ಪಾರ್ಥ ಅಪೇಕ್ಷಾರನ್ನು ಸಾಯಿಸಲು ಸುಫಾರಿ ನೀಡಿದ್ದು ಜೈದೇವ್‌ ಎಂಬ ಸತ್ಯ ಗೌತಮ್‌ ದಿವಾನ್‌ಗೆ ಗೊತ್ತಾಯ್ತು- ಅಮೃತಧಾರೆ ಸೀರಿಯಲ್‌-televison news amruthadhaare kannada serial today episode september 02 2024 anand says truth to goutham pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಪಾರ್ಥ ಅಪೇಕ್ಷಾರನ್ನು ಸಾಯಿಸಲು ಸುಫಾರಿ ನೀಡಿದ್ದು ಜೈದೇವ್‌ ಎಂಬ ಸತ್ಯ ಗೌತಮ್‌ ದಿವಾನ್‌ಗೆ ಗೊತ್ತಾಯ್ತು- ಅಮೃತಧಾರೆ ಸೀರಿಯಲ್‌

ಪಾರ್ಥ ಅಪೇಕ್ಷಾರನ್ನು ಸಾಯಿಸಲು ಸುಫಾರಿ ನೀಡಿದ್ದು ಜೈದೇವ್‌ ಎಂಬ ಸತ್ಯ ಗೌತಮ್‌ ದಿವಾನ್‌ಗೆ ಗೊತ್ತಾಯ್ತು- ಅಮೃತಧಾರೆ ಸೀರಿಯಲ್‌

Amruthadhaare Serial September 02 Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನಲ್ಲಿ ಕೊನೆಗೂ ಜೈದೇವ್‌ ಬಗ್ಗೆ ಗೌತಮ್‌ಗೆ ಆನಂದ್‌ ಎಲ್ಲಾ ವಿಚಾರ ತಿಳಿಸಿದ್ದಾನೆ. ಜೈದೇವ್‌ನನ್ನು ವಿಚಾರಿಸಿಕೊಳ್ಳಲು ಡುಮ್ಮ ಸಾರ್‌ ರೆಡಿಯಾಗಿದ್ದಾರೆ.

ಅಮೃತಧಾರೆ ಸೀರಿಯಲ್‌ ಸೆಪ್ಟೆಂಬರ್‌ 2 ಸಂಚಿಕೆ
ಅಮೃತಧಾರೆ ಸೀರಿಯಲ್‌ ಸೆಪ್ಟೆಂಬರ್‌ 2 ಸಂಚಿಕೆ

Amruthadhaare Serial September 02 Episode: ಗೌತಮ್‌ ದಿವಾನ್‌ ಮನೆಯಿಂದ ಆನಂದ್‌ ಹೊರಟಿದ್ದಾನೆ. ಮೊದಲು ಅಜ್ಜಮ್ಮ ಆತನಿಗೆ ಹಿತವಚನ, ಕಾಳಜಿಯ ಮಾತುಗಳನ್ನಾಡುತ್ತಾರೆ. ಇದಾದ ಬಳಿಕ ಗೌತಮ್‌ ಮತ್ತು ಭೂಮಿಕಾಗೆ ಆನಂದ್‌ ಧನ್ಯವಾದ ಹೇಳುತ್ತಾನೆ. ಒಂದಿಷ್ಟು ಸ್ನೇಹ, ಆತ್ಮೀಯತೆ, ಬಾಂಧವ್ಯದ ಮಾತುಗಳ ಜತೆ ಆನಂದ್‌ಗೆ ಬೀಳ್ಕೊಡುಗೆ ಮಾಡುತ್ತಾರೆ. ಇದೇ ಸಮಯದಲ್ಲಿ ಗೆಳೆಯ ನಿನ್ನಲ್ಲಿ ಸ್ವಲ್ಪ ಮಾತನಾಡಬೇಕಿತ್ತು ಎಂದು ಆನಂದ್‌ ಗೌತಮ್‌ನನ್ನು ಕರೆದುಕೊಂಡು ಹೋಗುತ್ತಾನೆ. ಅಜ್ಜಮ್ಮ ಕೇಳಿದಾಗ ಆಫೀಸ್‌ ವಿಷಯ ಮಾತನಾಡಲು ಇದೆ ಎನ್ನುತ್ತಾನೆ. ಇನ್ನೊಂದೆಡೆ ಜೈದೇವ್‌ ಟೆನ್ಷನ್‌ನಲ್ಲಿದ್ದಾನೆ. ನಾನು ಮಾಡಿದ ಎಲ್ಲಾ ಪ್ಲ್ಯಾನ್‌ ಪ್ಲಾಪ್‌ ಆಗ್ತಾ ಇದೆ. ಆಗ ಮಲ್ಲಿ ಅಲ್ಲಿಗೆ ಬರುತ್ತಾಳೆ. ಬನ್ನಿ ಆನಂದ್‌ ಅವರಿಗೆ ಟಾಟಾ ಮಾಡಿ ಬರೋಣ ಎನ್ನುತ್ತಾಳೆ. ಆಫೀಸ್‌ ಬಿಝಿ ಇದೆ ಎಂದು ಹೇಳುತ್ತಾನೆ.

