Amruthadhaare: ಎಚ್ಚರಗೊಂಡರೂ ಪ್ರಜ್ಞೆ ತಪ್ಪಿದಂತೆ ಜೈದೇವ್ ನಾಟಕ; ಕಿರಾತಕನ ಸಹಾಯಕ್ಕೆ ನಿಂತ ಲಕ್ಕಿ ಲಕ್ಷ್ಮಿಕಾಂತ್- ಅಮೃತಧಾರೆ ಇಂದಿನ ಕಥೆ
Amruthadhaare Serial Today Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಚಾಕು ಚುಚ್ಚಿಕೊಂಡ ಜೈದೇವ್‌ನ ಇನ್ನೊಂದು ಮುಖ ಇಂದಿನ ಸಂಚಿಕೆಯಲ್ಲಿ ಅನಾವರಣಗೊಂಡಿದೆ. ತಾನು ಬೇಕೆಂದು ಈ ರೀತಿ ಮಾಡಿಕೊಂಡೆ ಎಂದು ಹೇಳುತ್ತಾನೆ.
Amruthadhaare Serial Today Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಚಾಕು ಚುಚ್ಚಿಕೊಂಡ ಜೈದೇವ್‌ನ ಇನ್ನೊಂದು ಮುಖ ಇಂದಿನ ಸಂಚಿಕೆಯಲ್ಲಿ ಅನಾವರಣಗೊಂಡಿದೆ. ಪಾರ್ಥನ ಕೊಲ್ಲಲು ಪ್ರಯತ್ನಿಸಿದ ಜೈದೇವ್‌ನ ಮೇಲೆ ಶಕುಂತಲಾದೇವಿ ಕೋಪ ಕಡಿಮೆಯಾಗಿಲ್ಲ. ಆತ ಈ ಮನೆಗೆ ಬರಬಾರದು ಎಂದು ಹೇಳುತ್ತಿದ್ದಾರೆ. ಆಸ್ಪತ್ರೆಯಲ್ಲಿ ಏನು ನಡೆಯುತ್ತಿದೆ ನೋಡಿಕೊಂಡು ಬರುವೆ ಎಂದು ಲಕ್ಷ್ಮಿಕಾಂತ್ ಹೊರಡುತ್ತಾರೆ. ಆದರೆ, ಆತನ ಬಗ್ಗೆ ಕಾಳಜಿ ಅಗತ್ಯವಿಲ್ಲ, ನೀನು ಹೋಗಬೇಡ ಎಂದು ಶಕುಂತಲಾದೇವಿ ಹೇಳುತ್ತಾರೆ. ಅವನು ನನ್ನ ಮಗನಲ್ಲ ಎಂದು ಹೇಳುತ್ತಾರೆ.
ಆಸ್ಪತ್ರೆಯಲ್ಲಿ ಎಲ್ಲರ ಚಿಂತೆ ಮುಂದುವರೆದಿದೆ. ಜೈದೇವ್ ಪ್ರಜ್ಞೆ ಬರಲು ಎಲ್ಲರೂ ಕಾಯುತ್ತಿದ್ದಾರೆ. ಒಂದಿಷ್ಟು ಭಾವನಾತ್ಮಕ ಮಾತುಗಳು ನಡೆಯುತ್ತವೆ. “ಅಪ್ಪ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ. ಇದಕ್ಕೇನ ನಾನು ಹೋರಾಡಿದ್ದು. ನನ್ನ ತಮ್ಮಂದಿರು, ತಂಗಿಯರನ್ನು ತಲೆ ಮೇಲೆ ಹೊತ್ತು ಮೆರೆಸಿದ್ದೀನಿ. ನನಗೆ ತುಂಬಾ ದೊಡ್ಡ ಬಹುಮಾನ ಕೊಟ್ಟ. ಎಲ್ಲರ ನೆಮ್ಮದಿ ಹಾಳಾಗಿ ಹೋಯ್ತು” ಎಂದು ಗೌತಮ್ ದಿವಾನ್ ಹೇಳುತ್ತಾರೆ. “ಸಂಬಂಧದಲ್ಲಿ ಕೆಲವೊಮ್ಮೆ ಕೆಲವರಿಗೆ ನಮ್ಮ ಪ್ರೀತಿ, ಕಾಳಜಿ ಅಗತ್ಯ ಇರುವುದಿಲ್ಲ” ಎಂದು ಆನಂದ್ ಹೇಳುತ್ತಾನೆ.
