Sanjana Burli: ಸತ್ತು ಮಲಗಿದ್ರೂ ಕಣ್ಣಲ್ಲಿ ನೀರು ಬರ್ತಿತ್ತು; ಪುಟ್ಟಕ್ಕನ ಮಕ್ಕಳು ಸ್ನೇಹಾ ಪಾತ್ರ ಸಂಜನಾ ಬುರ್ಲಿ ಶೂಟಿಂಗ್ ಅನುಭವ
ಸಂಜನಾ ಬುರ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ತಮ್ಮ ಪಾತ್ರದ ಕೊನೆ ದಿನಗಳ ಶೂಟಿಂಗ್ ಅನುಭವ ಹಂಚಿಕೊಂಡಿದ್ದಾರೆ. ಕಲಾವಿದರ ಭಾವನಾತ್ಮಕ ಲೋಕ ಹೇಗಿರುತ್ತದೆ ಎಂದು ಅವರು ವಿವರಿಸಿದ್ದಾರೆ. ಸ್ನೇಹಾ ಪಾತ್ರದಲ್ಲಿ ಮೂರು ವರ್ಷಗಳಿಂದ ಅವರು ಅಭಿನಯಿಸುತ್ತಿದ್ದರು.
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಪಾತ್ರ ಮಾಡುತ್ತಿದ್ದ ಸಂಜನಾ ಬುರ್ಲಿ ಅವರು ತಮ್ಮ ಶೂಟಿಂಗ್ ಕೊನೆ ದಿನದ ಅನುಭವವನ್ನು ಹಂಚಿಕೊಂಡಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಉಮಾಶ್ರೀ ಅವರ ಅಂದರೆ ಪುಟ್ಟಕ್ಕನ ಮಗಳ ಪಾತ್ರ ಸ್ನೇಹಾ - ಈ ಪಾತ್ರವನ್ನು ಸಂಜನಾ ಬುರ್ಲಿ ಅಭಿನಯಿಸುತ್ತಿದ್ದರು. ಆದರೆ ಒಂದು ಅಪಘಾತ ಆಗುವ ದೃಶ್ಯ ಸ್ನೇಹಾ ಪಾತ್ರವನ್ನು ಸಾಯಿಸಲಾಗಿದೆ. ಹಾಗಾಗಿ ಇನ್ನು ಮುಂದಿನ ದಿನಗಳಲ್ಲಿ ಅವರು ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ಸುದ್ದಿ ಎಲ್ಲರಿಗೂ ತಿಳಿದಿದೆ. ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲೂ ಸಹ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು ಮತ್ತು ಅಭಿಮಾನಿಗಳಿಗೆ ಪ್ರೋತ್ಸಾಹಿಸಿದ್ದಕ್ಕಾಗಿ ಧನ್ಯವಾದವನ್ನೂ ತಿಳಿಸಿದ್ದರು.
ಹೇಗಿತ್ತು ಶೂಟಿಂಗ್ ಕೊನೆಯ ದಿನ?
ಅದಾದ ನಂತರದಲ್ಲಿ ಅವರು ತಮ್ಮ ಶೂಟಿಂಗ್ ಕೊನೆ ದಿನದ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರನ್ನು ಕೊನೆಯ ದಿನದ ಶೂಟಿಂಗ್‌ನಲ್ಲಿ ಬೇರೆಯವರು ಸಮಾಧಾನ ಮಾಡಬೇಕಾಗುತ್ತದೆ ಎಂದು ಅವರು ಅಂದುಕೊಂಡಿದ್ದರೆ. ಅವರೇ ಇತರರನ್ನು ಸಮಾಧಾನ ಮಾಡುವ ಪರಿಸ್ಥಿತಿ ಇತ್ತು ಎಂದು ಹೇಳಿದ್ದಾರೆ. ಪಾತ್ರವನ್ನು ಬರಿ ಪಾತ್ರವಾಗಿ ನೋಡುತ್ತಿರಲಿಲ್ಲ. ಇನ್ನೊಂದು ಕುಟುಂಬವಾಗಿ ಎಲ್ಲರೂ ನೋಡುತ್ತಿದ್ದರು. ಹಾಗಾಗಿ ಎಲ್ಲರಿಗೂ ಕೊನೆಯ ದಿನ ತುಂಬಾ ಕಷ್ಟವಾಯ್ತು ಎಂದು ಹೇಳಿದ್ದಾರೆ. ಇನ್ನು ಅವರನ್ನು ಚಿತೆಯ ಮೇಲೆ ಇಡುವ ದೃಶ್ಯ. ಅವರ ಸಾವಿನ ದೃಷ್ಯ ಇದೆಲ್ಲವೂ ಸೆಟ್‌ನಲ್ಲಿರುವವರಿಗೆ ತುಂಬಾ ಕಾಡಿತ್ತು ಎಂದು ಹೇಳಿದ್ದಾರೆ.