ಜೈದೇವ್‌ ಸತ್ಯ ಗೌತಮ್‌ ದಿವಾನ್‌ಗೆ ಗೊತ್ತಾಯ್ತು

ಆನಂದ್‌ ಮತ್ತು ಗೌತಮ್‌ ಪ್ರತ್ಯೇಕವಾಗಿ ಮಾತನಾಡುತ್ತಾರೆ. ಏನೋ ಹೇಳಬೇಕು ಅಂದುಕೊಂಡಿದ್ದೇನೆ ಎನ್ನುತ್ತಾನೆ. "ಪಾರ್ಥ ಮತ್ತು ಅಪೇಕ್ಷಾನ ಮೇಲೆ ದಾಳಿ ಮಾಡಿಸಿದ್ದು ಯಾರು ಎಂದು ರೌಡಿ ಹೇಳಿದ" ಎನ್ನುತ್ತಾನೆ. "ಇದನ್ನು ಮಾಡಿಸಿದ್ದು ಯಾರು ಎಂದು ಹೇಳ್ತಿನಿ" ಅನ್ನುತ್ತಾನೆ. "ಇದನ್ನು ಮಾಡಿಸಿದ್ದು ನಿನ್ನ ತಮ್ಮ ಜೈದೇವ್‌" ಎಂಬ ಸತ್ಯವನ್ನು ಆನಂದ್‌ ಹೇಳುತ್ತಾನೆ. "ನೀನು ತಮ್ಮ ತಮ್ಮ ಅಂತ ಅವನ ತಲೆ ಮೇಲೆ ಹೊತ್ತು ಮೆರೆಸಿದ್ದೆ. ಆದರೆ, ಅವನು ಇಂತಹ ಕೆಲಸ ಮಾಡಿದ್ದಾನೆ" ಎಂದು ಆನಂದ್‌ ಹೇಳುತ್ತಾನೆ. "ಯಾಕೆ ಇವನು ಈ ರೀತಿ ಮಾಡಿದ್ದಾನೆ" ಎಂದು ಗೌತಮ್‌ ಹೇಳುತ್ತಾನೆ. "ಅವನಿಗೆ ಅಪೇಕ್ಷಾಳನ್ನು ಪಾರ್ಥ ಮದುವೆಯಾಗುವುದು ಇಷ್ಟ ಇರಲಿಲ್ಲ. ಅದಕ್ಕೆ ಹೀಗೆ ಮಾಡಿದ ಎಂದು ರೌಡಿ ಹೇಳಿದ. ಇದಾದ ಬಳಿಕ ನಾನು ಜೈದೇವ್‌ಗೆ ಕರೆದು ಬುದ್ದಿ ಹೇಳಿದೆ. ವಾರ್ನ್‌ ಕೂಡ ಮಾಡಿದೆ" ಎಂದು ಆನಂದ್‌ ಎಲ್ಲಾ ವಿಚಾರ ತಿಳಿಸುತ್ತಾನೆ. "ಇನ್ನು ಮುಂದೆ ಈ ತಪ್ಪು ಮಾಡೋಲ್ಲ. ಕ್ಷಮಿಸಿ ಅಂದ. ಅದಕ್ಕೆ ಜೈದೇವ್‌ಗೆ ಒಂದು ಛಾನ್ಸ್‌ ಕೊಡೋಣ ಅಂತ ಬಿಟ್ಟೆ" ಎಂದು ಆನಂದ್‌ ಹೇಳುತ್ತಾನೆ. "ಅಣ್ಣ ಮತ್ತು ತಮ್ಮ ಬಾಂಧವ್ಯ ಈಗಾಗಲೇ ದಿಯಾ ವಿಚಾರದಿಂದ ತುಸು ಹಾಳಾಗಿದೆ. ಇನ್ನು ಈ ವಿಷಯ ಗೊತ್ತಾಗಿ ಮತ್ತೆ ಹದಗೆಡುವುದು ಬೇಡ ಎಂದು ಹೇಳಲಿಲ್ಲ. ಅದಾದ ಮರುದಿನವೇ ಈ ಆಕ್ಸಿಡೆಂಟ್‌ ಆಯ್ತು" ಎಂದು ಹೇಳುತ್ತಾನೆ.

