Bangalore Crime: ಬೆಂಗಳೂರಿನಲ್ಲಿ ನಕಲಿ ಪೊಲೀಸ್‌ ಅಧಿಕಾರಿ ಕರೆ ನಂಬಿ 2.21 ಕೋಟಿ ರೂ.ದೋಖಾ, ರಾಜಧಾನಿಯಲ್ಲಿ ಮತ್ತೊಂದು ಡಿಜಿಟಲ್‌ ವಂಚನೆ-bangalore news bangalore online fraud case again person looses 2 21 crore cal by fake police officer mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Bangalore Crime: ಬೆಂಗಳೂರಿನಲ್ಲಿ ನಕಲಿ ಪೊಲೀಸ್‌ ಅಧಿಕಾರಿ ಕರೆ ನಂಬಿ 2.21 ಕೋಟಿ ರೂ.ದೋಖಾ, ರಾಜಧಾನಿಯಲ್ಲಿ ಮತ್ತೊಂದು ಡಿಜಿಟಲ್‌ ವಂಚನೆ

Bangalore Crime: ಬೆಂಗಳೂರಿನಲ್ಲಿ ನಕಲಿ ಪೊಲೀಸ್‌ ಅಧಿಕಾರಿ ಕರೆ ನಂಬಿ 2.21 ಕೋಟಿ ರೂ.ದೋಖಾ, ರಾಜಧಾನಿಯಲ್ಲಿ ಮತ್ತೊಂದು ಡಿಜಿಟಲ್‌ ವಂಚನೆ

Online Fraud ಬೆಂಗಳೂರಿನಲ್ಲಿ ಆನ್‌ಲೈನ್‌ ಮೂಲಕ ವಂಚಿಸಿರುವ ಮತ್ತೊಂದು ಪ್ರಕರಣ ವರದಿಯಾಗಿದ್ದು. ಈ ಬಾರಿ ಪೊಲೀಸ್‌ ಅಧಿಕಾರಿ ಎಂದು ನಂಬಿಸಿ ವಂಚಿಸಲಾಗಿದೆ.ವರದಿ: ಎಚ್‌.ಮಾರುತಿ, ಬೆಂಗಳೂರು

Bangalore cyber fraud ಬೆಂಗಳೂರಲ್ಲಿ ಸೈಬರ್‌ ವಂಚನೆಯ ಮತ್ತೊಂದು ಪ್ರಕರಣ ವರದಿಯಾಗಿದೆ
Bangalore cyber fraud ಬೆಂಗಳೂರಲ್ಲಿ ಸೈಬರ್‌ ವಂಚನೆಯ ಮತ್ತೊಂದು ಪ್ರಕರಣ ವರದಿಯಾಗಿದೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಡಿಜಿಟಲ್‌ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಅದರಲ್ಲೂ ಆರ್ಥಿವಾಗಿ ಬಲಾಡ್ಯರಾಗಿರುವವರು ಮತ್ತು ವಿದ್ಯಾವಂತರೇ ಈ ವಂಚನೆಯ ಪ್ರರಕಣಗಳಿಗೆ ಬಲಿಪಶುಗಳಾಗುತ್ತಿದ್ದಾರೆ. ಇಂತಹುದೇ ಮತ್ತೊಂದು ಪ್ರಕರಣ ರಾಜ್ಯ ರಾಜಧಾನಿಯಲ್ಲಿ ವರದಿಯಾಗಿದೆ. ಬೆಂಗಳೂರಿನ ನಿವಾಸಿಯೊಬ್ಬರಿಗೆ ಫೆಡೆಕ್ಸ್‌ ನಿಂದ ಕರೆ ಮಾಡುತ್ತಿರುವುದಾಗಿ ಅಪರಿಚತರೊಬ್ಬರು ಕರೆ ಮಾಡಿದ್ದಾರೆ. ಅವರು ನಿಮ್ಮ ವಿಳಾಸಕ್ಕೆ ಪಾರ್ಸೆಲ್‌ ಬಂದಿದ್ದು, ಅದರಲ್ಲಿ ಎಂಡಿಎಂಎ ಮಾದಕ ವಸ್ತುವಿದ್ದು ಜಪ್ತಿ ಮಾಡಲಾಗಿದೆ. ಈ ಸಂಬಂಧ ಅಪರಾಧ ವಿಭಾಗದ ಪೊಲೀಸ್‌ ಅಧಿಕಾರಿಯೊಂದಿಗೆ ಮಾತನಾಡಿ ಎಂದು ಮತ್ತೊಬ್ಬ ಅಪರಿಚಿತನಿಗೆ ಕರೆಯನ್ನು ವರ್ಗಾಯಿಸಿದ್ದಾರೆ. ಕ್ರೈಂ ವಿಭಾಗದ ಪೊಲೀಸ್‌ ಅಧಿಕಾರಿ ಎಂದು ಹೇಳಿಕೊಂಡ ಮತ್ತೊಬ್ಬ ಅಪರಿಚಿತ ವ್ಯಕ್ತಿ ಪ್ರಕರಣದಿಂದ ಹೊರಬರಲು ಹಣ ನೀಡಬೇಕು ಎಂದು ಬೆದರಿಸಿದ್ದಾರೆ. ಇವರು ಹೆದರಿಕೊಂಡು ಹಿಂದೆ ಮುಂದೆ ನೋಡದೆ ಹಣ ನಡಲು ಒಪ್ಪಿಕೊಂಡಿದ್ದಾರೆ.

