BBK 10: ಜೋಕರ್ ಆಗುವ ಬದಲು ವಿಲನ್ ಆದ ತುಕಾಲಿ ಸಂತು; ಬಿಗ್‌ಬಾಸ್ ಮನೆಯಲ್ಲಿ ಸದ್ದು ಮಾಡಿದ ಖಾಲಿ ಡಬ್ಬಾ
- Bigg Boss Kannada Latest updates: ಬಿಗ್‌ಬಾಸ್ ಕನ್ನಡದ ನಿನ್ನೆಯ ಸಂಚಿಕೆಯು ಹಲವು ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗಿದೆ. ಬಿಗ್‌ಬಾಸ್ ಮನೆಯಲ್ಲಿ ಯಾರು ಹೀರೋ, ಯಾರು ಖಾಲಿ ಡಬ್ಬ, ಯಾರು ವಿಲನ್ ಎಂದು ಹೆಸರಿಸಲು ಕಿಚ್ಚ ಸುದೀಪ್ ಸೂಚಿಸಿದರು. ಬಿಗ್‌ಬಾಸ್ ಸ್ಪರ್ಧಿಗಳ ಪ್ರಕಾರ ಯಾರು ವಿಲನ್, ಯಾರು ಖಾಲಿ ಡಬ್ಬ, ಯಾರು ಹೀರೋ ಎಂದು ತಿಳಿಯೋಣ.
- Bigg Boss Kannada Latest updates: ಬಿಗ್‌ಬಾಸ್ ಕನ್ನಡದ ನಿನ್ನೆಯ ಸಂಚಿಕೆಯು ಹಲವು ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗಿದೆ. ಬಿಗ್‌ಬಾಸ್ ಮನೆಯಲ್ಲಿ ಯಾರು ಹೀರೋ, ಯಾರು ಖಾಲಿ ಡಬ್ಬ, ಯಾರು ವಿಲನ್ ಎಂದು ಹೆಸರಿಸಲು ಕಿಚ್ಚ ಸುದೀಪ್ ಸೂಚಿಸಿದರು. ಬಿಗ್‌ಬಾಸ್ ಸ್ಪರ್ಧಿಗಳ ಪ್ರಕಾರ ಯಾರು ವಿಲನ್, ಯಾರು ಖಾಲಿ ಡಬ್ಬ, ಯಾರು ಹೀರೋ ಎಂದು ತಿಳಿಯೋಣ.
(1 / 7)
ಬಿಗ್‌ಬಾಸ್ ಕನ್ನಡದಲ್ಲಿ ಸಹ ಸ್ಪರ್ಧಿಗಳಲ್ಲಿ ಯಾರು ವಿಲನ್, ಯಾರು ಖಾಲಿ ಡಬ್ಬ, ಯಾರು ಹೀರೋ ಎಂದು ಸೂಚಿಸಲು ಸ್ಟಿಕ್ಕರ್‌ಗಳನ್ನು ನೀಡುವಂತೆ ಸುದೀಪ್ ಸೂಚಿಸಿದರು. ಈ ಆಟದಲ್ಲಿ ತುಕಾಲಿ ಸಂತೋಷ್ ಅವರು ಅತ್ಯಧಿಕ ವಿಲನ್ ಸ್ಟಿಕ್ಕರ್ ಪಡೆದರು. ಜೋಕರ್ ಆಗಿದ್ದ ಇವರು ಈ ಮೂಲಕ ವಿಲನ್ ಆಗಿ ಹೊರಹೊಮ್ಮಿದರು. ನಂತರದ ವಿಲನ್ ಸ್ಥಾನವನ್ನು ವಿನಯ್ ಗೌಡ ಪಡೆದರು.
(2 / 7)
ವಿನಯ್ ಅವರು ಕಾರ್ತಿಕ್‌ಗೆ ಹೀರೋ ಸ್ಟಿಕ್ಕರ್ ನೀಡಿದ್ದರು. ತುಕಾಲಿ ಸಂತುಗೆ ವಿಲನ್ ನೀಡಿದರು. ನೀತುಗೆ ಖಾಲಿ ಡಬ್ಬ ನೀಡಿದರು. ಇದೇ ರೀತಿ ಸ್ನೇಹಿತ್ ಅವರು ತನಿಷಾಗೆ ಹೀರೋ ಸ್ಟಿಕ್ಕರ್‌ನ ನೀಡಿದರು. ತುಕಾಲಿ ಸಂತೋಷ್‌ಗೆ ಖಾಲಿ ಡಬ್ಬ ಮತ್ತು ವಿನಯ್‌ಗೆ ಖಾಲಿ ಡಬ್ಬ ಸ್ಟಿಕ್ಕರ್ ನೀಡಿದರು.
(3 / 7)
ಸಿರಿ ಪ್ರಕಾರ ಕಾರ್ತಿಕ್ ಹೀರೋ, ಸ್ನೇಕ್ ಶ್ಯಾಮ್ ಖಾಲಿ ಡಬ್ಬಾ, ಮತ್ತು ವಿಲನ್ ತುಕಾಲಿ ಸಂತೋಷ್. ಮೈಕಲ್ ಪ್ರಕಾರ ವಿನಯ್ ಹೀರೋ, ಸ್ನೇಹಿತ್ ವಿಲನ್, ಸಂತು ಖಾಲಿ ಡಬ್ಬಾ. ತುಕಾಲಿ ಸಂತೋಷ್ ಅವರು ವರ್ತೂರು ಸಂತೋಷ್‌ಗೆ ಹೀರೋ ಪಟ್ಟ ನೀಡಿದರು. ಕಾರ್ತಿಕ್ ವಿಲನ್ ಎಂದರು, ವಿನಯ್‌ಗೆ ಡಬ್ಬಾ ಸ್ಟಿಕ್ಕರ್ ನೀಡಿದರು.
(4 / 7)
ಸಂಗೀತ ಶೃಂಗೇರಿ ಅವರ ಪ್ರಕಾರ ಕಾರ್ತಿಕ್ ಹೀರೋ, ವಿನಯ್ ವಿಲನ್, ಸ್ನೇಕ್ ಶ್ಯಾಮ್ ಖಾಲಿ ಡಬ್ಬಾ. ಇಶಾನಿ ಪ್ರಕಾರ ವಿನಯ್ ಹೀರೋ, ತುಕಾಲಿ ಸಂತೋಷ್ ಅವರು ವಿಲನ್. ಸ್ನೇಕ್ ಶ್ಯಾಮ್ ಖಾಲಿ ಡಬ್ಬಾ. ಭಾಗ್ಯಶ್ರೀ ಪ್ರಕಾರ ಡ್ರೋನ್ ಪ್ರತಾಪ್ ಹೀರೋ, ನೀತು ಖಾಲಿ ಡಬ್ಬಾ ಮತ್ತು ವಿನಯ್ ವಿಲನ್.
(5 / 7)
ಪತ್ರಕರ್ತ ಗೌರೀಶ್ ಅಕ್ಕಿ ಪ್ರಕಾರ ನೀತು ಖಾಲಿ ಡಬ್ಬ ವಿನಯ್ ವಿಲನ್, ಸಂಗೀತ ಹೀರೋ. ತನಿಷಾ ಅವರು ಸಂಗೀತಾಗಿ ಹೀರೋ ಸ್ಟಿಕ್ಕರ್ ನೀಡಿದರು. ಭಾಗ್ಯಶ್ರೀ ವಿಲನ್ ಎಂದು ಅಭಿಪ್ರಾಯಪಟ್ಟರು. ಇದೇ ರೀತಿ ಸ್ನೇಕ್ ಶ್ಯಾಮ್‌ಗೆ ಖಾಲಿ ಡಬ್ಬಾ ಬಿರುದ ನೀಡಿದರು.
(6 / 7)
ಡ್ರೋನ್ ಪ್ರತಾಪ್ ಪ್ರಕಾರ ಸಂತೋಷ್ ವಿಲನ್, ಮೈಕಲ್ ಖಾಲಿ ಡಬ್ಬ ಮತ್ತು ನಮೃತಾ ಹೀರೋ. ನೀತು ಪ್ರಕಾರ ಸಂಗೀತ ಹೀರೋ, ವಿನಯ್ ವಿಲನ್ ಮತ್ತು ಗೌರೀಶ್ ಅಕ್ಕಿ ಅವರು ಖಾಲಿ ಡಬ್ಬಾ. ಗೌರೀಶ್ ಅಕ್ಕಿಗೆ ನಮೃತಾ ಕೂಡ ಖಾಲಿ ಡಬ್ಬಾ ಸ್ಟಿಕ್ಕರ್ ನೀಡಿದರು. ನಮೃತಾ ಪ್ರಕಾರ ವಿನಯ್ ಹೀರೋ, ಸಂತು ವಿಲನ್.
ಇತರ ಗ್ಯಾಲರಿಗಳು