ಕನ್ನಡ ಸುದ್ದಿ  /  ಮನರಂಜನೆ  /  ಜೂನಿಯರ್ ಎನ್‌ಟಿಆರ್‌ ಬರ್ತ್‌ಡೇಗೆ ಬಿಗ್‌ ಬ್ಯಾಂಗ್‌! ಪ್ರಶಾಂತ್‌ ನೀಲ್‌ ಸಿನಿಮಾ ಘೋಷಣೆ ಸಾಧ್ಯತೆ

ಜೂನಿಯರ್ ಎನ್‌ಟಿಆರ್‌ ಬರ್ತ್‌ಡೇಗೆ ಬಿಗ್‌ ಬ್ಯಾಂಗ್‌! ಪ್ರಶಾಂತ್‌ ನೀಲ್‌ ಸಿನಿಮಾ ಘೋಷಣೆ ಸಾಧ್ಯತೆ

ಮೇ 20ರಂದು ಟಾಲಿವುಡ್‌ ಸ್ಟಾರ್‌ ನಟ ಜೂನಿಯರ್‌ ಎನ್‌ಟಿಆರ್‌ ಬರ್ತ್‌ಡೇ. ಈ ನಿಮಿತ್ತ ಆ ದಿನ ಹತ್ತು ಹಲವು ವಿಶೇಷಗಳು ಹೊರಬರುವ ಸಾಧ್ಯತೆಗಳಿವೆ. ಈ ನಡುವೆ ಎನ್‌ಟಿಆರ್‌ ಫ್ಯಾನ್‌ ಕಣ್ಣು ಮಾತ್ರ ಪ್ರಶಾಂತ್‌ ನೀಲ್‌ ಚಿತ್ರದ ಮೇಲೆ ನೆಟ್ಟಿದೆ.

Jr NTR: ಜೂ ಎನ್‌ಟಿಆರ್‌ ಬರ್ತ್‌ಡೇಗೆ ಬಿಗ್‌ ಬ್ಯಾಂಗ್‌! ಪ್ರಶಾಂತ್‌ ನೀಲ್‌ ಸಿನಿಮಾ ಘೋಷಣೆ ಸಾಧ್ಯತೆ
Jr NTR: ಜೂ ಎನ್‌ಟಿಆರ್‌ ಬರ್ತ್‌ಡೇಗೆ ಬಿಗ್‌ ಬ್ಯಾಂಗ್‌! ಪ್ರಶಾಂತ್‌ ನೀಲ್‌ ಸಿನಿಮಾ ಘೋಷಣೆ ಸಾಧ್ಯತೆ

Jr NTR Prashanth neel Movie: ಟಾಲಿವುಡ್‌ ನಟ ಜೂನಿಯರ್ ಎನ್‌ಟಿಆರ್‌ ನಾಯಕನಾಗಿ ನಟಿಸುತ್ತಿರುವ ದೇವರ ಸಿನಿಮಾ ಸದ್ಯ ದೊಡ್ಡ ಮಟ್ಟದ ಹೈಪ್‌ ಸೃಷ್ಟಿಸಿದೆ. ಈ  ಚಿತ್ರಕ್ಕಾಗಿ ಅವರ ಅಪಾರ ಅಭಿಮಾನಿಗಳು ಕಾಯುತ್ತಿದ್ದಾರೆ. ಆರ್‌ಆರ್‌ಆರ್‌ ಸಿನಿಮಾ ಜಾಗತಿಕ ಮಟ್ಟದಲ್ಲಿ ಹಿಟ್ ಆದ ಬಳಿಕ, ಎನ್‌ಟಿಆರ್ ಅವರ ಈ ಸಿನಿಮಾದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹೆಚ್ಚಿದೆ. ಅಲ್ಲದೇ ವಾರ್ 2 ಚಿತ್ರದ ಮೂಲಕ NTR ಬಾಲಿವುಡ್‌ಗೂ ಪದಾರ್ಪಣೆ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಹೃತಿಕ್ ರೋಷನ್ ಜೊತೆ ಅವರು ಸ್ಕ್ರೀನ್‌ ಶೇರ್‌ ಮಾಡಲಿದ್ದಾರೆ. ಸದ್ಯ Jr NTR ಈ ಎರಡು ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಈ ನಡುವೆ ಪ್ರಶಾಂತ್‌ ನೀಲ್‌ ಕಡೆಯಿಂದಲೂ ಸರ್ಪ್ರೈಸ್‌ ಸಿಗಲಿದೆ ಎಂಬ ಮಾತು ಕೇಳಿಬರುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಮೇ 20ರಂದು ಜೂನಿಯರ್‌ ಎನ್‌ಟಿಆರ್‌ ಬರ್ತ್‌ಡೇ. ಈ ದಿನದಂದು ಹೊಸ ಹೊಸ ಸಿನಿಮಾಗಳ ಅಪ್‌ಡೇಟ್‌ಗಳು ಫ್ಯಾನ್ಸ್‌ಗೆ ಸಿಗಲಿವೆ. ಆ ಪೈಕಿ ಪ್ರಶಾಂತ್‌ ನೀಲ್‌ ಮತ್ತು ಎನ್‌ಟಿಆರ್‌ ಕಾಂಬಿನೇಷನ್‌ ಸಿನಿಮಾದ ಮೇಲೆ ಬಹುತೇಕ ಎಲ್ಲರ ಕಣ್ಣು ನೆಟ್ಟಿದೆ. ಕೆಜಿಎಫ್ ಮತ್ತು ಸಲಾರ್ ಸಿನಿಮಾಗಳಿಂದ ಫುಲ್ ಫಾರ್ಮ್‌ನಲ್ಲಿರುವ ನಿರ್ದೇಶಕ ಪ್ರಶಾಂತ್ ನೀಲ್, ಸದ್ಯ ಎನ್‌ಟಿಆರ್‌ ಸಿನಿಮಾದ ಪ್ರೀ ಪ್ರೊಡಕ್ಷನ್‌ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೇನು ಶೀಘ್ರದಲ್ಲಿ ಶೂಟಿಂಗ್‌ಗೆ ಗ್ರೀನ್‌ ಸಿಗ್ನಲ್‌ ಸಿಗಲಿದೆ. ಈ ನಡುವೆ ಮೇ 20ರ ಎನ್‌ಟಿಆರ್‌ ಬರ್ತ್‌ಡೇ ದಿನ ಈ ಚಿತ್ರದ ಬಿಗ್‌ ಅಪ್‌ಡೇಟ್‌ ಹೊರಬೀಳುವ ಸಾಧ್ಯತೆ ಇದೆ.

ಎನ್‌ಟಿಆರ್‌-ನೀಲ್‌ ಕಾಂಬಿನೇಷನ್‌ನಲ್ಲಿನ ಈ ಸಿನಿಮಾ ಸಹ ಹೈ ವೋಲ್ಟೇಜ್‌ ಆ್ಯಕ್ಷನ್‌ ಶೈಲಿಯ ಚಿತ್ರ. ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಮತ್ತು ರವಿಶಂಕರ್ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಇತ್ತ ಹೃತಿಕ್ ರೋಷನ್ ಜತೆಗಿನ ವಾರ್ 2 ಸಿನಿಮಾದ ಶೂಟಿಂಗ್‌ನಲ್ಲೂ ಎನ್‌ಟಿಆರ್‌ ಭಾಗವಹಿಸಿದ್ದಾರೆ. ಅಯನ್ ಮುಖರ್ಜಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಯಶ್ ರಾಜ್ ಫಿಲ್ಮ್ಸ್ ಬಂಡವಾಳ ಹೂಡಲಿದೆ. ಮೇ 20 ರಂದು ವಾರ್ 2 ಚಿತ್ರದಲ್ಲಿ ಎನ್‌ಟಿಆರ್ ಫಸ್ಟ್ ಲುಕ್ ಸಹ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.

ಎನ್‌ಟಿಆರ್ ಅಭಿಮಾನಿಗಳು ಹಾಗೂ ಸಿನಿಪ್ರೇಮಿಗಳು ದೇವರ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಈ ಚಿತ್ರ ಅಕ್ಟೋಬರ್ 10 ರಂದು ಬಿಡುಗಡೆಯಾಗಲಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಏಪ್ರಿಲ್‌ನಲ್ಲಿ ಬಿಡುಗಡೆಯಾಗಬೇಕಿತ್ತು. ಶೂಟಿಂಗ್‌ ವಿಳಂಬದಿಂದಾಗಿ ಅಕ್ಟೋಬರ್‌ ಮುಂದೂಡಿಕೆಯಾಯ್ತು. ಈ ನಡುವೆ ಬರ್ತ್‌ಡೇ ನಿಮಿತ್ತ ದೇವರ ಸಿನಿಮಾದ ಮೊದಲ ಹಾಡೂ ಆವತ್ತೇ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ದೇವರ ಚಿತ್ರದಲ್ಲಿ ಎನ್‌ಟಿಆರ್‌ಗೆ ನಾಯಕಿಯಾಗಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ವಿಲನ್ ಆಗಿದ್ದಾರೆ. ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

IPL_Entry_Point