ಪೊಲೀಸ್‌ ಅಧಿಕಾರಿ ಎಂದು ಪರಿಚಯಿಸಿಕೊಂಡ ವ್ಯಕ್ತಿ ಸೂಚಿಸಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ 2,21,40,000 ರೂ. ಹಣವನ್ನು ಆರ್‌ ಟಿ ಜಿಎಸ್‌ ಮೂಲಕ ವರ್ಗಾಯಿಸಿದ್ದಾರೆ.

ಕೆಲವು ದಿನಗಳ ನಂತರ ಮತ್ತೆ ಕರೆ ಮಾಡಿ ಇನ್ನಷ್ಟು ಹಣವನ್ನು ವರ್ಗಾವಣೆ ಮಾಡುವಂತೆ ಬೇರೆ ಬೇರೆ ಬ್ಯಾಂಕ್‌ ಖಾತೆಗಳ ವಿವರ ನೀಡಿದ್ದಾರೆ. ಅನುಮಾನಗೊಂಡ ಇವರು ಫೆಡೆಕ್ಸ್‌ ಹೆಸರಿನಲ್ಲಿ ತಮಗೆ ವಂಚನೆಯಾಗಿದೆ ಎಂದು ಸಿಇಎನ್‌ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಈ ಪ್ರಕರಣವನ್ನು ಸಿಐಡಿ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ.

ತನಿಖೆಯ ಸಂದರ್ಭದಲ್ಲಿ 26 ಬ್ಯಾಂಕ್‌ ಖಾತೆಗಳಿಗೆ 2.21 ಕೋಟಿ ರುಪಾಯಿ ಹಣವನ್ನು ವರ್ಗಾವಣೆ ಮಾಡಿರುತ್ತಾರೆ. ಆರೋಪಿಗಳಾದ ಬೆಂಗಳೂರಿನ ನಿವಾಸಿಗಳೇ ಆದ ಮೊಹಮ್ಮದ್‌ ಶಾಖಿಬ್‌, ಮೊಹಮ್ಮದ್‌ ಆಯಾನ್‌, ಅಹಸಾನ್‌ ಅನ್ಸಾರಿ , ಸಾಲಮನ್‌ ರಾಜ ಮತ್ತು ದುಬೈ ಮೂಲದ ಯೂಸೂಫ್‌ ಸೇಠ್‌ ಅವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ರೂ. 1,70, 00,000 ಮತ್ತು 7,700 ಯುಎಸ್‌ ಡಾಲರ್‌ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಂಚನೆಯಿಂದ ಸಂಪಾದಿಸಿದ ಹಣದಿಂಧ ಖರೀದಿ ಮಾಡಿದ್ದ ಬೆನ್ಜ್‌ ಕಾರನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ದುಬೈನಿಂದ ಕಾರ್ಯಾಚರಣೆ ಮಾಡಿದ್ದು, ಅಪರಾಧ ಎಸಗಲು ಭಾರತೀಯ ಬ್ಯಾಂಕ್‌ ಖಾತೆಗಳನ್ನು ಬಳಸಿಕೊಂಡಿದ್ದಾರೆ.

