Amruthadhaare: ಚಮಕ್‌ ಚಲ್ಲೋಗೆ ಕಾರು ಗಿಫ್ಟ್‌ ನೀಡಲು ಶೋರೂಂಗೆ ಬಂದ ಜೈದೇವ್‌; ಅಲ್ಲಿಗೆ ಬಂದ್ರು ಡುಮ್ಮ ಸರ್‌-televison news amruthadhaare serial august 3 episode jaidev ready to gift car to his lover dia ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಚಮಕ್‌ ಚಲ್ಲೋಗೆ ಕಾರು ಗಿಫ್ಟ್‌ ನೀಡಲು ಶೋರೂಂಗೆ ಬಂದ ಜೈದೇವ್‌; ಅಲ್ಲಿಗೆ ಬಂದ್ರು ಡುಮ್ಮ ಸರ್‌

Amruthadhaare: ಚಮಕ್‌ ಚಲ್ಲೋಗೆ ಕಾರು ಗಿಫ್ಟ್‌ ನೀಡಲು ಶೋರೂಂಗೆ ಬಂದ ಜೈದೇವ್‌; ಅಲ್ಲಿಗೆ ಬಂದ್ರು ಡುಮ್ಮ ಸರ್‌

Amruthadhaare serial August 3 Episode: ಜೈದೇವ್‌ ತನ್ನ ಲವರ್‌ ದಿಯಾಳಿಗೆ ಕಾರು ಗಿಫ್ಟ್‌ ನೀಡಲು ಶೋರೂಂಗೆ ಬಂದಿದ್ದಾನೆ. ಕಾರು ಶೋರೂಂನಿಂದ ಬಂದ ಎಸ್‌ಎಂಎಸ್‌ ಜಾಡು ಹಿಡಿದು ಅಲ್ಲಿಗೆ ಗೌತಮ್‌ ಕೂಡ ಬಂದಿದ್ದಾರೆ. ಇಬ್ಬರು ಮುಖಾಮುಖಿಯಾಗುವ ಸಮಯ.

Amruthadhaare: ಚಮಕ್‌ ಚಲ್ಲೋಗೆ ಕಾರು ಗಿಫ್ಟ್‌ ನೀಡಲು ಶೋರೂಂಗೆ ಬಂದ ಜೈದೇವ್‌
Amruthadhaare: ಚಮಕ್‌ ಚಲ್ಲೋಗೆ ಕಾರು ಗಿಫ್ಟ್‌ ನೀಡಲು ಶೋರೂಂಗೆ ಬಂದ ಜೈದೇವ್‌

Amruthadhaare serial: ನೀನು ಚಾಲೆಂಜ್‌ನಲ್ಲಿ ಗೆದ್ದರೂ ನಾನು ನಿನ್ನ ಒಪ್ಪಿಕೊಳ್ಳುತ್ತಿಲ್ಲ ಎಂದು ಸದಾಶಿವ ಹೇಳುತ್ತಾನೆ. "ಪ್ರಾಬ್ಲಂ ನಿನ್ನಲ್ಲಿ ಇಲ್ಲ. ನಿನ್ನ ಮನೆಯಲ್ಲಿ ಇರೋದು. ಕೆಲವೊಂದು ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕು. ಅಪೇಕ್ಷಾ ಜತೆ ನಿನ್ನ ಅಣ್ಣನ ಮದುವೆಯಾಗಬೇಕಿತ್ತು. ಆದರೆ, ಅದೇ ಹೆಣ್ಣನ್ನು ನೀನು ಹೇಗೆ ಮದುವೆಯಾಗ್ತಿಯಾ?" ಎಂದೆಲ್ಲ ಹೇಳುತ್ತಾರೆ. "ಯಾರೂ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಎಲ್ಲರ ಬಳಿಯೂ ಅನಿಸಿಕೊಳ್ಳಬೇಕು. ನಮ್ಮ ನಿಯತ್ತನ್ನು ಪ್ರಶ್ನಿಸುತ್ತಾರೆ. ನಮ್ಮ ಘನತೆ, ಗೌರವ ಎಲ್ಲಾ ಕೊಚ್ಚಿಕೊಂಡು ಹೋಗುತ್ತದೆ" ಎಂದು ಅವರು ಹೇಳುತ್ತಾರೆ. "ದಯವಿಟ್ಟು ನನ್ನ ಮಗಳನ್ನು ಮರೆತುಬಿಡು" ಎಂದು ಕೈಮುಗಿಯುತ್ತಾರೆ. ಈ ಮಾತುಗಳನ್ನು ಕೇಳಿ ಪಾರ್ಥ ಚಿಂತೆಗೆ ಒಳಗಾಗುತ್ತಾನೆ.

