ಕನ್ನಡ ಸುದ್ದಿ  /  ಕರ್ನಾಟಕ  /  Puc Results2024: ಪಿಯುಸಿ ಮುಗಿಸಿದವರಿಗೆ ಜಿಟಿಟಿಸಿಯಲ್ಲಿ ಉಂಟು ಉದ್ಯೋಗ ಆಧರಿತ ಪದವಿ ಕೋರ್ಸ್

Puc Results2024: ಪಿಯುಸಿ ಮುಗಿಸಿದವರಿಗೆ ಜಿಟಿಟಿಸಿಯಲ್ಲಿ ಉಂಟು ಉದ್ಯೋಗ ಆಧರಿತ ಪದವಿ ಕೋರ್ಸ್

ಕೌಶಲ್ಯಗಳು ಚೆನ್ನಾಗಿ ಇರುವವರದ್ದೇ ಈಗಿನ ಕಾಲ. ಅಂತವರಿಗೆ ಶಿಕ್ಷಣದ ಬಲ ಸಿಕ್ಕರೆ ಬದುಕೂ ಸಲೀಸು. ಪಿಯುಸಿಯಲ್ಲಿ ಉತ್ತೀರ್ಣರಾದವರಿಗೆ ಇಲ್ಲಿದೆ ಬಿ ವಕೇಷನ್‌ ಕೋರ್ಸ್‌ನ ವಿವರ.

ಬೆಂಗಳೂರಿನ ಜಿಟಿಟಿಸಿಯಲ್ಲಿ ಉಂಟು ಬಿ ವಕೇಷನ್‌ ಪದವಿ ಶಿಕ್ಷಣ.
ಬೆಂಗಳೂರಿನ ಜಿಟಿಟಿಸಿಯಲ್ಲಿ ಉಂಟು ಬಿ ವಕೇಷನ್‌ ಪದವಿ ಶಿಕ್ಷಣ.

ಬೆಂಗಳೂರು: ಪಿಯುಸಿಯಲ್ಲಿ ಉತ್ತೀರ್ಣರಾದವರು ಎಂಜಿನಿರಿಂಗ್‌, ವೈದ್ಯ, ಕೃಷಿ, ಸಾಮಾನ್ಯ ಪದವಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಸಹಜ. ಆ ಕೋರ್ಸ್‌ಗಳ ಒಂದೆಡೆ ಇದ್ದರೂ ಕೌಶಲ್ಯಭರಿತ ಉದ್ಯೋಗದ ಈ ಕಾಲದಲ್ಲಿ ಕರ್ನಾಟಕ ಸರ್ಕಾರವು ಎಂಜಿನಿಯರಿಂಗ್‌ನಂತೆಯೇ ವೃತ್ತಿಆಧರಿತ ಕೋರ್ಸ್‌ ನೀಡುತ್ತಿದೆ. ಕೌಶಲಾಭಿವೃದ್ದಿ, ಉದ್ಯಮ ಶೀಲತ ಹಾಗೂ ಜೀವನೋಪಾಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರಿನ ರಾಜಾಜಿನಗರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ( Government Tool Room and Train Centre) ಮೂಲಕ ಜಿಟಿಟಿಸಿ ಪದವಿ ನೀಡಲು ಮುಂದಾಗಿದೆ. ಈ ಕೋರ್ಸ್‌ ಪದವಿ ಹಾಗೂ ಡಿಪ್ಲೊಮಾ ಸ್ಥಾನಮಾನವನ್ನು ಹೊಂದಿದೆ. ಇಲ್ಲಿಯೇ ಒಂದು ವರ್ಷದ ವೃತ್ತಿ ಆಧರಿತ ತರಬೇತಿಯೂ ಇರಲಿದ್ದು. ಉದ್ಯೋಗ ಮಾತ್ರ ಖಚಿತ ಎನ್ನುವುದು ಕೇಂದ್ರದ ಪ್ರಮುಖರ ಅಭಿಪ್ರಾಯ.