ಗೌತಮ್‌ ತುಂಬಾ ಯೋಚಿಸುತ್ತಾನೆ. "ಈ ವಿಷಯ ನನಗೆ ಗೊತ್ತಾಗಿದೆ ಎಂದು ಜೈದೇವ್‌ಗೆ ಗೊತ್ತಾಗಬೇಕು" ಎಂದು ಗೌತಮ್‌ ಹೇಳುತ್ತಾನೆ. "ಆದರೆ, ಈ ವಿಚಾರ ಭೂಮಿಕಾಗೆ ಗೊತ್ತಾಗಬಾರದು. ಪಾರ್ಥನಿಗೂ ಗೊತ್ತಾಗಬಾರದು. ಅಣ್ಣ ತಮ್ಮ ಜಗಳ ಆರಂಭಿಸ್ತಾರೆ. ತುಂಬಾ ನಾಜೂಕಿನ ವಿಚಾರ" ಎಂದು ಆನಂದ್‌ ಹೇಳುತ್ತಾನೆ. ಸರಿ ಅನ್ನುತ್ತಾನೆ ಗೌತಮ್‌.

ಇನ್ನೊಂದೆಡೆ ಜೈದೇವ್‌ ಟೆನ್ಷನ್‌ನಲ್ಲಿದ್ದಾನೆ. ಅಲ್ಲಿಗೆ ಮಾವ ಬರುತ್ತಾರೆ. "ಅಳಿಮಯ್ಯ ಏಕೆ ಟೆನ್ಷನ್‌?" ಎಂದು ಕೇಳುತ್ತಾನೆ. "ಆನಂದ್‌ ಈ ವಿಚಾರ ಹೇಳಿರೋದಿಲ್ಲ. ಆದರೂ ಟೆನ್ಷನ್‌ ಆರಂಭವಾಗಿದೆ" ಎಂದು ಜೈದೇವ್‌ ಹೇಳುತ್ತಾನೆ. "ಎಲ್ಲಾದರೂ ಈ ವಿಚಾರ ಆನಂದ್‌ ಹೇಳಿಬಿಟ್ಟರೆ ಏನಾಗಬಹುದು ಎಂದು ಯೋಚಿಸು" ಎಂದು ಮಾವ ಹೇಳುತ್ತಾರೆ. ಮತ್ತೊಂದೆಡೆ ಗೌತಮ್‌ ಯೋಚಿಸುತ್ತಾ ಇದ್ದಾರೆ. ಅಲ್ಲಿಗೆ ಭೂಮಿಕಾ ಬರುತ್ತಾರೆ. ಏನು ಯೋಚನೆ ಮಾಡ್ತಾ ಇದ್ದೀರಾ? ಎಂದು ಕೇಳುತ್ತಾನೆ. "ಅವನು ಹುಷಾರ್‌ ಆದ್ನಲ್ವ. ಖುಷಿಯಾದೆ" ಎನ್ನುತ್ತಾನೆ. "ನಾವು ನಮ್ಮ ಭಯದ ಮುಂದೆ, ನಮ್ಮ ಸಮಸ್ಯೆಗಳ ಮುಂದೆ ಹುಲಿ ತರಹ ನಿಲ್ಲಬೇಕು. ನಾವು ಇಲಿಯ ತರಹ ನಿಂತ್ರೆ ಆ ಸಮಸ್ಯೆಯು ಹುಲಿ ರೀತಿ ನಿಲ್ಲುತ್ತದೆ. ನಾವು ಹುಲಿಯ ರೀತಿ ಬಿಲ್ಡಪ್‌ ನೀಡಬೇಕು" ಎನ್ನುತ್ತಾನೆ. ಈ ಮಾತು ಹುಲಿಯಂತೆ ನಿಲ್ಲಲು ಗೌತಮ್‌ಗೆ ಸ್ಪೂರ್ತಿ ನೀಡುತ್ತದೆ. "ಜೈದೇವ್‌ಗೆ ಒಂದು ವ್ಯವಸ್ಥೆ ಮಾಡಿಯೇ ಮಾಡ್ತಿನಿ" ಎಂದು ಗೌತಮ್‌ ಯೋಚಿಸುತ್ತಾನೆ.

