್ ಬಾಸ್‌ ಹೇಳಿದ ಪ್ರಕಾರ ಮೊದಲು ನೇರ ನಾಮಿನೇಷನ್ ಪ್ರಕ್ರಿಯೆ ಇರುತ್ತದೆ. ಅದಾದ ನಂತರದಲ್ಲಿ ಬೇರೆ ನಾಮಿನೇಷನ್‌ಗಳೂ ಇರುತ್ತದೆ. ಈ ರೀತಿ ನೇರ ನಾಮಿನೇಷನ್ ಮಾಡುವ ಸಂದರ್ಭದಲ್ಲಿ ಮೋಕ್ಷಿತಾ, ಗೌತಮಿ ಹಾಗೂ ಐಶ್ವರ್ಯ ಎಲ್ಲರೂ ಅನುಷಾ ಅವರ ಹೆಸರನ್ನು ಹೇಳಿದ್ದಾರೆ. ಮೊದಲು ಶಾಂತವಾಗಿ ಎಲ್ಲರ ಮಾತನ್ನೂ ಕೇಳಿಸಿಕೊಂಡ ಅನುಷಾ ನಂತರ ಉತ್ತರ ನೀಡಿದ್ದಾರೆ.

Whats_app_banner