ಜಾನಿ ಮಾಸ್ಟರ್‌ ಪ್ರಕರಣ: ಪುರುಷರ ಹೆಸರು ಹಾಳು ಮಾಡಲು ಯತ್ನಿಸುವ ಯುವತಿಯರಿಗೂ ಶಿಕ್ಷೆ ಆಗಬೇಕು; ಆಟಾ ಸಂದೀಪ್ ಪತ್ನಿ ಜ್ಯೋತಿ ರಾಜ್‌ ಕಾಮೆಂಟ್
ಕನ್ನಡ ಸುದ್ದಿ  /  ಮನರಂಜನೆ  /  ಜಾನಿ ಮಾಸ್ಟರ್‌ ಪ್ರಕರಣ: ಪುರುಷರ ಹೆಸರು ಹಾಳು ಮಾಡಲು ಯತ್ನಿಸುವ ಯುವತಿಯರಿಗೂ ಶಿಕ್ಷೆ ಆಗಬೇಕು; ಆಟಾ ಸಂದೀಪ್ ಪತ್ನಿ ಜ್ಯೋತಿ ರಾಜ್‌ ಕಾಮೆಂಟ್

ಜಾನಿ ಮಾಸ್ಟರ್‌ ಪ್ರಕರಣ: ಪುರುಷರ ಹೆಸರು ಹಾಳು ಮಾಡಲು ಯತ್ನಿಸುವ ಯುವತಿಯರಿಗೂ ಶಿಕ್ಷೆ ಆಗಬೇಕು; ಆಟಾ ಸಂದೀಪ್ ಪತ್ನಿ ಜ್ಯೋತಿ ರಾಜ್‌ ಕಾಮೆಂಟ್

ಜಾನಿ ಮಾಸ್ಟರ್‌ ಪ್ರಕರಣ ದಕ್ಷಿಣ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದೆ. ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಕೇಸ್‌ನಲ್ಲಿ ಜಾನಿ ಮಾಸ್ಟರ್‌ ಅರೆಸ್ಟ್‌ ಆಗಿದ್ದಾರೆ. ಜಾನಿ ಕೇಸ್‌ ಬಗ್ಗೆ ಪ್ರತಿಕ್ರಿಯಿಸಿರುವ ಕೊರಿಯೋಗ್ರಾಫರ್‌ ಜ್ಯೋತಿ ರಾಜ್‌, ಪುರುಷರು ಕಷ್ಟಪಟ್ಟು ಸಂಪಾದಿಸಿದ ಹೆಸರು ಹಾಳು ಮಾಡುವ ಯುವತಿಯರಿಗೂ ಶಿಕ್ಷೆ ಆಗಬೇಕು ಎಂದಿದ್ದಾರೆ.

ಜಾನಿ ಮಾಸ್ಟರ್‌ ಪ್ರಕರಣ: ಪುರುಷರ ಹೆಸರು ಹಾಳು ಮಾಡಲು ಯತ್ನಿಸುವ ಯುವತಿಯರಿಗೂ ಶಿಕ್ಷೆ ಆಗಬೇಕು; ಆಟಾ ಸಂದೀಪ್ ಪತ್ನಿ ಜ್ಯೋತಿ ರಾಜ್‌ ಕಾಮೆಂಟ್
ಜಾನಿ ಮಾಸ್ಟರ್‌ ಪ್ರಕರಣ: ಪುರುಷರ ಹೆಸರು ಹಾಳು ಮಾಡಲು ಯತ್ನಿಸುವ ಯುವತಿಯರಿಗೂ ಶಿಕ್ಷೆ ಆಗಬೇಕು; ಆಟಾ ಸಂದೀಪ್ ಪತ್ನಿ ಜ್ಯೋತಿ ರಾಜ್‌ ಕಾಮೆಂಟ್ (PC: Jani master,‌ Aata Sandeep FB)

ದಕ್ಷಿಣ ಸಿನಿಮಾದ್ಯಂತ ಸದ್ಯಕ್ಕೆ ಕೊರಿಯೋಗ್ರಾಫರ್‌ ಜಾನಿ ಮಾಸ್ಟರ್‌ ಪ್ರಕರಣ ಚರ್ಚೆಯಾಗುತ್ತಿದೆ. ಸ್ಟಾರ್‌ ಕೊರಿಯೋಗ್ರಾಫರ್‌ ಜಾನಿ ಮಾಸ್ಟರ್‌ ಅಪ್ರಾಪ್ತ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಅರೆಸ್ಟ್‌ ಆಗಿದ್ದಾರೆ. ಸದ್ಯಕ್ಕೆ ಜಾನಿ ಮಾಸ್ಟರ್‌ ನ್ಯಾಯಾಂಗ ಬಂಧನದಲಿದ್ದಾರೆ.

ಜಾನಿ ಮಾಸ್ಟರ್‌ ವಿರುದ್ಧ ಪೋಕ್ಸೋ ಪ್ರಕರಣ

ಈ ನಡುವೆ ಜಾನಿ ಮಾಸ್ಟರ್‌ ತಪ್ಪು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಜಾನಿ ಮಾಸ್ಟರ್‌ ನನಗೆ 4 ವರ್ಷಗಳಿಂದ ಪರಿಚಯ. ರಿಯಾಲಿಟಿ ಶೋ ಒಂದರಲ್ಲಿ ನಾನು ಅವರನ್ನು ಭೇಟಿ ಮಾಡಿದ್ದೆ, ನಂತರ ಅವರ ಟೀಂ ಸೇರಿಕೊಂಡೆ. ಒಮ್ಮೆ ಮುಂಬೈ ಕಾರ್ಯಕ್ರಮವೊಂದರಲ್ಲಿ ಹೋಟೆಲ್‌ ರೂಮ್‌ನಲ್ಲಿ ಉಳಿದುಕೊಂಡಿದ್ದಾಗ ಜಾನಿ ಮಾಸ್ಟರ್‌ ನನ್ನ ಮೇಲೆ ಅತ್ಯಾಚಾರ ಮಾಡಿದ್ದರು. ಅಂದಿನಿಂದ ಅನೇಕ ಬಾರಿ ಅವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಚಿತ್ರರಂಗದಲ್ಲಿ ಅವಕಾಶಗಳು ಇಲ್ಲದಂತೆ ಮಾಡುವುದಾಗಿ ಬೆದರಿಕೆ ಹಾಕಿದ್ದಾಗಿ ಯುವತಿ, ದೂರಿನಲ್ಲಿ ಉಲ್ಲೇಖಿಸಿದ್ದರು. ಯುವತಿ ಅಪ್ರಾಪ್ತೆ ಆಗಿರುವುದರಿಂದ ಜಾನಿ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ.

ಜಾನಿ ಮಾಸ್ಟರ್‌ ಕೇಸ್‌ ಸಂಬಂಧ ಆಟಾ ಸಂದೀಪ್‌ ಪತ್ನಿ ಜ್ಯೋತಿ ಕಾಮೆಂಟ್

ಜಾನಿ ಮಾಸ್ಟರ್‌ ಪ್ರಕರಣ ಸಂಬಂಧ ಆಟಾ ಸಂದೀಪ್‌ ಪತ್ನಿ ಜ್ಯೋತಿ ರಾಜ್‌ ಕಾಮೆಂಟ್‌ ಮಾಡಿದ್ದಾರೆ. ಹೆಣ್ಣು ಮಕ್ಕಳ ಬಳಿ ತಪ್ಪಾಗಿ ನಡೆದುಕೊಳ್ಳುವವರು, ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಯಾರೇ ಅಗಲೀ ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆ ಆಗಲೇಬೇಕು. ಕಾನೂನಿನ ಪ್ರಕಾರ ಎಲ್ಲರೂ ಸಮಾನರು, ಯಾರೂ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದೇ ರೀತಿ, ಈ ಸೆಕ್ಷನ್‌ಗಳ ಹೆಸರಿನಲ್ಲಿ , ಪುರುಷರ ಮೇಲಿನ ಕ್ರೈಂ ರೇಟನ್ನು ಗಮನದಲ್ಲಿಟ್ಟುಕೊಂಡು, ಒಬ್ಬ ಪುರುಷ ಬಹಳ ಕಷ್ಟಪಟ್ಟು ಸಂಪಾದಿಸಿಕೊಂಡ ಹೆಸರನ್ನು ಹಾಳು ಮಾಡಲು ಮುಂದಾಗುವ ಓವರ್‌ ಸ್ಮಾರ್ಟ್‌ ಯುವತಿಯರಿಗೂ ಶಿಕ್ಷೆ ಆಗಬೇಕು.

ಆರೋಪವಿದ್ದಾಗ ಇಬ್ಬರ ಮಾತುಗಳನ್ನೂ ತಾಳ್ಮೆಯಿಂದ ಕೇಳಬೇಕು

ಯಾರ ವಿರುದ್ಧವಾದರೂ ಏನಾದರೂ ಆರೋಪ ಕೇಳಿಬಂದರೆ ಯುವತಿಯ ಮಾತು ಮಾತ್ರವಲ್ಲ, ಆ ಪುರುಷನ ಹೇಳಿಕೆಗಳನ್ನೂ ಕೇಳಬೇಕು. ಆದರೆ ಆತ ಖ್ಯಾತ ವ್ಯಕ್ತಿ ಎಂಬ ಮಾತ್ರಕ್ಕೆ ಆತನ ಹೆಸರು ಹಾಳು ಮಾಡುವುದು, ತಮಗಿಷ್ಟಬಂದಂತೆ ಮಾಧ್ಯಮಗಳಲ್ಲಿ ತಪ್ಪಾಗಿ ಬಿಂಬಿಸುವುದು , ಅವರ ಇಮೇಜ್‌ ಹಾಳು ಮಾಡುವುದು ತಪ್ಪು. ತಪ್ಪು ಯಾರು ಮಾಡಿದರೂ ವಿಚಾರಣೆ ನಂತರ ಸತ್ಯ ತಿಳಿದೇ ತಿಳಿಯುತ್ತದೆ ಎಂದು ಜ್ಯೋತಿ ರಾಜ್‌ ಮಾತನಾಡಿದ್ದಾರೆ. ಜಾನಿ ಮಾಸ್ಟರ್‌ ಕೇಸ್‌ ವಿಚಾರದಲ್ಲಿ ಕೆಲವರು ಯುವತಿ ಪರ ನಿಂತರೆ ಕೆಲವರು ಜಾನಿ ಪರ ನಿಂತಿದ್ದಾರೆ. ಯುವತಿ, ಈಗ ಪುಷ್ಪ 2 ಚಿತ್ರದಲ್ಲಿ ಕೊರಿಯೋಗ್ರಾಫರ್‌ ಆಗಿ ಕೆಲಸ ಮಾಡುತ್ತಿದ್ದು ಟಾಲಿವುಡ್‌ ನಟ ಅಲ್ಲು ಅರ್ಜುನ್‌ ಕೂಡಾ ಯುವತಿಗೆ ಬೆಂಬಲವಾಗಿ ನಿಂತಿದ್ದಾರೆ ಎನ್ನಲಾಗುತ್ತಿದೆ.

Whats_app_banner