ಜೈದೇವ್‌ ರೆಡಿಯಾಗುತ್ತಾನೆ. ಆಗ ರೀ ಎಂದು ಮಲ್ಲಿ ಕರೆಯುತ್ತಾರೆ. ಎಲ್ಲೋ ಹೊರಡ್ತಾ ಇದ್ದೀರ ಎಂದು ಕೇಳುತ್ತಾಳೆ. "ಆನಂದ್‌ ಬ್ರೋಗೆ ಹುಷಾರಾದ್ರೆ ಪೂಜೆ ಮಾಡ್ತಿನಿ ಅಂದಿದ್ದೆ. ಅದಕ್ಕೆ ಹೋಗಿ ಬರ್ತಿನಿ" ಎಂದು ಹೇಳುತ್ತಾನೆ. ಇದನ್ನು ಕೇಳಿ ಮಲ್ಲಿಗೆ ಖುಷಿಯಾಗುತ್ತದೆ. ನಾನೂ ಬರ್ತಿನಿ ಎಂದಾಗ ಹೇಗೋ ತಪ್ಪಿಸುತ್ತಾನೆ. "ನಾನೇ ಹೋಗಿ ಹರಕೆ ತೀರಿಸ್ತಿನಿ" ಎನ್ನುತ್ತಾನೆ. ಒಟ್ಟಾರೆ ವಿಷಯ ಗೊತ್ತಿಲ್ಲದ ಮಲ್ಲಿ ಖುಷಿಯಾಗುತ್ತಾಳೆ.

ಆನಂದ್‌ ತನ್ನ ಮನೆಯಲ್ಲಿದ್ದಾನೆ. ಅಪರ್ಣಾ ಆತನ ಕೇರ್‌ ತೆಗೆದುಕೊಳ್ಳುತ್ತಾ ಇದ್ದಾಳೆ. "ನಾನು ನಿನ್ನನ್ನು ಮತ್ತು ಮಕ್ಕಳನ್ನು ನೋಡ್ತಿನಾ ಇಲ್ವೋ ಅಂದುಕೊಂಡಿದ್ದೆ ಚಿನ್ನ" ಎಂದು ಅಳುತ್ತಾನೆ. "ಫ್ರೆಂಡ್‌ಶಿಪ್‌ ಎಲ್ಲಕ್ಕಿಂತ ಶಿಪ್‌. ಈ ವಿಚಾರ ಗೆಳೆಯನಿಗೆ ಹೇಳಿದ್ದೆ. ಈಗ ನನ್ನ ಗೆಳೆಯನೇ ನನ್ನನ್ನು ರಕ್ಷಿಸಿದ" ಎಂದೆಲ್ಲ ಮಾತನಾಡುತ್ತಾನೆ. "ನಾನು ನಿನ್ನ ಹೇಗೆ ನೋಡಿದೆ ಗೊತ್ತಿಲ್ಲ. ಅವನು ನಿನ್ನ ಪಕ್ಕದಲ್ಲೇ ಇದ್ದೂ ನಿನ್ನನ್ನು ನೋಡಿಕೊಂಡ" ಎಂದು ಅಪರ್ಣಾ ಹೇಳುತ್ತಾಳೆ. ಒಟ್ಟಾರೆ ಸ್ನೇಹ ಮತ್ತು ಪ್ರೀತಿಯ ಮಾತುಕತೆ ನಡೆಯುತ್ತದೆ. ಇದೇ ಸಮಯದಲ್ಲಿ ಗೌತಮ್‌ ಜೈದೇವ್‌ನ ಮನೆಯಲ್ಲಿ ಹುಡುಕ್ತಾ ಇದ್ದಾನೆ. ಅಲ್ಲಿದ್ದ ಮಲ್ಲಿ "ಅವರು ದೇವಸ್ಥಾನಕ್ಕೆ ಹೋಗವ್ರೆ" ಎನ್ನುತ್ತಾಳೆ. ಅಮೃತಧಾರೆ ಸೀರಿಯಲ್‌ ಮುಂದುವರೆಯುತ್ತದೆ.

ಅಮೃತಧಾರೆ ಕನ್ನಡ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)