Ramachari Serial: ಚಾರು ಕಾಪಾಡಲು ಬಂದ ರಾಮಾಚಾರಿಗೆ ಸಹಾಯ ಮಾಡಿದ ಮುರಾರಿ; ಚಾರು ಮೇಲೆ ಅಣ್ಣಾಜಿಗೆ ಅನುಮಾನ
ಕನ್ನಡ ಸುದ್ದಿ  /  ಮನರಂಜನೆ  /  Ramachari Serial: ಚಾರು ಕಾಪಾಡಲು ಬಂದ ರಾಮಾಚಾರಿಗೆ ಸಹಾಯ ಮಾಡಿದ ಮುರಾರಿ; ಚಾರು ಮೇಲೆ ಅಣ್ಣಾಜಿಗೆ ಅನುಮಾನ

Ramachari Serial: ಚಾರು ಕಾಪಾಡಲು ಬಂದ ರಾಮಾಚಾರಿಗೆ ಸಹಾಯ ಮಾಡಿದ ಮುರಾರಿ; ಚಾರು ಮೇಲೆ ಅಣ್ಣಾಜಿಗೆ ಅನುಮಾನ

ರಾಮಾಚಾರಿ ಧಾರಾವಾಹಿಯಲ್ಲಿ ಚಾರುವನ್ನು ಕಾಪಾಡಲು ಅವಳನ್ನು ಅಣ್ಣಾಜಿ ಮನೆಯಿಂದ ಕರೆದುಕೊಂಡು ಹೋಗಲು ರಾಮಾಚಾರಿ ಬಂದಿದ್ದಾನೆ. ಮುರಾರಿ ಅವನಿಗೆ ಸಹಾಯ ಮಾಡುತ್ತಿದ್ದಾನೆ. ಆದರೆ ಅಣ್ಣಾಜಿಗೆ ಅನುಮಾನ ಬಂದಿದೆ.

ಚಾರು ಮೇಲೆ ಅಣ್ಣಾಜಿಗೆ ಅನುಮಾನ
ಚಾರು ಮೇಲೆ ಅಣ್ಣಾಜಿಗೆ ಅನುಮಾನ (ಕಲರ್ಸ್‌ ಕನ್ನಡ)

ರಾಮಾಚಾರಿ ಹಾಗೂ ಮುರಾರಿ ಇಬ್ಬರೂ ಚಾರುವನ್ನು ಹಾಗೂ ರುಕ್ಕುವನ್ನು ಕಾಪಾಡಲು ಮುಂದಾಗಿದ್ದಾರೆ. ಆದರೆ ಮುರಾರಿಗೆ ಧೈರ್ಯಕ್ಕಿಂತ ಭಯವೇ ಜಾಸ್ತಿ. ಹಾಗಾಗಿ ಅವನು ತುಂಬಾ ಹೆದರಿಕೊಂಡು ರಾಮಾಚಾರಿ ಜೊತೆ ಕೈ ಜೋಡಿಸುತ್ತಿದ್ದಾನೆ. ಯಾಕೆ ನಾವು ಇಷ್ಟೊಂದು ಕಷ್ಟಪಡಬೇಕು ಎಂದು ಅವನಿಗೆ ಅನಿಸಿದರೂ ಈಗ ಏನೂ ಮಾಡುವ ಪರಿಸ್ಥಿತಿಯಲ್ಲಿ ಅವರು ಇಲ್ಲ. ಹೀಗಿರುವಾಗ ಅಣ್ಣಾಜಿ ಮನೆಯ ಒಳಗಡೆ ರುಕ್ಕು ಮತ್ತು ಚಾರು ಬಂಧಿಯಾಗಿದ್ದಾರೆ. ಅಣ್ಣಾಜಿಗೆ ಈಗ ಇವರ ಮೇಲೆ ಅನುಮಾನ ಬರಲು ಆರಂಭವಾಗಿದೆ.