ಮನೆಯಲ್ಲಿ ಒಂಟಿಯಾಗಿ ಪಾರ್ಥ ಯೋಚಿಸುತ್ತ ಇದ್ದಾನೆ. ಆಗ ಅಲ್ಲಿಗೆ ಶಕುಂತಲಾದೇವಿ ಬರುತ್ತಾರೆ. ಅಪೇಕ್ಷಾಳ ಅಪ್ಪ ಹೇಳಿದ ಮಾತುಗಳನ್ನು ಹೇಳುತ್ತಾನೆ. "ನನಗೆ ಅಪೇಕ್ಷಾ ಬೇಕು ಮಾಮ್"‌ ಎಂದು ತನ್ನ ಅಳಲು ತೋಡಿಕೊಳ್ಳುತ್ತಾನೆ. "ಏನೇ ಆದರೂ ನೀನು ತಲೆಕೆಡಿಸಿಕೊಳ್ಳಬೇಡ. ನಾನು ಎಲ್ಲಾ ನೋಡಿಕೊಳ್ಳುತ್ತೀನಿ. ನಾನು ಅಪೇಕ್ಷಾಳ ಬಳಿ ಮಾತನಾಡಿದ್ದೇನೆ. ನಾನು ಮ್ಯಾನೇಜ್‌ ಮಾಡ್ತಿನಿ. ನಿನ್ನಪ ಪ್ರೀತಿ ನಿನಗೆ ಸಿಗುವ ರೀತಿ ನಾನು ನೋಡಿಕೊಳ್ಳುವೆ" ಎಂದು ಭರವಸೆ ನೀಡಿದಾಗ ಪಾರ್ಥನಿಗೆ ತುಸು ನಿರಾಳವಾಗುತ್ತದೆ.

ಗೌತಮ್‌ಗೆ ಕಾರು ಡೆಲಿವರಿ ಮೆಸೆಜ್‌ ಬರುತ್ತದೆ. ಯಾರು ಕಾರು ಬುಕ್‌ ಮಾಡಿದ್ದಾರೆ ಎಂದು ಯೋಚಿಸುತ್ತಾನೆ. "ಆನಂದ್‌ ಬುಕ್‌ ಮಾಡಿದ್ದಾನ?" ಎಂದು ಯೋಚಿಸಿ ಕಾಲ್‌ ಮಾಡುತ್ತಾನೆ. "ಕಾರು ಡೆಲಿವರಿಗೆ ಮೆಸೆಜ್‌ ಬಂದಿತ್ತು" ಎಂದು ಹೇಳುತ್ತಾನೆ. "ಇದರಲ್ಲಿ ನನ್ನ ಕೈವಾಡ ಇಲ್ಲ" ಎಂದು ಆನಂದ್‌ ಹೇಳುತ್ತಾನೆ. ಇದರ ಬಗ್ಗೆ ಭೂಮಿಕಾನ ಬಳಿಯೂ ವಿಚಾರಿಸುತ್ತಾನೆ. ಇದೇ ಸಂದರ್ಭದಲ್ಲಿ ಜೈದೇವ್‌ ಶಕುಂತಲಾದೇವಿಯನ್ನು ಭೇಟಿಯಾಗಿ ಒಂದಿಷ್ಟು ಹಣ ಕೇಳುತ್ತಾನೆ. ಹೋಗಿ ತೆಗೆದುಕೊಳ್ಳು ಎನ್ನುತ್ತಾಳೆ. "ನೀವು ಕಾರ್‌ ಬುಕ್‌ ಮಾಡಿದ್ರ" ಎಂದು ಶಕುಂತಲಾ ಬಳಿ ಕೇಳುತ್ತಾನೆ. "ಇಲ್ಲ" ಅನ್ನುತ್ತಾಳೆ. "ಫೇಕ್‌ ಮೆಸೆಜ್‌ ಆಗಿರಬಹುದು" ಎನ್ನುತ್ತಾಳೆ.

