ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಸಿಕ್ಕಿದ್ದೇ ಛಾನ್ಸ್‌ ಅಂತ ಅಪೇಕ್ಷಾಗೆ ಪಾರ್ಥನಿಂದ ಕಿಸ್‌; ಬೊಂಬೆ ಹೇಳುತೈತೆ ನೀನೇ ರಾಜಕುಮಾರ ನೆನಪಿಸಿದ ಭೂಮಿಕಾ ಗಿಫ್ಟ್‌

Amruthadhaare: ಸಿಕ್ಕಿದ್ದೇ ಛಾನ್ಸ್‌ ಅಂತ ಅಪೇಕ್ಷಾಗೆ ಪಾರ್ಥನಿಂದ ಕಿಸ್‌; ಬೊಂಬೆ ಹೇಳುತೈತೆ ನೀನೇ ರಾಜಕುಮಾರ ನೆನಪಿಸಿದ ಭೂಮಿಕಾ ಗಿಫ್ಟ್‌

Amruthadhaare Serial Yesterday Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನ ಭಾನುವಾರದ ಸಂಚಿಕೆಯಲ್ಲಿ ಭೂಮಿಕಾ ನೀಡಿರುವ ಹುಟ್ಟುಹಬ್ಬದ ಉಡುಗೊರೆಯನ್ನು ಗೌತಮ್‌ ಬಿಚ್ಚಿ ನೋಡಿ ಖುಷಿಪಡುತ್ತಾನೆ. ಇದೇ ಸಮಯದಲ್ಲಿ ಪಾರ್ಥ ಅಪೇಕ್ಷಾಳಿಗೆ ಕಿಸ್‌ ನೀಡುತ್ತಾನೆ.

Amruthadhaare: ಸಿಕ್ಕಿದ್ದೇ ಛಾನ್ಸ್‌ ಅಂತ ಅಪೇಕ್ಷಾಗೆ ಪಾರ್ಥನಿಂದ ಕಿಸ್‌
Amruthadhaare: ಸಿಕ್ಕಿದ್ದೇ ಛಾನ್ಸ್‌ ಅಂತ ಅಪೇಕ್ಷಾಗೆ ಪಾರ್ಥನಿಂದ ಕಿಸ್‌

ಮಂದಾಕಿನಿ ಉಡುಗೊರೆ ನೀಡಿದ ನೆಕ್ಲೆಸ್‌ ಬಗ್ಗೆ ಶಕುಂತಲಾದೇವಿ ಸ್ನೇಹಿತೆಯರು "ಎಲ್ಲಿಂದ ಖರೀದಿಸಿದ್ರಿ" ಎಂದೆಲ್ಲ ಕೇಳುತ್ತಾರೆ. ಆಕೆ ರೋಲ್ಡ್‌ಗೋಲ್ಡ್‌ ನೆಕ್ಲೆಸ್‌ ಉಡುಗೊರೆ ಕೊಟ್ಟಿರ್ತಾರೆ. ನಮಗೆ ಆ ಡಿಸೈನ್‌ ಸಿಗಲಿಲ್ಲ ಎಂದು ಶಕುಂತಲಾ ಸ್ನೇಹಿತೆಯರು ಹೇಳುತ್ತಾರೆ. "ನಾನು ನನ್ನ ಅಳಿಯಂದ್ರಿಗಾಗಿ ಸ್ಪೆಷಲ್‌ ಆಗಿ ಡಿಸೈನ್‌ ಮಾಡಿಸ್ಕೊಂಡೆ" ಎಂದು ಮಂದಾಕಿನಿ ಹೇಳುತ್ತಾರೆ. ಇದಾದ ಬಳಿಕ ಶಕುಂತಲಾ ಗೆಳತಿ ಗೌತಮ್‌ ಕೊರಳಲ್ಲಿದ್ದ ನೆಕ್ಲೆಸ್‌ ಫೋಟೋ ತೆಗೆದುಕೊಳ್ಳುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ಗೌತಮ್‌ಗೆ ಭೂಮಿಕಾ ಉಡುಗೊರೆ ನೀಡಿರುತ್ತಾರೆ. ಆ ಉಡುಗೊರೆ ತೆರೆದು ನೋಡದೇ ಗೌತಮ್‌ಗೆ ಮನಸ್ಸು ತಡೆಯುತ್ತಿಲ್ಲ. ನೀವು ಒಬ್ರೆ ಇದ್ದಾಗ ಓಪನ್‌ ಮಾಡಿ ಎಂದು ಭೂಮಿಕಾ ಹೇಳಿರುತ್ತಾರೆ. ಗೌತಮ್‌ಗೆ ಭೂಮಿಕಾ ಏನು ಗಿಫ್ಟ್‌ ನೀಡಿರುತ್ತಾರೆ ನೋಡಿಕೊಂಡು ಬಾ ಎಂದು ಅಶ್ವಿನಿಯನ್ನು ಶಕುಂತಲಾದೇವಿ ಕಳುಹಿಸುತ್ತಾಳೆ.