ಇನ್ನು ಅಂದಿನ ದಿನ ಎಲ್ಲರೂ ಬೇಸರ ಮಾಡಿಕೊಂಡೇ ಇದ್ದರಂತೆ. ಇನ್ನು ತಾಯಿ ಪಾತ್ರದಲ್ಲಿರುವ ಉಮಾಶ್ರೀ ಅವರಂತು ತುಂಬಾ ಅದ್ಭುತವಾಗಿ ನಟಿಸುತ್ತಿದ್ದರು. ಅವರ ಮಾತುಗಳನ್ನು ಕೇಳಿ ನನಗೆ ಅಲ್ಲೇ ಅಳು ಬರ್ತಾ ಇತ್ತು. ಆದ್ರೆ ನಾನು ಸತ್ತು ಹೋಗಿದ್ದ ಕಾರಣ ಕಣ್ಣುಗಳನ್ನು ತೆಗೆಯುವ ಅಥವಾ ಕಣ್ಣು ಅಲುಗಾಡಿಸುವ ಯಾವ ಅವಕಾಶವೂ ನನಗೆ ಅಲ್ಲಿ ಇರಲಿಲ್ಲ. ಆದಷ್ಟು ಕಣ್ಣೀರು ತಡೆದುಕೊಳ್ಳುವ ಪ್ರಯತ್ನ ಮಾಡಿದ್ದೆ ಎಂದು ಅವರು ಹೇಳಿದ್ದಾರೆ. ಇನ್ನು ಸಹೋದರಿ ಪಾತ್ರ ಮಾಡುವ ಸಹನಾ ಅಂದರೆ ಶಿಲ್ಪಾ ಅವರು ಕೂಡ ಯಾವುದೇ ಗ್ಲಿಸರಿನ್ ಇಲ್ಲದೆ ಅವತ್ತು ಅತ್ತಿದ್ದಾರೆ ಅಷ್ಟೊಂದು ಭಾವುಕವಾಗಿತ್ತು ಎಂದು ಸಂಜನಾ ಬುರ್ಲಿ ಹೇಳಿದ್ದಾರೆ.
ಸ್ನೇಹಾ ಪಾತ್ರ ಸರ್ಕಾರಿ ಅಧಿಕಾರಿಯಾಗಿದ್ದ (ಜಿಲ್ಲಾಧಿಕಾರಿ) ಪಾತ್ರವಾದ್ದರಿಂದ ಸಕಲ ಸರ್ಕಾರಿ ಗೌರವದಿಂದ ಅಂತ್ಯ ಸಂಸ್ಕಾರ ಮಾಡಿದ್ದರು. ಆ ಸಂದರ್ಭದಲ್ಲಿ ಭಾವುಟವನ್ನು ನನ್ನ ಮೈಮೇಲೆ ಹಾಕಿದ್ದರು ಆ ಕ್ಷಣವೆಲ್ಲ ನನ್ನ ಮೈ ಝುಂ ಎಂದಿತ್ತು ಎಂದಿದ್ದಾರೆ. ಅದೆಕ್ಕೆಲ್ಲ ನಾನು ಅರ್ಹಳಲ್ಲ ಆದರೆ ಕಲಾವಿದೆಯಾಗಿ ಆ ಪಾತ್ರಕ್ಕೆ ಗೌರವ ಸಲ್ಲಿಸಬೇಕಿತ್ತು ಎಂದು ಹೇಳಿಕೊಂಡಿದ್ದಾರೆ.
ಕಳೆದ 3 ವರ್ಷಗಳಿಂದ ಸ್ನೇಹಾ ಪಾತ್ರವನ್ನು ನಿರ್ವಹಿಸುವುದು ನನ್ನ ನಟನಾ ವೃತ್ತಿಜೀವನದ ಅವಿಭಾಜ್ಯ ಅಂಗವಾಗಿತ್ತು. ಆದರೆ ಈಗ ಆ ಸಮಯ ಮುಗಿದಿದೆ. ಈ ಪಾತ್ರವನ್ನು ಮಾಡಿದ್ದಕ್ಕೆ ನಾನು ಯಾವಾಗಲೂ ಕೃತಜ್ಞನಾಗಿರುತ್ತೇನೆ. ನನಗೆ ಈ ಉತ್ತಮ ಪಾತ್ರವನ್ನು ನೀಡಿದ್ದಕ್ಕಾಗಿ ಮತ್ತು ನನ್ನನ್ನು ಸ್ನೇಹಾ ಆಗಿ ಆಯ್ಕೆ ಮಾಡಿದ್ದಕ್ಕಾಗಿ ಯುನಿವರ್ಸ್, ಚಾನಲ್ ಮತ್ತು ಪ್ರೊಡಕ್ಷನ್ ಹೌಸ್‌ಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ ಎಂದು ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದರು.