ಆಪರೇಷನ್‌ ಕೊಂಬುಡಿಕ್ಕಿ ಸಿನಿಮಾದಲ್ಲಿ ನಟ ಕಿಶೋರ್‌ ನಾಯಕ; ಗಟ್ಟಿಮೇಳ ಸಿನಿಮಾ ಖ್ಯಾತಿಯ ಎಸ್‌ ಮಹೇಂದರ್‌ ಆ್ಯಕ್ಷನ್ ಕಟ್
ಕನ್ನಡ ಸುದ್ದಿ  /  ಮನರಂಜನೆ  /  ಆಪರೇಷನ್‌ ಕೊಂಬುಡಿಕ್ಕಿ ಸಿನಿಮಾದಲ್ಲಿ ನಟ ಕಿಶೋರ್‌ ನಾಯಕ; ಗಟ್ಟಿಮೇಳ ಸಿನಿಮಾ ಖ್ಯಾತಿಯ ಎಸ್‌ ಮಹೇಂದರ್‌ ಆ್ಯಕ್ಷನ್ ಕಟ್

ಆಪರೇಷನ್‌ ಕೊಂಬುಡಿಕ್ಕಿ ಸಿನಿಮಾದಲ್ಲಿ ನಟ ಕಿಶೋರ್‌ ನಾಯಕ; ಗಟ್ಟಿಮೇಳ ಸಿನಿಮಾ ಖ್ಯಾತಿಯ ಎಸ್‌ ಮಹೇಂದರ್‌ ಆ್ಯಕ್ಷನ್ ಕಟ್

ಗಟ್ಟಿಮೇಳ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳಿಗೆ ಆಕ್ಷನ್‌ ಕಟ್‌ ಹೇಳಿರುವ ಎಸ್ ಮಹೇಂದರ್, ಇದೀಗ ಮತ್ತೆ ಕಂಬ್ಯಾಕ್‌ ಮಾಡುತ್ತಿದ್ದಾರೆ. ಆಪರೇಷನ್‌ ಕೊಂಬುಡಿಕ್ಕಿ ಹೆಸರಿನ ಸಿನಿಮಾ ಘೋಷಣೆ ಮಾಡಿದ್ದು, ಈ ಚಿತ್ರಕ್ಕೆ ಬಹುಭಾಷಾ ನಟ ಕಿಶೋರ್‌ ನಾಯಕನಾಗಿದ್ದಾರೆ.

ಆಪರೇಷನ್‌ ಕೊಂಬುಡಿಕ್ಕಿ ಸಿನಿಮಾದಲ್ಲಿ ನಟ ಕಿಶೋರ್‌ ನಾಯಕ; ಗಟ್ಟಿಮೇಳ ಸಿನಿಮಾ ಖ್ಯಾತಿಯ ಎಸ್‌ ಮಹೇಂದರ್‌ ಆ್ಯಕ್ಷನ್ ಕಟ್
ಆಪರೇಷನ್‌ ಕೊಂಬುಡಿಕ್ಕಿ ಸಿನಿಮಾದಲ್ಲಿ ನಟ ಕಿಶೋರ್‌ ನಾಯಕ; ಗಟ್ಟಿಮೇಳ ಸಿನಿಮಾ ಖ್ಯಾತಿಯ ಎಸ್‌ ಮಹೇಂದರ್‌ ಆ್ಯಕ್ಷನ್ ಕಟ್

Operation Kombudikki Movie: ನಟ ಕಿಶೋರ್‌ ಕನ್ನಡ ಮಾತ್ರವಲ್ಲದೆ, ಪರಭಾಷೆಯ ಸಿನಿಮಾಗಳಲ್ಲಿಯೂ ಹೆಸರು ಮಾಡಿದವರು. ಅದರಲ್ಲೂ ತಮಿಳಿನಲ್ಲಿ ಅವರಿಗೆ ಹೆಚ್ಚಿನ ಬೇಡಿಕೆ. ಕಾಲಿವುಡ್‌ನ ಸ್ಟಾರ್‌ ನಟ, ನಿರ್ದೇಶಕರ ಸಾಕಷ್ಟು ಸಿನಿಮಾಗಳಲ್ಲಿ ಕಿಶೋರ್ ನಟಿಸಿದ್ದಾರೆ. ಅದೇ ರೀತಿ ಕನ್ನಡದಲ್ಲಿಯೂ ಸಕ್ರಿಯರಿದ್ದಾರೆ. ನಟನೆಯ ವಿಚಾರದಲ್ಲಿ ಹೇಗೆ ಮೆಚ್ಚುಗೆ ಪಡೆದುಕೊಳ್ಳುತ್ತಾರೋ, ಸಮಾಜ, ರಾಜಕೀಯ ಸೇರಿ ಪ್ರಸ್ತುತ ಘಟನಾವಳಿಗಳ ಬಗ್ಗೆಯೂ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನೂ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಇದೇ ನಟ ಆಪರೇನ್‌ ಕೊಂಬುಡಿಕ್ಕಿ ಸಿನಿಮಾದಲ್ಲಿ ನಾಯಕನಾಗಿ ನಟಿಸಲಿದ್ದಾರೆ.

ಶಿವಾಜಿ ಸುರತ್ಕಲ್‌ ನಿರ್ಮಾಪಕರ

ಸೂಪರ್ ಹಿಟ್ ಚಿತ್ರ ಶಿವಾಜಿ ಸುರಕ್ಕಲ್ ಡಿಟೆಕ್ಟಿವ್ ಸರಣಿಗಳ ನಿರ್ಮಾಪಕ ಅನುಪ್ ಹನುಮಂತೇಗೌಡ ತಮ್ಮ ಮೂರನೇ ನಿರ್ಮಾಣದ ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದಾರೆ‌. ಹಿರಿಯ ನಿರ್ದೇಶಕ ಎಸ್ ಮಹೇಂದರ್ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಚಿತ್ರಕ್ಕೆ ಆಪರೇಷನ್ ಕೊಂಬುಡಿಕ್ಕಿ ಎಂದು ಹೆಸರಿಡಲಾಗಿದೆ. ಕನ್ನಡ ಚಿತ್ರರಂಗದ ಕಿರಿಯ ಮತ್ತು ಯಶಸ್ವಿ ನಿರ್ಮಾಪಕ ಅನುಪ್‌ ಹನುಮಂತೇಗೌಡ ಈಗ ಸಿಲ್ವರ್‌ ಸ್ಕ್ರೀನ್‌ ಸ್ಟುಡಿಯೋಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಅದರ ಅಡಿಯಲ್ಲಿ ಆಪರೇಷನ್‌ ಕೊಂಬುಡಿಕ್ಕಿ ಎಂಬ ಬಿಗ್ ಬಜೆಟ್‌ ಚಿತ್ರ ನಿರ್ಮಾಣದ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ.

ಗಟ್ಟಿಮೇಳ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ಕನ್ನಡಕ್ಕೆ ಕೊಟ್ಟಿರುವ ಎಸ್ ಮಹೇಂದರ್ ಅವರ ಈ ಆಪರೇಷನ್‌ ಕೊಂಬುಡಿಕ್ಕಿ ಚಿತ್ರದಲ್ಲಿ ದಕ್ಷಿಣ ಭಾರತದ ಬಹು ಬೇಡಿಕೆಯ ನಟ ಅಪ್ಪಟ ಕನ್ನಡಿಗ ಕಿಶೋರ್‌ ಅಭಿನಯಿಸುತ್ತಿದ್ದಾರೆ. ಅದೇ ರೀತಿ ಈ ಚಿತ್ರಕ್ಕೆ ಕೆಜಿಎಫ್‌, ಸಲಾರ್‌ ಖ್ಯಾತಿಯ ರವಿ ಬಸ್ರೂರು ಸಂಗೀತ ನೀಡಲಿದ್ದಾರೆ, ಛಾಯಾಗ್ರಾಹಕರಾಗಿ ಹೆಬ್ಬುಲಿ, ಕ್ರಾಂತಿ ಸಿನಿಮಾಗಳ ಖ್ಯಾತಿಯ ಕರುಣಾಕರ್‌ ಕೆಲಸ ಮಾಡುತ್ತಿದ್ದಾರೆ. ದೀಪು. ಎಸ್. ಕುಮಾರ್‌ ಅವರ ಸಂಕಲನ ಈ ಚಿತ್ರಕ್ಕಿರಲಿದೆ.

ಚಿತ್ರರಂಗದ ಸದ್ಯದ ಪರಿಸ್ಥತಿಯಲ್ಲಿ ದೊಡ್ಡ ನಿರ್ಮಾಣ ಸಂಸ್ಥೆಗಳ ನಿರ್ಮಾಪಕರುಗಳ, ದೊಡ್ಡ ದೊಡ್ಡ ಸ್ಟಾರ್‌ಗಳ ಸಿನಿಮಾಗಳು ಮಾತ್ರ ಮಾರುಕಟ್ಟೆಯಲ್ಲಿ ಯಶಸ್ಸು ಗಳಿಸುತ್ತಿವೆ. ಈ ಸಮಯದಲ್ಲಿ ಸದಭಿರುಚಿಯ ಚಿತ್ರಗಳನ್ನು ಸೀಮಿತ ಬಜೆಟ್‌ನಲ್ಲಿ ನಿರ್ಮಾಣ ಮಾಡಿ ಜನರಿಗೆ ತಲುಪಿಸಿ ಅದನ್ನು ಯಶಸ್ವಿಗೊಳಿಸಿದ ನಿರ್ಮಾಪಕ ಅನುಪ್‌ ಹನುಮಂತೇಗೌಡ ಈಗ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಹಾಗಾದರೆ ಏನಿದು ಆಪರೇಷನ್‌ ಕೊಂಬುಡಿಕ್ಕಿ?

ಸದ್ಯಕ್ಕೆ ಶೀರ್ಷಿಕೆಯನ್ನಷ್ಟೇ ರಿವೀಲ್‌ ಮಾಡಿರುವ ತಂಡ, ಆ ಶೀರ್ಷಿಕೆ ಹಿಂದಿರುವ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಸಿನಿಮಾದಲ್ಲಿನ ಪಾತ್ರವರ್ಗವನ್ನೂ ಪರಿಚಯಿಸಲಿದೆ ಈ ತಂಡ.

ಪ್ರಧಾನಿ ಮೋದಿಗೆ ಕಿಶೋರ್‌ ಕೌಂಟರ್‌

ಕುಸ್ತಿಯಲ್ಲಿ ವಿನೇಶ್‌ ಫೋಗಟ್‌ ಫೈನಲ್‌ಗೇರಿದ್ದರು. ಆ ಸಮಯದಲ್ಲಿ ಕುಸ್ತಿಪಟುವಿನ ಸಾಧನೆ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ನಟ ಕಿಶೋರ್‌ ಪೋಸ್ಟ್‌ ಹಂಚಿಕೊಂಡಿದ್ದರು. ಅದು ಹೀಗಿದೆ. "ಇತಿಹಾಸವನ್ನು ಮರೆತವರಿಂದ ಇತಿಹಾಸ ಸೃಷ್ಟಿ ಸಾಧ್ಯವಿಲ್ಲ. - ಡಾ. ಬಿ.ಆರ್. ಅಂಬೇಡ್ಕರ್. ವಿನೇಶ್ ನಿಮಗೆ ಸಲಾಂ. ಇಲ್ಲಿಯ ಅಮಾನವೀಯ ವ್ಯವಸ್ಥೆ ನಿಮ್ಮನ್ನು ದೆಹಲಿಯ ಬೀದಿಗಳಲ್ಲಿ ಎಳೆದಾಡಿದ್ದರಿಂದ ಹಿಡಿದು ಒಲಿಂಪಿಕ್ ಪದಕದವರೆಗೆ, ಅಷ್ಟು ಕಹಿ ಅನುಭವಗಳ ನಂತರವೂ ನೀವು ಮಾಡಿರುವ ಈ ಸಾಧನೆ ಅಭೂತಪೂರ್ವ. ಆದರೆ ಇಂದು ಸಂಭ್ರಮಿಸುವ ಅಥವಾ ಹೆಮ್ಮೆ ಪಡುವ ನೈತಿಕ ಹಕ್ಕನ್ನು ನಾವು ಭಾರತೀಯರು ಕಳೆದುಕೊಂಡಿದ್ದೇವೆ. ನಾವು ನಿಮ್ಮೊಂದಿಗೆ ನಿಲ್ಲುವ ಅಗತ್ಯವಿದ್ದಾಗ ನಿಮ್ಮನ್ನು ಸೋಲಿಸಿ ನಿಮಗೆ ಲೈಂಗಿಕ ಕಿರುಕುಳ ಕೊಟ್ಟವರ ಜೊತೆ ನಿಂತಿದ್ದೆವು. ಧಿಕ್ಕಾರವಿರಲಿ ಮೋದಿ, ಬ್ರಿಜ್‌ಭೂಷಣ್, ** ನೆಕ್ಕುವ ಗೋದೀ ಮಾಧ್ಯಮಕ್ಕೆ ಮತ್ತು ಆ ವಿಕೃತ ಮನಸ್ಥಿತಿಯ ಸಮಾಜಕ್ಕೆ" ಎಂದಿದ್ದಾರೆ.

Whats_app_banner