ನಿಶ್ಚಿತಾರ್ಥಕ್ಕೆ ಅಣಿಯಾದ್ರಾ ಸಮಂತಾ ಮಾಜಿ ಪತಿ ನಾಗ ಚೈತನ್ಯ? ಪ್ರೇಯಸಿ ಶೋಭಿತಾ ಧೂಳಿಪಾಲ ಜತೆಗಿನ ಬಂಧ ಶೀಘ್ರದಲ್ಲಿ ಅಧಿಕೃತ-tollywood news actress samantha ex husband naga chaitanya and actress sobhita dhulipala getting engaged today mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ನಿಶ್ಚಿತಾರ್ಥಕ್ಕೆ ಅಣಿಯಾದ್ರಾ ಸಮಂತಾ ಮಾಜಿ ಪತಿ ನಾಗ ಚೈತನ್ಯ? ಪ್ರೇಯಸಿ ಶೋಭಿತಾ ಧೂಳಿಪಾಲ ಜತೆಗಿನ ಬಂಧ ಶೀಘ್ರದಲ್ಲಿ ಅಧಿಕೃತ

ನಿಶ್ಚಿತಾರ್ಥಕ್ಕೆ ಅಣಿಯಾದ್ರಾ ಸಮಂತಾ ಮಾಜಿ ಪತಿ ನಾಗ ಚೈತನ್ಯ? ಪ್ರೇಯಸಿ ಶೋಭಿತಾ ಧೂಳಿಪಾಲ ಜತೆಗಿನ ಬಂಧ ಶೀಘ್ರದಲ್ಲಿ ಅಧಿಕೃತ

ನಟಿ ಸಮಂತಾ ರುತ್‌ ಪ್ರಭು ಜತೆಗಿನ ವಿಚ್ಛೇದನದ ಬಳಿಕ ನಟ ಅಕ್ಕಿನೇನಿ ನಾಗ ಚೈತನ್ಯ ಹೆಸರು ತೆಲುಗಿನ ಮತ್ತೋರ್ವ ನಟಿ ಶೋಭಿತಾ ಧೂಳಿಪಾಲ್‌ ಜತೆ ತಳುಕು ಹಾಕಿಕೊಂಡಿತ್ತು. ಇಬ್ಬರೂ ಪ್ರೀತಿಯಲ್ಲಿದ್ದಾರೆ ಎಂದೇ ಹೇಳಲಾಗಿತ್ತು. ಅದರಂತೆ ಈಗ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಳ್ಳುವ ಹಂತಕ್ಕೂ ಬಂದಿದೆ ಎಂಬ ಸುದ್ದ ಟಾಲಿವುಡ್‌ ಅಂಗಳದಲ್ಲಿ ಓಡಾಡುತ್ತಿದೆ.

ನಿಶ್ಚಿತಾರ್ಥಕ್ಕೆ ಅಣಿಯಾದ್ರಾ ಸಮಂತಾ ಮಾಜಿ ಪತಿ ನಾಗ ಚೈತನ್ಯ? ಪ್ರೇಯಸಿ ಶೋಭಿತಾ ಧೂಳಿಪಾಲ ಜತೆಗಿನ ಬಂಧ ಶೀಘ್ರದಲ್ಲಿ ಅಧಿಕೃತ
ನಿಶ್ಚಿತಾರ್ಥಕ್ಕೆ ಅಣಿಯಾದ್ರಾ ಸಮಂತಾ ಮಾಜಿ ಪತಿ ನಾಗ ಚೈತನ್ಯ? ಪ್ರೇಯಸಿ ಶೋಭಿತಾ ಧೂಳಿಪಾಲ ಜತೆಗಿನ ಬಂಧ ಶೀಘ್ರದಲ್ಲಿ ಅಧಿಕೃತ (instagram)

Naga Chaitanya Sobhita Dhulipala Engagement: ಟಾಲಿವುಡ್‌ ನಟ ಅಕ್ಕಿನೇನಿ ನಾಗಾರ್ಜುನ್‌ ಹಿರಿ ಮಗ ನಾಗ ಚೈತನ್ಯ ಜೋಶ್ ಚಿತ್ರದ ಮೂಲಕ ನಾಯಕನಾಗಿ ಟಾಲಿವುಡ್‌ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಏ ಮಾಯೇ ಚೇಸಾವೆ ಚಿತ್ರದ ಮೂಲಕ ದೊಡ್ಡ ಯಶಸ್ಸನ್ನೂ ಗಳಿಸಿದರು. ಈ ಸಿನಿಮಾದಿಂದ ನಾಯಕನಾಗಿ ನಾಗ ಚೈತನ್ಯ ಹಾಗೂ ನಾಯಕಿಯಾಗಿ ಸಮಂತಾ ಹಿಟ್‌ ಜೋಡಿ ಎನಿಸಿಕೊಂಡಿತು. ಹೀಗೆ ಇವರಿಬ್ಬರ ನಡುವೆ ಏರ್ಪಟ್ಟ ಪರಿಚಯ ಪ್ರೇಮಕ್ಕೆ ತಿರುಗಿ ಮದುವೆಯೂ ಆಯಿತು.

ಆದರೆ, ಆ ಮದುವೆ ಹೆಚ್ಚು ಕಾಲ ಗಟ್ಟಿಯಾಗಿ ಉಳಿಯಲಿಲ್ಲ. ನಾಲ್ಕು ವರ್ಷಗಳ ನಂತರ ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ಪಡೆಯುವ ಮೂಲಕ ಬೇರೆ ಬೇರೆಯಾದರು. ಹೀಗೆ ಸಮಂತಾ ಜತೆಗಿನ ಸಂಬಂಧದಿಂದ ಬೇರೆಯಾಗುತ್ತಿದ್ದಂತೆ, ತೆಲುಗಿನ ಮತ್ತೋರ್ವ ನಟಿ ಶೋಭಿತಾ ಧೂಳಿಪಾಲ ಜತೆಗೆ ನಾಗ ಚೈತನ್ಯ ಹೆಸರು ಕೇಳಿಬಂತು. ಶೋಭಿತಾ ಧೂಳಿಪಾಲ ಅವರ ಜತೆ ಡೇಟಿಂಗ್ ಮಾಡುತ್ತಿದ್ದಾರೆ, ಪ್ರೀತಿಯಲ್ಲಿದ್ದಾರೆ ಎಂಬ ವದಂತಿಗಳು ಹರಿದಾಡಿದವು.

ಖಾಸಗಿಯಾಗಿ ನಡೆಯಲಿದೆ ನಿಶ್ಚಿತಾರ್ಥ

ನಾಗ ಚೈತನ್ಯ ಮತ್ತು ಶೋಭಿತಾ ಲವ್ ರಿಲೇಶನ್‌ಶಿಪ್‌ನಲ್ಲಿದ್ದಾರೆ, ಡೇಟ್‌ ಮಾಡುತ್ತಿದ್ದಾರೆ ಎಂದು ಸಾಕಷ್ಟು ಸುದ್ದಿಗಳಿಗೆ ಟಾಲಿವುಡ್‌ ಅಂಗಳದಲ್ಲಿ ರೆಕ್ಕೆ ಪುಕ್ಕ ಬಂದಿದ್ದವು. ಆದರೆ, ಆ ಸಂಬಂಧದ ಬಗ್ಗೆ ನಾಗಚೈತನ್ಯ ಆಗಲಿ, ಶೋಭಿತಾ ಆಗಲಿ ಸ್ಪಷ್ಟನೆ ನೀಡಿರಲಿಲ್ಲ. ಆದರೆ, ಇತ್ತೀಚಿನ ಸುದ್ದಿ ಏನೆಂದರೆ ನಾಗ ಚೈತನ್ಯ- ಶೋಭಿತಾ ಧೂಳಿಪಾಲ ಇಂದು ಅಂದರೆ ಆಗಸ್ಟ್ 8 ರಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರಂತೆ. ಕೆಲವೇ ಕೆಲವು ಸಂಬಂಧಿಕರ ಸಮ್ಮುಖದಲ್ಲಿ ನಾಗಚೈತನ್ಯ- ಶೋಭಿತಾ ನಿಶ್ಚಿತಾರ್ಥ ಗೌಪ್ಯವಾಗಿ ನಡೆಯಲಿದೆ ಎಂಬ ಸುದ್ದಿ ತೆಲುಗುನಾಡಲ್ಲಿ ಸದ್ದು ಮಾಡುತ್ತಿದೆ.

