ಬೆಂಗಳೂರು ರಾಜಕಾಲುವೆ ದುರಸ್ತಿ ಮಾಡುತ್ತಂತೆ ಸರ್ಕಾರ, ವಿಶ್ವಬ್ಯಾಂಕ್‌ನಲ್ಲಿ 3000 ಕೋಟಿ ರೂ ಸಾಲ ಪಡೆಯಲು ಮಾತುಕತೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ರಾಜಕಾಲುವೆ ದುರಸ್ತಿ ಮಾಡುತ್ತಂತೆ ಸರ್ಕಾರ, ವಿಶ್ವಬ್ಯಾಂಕ್‌ನಲ್ಲಿ 3000 ಕೋಟಿ ರೂ ಸಾಲ ಪಡೆಯಲು ಮಾತುಕತೆ

ಬೆಂಗಳೂರು ರಾಜಕಾಲುವೆ ದುರಸ್ತಿ ಮಾಡುತ್ತಂತೆ ಸರ್ಕಾರ, ವಿಶ್ವಬ್ಯಾಂಕ್‌ನಲ್ಲಿ 3000 ಕೋಟಿ ರೂ ಸಾಲ ಪಡೆಯಲು ಮಾತುಕತೆ

Bengaluru Rajakaluves; ಬೆಂಗಳೂರಿನಲ್ಲಿ ಮಳೆ ಬಂದಾಗ ರಾಜಕಾಲುವೆ ಪ್ರದೇಶದಲ್ಲಿ ಜನವಸತಿಗೆ ನೀರು ನುಗ್ಗಿ ತೊಂದರೆ ಆಗುವುದನ್ನು ತಪ್ಪಿಸಲು ಸರ್ಕಾರ ಚಿಂತನೆ ನಡೆಸಿದೆ. ಬೆಂಗಳೂರು ರಾಜಕಾಲುವೆ ದುರಸ್ತಿ ಮಾಡುತ್ತಂತೆ ಸರ್ಕಾರ. ಇದಕ್ಕಾಗಿ ವಿಶ್ವಬ್ಯಾಂಕ್‌ನಲ್ಲಿ 3000 ಕೋಟಿ ರೂ ಸಾಲ ಪಡೆಯಲು ಮಾತುಕತೆ ನಡೆದಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಬೆಂಗಳೂರು ರಾಜಕಾಲುವೆ ದುರಸ್ತಿ ಮಾಡುತ್ತಂತೆ ಸರ್ಕಾರ. ಆದ್ದರಿಂದ ವಿಶ್ವಬ್ಯಾಂಕ್‌ನಲ್ಲಿ 3000 ಕೋಟಿ ರೂ ಸಾಲ ಪಡೆಯಲು ಮಾತುಕತೆ ನಡೆದಿದೆ ಎಂದು ಸಚಿವರು ತಿಳಿಸಿದ್ದಾರೆ. (ಕಡತ ಚಿತ್ರ)
ಬೆಂಗಳೂರು ರಾಜಕಾಲುವೆ ದುರಸ್ತಿ ಮಾಡುತ್ತಂತೆ ಸರ್ಕಾರ. ಆದ್ದರಿಂದ ವಿಶ್ವಬ್ಯಾಂಕ್‌ನಲ್ಲಿ 3000 ಕೋಟಿ ರೂ ಸಾಲ ಪಡೆಯಲು ಮಾತುಕತೆ ನಡೆದಿದೆ ಎಂದು ಸಚಿವರು ತಿಳಿಸಿದ್ದಾರೆ. (ಕಡತ ಚಿತ್ರ) (bbmp)

Bengaluru Rajakaluves; ಬೆಂಗಳೂರಿನ ರಾಜಕಾಲುವೆಗಳ (ಮಳೆನೀರಿನ ಮುಖ್ಯ ಚರಂಡಿ) ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರ ವಿಶ್ವ ಬ್ಯಾಂಕ್‌ನಿಂದ 3000 ಕೋಟಿ ರೂಪಾಯಿ ಸಾಲ ಪಡೆಯಲು ಸಿದ್ದತೆ ನಡೆಸಿದೆ. ಈ ವಿಷಯವನ್ನು ರಾಜ್ಯ ವಿಧಾನಸಭೆಯಲ್ಲಿ ಶುಕ್ರವಾರ (ಡಿಸೆಂಬರ್ 13) ಪ್ರಸ್ತಾಪಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಬೆಂಗಳೂರಿನ ರಾಜಕಾಲುವೆಗಳ ಪುನರ್ ನಿರ್ಮಾಣ ಮತ್ತು ಅಭಿವೃದ್ಧಿಗೆ ಸರ್ಕಾರ ನಿರ್ಧರಿಸಿದೆ. ವಿಶ್ವಬ್ಯಾಂಕ್ ಸಾಲದ ಸಹಾಯದಿಂದ ಪ್ರವಾಹವನ್ನು ನಿಭಾಯಿಸಲು ಒಂದು ಸಲದ ಪರಿಹಾರವಾಗಿ ಸರಿಯಾದ ಉಪಕ್ರಮವನ್ನು ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ವಿಶ್ವಬ್ಯಾಂಕ್ ಪ್ರತಿನಿಧಿಗಳೊಂದಿಗೆ ಹತ್ತು ಸುತ್ತಿನ ಸಭೆಗಳನ್ನು ನಡೆಸಲಾಗಿತ್ತು ಎಂದು ವಿವರಿಸಿದರು.

ಬೆಂಗಳೂರಿನ ರಾಜಕಾಲುವೆಗಳ ಅಭಿವೃದ್ಧಿಗೆ ವಿಶ್ವ ಬ್ಯಾಂಕ್‌ನಿಂದ 3,000 ಕೋಟಿ ರೂ. ಸಾಲ

ಬೆಂಗಳೂರಿನ ರಾಜಕಾಲುವೆಗಳ ಅಭಿವೃದ್ಧಿಗೆ ವಿಶ್ವ ಬ್ಯಾಂಕ್‌ನಿಂದ 3000 ಕೋಟಿ ರೂಪಾಯಿ ಸಾಲ ಪಡೆದು ಅದರಲ್ಲಿ 2000 ಕೋಟಿ ರೂಪಾಯಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಮತ್ತು 1000 ಕೋಟಿ ರೂಪಾಯಿ ಬಿಡಬ್ಲ್ಯುಎಸ್‌ಎಸ್‌ಬಿಗೆ ನೀಡಲಾಗುತ್ತವೆ. ಈ ಎರಡೂ ಸಂಸ್ಥೆಗಳು ರಾಜಕಾಲುವೆಗಳ ಅಭಿವೃದ್ಧಿಗೆ ಈ ಹಣವನ್ನು ವ್ಯಯಿಸಲಿವೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಪ್ರಸ್ತುತ ಕೆಲವು ಪ್ರದೇಶಗಳಲ್ಲಿ ಅಸಮರ್ಪಕ ಭೂಗತ ಒಳಚರಂಡಿ ಜಾಲದಿಂದಾಗಿ ರಾಜಕಾಲುವೆಗಳಿಗೆ ಕೊಳಚೆ ನೀರು ಬಿಡಲಾಗುತ್ತಿದೆ. ಮುಖ್ಯವಾಗಿ ಮಳೆಗಾಲದಲ್ಲಿ ರಾಜಕಾಲುವೆ ಸುತ್ತಮುತ್ತ ಪ್ರದೇಶಗಳು ಮತ್ತು ರಸ್ತೆಗಳು ಜಲಾವೃತವಾಗುವುದನ್ನು ತಡೆಯಲು ರಾಜಕಾಲುವೆಗಳ ಅಭಿವೃದ್ಧಿಯನ್ನು ಕೈಗೊಳ್ಳಲಾಗುತ್ತಿದೆ ಹೀಗಾಗಿ ರಾಜಕಾಲುವೆಗಳ ಪಕ್ಕದಲ್ಲಿಯೇ ಭೂಗತ ಚರಂಡಿ ನಿರ್ಮಾಣಕ್ಕೆ ಒತ್ತು ನೀಡಲು ಸರ್ಕಾರ ನಿರ್ಧರಿಸಿದೆ.

ಬೆಂಗಳೂರಲ್ಲಿ ರಾಜಕಾಲುವೆ ವ್ಯಾಪ್ತಿ, ಅಂಕಿ ಅಂಶ

ಬೆಂಗಳೂರು ಮಹಾನಗರದಲ್ಲಿ ಒಟ್ಟು 856 ಕಿ.ಮೀ. ರಾಜಕಾಲುವೆ ಇದ್ದು, 200 ಕಿ.ಮೀ. ಮೂರನೇ ಹಂತದ ಮಳೆ ನೀರು ಚರಂಡಿಗಳಿರುವುದಾಗಿ ಗುರುತಿಸಲಾಗಿದೆ. ಪ್ರವಾಹವನ್ನು ತಡೆಗಟ್ಟಲು ಅವುಗಳನ್ನು ಅಗಲೀಕರಣ ಮತ್ತು ಮರುರೂಪಿಸುವ ಅವಶ್ಯಕತೆಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರ 2013 ರಿಂದ 2018 ರವರೆಗೆ 575 ಕಿಲೋಮೀಟರ್ ಚರಂಡಿಗಳ ಪುನರ್ನಿರ್ಮಾಣವನ್ನು ಪೂರ್ಣಗೊಳಿಸಿದರೆ, ನಂತರದ ಸರ್ಕಾರಗಳು 2023 ರವರೆಗೆ ಕೇವಲ 100 ಕಿಮೀ ಚರಂಡಿಗಳ ಕಾಮಗಾರಿ ಆಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ವಿವರ ನೀಡಿದರು.

ಇನ್ನು ಉಳಿದಿರುವ 350 ಕಿ.ಮೀ ಉದ್ದದ ರಾಜಕಾಲುವೆಗಳ ಅಭಿವೃದ್ಧಿಯನ್ನು ವಿಶ್ವಬ್ಯಾಂಕ್ ಸಾಲದ ಮೂಲಕ ಒಂದು ವರ್ಷದೊಳಗೆ ಪೂರ್ಣಗೊಳಿಸಲು ಸರ್ಕಾರ ಉದ್ದೇಶಿಸಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಬೆಂಗಳೂರು ರಾಜಕಾಲುವೆ ವಿಚಾರ ಪ್ರಸ್ತಾಪ

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶದಲ್ಲಿ ಮಳೆ ಹಾನಿಯ ಕುರಿತು ಸ್ವಯಂ ಪ್ರೇರಿತ ಹೇಳಿಕೆ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, ಬೆಂಗಳೂರಿನಲ್ಲಿ ರಾಜಕಾಲುವೆಗಳ ದುರಸ್ತಿ, ವಿಸ್ತರಣೆ ಕಡೆಗೆ ಸರ್ಕಾರ ಗಮನಹರಿಸಿದೆ. ಅದೇ ರೀತಿ, ರಾಜ್ಯದ ಹಲವೆಡೆ ಭೂ ಕುಸಿತ ಸೇರಿ ಇತರೆ ಅವಘಡಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಒಟ್ಟು 5000 ಕೋಟಿ ರೂಪಾಯಿಯ ಸಮಗ್ರಯೋಜನೆ ತಯಾರಿಸಲಾಗಿದೆ. ಬೆಂಗಳೂರಿನಲ್ಲಿ ಮಳೆಯಿಂದ ಸಾಕಷ್ಟು ಹಾನಿಯಾಗುತ್ತಿದೆ. ಮಳೆ ನೀರ ಚರಂಡಿಗಳಲ್ಲಿ ನೀರು ಸರಾಗ ಹರಿಯದೇ ಇರುವ ಕಾರಣ, ವಸತಿ ಪ್ರದೇಶಗಳಲ್ಲಿ ತೊಂದರೆಯಾಗುತ್ತದೆ. ಹೀಗಾಗಿ ನೀರು ಹರಿಯುವ ರಾಜಕಾಲುವೆಗಳನ್ನು ಪರಿಪಕ್ವವಾಗಿ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯವರು ಕಂದಾಯ ಇಲಾಖೆಗೂ ಕೆಲ ಸೂಚನೆಗಳನ್ನು ನೀಡಿದ್ದಾರೆ ಎಂದು ಸಚಿವರು ವಿವರಿಸಿದರು.

Whats_app_banner