ತನ್ನ ಲವರ್‌ಗೆ ಕಾರು ಕೊಡಿಸಲು ಜೈದೇವ್‌ ರೆಡಿಯಾಗಿ ಹೊರಟಿದ್ದಾನೆ. ತನ್ನ ಚಮಕ್‌ ಚಲ್ಲೋಗೆ ಕಾಲ್‌ ಮಾಡಿ ಒಂದಿಷ್ಟು ಪ್ರೀತಿ ಮಾತುಗಳನ್ನಾಡುತ್ತಾನೆ. ಗೌತಮ್‌ ಕಾರಲ್ಲಿ ಹೋಗುತ್ತ ಇರುತ್ತಾನೆ. ಆನಂದ್‌ ಕೂಡ ಜತೆಯಲ್ಲಿರುತ್ತಾನೆ. ಗೌತಮ್‌ ಮನಸ್ಸಲ್ಲಿ ಭೂಮಿಕಾಳ ಮುತ್ತಿನ ಮತ್ತು ಇರುತ್ತದೆ. ಈ ಸಂದರ್ಭದಲ್ಲಿ ಗೌತಮ್‌ಗೆ ಕಾರು ಕಂಪನಿಯಿಂದ ಎಸ್‌ಎಂಎಸ್‌ ಬರುತ್ತದೆ. ಕಾರು ರೆಡಿ ಇದೆ ಎಂದು ಸೇಲ್ಸ್‌ ಬಾಯ್‌ ಕೂಡ ಹೇಳುತ್ತಾನೆ. ಹೋಗಿ ಕಾರು ಶೋರೂಂಗೆ ಹೋಗಿ ವಿಚಾರಿಸೋಣ ಎಂದು ಶೋರೂಂಗೆ ಹೋಗುತ್ತಾರೆ.

ಅದೇ ಸಂದರ್ಭದಲ್ಲಿ ಮಾರುತಿ ಸುಜುಕಿ ಅರೆನಾ ಶೋರೂಂಗೆ ಜೈದೇವ್‌ ಮತ್ತು ತನ್ನ ಲವರ್‌ ದಿಯಾ ಜತೆ ಬರುತ್ತಾನೆ. ಶೋರೂಂ ಹೊರಗೆ ಒಂದಿಷ್ಟು ಲವ್‌ ಮಾತನಾಡುತ್ತಾರೆ. ಈ ಸಂದರ್ಭದಲ್ಲಿ ಜೈದೇವ್‌ ಮುಂದಿನ ಹಂತದ ಲವ್‌ ಕುರಿತು ಮಾತನಾಡುತ್ತಾನೆ. ಇಷ್ಟೆಲ್ಲ ಆಗಬೇಕಾದರೆ ನಿಮ್ಮ ಹೆಂಡ್ತಿ ಕಡೆಯಿಂದ ಸಿಗ್ನಲ್‌ ಸಿಗಬೇಕು ಎಂದು ಹೇಳುತ್ತಾಳೆ. ಒಟ್ಟಾರೆ ಮಲ್ಲಿನ ಬಿಟ್ಟು ನನ್ನ ಜತೆ ಬಾ ಅನ್ನೋ ರೀತಿ ಇರುತ್ತದೆ ಮಾತುಕತೆ. ಜೈದೇವ್‌ ಮತ್ತು ದಿಯಾ ಕಾರು ಶೋರೂಂ ಒಳಗೆ ಹೋಗುತ್ತಾರೆ. ಅದೇ ಸಮಯದಲ್ಲಿ ಗೌತಮ್‌ ಅಲ್ಲಿಗೆ ಬರುತ್ತಾನೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)