ಇನ್ನು ರಾಮಾಚಾರಿ ಮನೆಯ ಹೊರಭಾಗದಲ್ಲಿ ನಿಂತಿರುತ್ತಾನೆ. ಮುರಾರಿ ಕೂಡ ಅವನ ಜೊತೆಗೇ ಇರುತ್ತಾನೆ. ಆಗ ಮುರಾರಿ ಭಯ ಪಡುತ್ತಾನೆ. ಜೀವನದಲ್ಲಿ ಯಾರಿಗಾದ್ರೂ ಒಳ್ಳೆದಾಗಬೇಕು ಅಂದ್ರೆ ರಿಸ್ಕ್‌ ತಗೊಳೋದೆ ಆಗುತ್ತದೆ ಎನ್ನುತ್ತಾ ಮುರಾರಿ ತಾನೇ ಈಗ ರಿಸ್ಕ್‌ ತೆಗೆದುಕೊಳ್ಳಲು ರೆಡಿಯಾಗಿದ್ದಾನೆ. ಆದರೆ ತಾನು ವಾಪಸ್ ಬರ್ತೀನಾ ಅಥವಾ ಅಲ್ಲೇ ಕೊಲೆಯಾಗಿ ಹೋಗ್ತೀನಾ ಅಂತ ಅವನಿಗೆ ಅನುಮಾನ ಆರಂಭವಾಗಿದೆ. ಬಾಯ್ಬಿಟ್ಟು ಅದೆಲ್ಲವನ್ನೂ ಅವನು ಹೇಳುತ್ತಾನೆ. ಆಗ ರಾಮಾಚಾರಿ “ಏ ಮುರಾರಿ ಯಾಕೋ ಹಿಂಗೆಲ್ಲ ಮಾತಾಡ್ತಾ ಇದೀಯಾ? ನೀನು ಮತ್ತೆ ಮನೆಗ್ ಬರೋದ್ ಬೇಡ ಅಂತ ನಾನು ನಿನ್ನ ಇಲ್ಲಿದೆ ಕರೆಸಿದ್ದಲ್ಲ. ನೀನೂ ನಗ್ತಾ ಮನೆಗೆ ಬರ್ಬೇಕು” ಎಂದು ರಾಮಾಚಾರಿ ಹೇಳುತ್ತಾನೆ. ಆಗ ಅಲ್ಲಿ ಕುಡಿಯುತ್ತಾ ಕೂತಿರುವವರ ಹತ್ತಿರ ಮುರಾರಿ ಹೋಗ್ತಾನೆ.

ಅಲ್ಲಿ ಕುಳಿತವರೆಲ್ಲ ತುಂಬಾ ಕೆಟ್ಟವರು ಅನ್ನೋದು ಮುರಾರಿಗೆ ಗೊತ್ತಿರುತ್ತದೆ. ಅಷ್ಟರಲ್ಲಿ ರಾಮಾಚಾರಿ ಚಾರುಗೆ ಕಾಲ್ ಮಾಡುತ್ತಾನೆ, ನೀವು ಹೇಗಾದರೂ ಮಾಡಿ ಮನೆಯಿಂದ ಹೊರಗಡೆ ಬನ್ನಿ ಎಂದು ಹೇಳುತ್ತಾನೆ. ಚಾರು ಮಾತನಾಡುತ್ತಾ ಇರುವ ಸಂದರ್ಭದಲ್ಲಿ ಹಿಂದಿನಿಂದ ಅಣ್ಣಾಜಿ ಬಂದು ನಿಂತಿರುತ್ತಾನೆ. ಇನ್ನು ರುಕ್ಕು ತಾನು ಏನೂ ಮಾಡಿಲ್ಲ ಎನ್ನುವ ರೀತಿಯಲ್ಲಿ ನಿಂತಿರುತ್ತಾಳೆ.

ರಾಮಾಚಾರಿ ಧಾರಾವಾಹಿ

ರಾಮಾಚಾರಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.

ರಾಮಾಚಾರಿ ಧಾರಾವಾಹಿ ಪಾತ್ರವರ್ಗ

ಮೌನ ಗುಡ್ಡೆ ಮನೆ - ಚಾರು

ರಿತ್ವಿಕ್ ಕ್ರಪಾಕರ್ - ರಾಮಾಚಾರಿ

ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)

ಚಿ ಗುರುದತ್ - ಜಯಶಂಕರ್

ಶಂಕರ್ ಅಶ್ವಥ್‌ - ನಾರಾಯಣಾಚಾರಿ

ಐಶ್ವರ್ಯ ವಿನಯ್‌ - ವೈಶಾಖ

ಅಂಜಲಿ ಸುಧಾಕರ್ - ಜಾನಕಿ

ರುಕ್ಕು - ದೇವಿಕಾ ಭಟ್‌

Whats_app_banner