ಸಂಜೆ ವೇಳೆಗೆ ಘೋಷಣೆ

ಸದ್ಯ ನಾಗ ಚೈತನ್ಯ- ಶೋಭಿತಾ ಧೂಳಿಪಾಲ ನಿಶ್ಚಿತಾರ್ಥದ ಸುದ್ದಿ ಟಾಲಿವುಡ್ ಮತ್ತು ಬಾಲಿವುಡ್ ಚಿತ್ರ ವಲಯದಲ್ಲಿ ವೈರಲ್ ಆಗಿದೆ. ಆದರೆ, ಶೋಭಿತಾ ಅಥವಾ ಅಕ್ಕಿನೇನಿ ಕುಟುಂಬದಿಂದ ಇದೂವರೆಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ. ಆದರೆ, ನಾಗ ಚೈತನ್ಯ ಮತ್ತು ಶೋಭಿತಾ ನಿಶ್ಚಿತಾರ್ಥದ ನಂತರ, ಅಕ್ಕಿನೇನಿ ನಾಗಾರ್ಜುನ್ ಅವರೇ ಈ ವಿಷಯವನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ. ನಾಗ ಚೈತನ್ಯ- ಶೋಭಿತಾ ಧೂಳಿಪಾಲ ನಿಶ್ಚಿತಾರ್ಥದ ಬಗ್ಗೆ ಇಂದು ಸಂಜೆ ಅಧಿಕೃತ ಮಾಹಿತಿ ಹೊರಬೀಳಲಿದೆ ಎನ್ನಲಾಗುತ್ತಿದೆ.

ಬೋಲ್ಡ್ ಹೀರೋಯಿನ್ ಶೋಭಿತಾ..

ಗೂಢಚಾರಿ ಚಿತ್ರದ ಮೂಲಕ ತೆಲುಗಿನಲ್ಲಿ ಶೋಭಿತಾ ಧೂಳಿಪಾಲ ನಾಯಕಿಯಾಗಿ ಪರಿಚಯವಾದರು. ಅದರ ನಂತರ ಮೇಜರ್ ಮತ್ತು ಪೊನ್ನಿಯನ್ ಸೆಲ್ವನ್ ಚಿತ್ರಗಳಲ್ಲಿ ನಟಿಸಿದರು. ಮೇಡ್ ಇನ್ ಹೆವೆನ್ ಮತ್ತು ದಿ ನೈಟ್ ಮ್ಯಾನೇಜರ್‌ನಂತಹ ವೆಬ್ ಸರಣಿಗಳಲ್ಲಿ ಸೂಪರ್ ಹಾಟ್ ಶೋ ಮೂಲಕ ಎಲ್ಲರ ಗಮನ ಸೆಳೆದು ಬೋಲ್ಡ್ ನಾಯಕಿಯಾಗಿಯೂ ಕಾಣಿಸಿಕೊಂಡರು. ಇತ್ತ ನಾಗ ಚೈತನ್ಯ ಸದ್ಯ ತಾಂಡೇಲ್ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಚಂದು ಮೊಂಡೇಟಿ ನಿರ್ದೇಶನದ ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸುತ್ತಿದ್ದಾರೆ. ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿರುವ ತಾಂಡೇಲ್ ಅಕ್ಟೋಬರ್ 11 ರಂದು ಬಿಡುಗಡೆಯಾಗಲಿದೆ.