ಶಕುಂತಲಾದೇವಿ ನಿದ್ದೆ ಮಾಡಿದ ಬಳಿಕ ಲಕ್ಷ್ಮಿಕಾಂತ್ ಆಸ್ಪತ್ರೆಗೆ ಬರುತ್ತಾರೆ. ಇನ್ನೊಂದೆಡೆ ಮಲ್ಲಿ ಕಣ್ಣೀರು ಹಾಕುತ್ತಿದ್ದಾಳೆ. ಆಕೆಗೆ ಭೂಮಿಕಾ ಸಮಾಧಾನ ಹೇಳುತ್ತಿದ್ದಾಳೆ. “ನನಗೆ ನೆಮ್ಮದಿಯೇ ಇಲ್ಲ. ಬರೀ ನೋವೇ ತುಂಬಿದೆ ನನ್ನ ಬದುಕಿನಲ್ಲಿ” ಎಂದು ಮಲ್ಲಿ ಹೇಳುತ್ತಾಳೆ. “ನಮ್ಮವರಿಗಾಗಿ ನಾವು ಗಟ್ಟಿಯಾಗಬೇಕು. ನೀನು ಒಂಟಿಯಲ್ಲ. ನಾವೆಲ್ಲರೂ ನಿನ್ನ ಜತೆ ಇದ್ದೇವೆ” ಎಂದು ಭೂಮಿಕಾ ಸಮಾಧಾನ ಹೇಳುತ್ತಿದ್ದಾಳೆ. “ಅವರು ಮಾಡಿದ ಮೋಸವನ್ನು ಕೇಳಿದ್ದೇ ಇದಕ್ಕೆಲ್ಲ ಕಾರಣ” ಎಂದು ಮಲ್ಲಿ ಹೇಳುತ್ತಾರೆ. ಒಟ್ಟಾರೆ, ಅಷ್ಟೆಲ್ಲ ಅನ್ಯಾಯ ಮಾಡಿದ ಜೈದೇವ್‌ಗಾಗಿ ಎಲ್ಲರೂ ಮರಗುತ್ತಿರುವುದು ಅಮೃತಧಾರೆಯ ನಿನ್ನೆ ಮತ್ತು ಇಂದಿನ ಸಂಚಿಕೆಯನ್ನು ಸಾಕಷ್ಟು ನಾಟಕೀಯವಾಗಿಸಿದೆ.
ಲಕ್ಷ್ಮಿಕಾಂತ್ ಜೈದೇವ್‌ನ ಬೆಡ್ ಮುಂದೆ ಮಾತನಾಡುತ್ತಿದ್ದಾನೆ. “ಯಾಕೋ ಹೀಗೆ ಮಾಡಿಕೊಂಡೆ. ಈಗ ಜೀವಂತ ಶವದಂತೆ ಮಲಗಿದ್ದೀಯ” ಎಂದು ಹೇಳುತ್ತಿದ್ದಾರೆ. ಈ ಸಮಯದಲ್ಲಿ ಆತನಿಗೆ ಪ್ರಜ್ಞೆ ಬರುವ ಸೂಚನೆ ಕಂಡು ವೈದ್ಯರನ್ನು ಕರೆಯುತ್ತಾರೆ. ವೈದ್ಯರು ಬಂದು ಪರೀಕ್ಷಿಸುತ್ತಾರೆ. “ದೇವರ ದಯೆಯಿಂದ ಏನೂ ತೊಂದರೆ ಇಲ್ಲ. ಈ ಸ್ಥಿತಿಯಲ್ಲಿ ಸರಿಯಾದ ಟೈಮ್‌ನಲ್ಲಿ ನೋಡಿದ್ದೀರಿ” ಎಂದು ಲಕ್ಷ್ಮಿಕಾಂತ್‌ನ ಡಾಕ್ಟರ್ ಹೊಗಳುತ್ತಾರೆ.
ಮನೆಯಲ್ಲಿ ಶಕುಂತಲಾ ಟೆನ್ಷನ್‌ನಲ್ಲಿದ್ದಾರೆ. ಯಾರಿಗೆ ಕಾಲ್ ಮಾಡಿದ್ರೂ ಯಾರೂ ಪಿಕ್ ಮಾಡದೆ ಇರುವುದು ಇವರ ಟೆನ್ಷನ್ ಹೆಚ್ಚುತ್ತದೆ. ಭೂಮಿಕಾಗೆ ಕಾಲ್ ಮಾಡುತ್ತಾರೆ. “ಬೇಗ ಹುಷಾರಾಗ್ತಾರೆ” ಎಂದು ಭೂಮಿಕಾ ಸುಳ್ಳು ಹೇಳುತ್ತಾರೆ.