ಪತ್ನಿಯ ಕಾಟ ತಡೆಲಾರದೆ ಮನೆ ಬಿಟ್ಟು ಹೋಗಿದ್ದೆ; ಮಿಸ್ಸಿಂಗ್‌ ಟೆಕ್ಕಿ ಹೇಳಿಕೆ:

ಬೆಂಗಳೂರಿನಲ್ಲಿ ಕಾಣೆಯಾಗಿದ್ದ ಐಟಿ ಕಂಪನಿ ಉದ್ಯೋಗಿ ಉತ್ತರ ಪ್ರದೇಶದ ನೊಯ್ಡಾದ ಮಾಲ್‌ ವೊಂದರಲ್ಲಿ ಪತ್ತೆಯಾಗಿದ್ದಾರೆ. ತನ್ನ ಪತಿ ವಿಪಿನ್‌ ಗುಪ್ತಾ ಕಾಣೆಯಾಗಿದ್ದಾರೆ ಎಂದು ಅವರ ಪತ್ನಿ ಆಗಸ್ಟ್‌ 6ರಂದು ಕೊಡಿಗೆಹಳ್ಳಿ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದರು. ಇತ್ತಿಚೆಗೆ ಅವರು ತನ್ನ ಪತಿಯನ್ನು ಹುಡುಕುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂಧೂ ಸಾಮಾಜಿಕ ಜಾಲತಾಣಗಳಲ್ಲಿ ಆಪಾದಿಸಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿಪಿನ್‌ ಗುಪ್ತಾ ಅವರ ಬ್ಯಾಂಕ್‌ ಖಾತೆಗಳಿಂದ ಎಲ್ಲೆಲ್ಲಿ ಹಣ ವಿತ್‌ ಡ್ರಾ ಮಾಡಿಕೊಳ್ಳಲಾಗಿದೆ ಮತ್ತು ಇತರ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಅವರನ್ನು ಪತ್ತೆ ಮಾಡಿದ್ದಾರೆ. ವಿಪಿನ್‌ ತಲೆ ಮತ್ತು ಮೀಸೆಯನ್ನು ಬೋಳಿಸಿಕೊಂಡು ತಮ್ಮ ಚಹರೆಯನ್ನು ಬದಲಾಯಿಸಿಕೊಂಡಿದ್ದರು. ವಿಪಿನ್‌ ಬೆಂಗಳೂರನ್ನು ಬಿಟ್ಟು ಏಕೆ ಹೋಗಿದ್ದರು ಮತ್ತು ಗುರುತನ್ನು ಏಕೆ ಮರೆಮಾಚಿಕೊಂಡಿದ್ದರು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಲ್ಲ ಮೂಲಗಳ ಪ್ರಕಾರ ಪತ್ನಿಯ ಕಾಟ ತಡೆಯಲಾರದೆ ವಿಪಿನ್‌ ಬೆಂಗಳೂರನ್ನು ತೊರೆದಿದ್ದಾರೆ ಎಂದು ತಿಳಿದು ಬಂದಿದೆ. ನನ್ನನ್ನು ಎಲ್ಲಿಗೆ ಬೇಕಾದರೂ ಕಳುಹಿಸಿ, ಆದರೆ ಪತ್ನಿ ಜೊತೆ ಮಾತ್ರ ಕಳುಹಿಸಬೇಡಿ ಎಂದು ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

(ವರದಿ: ಎಚ್.ಮಾರುತಿ. ಬೆಂಗಳೂರು)