ಇನ್ನೊಂದೆಡೆ ಅಪೇಕ್ಷಾ ಫೋನ್‌ನಲ್ಲಿ ಮಾತನಾಡುತ್ತ ಇರುವಾಗ ಅಲ್ಲಿಗೆ ಮನೆಹಾಳ ಮಾವ ಬರುತ್ತಾರೆ. ಮನೆ ನೋಡಿಕೊಂಡು ಬಾ ಎಂದು ಹೇಳುತ್ತಾರೆ. ಮನೆ ತೋರಿಸಲು ಪಾರ್ಥನನ್ನು ಕಳುಹಿಸುವೆ ಎಂದು ಹೇಳುತ್ತಾನೆ. ಈ ಮೂಲಕ ಇವರಿಬ್ಬರು ಒಟ್ಟಿಗೆ ಇರುವಂತೆ ಮಾಡುವ ಪ್ರಯತ್ನ ಮಾವ ಮಾಡುತ್ತಾನೆ. "ಲಡ್ಡುನ ತಂದು ಬಾಯಿಗೆ ಹಾಕ್ತಿಯಲ್ವ ಮಾಮ" ಎಂದುಕೊಳ್ಳುತ್ತಾನೆ. ಮಂದಾಕಿನಿ ತನ್ನ ಮಗಳ ಬಳಿ ಮಾತನಾಡುತ್ತ ಇರುತ್ತಾರೆ. ಭೂಮಿಕಾಳಿಗೆ ತಾನು ಗೋಲ್ಡ್‌ ರೋಲ್ಡ್‌ ಕೊಟ್ಟಿರುವ ವಿಷಯ ಹೇಳುತ್ತಾಳೆ. ನಾನು ಒರಿಜಿನಲ್‌ ಗೋಲ್ಡ್‌ ಚೈನ್‌ ಕೊಡುವ ತನಕ ನೀನು ಮ್ಯಾನೇಜ್‌ ಮಾಡು ಎಂದು ಮಗಳಲ್ಲಿ ಕೇಳುತ್ತಾರೆ.

ಗೌತಮ್‌ ಉಡುಗೊರೆ ಬಿಚ್ಚುವ ಸಮಯದಲ್ಲಿ ಅಲ್ಲಿಗೆ ಭೂಮಿಕಾ ಬರುತ್ತಾರೆ. ಯಾಕೆ ನಾನು ಹೇಳಿದ ಸೀರೆ ಉಟ್ಟಿಲ್ಲ ಎಂದು ಗೌತಮ್‌ ಕೇಳುತ್ತಾನೆ. ತಕ್ಷಣ ಅಪರ್ಣ ನಾನೇ ಇದನ್ನು ತೊಡಲು ಹೇಳಿದೆ. ಈ ಹಿಂದೆ ಅನೇಕ ಬಾರಿ ಆ ಸೀರೆ ಒಡವೆ ಹಾಕಿಕೊಂಡಿದ್ರು. ಎಲ್ಲಾ ಫೋಟೋದಲ್ಲಿ ಅದೇ ಇತ್ತು ಎನ್ನುತ್ತಾಳೆ. "ನಾನು ಆಸೆಪಟ್ಟ ನೆಕ್ಲೆಸ್‌, ಸೀರೆ ಇದ್ರೆ ಚೆನ್ನಾಗಿರೋದು" ಎಂದು ಗೌತಮ್‌ ಹೇಳುತ್ತಾನೆ.

