ಅಮೃತಧಾರೆ ಧಾರಾವಾಹಿ: ಅಪೇಕ್ಷಾ ಮದುವೆಗೆ ಹೂವು ಮುಡಿಸೋ ಶಾಸ್ತ್ರ; ನಾಟ್ ರೀಚೆಬಲ್ ಆಗಿದ್ದಾನೆ ಪಾರ್ಥ
Amruthadhaare Kannada Serial: ಮಲ್ಲಿ ಗರ್ಭಿಣಿಯಾಗಿರುವ ಸಂಗತಿ ಭೂಮಿಕಾಳಿಗೆ ತಿಳಿಯುತ್ತದೆ. ಇನ್ನೊಂದೆಡೆ ಜೈದೇವ್ ಮತ್ತು ಅಪೇಕ್ಷಾಳ ಮದುವೆಗೆ ಮುನ್ನ ಹೂವು ಮುಡಿಸುವ ಶಾಸ್ತ್ರ ನಡೆಸಲು ಸಿದ್ಧತೆ ನಡೆಯುತ್ತಿದೆ. ತಾನು ಮದುವೆಯಾಗುವ ಗಂಡು ಜೈದೇವ್ ಎಂದು ತಿಳಿಯದೆ ಪಾರ್ಥನ ಕನಸಲ್ಲಿ ಅಪೇಕ್ಷಾ ಇರುತ್ತಾಳೆ.
Amruthadhaare Kannada Serial Episode 187: ಭೂಮಿಕಾ ಫೋನ್ನಲ್ಲಿದ್ದಾಗ ಮಲ್ಲಿ ವಾಂತಿ ಮಾಡುತ್ತಿರುವುದು ಕಾಣಿಸುತ್ತದೆ. ತಕ್ಷಣ ಮಲ್ಲಿ ಮನೆಗೆ ಭೂಮಿಕಾ ಬರುತ್ತಾಳೆ. "ಏನಾಯ್ತು ನಿನಗೆ, ಯಾಕೆ ವಾಮಿಟ್ ಮಾಡ್ತಾ ಇದ್ದೆ" ಎಂದು ಭೂಮಿಕಾ ಕೇಳುತ್ತಾಳೆ. "ಎರಡು ದಿನದಿಂದ ವಾಮಿಟ್ ಆಗುತ್ತದೆ" ಎಂದು ಮಲ್ಲಿ ಹೇಳುತ್ತಾಳೆ. "ಡಾಕ್ಟರ್ ಬಳಿ ಹೋಗೋಣ" ಎಂದಾಗ ಮಲ್ಲಿ ಭಯಪಡುತ್ತಾಳೆ. ಮಲ್ಲಿಯ ಕೈ ಹಿಡಿದುಕೊಂಡಾಗ ಭೂಮಿಕಾಳಿಗೆ ಏನೋ ನೆನಪಾಗುತ್ತದೆ. ಝೀ ಕನ್ನಡದ ಅಮೃತಧಾರೆ ಧಾರವಾಹಿಯ ಭಾನುವಾರದ ಸಂಚಿಕೆಯಲ್ಲಿ (ಈಗ ವಾರಾಂತ್ಯದಲ್ಲೂ ಅಮೃತಧಾರೆ ಧಾರಾವಾಹಿ ಪ್ರಸಾರಗೊಳ್ಳುತ್ತಿದೆ) ಏನೇನು ಆಯಿತು ಎಂದು ತಿಳಿಯೋಣ.
ಮಲ್ಲಿ ಗರ್ಭಿಣಿ
ಮಲ್ಲಿಯ ನಾಡಿ ಮಿಡಿತದಿಂದ ಭೂಮಿಕಾಳಿಗೆ "ಈಕೆ ಗರ್ಭಿಣಿ" ಎಂಬ ಅಂಶ ತಿಳಿಯುತ್ತದೆ. "ಯಾರವನು?" ಎಂಬ ಪ್ರಶ್ನೆ ಕೇಳಿದಾಗ ಮಲ್ಲಿ ತಡಬಡಾಯಿಸುತ್ತಾಳೆ. "ನಾನು ನಿನಗೆ ಸಪೋರ್ಟ್ ಮಾಡ್ತಿನಿ" ಎಂದು ಭೂಮಿಕಾ ಹೇಳಿದಾಗ ಮಲ್ಲಿ ಜೈದೀಪ್ ಜತೆಗಿನ ಸಂಬಂಧದ ಕುರಿತು ಹೇಳಲು ಹಿಂಜರಿಯುತ್ತಾಳೆ. "ನಿನಗೆ ದೊಡ್ಡ ಜೀವನವಿದೆ. ಹಳಿ ತಪ್ಪಿರೋ ನಿನ್ನ ಜೀವನ ಸರಿಮಾಡ್ತಿನಿ. ಅವನು ಯಾರು ಎಂದು ಹೇಳು" ಎಂದು ಒತ್ತಾಯಿಸುತ್ತಾಳೆ ಭೂಮಿಕಾ.
ಇದನ್ನು ಓದಿ: ಅಮೃತಧಾರೆ ಧಾರಾವಾಹಿಯ ಎಲ್ಲಾ ಸಂಚಿಕೆಗಳು
ನಾಟ್ ರೀಚೆಬಲ್ ಆಗಿದ್ದಾನೆ ಪಾರ್ಥ
ಅಪೇಕ್ಷಾ ಎಷ್ಟು ಕರೆ ಮಾಡಿದರೂ ಪಾರ್ಥನ ಕಾಲ್ ಕನೆಕ್ಟ್ ಆಗುವುದಿಲ್ಲ. ಅವನು ಎಲ್ಲಿಗೆ ಹೋಗಿದ್ದಾನೆ ಎಂದು ತಿಳಿಯಲು ಜೈದೇವ್ಗೆ ಕರೆ ಮಾಡುತ್ತಾಳೆ. ಶೀಘ್ರದಲ್ಲಿ ಬರುತ್ತಾನೆ ಎಂದು ಹೇಳುತ್ತಾನೆ. ಕಾಲ್ ಇಟ್ಟ ಬಳಿಕ ಮನೆಹಾಳ ಮಾವನ ಎಂಟ್ರಿ ನೀಡುತ್ತಾದೆ. ಅಪೇಕ್ಷಾ ಇನ್ನೂ ಪಾರ್ಥನೇ ಮದುವೆ ಗಂಡು ಎಂದು ತಿಳಿದುಕೊಂಡಿದ್ದಾಳೆ, ಇದನ್ನು ಕೊನೆತನಕ ಕಾಪಾಡಿಕೊಳ್ಳಬೇಕು ಎಂದು ಮಾವನ ಜತೆ ಜೈದೇವ್ ಪ್ಲಾನ್ ಮಾಡುತ್ತಾನೆ. ಶೀಘ್ರದಲ್ಲಿ ಹೂವು ಮುಡಿಸೋ ಕಾರ್ಯಕ್ರಮ ಮಾಡಬೇಕೆಂದು ಶಕುಂತಲಾ ದೇವಿ ಬಳಿ ಹೇಳುತ್ತಾನೆ.
ಇನ್ನೊಂದೆಡೆ ಭೂಮಿಕಾ ಡೀಪ್ ಆಗಿ ಯೋಚನೆ ಮಾಡ್ತಾ ಇರುತ್ತಾಳೆ. ಆಗ ಗೌತಮ್ ಆಗಮಿಸುತ್ತಾನೆ. ಮಲ್ಲಿ ವಿಷಯ ಗೌತಮ್ನಲ್ಲಿ ಹೇಳಬೇಕೆಂದುಕೊಳ್ಳುವಾಗ ಶಕುಂತಲಾದೇವಿಯ ಆಗಮನವಾಗುತ್ತದೆ. ಹೂ ಮುಡಿಸೋ ಶಾಸ್ತ್ರದ ಕುರಿತು ಮಾತನಾಡುತ್ತಾಳೆ. ಗೌತಮ್ ಮತ್ತು ಭೂಮಿಕಾ ಖುಷಿಯಿಂದ ಒಪ್ಪುತ್ತಾರೆ. ನಾಳೆ ಅತ್ತೆ ಮನೆಯವರನ್ನು ಕರೆಸಿಬಿಡು ಎಂದು ಅತ್ತೆ ಹೇಳುತ್ತಾರೆ. ಭೂಮಿಕಾ ತನ್ನ ತಾಯಿಗೆ ಫೋನ್ ಮಾಡುತ್ತಾರೆ. ನಾಳೆ ಮನೆಗೆ ಬರಲು ಅಪೇಕ್ಷಾ ಮನೆಯವರು ಒಪ್ಪುತ್ತಾರೆ.
ಹೂವು ಮುಡಿಸೋ ಶಾಸ್ತ್ರ
ಮಲ್ಲಿ ಕಣ್ಣಿರು ಇಡುತ್ತಿರುವುದನ್ನು ತಾತಾ ನೋಡುತ್ತಾರೆ. ಏನು ವಿಷಯ ಎಂದು ಕೇಳಿದಾಗ ಮಲ್ಲಿ "ಏನಿಲ್ಲ" ಎಂದು ಹೇಳುತ್ತಾಳೆ. ಮಲ್ಲಿಗೆ ತಾತಾನೇ ಬಾಯಿ ತುತ್ತು ಊಟ ತಿನ್ನಿಸುತ್ತಾನೆ. ಇನ್ನೊಂದೆಡೆ ಭೂಮಿಕಾ ಮತ್ತು ಗೌತಮ್ ಸಲ್ಲಾಪದ ಮಾತುಗಳು ನಡೆಯುತ್ತವೆ. "ಸಹಜ ಸುಂದರಿ, ನ್ಯಾಚುರಲ್ ಬ್ಯೂಟಿ" ಎಂದು ಹೇಳಿ ಭೂಮಿಕಾಳನ್ನು ಉಬ್ಬಿಸುತ್ತಾನೆ. ಇನ್ನೊಂದೆಡೆ ಹೂವು ಮುಡಿಸೋ ಶಾಸ್ತ್ರಕ್ಕೆ ಅಪೇಕ್ಷಾ ಮತ್ತು ಕುಟುಂಬ ಆಗಮಿಸುತ್ತದೆ. ಸೀರಿಯಲ್ ಮುಂದುವರೆಯುತ್ತದೆ.
ಅಮೃತಧಾರೆ ಶನಿವಾರದ ಸಂಚಿಕೆ ಓದಿ: ಕೆಲಸದಾಕೆ ಮಲ್ಲಿ ಬಸುರಿ, ಅಪೇಕ್ಷಾಳ ಮದುವೆಯಾಗಲು ಬಯಸಿದ ಜೈದೇವ್ ಕನಸಿಗೆ ಹೊಸ ವಿಘ್ನ
ಅಮೃತಧಾರೆ ಧಾರಾವಾಹಿ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ)
ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್: ಜೈದೇವ್
ಚಂದನ್: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ)
ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ)
ವಿಭಾಗ