ಜೈದೇವ್‌ನ ನಾಟಕ ತಿಳಿದುಕೊಂಡ ಲಕ್ಷ್ಮಿಕಾಂತ್
ಜೈದೇವ್‌ನ ಪಕ್ಕ ಲಕ್ಷ್ಮಿಕಾಂತ್ ಇದ್ದಾರೆ. “ಅಳಿಮಯ್ಯ ಏನೋ ಇದು. ನನ್ನ ಕಣ್ಣ ಮುಂದೆ ಬೆಳದ ಕೂಸು ನೀನು, ಹೀಗೆ ಮಲಗಿದ್ರೆ ಹೇಗೆ” ಎಂದೆಲ್ಲ ಲಕ್ಷ್ಮಿಕಾಂತ್ ಮಾತನಾಡುತ್ತಾರೆ. ಹೀಗೆ ಸಾಕಷ್ಟು ಡೈಲಾಗ್ ಹೇಳುವಾಗ “ನಿಜಾನ ಮಾಮ್ಸ್” ಎಂದು ಜೈದೇವ್‌ನ ಧ್ವನಿ ಕೇಳುತ್ತದೆ. ಈ ಸಮಯದಲ್ಲಿ ಜೈದೇವ್ ತನ್ನ ನಿಜವಾದ ಮುಖ ತೋರಿಸುತ್ತಾನೆ. ಎದ್ದೇಳುತ್ತಾನೆ. “ಅಷ್ಟು ಸುಲಭವಾಗಿ ನಿನ್ನ ಬಿಟ್ಟು ಹೋಗ್ತಿನಾ ನಾನು” ಎನ್ನುತ್ತಾನೆ. “ನನಗೆ ಆಗಲೇ ಪ್ರಜ್ಞೆ ಬಂದಿದೆ. ಸುಮ್ಮನೆ ಮಲಗಿದ್ದೆ. ಎಷ್ಟು ಚುಚ್ಚಿಕೊಂಡ್ರೆ ಏನಾಗುತ್ತದೆ, ಎಷ್ಟು ರಕ್ತ ಬರುತ್ತದೆ, ಎಲ್ಲಿಗೆ ಚುಚ್ಚಿಕೊಳ್ಳಬೇಕು ಎಲ್ಲಾ ಲೆಕ್ಕಾಚಾರ ಹಾಕಿಯೇ ನಾನು ಚುಚ್ಚಿಕೊಂಡದ್ದು” ಎಂದು ಜೈದೇವ್ ಸತ್ಯ ಹೇಳುತ್ತಾನೆ. “ಗಾಯವಾಗಬೇಕಿತ್ತು, ಬ್ಲಡ್ ಬರಬೇಕಿತ್ತು, ನನಗೆ ಏನೋ ಆಯ್ತು ಎಂದು ಎಲ್ಲರೂ ನಂಬಬೇಕಿತ್ತು, ಎಲ್ಲರ ಕರುಣೆ ಬೇಕಿತ್ತು, ಅದಕ್ಕೆ ಹೀಗೆ ಮಾಡಿದೆ. ನನ್ನ ಪ್ಲ್ಯಾನ್ ಸಕ್ಸಸ್” ಎಂದು ಹೇಳುತ್ತಾನೆ.
“ಅಂದಹಾಗೆ ನನಗೆ ಹೀಗೆ ಆಗಿರುವುದಕ್ಕೆ ಯಾರು ಚಿಂತೆ ಮಾಡುತ್ತಿದ್ದಾರೆ. ಒಮ್ಮೆ ತಿಳಿಸು. ನನ್ನ ಮೇಲೆ ಎಲ್ಲರಿಗೂ ಸಿಂಪತಿ ಮೂಡುತ್ತ?” ಎಂದು ಜೈದೇವ್ ಕೇಳುತ್ತಾನೆ. “ದೇವರಾಣೆಗೂ ಸಿಂಪತಿ ಮೂಡೋದಿಲ್ಲ” ಎಂದು ಲಕ್ಷ್ಮಿಕಾಂತ್ ಹೇಳುತ್ತಾರೆ. “ನಿನಗೆ ಹೀಗೆ ಆಯ್ತು ಅಂತ ಬೇಜಾರಿದೆ ಅಷ್ಟೇ, ಯಾರೂ ನಿನ್ನ ಕ್ಷಮಿಸಲು ರೆಡಿ ಇಲ್ಲ. ನೀನು ಎಲ್ಲರ ನಂಬಿಕೆಯನ್ನು ಕಳೆದುಕೊಂಡಿದ್ದೀಯ ಅಳಿಮಯ್ಯ. ನಿನಗೋಸ್ಕರ ಅಳ್ತಾ ಇರೋದು ನಿನ್ನ ಮಡದಿ ಮಲ್ಲಿ ಮಾತ್ರ” ಎಂದು ಹೇಳುತ್ತಾರೆ. “ಅವಳೊಬ್ಬಳ ಸಪೋರ್ಟ್ ಇದ್ದರೆ ಸಾಕು, ಎಲ್ಲರನ್ನೂ ಅವಳ ಮೂಲಕವೇ ದಾರಿಗೆ ತರ್ತಿನಿ” ಎಂದು ಜೈದೇವ್ ಹೇಳುತ್ತಾನೆ. “ನನಗೆ ಒಂದು ಸಹಾಯ ಮಾಡು, ಮನೆಗೆ ಹೋಗಿ ಅಮ್ಮನ ಮುಂದೆ ಕರಳುಕಿತ್ತು ಹೋಗುವ ಹಾಗೇ ನಾಟಕ ಮಾಡು. ಯಾವ ಕೈಯಿಂದ ಹೊರಗೆ ಹಾಕಿದ್ಲೋ ಅವಳೇ ಓಡೋಡಿ ಬರಬೇಕು” ಎಂದು ಜೈದೇವ್ ಹೇಳಿದಾಗ ಅದಕ್ಕೆ ಲಕ್ಷ್ಮಿಕಾಂತ್ ಒಪ್ಪುತ್ತಾರೆ.
ಅಮೃತಧಾರೆ ಸೀರಿಯಲ್ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ)
ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್: ಜೈದೇವ್
ಚಂದನ್: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ)
ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ)