ಕನ್ನಡ ಸುದ್ದಿ  /  ಮನರಂಜನೆ  /  Reels: ಫಿಟ್ನೆಸ್‌ ಗುರುವಿಗೆ ಚೀಟ್‌ ಮಾಡಿದ ಅಮೃತವರ್ಷಿಣಿ ರಂಜನಿ; ಕೊನೆಗೆ ಅವರ ಪರಿಸ್ಥಿತಿ ಏನಾಯ್ತು ನೋಡಿ

Reels: ಫಿಟ್ನೆಸ್‌ ಗುರುವಿಗೆ ಚೀಟ್‌ ಮಾಡಿದ ಅಮೃತವರ್ಷಿಣಿ ರಂಜನಿ; ಕೊನೆಗೆ ಅವರ ಪರಿಸ್ಥಿತಿ ಏನಾಯ್ತು ನೋಡಿ

ಅಮೃತವರ್ಷಿಣಿ ಸೀರಿಯಲ್‌ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ರಂಜಿನಿ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ರೀಲ್ಸ್‌ ಹರಿಯಬಿಡುತ್ತಾರೆ. ಮಿಸ್ಟರ್‌ ಇಂಡಿಯಾ ಅರುಣ್‌ ಗೌಡ ಜತೆ ವರ್ಕೌಟ್‌ ಮಾಡುವ ವಿಡಿಯೋ ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಇಷ್ಟವಾಗಿದೆ.

ಅಮೃತವರ್ಷಿಣಿ ರಂಜನಿ ರೀಲ್ಸ್‌
ಅಮೃತವರ್ಷಿಣಿ ರಂಜನಿ ರೀಲ್ಸ್‌

ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಅಮೃತವರ್ಷಿಣಿ ಸೀರಿಯಲ್‌ ಮೂಲಕ ಜನಮಾನಸಕ್ಕೆ ಹತ್ತಿರವಾದ ನಟಿ ರಂಜನಿ. ಇತ್ತೀಚೆಗೆ ಕೊನೆಗೊಂಡ ಹಿಟ್ಲರ್‌ ಕಲ್ಯಾಣದಲ್ಲಿಯೂ ಇವರು ಮಿಂಚಿದ್ದರು. ಹಿಟ್ಲರ್‌ ಕಲ್ಯಾಣದಲ್ಲಿ ಅಂತರ ಎಂಬ ಪಾತ್ರದಲ್ಲಿ ನಟಿಸಿದ್ದರು. ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಗ್ಲಾಮರಸ್‌ ಪೋಟೋವನ್ನೂ ಹಂಚುತ್ತಾ ಇರುತ್ತಾರೆ. ಫಿಟ್ನೆಸ್‌ ಕುರಿತು ಅತೀವ ಕಾಳಜಿ ಹೊಂದಿರುವ ಇವರು ವರ್ಕೌಟ್‌ ವಿಡಿಯೋಗಳೂ ಫೇಮಸ್‌. ಇವರಿಗೆ ಗೆಳೆಯ, ಫಿಟ್ನೆಸ್‌ ಗುರುವಾಗಿ ಅರುಣ್‌ ವಿ ಗೌಡ ಇದ್ದಾರೆ. ಇವರ ಜತೆ ಇತ್ತೀಚಿಗೆ ರಂಜನಿ ಹಂಚಿಕೊಂಡ ರೀಲ್ಸ್‌ ಸಖತ್‌ ಇದೆ.

ಟ್ರೆಂಡಿಂಗ್​ ಸುದ್ದಿ

ಫಿಟ್ನೆಸ್‌ ಗುರುವಿಗೆ ಚೀಟ್‌ ಮಾಡಿದ್ರೆ ಏನಾಗುತ್ತದೆ?

ನಾವು ಅವ್ರಿಗೆ cheat ಮಾಡಿದ್ರೆ ಅವ್ರು ಸುಮ್ನೆ ಬಿಡ್ತಾರ ಅವ್ರು ಅದೇ school ನಲ್ಲಿ ಹೆಡ್ ಮಾಸ್ಟರ್ ಎಂಬ ಕ್ಯಾಪ್ಷನ್‌ನಡಿ ರಂಜನಿ ಅವರು ವಿಡಿಯೋ ಹಂಚಿಕೊಂಡಿದ್ದಾರೆ. ಜಿಮ್‌ನಲ್ಲಿ ಅರುಣ್‌ ವಿ ಗೌಡ ನೆರವಿನಿಂದ ಎಕ್ಸರ್‌ಸೈಸ್‌ ಮಾಡುತ್ತಾ ಇರುತ್ತಾರೆ. ಈ ಸಮಯದಲ್ಲಿ ಆಗಾಗ ಕೈ ಬಿಡುತ್ತಾ ಇವರು ವಿಶ್ರಾಂತಿ ಮಾಡುತ್ತಾರೆ. ಈ ವಿಷಯ ಗೊತ್ತಾದಗ ಜಿಮ್‌ ಮಾಸ್ಟರ್‌ ಏನು ಮಾಡುತ್ತಾರೆ ಎಂದು ತಿಳಿಯಲು ಈ ವಿಡಿಯೋ ನೋಡಬಹುದು.

ಈ ಹಿಂದೆಯೂ ಹಲವು ವಿಡಿಯೋಗಳನ್ನು ಅರುಣ್‌ ಗೌಡ ಜತೆ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಮಿಸ್ಟರ್‌ ಇಂಡಿಯಾ ಪಕ್ಕದ ಬೇಬಿ ಮಂಡ್ಯ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದರು. ಜಿಮ್‌ನಲ್ಲಿ ಸತತ ವರ್ಕೌಟ್‌ ಮೂಲಕ ಸೌಂದರ್ಯ ಮತ್ತು ಆರೋಗ್ಯ ಕಾಪಾಡಿಕೊಳ್ಳಲು ರಂಜನಿ ಆದ್ಯತೆ ನೀಡುತ್ತಿದ್ದಾರೆ.

 

ಕಿರುತೆರೆ ನಟಿ ರಂಜನಿ ಪರಿಚಯ

ರಂಜನಿ ಅವರು ಅಮೃತವರ್ಷಿಣಿ ಸೀರಿಯಲ್‌ನಲ್ಲಿ ನಟಿಸಿದ್ದರು. ಆ ಸೀರಿಯಲ್‌ನಲ್ಲಿ ಅಮೃತ ಪಾತ್ರದ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ಇವರ ಹೆಸರೇ ಅಮೃತವರ್ಷಿಣಿಯ ಅಮೃತ ಎಂದು ಫೇಮಸ್‌ ಆಗಿತ್ತು. ಅಮೃತವರ್ಷಿಣಿ ಸೀರಿಯಲ್‌ ಬಳಿಕ ಆತ್ಮಬಂಧನ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದರು. ಇದು ಹಾರರ್‌ ಥ್ರಿಲ್ಲರ್‌ ಸೀರಿಯಲ್‌. ಇದಾದ ಬಳಿಕ ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಕಾಲಿಗೆ ಗಾಯವಾದ ಕಾರಣ ಡ್ಯಾನ್ಸ್‌ ಶೋನಿಂದ ಹೊರಬಂದಿದ್ದರು. ಮಜಾ ಟಾಕಿಸಿನ ಕೆಲವು ಎಪಿಸೋಡ್‌ನಲ್ಲೂ ಇವರು ಪಾಲ್ಗೊಂಡಿದ್ದಾರೆ. ಜೀ ಕನ್ನಡ ವಾಹಿನಿಯ ಸೂಪರ್‌ ಕ್ವೀನ್‌ ರಿಯಾಲಿಟಿ ಶೋನನಲ್ಲಿಯೂ ಭಾಗವಹಿಸಿದ್ದರು.

ರಂಜನಿಗೆ ಫಿಟ್ನೆಸ್‌ ಬಗ್ಗೆ ಎಲ್ಲಿಲ್ಲದ ಅಸ್ಥೆ. ಜಿಮ್‌ ಮಾತ್ರವಲ್ಲದೆ ಯೋಗ, ಪ್ರಾಣಾಯಾಮ ಕೂಡ ಮಾಡುತ್ತಾರಂತೆ. ಅಮೃತವರ್ಷಿಣಿಯ ಅಮೃತಾ ಎಂದೇ ಫೇಮಸ್‌ ಆಗಿರುವ ಇವರು ಮೂಲತಃ ತುಮಕೂರಿನವರು. ಬಿಕಾಂ ಓದಿರುವ ಇವರು ಒಳ್ಳೆಯ ಡ್ಯಾನ್ಸರ್‌. ಭರತನಾಟ್ಯ ಕಲಾವಿದೆಯೂ ಹೌದು.

IPL_Entry_Point