ಎಲ್ಲರೂ ಹೋದ ಬಳಿಕ ಗೌತಮ್‌ ಉಡುಗೊರೆ ಓಪನ್‌ ಮಾಡುತ್ತಾನೆ. ಆಡಿಸಿ ನೋಡು ಬೀಳಿಸಿ ನೋಡು ಚನ್ನಪಟ್ಟಣದ ಗೊಂಬೆ ಕಾಣಿಸುತ್ತದೆ. ಆ ಗೊಂಬೆಯನ್ನು ಖುಷಿಯಿಂದ ನೋಡುತ್ತಾನೆ. ಮರೆಯಲ್ಲಿ ಈ ಗೊಂಬೆಯನ್ನು ನೋಡಿ ಅಶ್ವಿನಿ "ಥೂ ಇದೊಂದು ಗಿಫ್ಟಾ?" ಎಂದುಕೊಳ್ಳುತ್ತಾಳೆ. "ಈ ಗಿಫ್ಟ್‌ ನೋಡ್ತಾ ಇದ್ರೆ ನೋಡ್ತಾನೇ ಇರಬೇಕು ಎಂದೆನಿಸುತ್ತದೆ. ಮನಸ್ಸು ಬಹಳ ಹಿಂದಕ್ಕೆ ಓಡಿ ಹೋಗುತ್ತದೆ" ಎಂದೆಲ್ಲ ಬಾಲ್ಯವನ್ನು ನೆನಪಿಸಿಕೊಳ್ಳುತ್ತಾನೆ. ಆ ಗಿಫ್ಟ್‌ ನೋಡುತ್ತ ನೀನೇ ರಾಜ್‌ಕುಮಾರ ಎಂದು ಖುಷಿಪಡುತ್ತಾ ಇರುತ್ತಾನೆ. ಆಮೇಲೆ ಭೂಮಿಕಾ ಎದುರು ಸಿಕ್ಕಾಗ ನನಗೆ ಈ ಉಡುಗೊರೆ ತುಂಬಾ ಇಷ್ಟವಾಯ್ತು ಎನ್ನುತ್ತಾನೆ.

ಜೀವನ್‌ ಮತ್ತು ಭೂಮಿಕಾ ಮಾತನಾಡುತ್ತ ಇರುತ್ತಾರೆ. ನೆಕ್ಲೆಸ್‌ ವಿಷಯ ನನಗೆ ಗೊತ್ತಾಯ್ತು ಎಂದು ಜೀವನ್‌ ಹೇಳುತ್ತಾನೆ. ನಿನಗೆ ಸೇವಿಂಗ್ಸ್‌ನಿಂದ ಹಣ ನೀಡಿದೆ ಎಂದು ಹೇಳುತ್ತಾಳೆ. ಹೀಗೆ ಅಕ್ಕ ಮತ್ತು ತಮ್ಮನ ನಡುವೆ ಒಂದಿಷ್ಟು ಕಾಳಜಿಯ ಮಾತುಕತೆ ನಡೆಯುತ್ತವೆ. ಅಪೇಕ್ಷಾಳಿಗೆ ಪಾರ್ಥ ಮನೆ ತೋರಿಸುತ್ತ ಇರುತ್ತಾನೆ. ಒಂದಿಷ್ಟು ಪ್ರೀತಿಯ ಮಾತುಗಳು ಇರುತ್ತವೆ. ಈ ಸಮಯದಲ್ಲಿ ಒಬ್ಬರೊಬ್ಬರನ್ನು ಅಪ್ಪಿಕೊಳ್ಳುತ್ತಾರೆ. ಆ ಸಮಯದಲ್ಲಿ ಸಿಕ್ಕಿದ್ದೇ ಚಾನ್ಸ್‌ ಎಂದು ಕಿಸ್‌ ನೀಡುತ್ತಾನೆ.

IPL_Entry_Point