ಟ್ರೆಂಡಿಂಗ್​ ಸುದ್ದಿ

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು ಮೂರು ಪದವಿ ಕೋರ್ಸ್‌ಗಳಿಗೆ ಶಿಕ್ಷಣ ನೀಡಲಿದೆ. ಅದು ಬಿ ವಕೇಶನ್‌( B voc)ಕೋರ್ಸ್‌ಗಳು.

ಮೂರು ಕೋರ್ಸ್‌ಗಳ ವಿವರ

  1. ಬಿ ವಕೇಷನ್‌ ಟೂಲ್‌ ಅಂಡ್‌ ಡೈ ಮೇಕಿಂಗ್‌
  2. ಬಿ ವಕೇಷನ್‌ ಪ್ರಾಡಕ್ಟ್‌ ಡಿಸೈನ್‌ ಮತ್ತು ಮ್ಯಾನುಫ್ಯಾಕ್ಚರಿಂಗ್‌
  3. ಬಿ ವಕೇಷನ್‌ ಸ್ಮಾರ್ಟ್‌ ಮ್ಯಾನುಫ್ಯಾಕ್ಚರಿಂಗ್‌ - ಮ್ಯಾಕಾಟ್ರಾನಿಕ್ಸ್‌

ಈ ಕೋರ್ಸ್‌ಗಳು ಮೂರು ವರ್ಷದ ಶಿಕ್ಷಣ ಹಾಗೂ ಒಂದು ವರ್ಷದ ತರಬೇತಿ ಸೇರಿ ನಾಲ್ಕು ವರ್ಷದ್ದು..

ಕರ್ನಾಟಕ ಸರ್ಕಾರದ ಮಾನ್ಯತೆ ಇರುವ ಕೋರ್ಸ್‌ಗಳು ಇವು. ಈ ಪದವಿಗೆ ಬೆಂಗಳೂರು ವಿಶ್ವವಿದ್ಯಾನಿಲಯ ಸಂಯೋಜನೆಯನ್ನು ತರಬೇತಿ ಕೇಂದ್ರಕ್ಕೆ ನೀಡಿದೆ.

ಯಾರು ಸೇರಿಕೊಳ್ಳಬಹುದು

ದ್ವಿತೀಯ ಪಿಯುಸಿಯ ಯಾವುದೇ ವಿಷಯದಲ್ಲಿ ಉತ್ತೀರ್ಣರಾದವರು ಈ ಕೋರ್ಸ್‌ಗೆ ಪ್ರವೇಶ ಪಡೆಯಬಹುದು. ಐಟಿಐ ಹಾಗೂ ಡಿಪ್ಲೋಮಾ ಪಡೆದವರು ಈ ಕೋರ್ಸ್‌ ಸೇರಲು ಅವಕಾಶವಿದೆ.

ಇಲ್ಲಿ ಪದವಿಕೋರ್ಸ್‌ ಸೇರಿದವರಿಗೆ ಒಂದು ವರ್ಷ ಸ್ಟೈಫೆಂಡ್‌ ಆಧರಿತ ತರಬೇತಿ ಇರಲಿದೆ. ಈ ವೇಳೆ ವೇತನ ರೂಪದಲ್ಲಿ ಆರ್ಥಿಕ ನೆರವು( ಸ್ಟೈಫೆಂಡ್‌) ನೀಡಲಾಗುತ್ತದೆ. ಈ ತರಬೇತಿ ಕಡ್ಡಾಯವೂ ಹೌದು.

ಉತ್ತಮ ಪಠ್ಯಕ್ರಮ

ಇದು ಕೌಶಲ್ಯ ಆಧರಿತ ಕೋರ್ಸ್‌. ಈ ಕೋರ್ಸ್‌ ಅನ್ನು ಸೆಕ್ಟರ್‌ ಸ್ಕಿಲ್‌ ಕೌನ್ಸಿಲ್‌( SSC) ಹಾಗೂ ನ್ಯಾಷನಲ್‌ ಸ್ಕಿಲ್‌ ಕ್ವಾಲಿಫಿಕೇಷನ್‌ ಫ್ರೇಮ್‌ ವರ್ಕ್‌( NSQF) ನ ಸಹಯೋಗದೊಂದಿಗೆ ರೂಪಿಸಲಾಗಿದೆ. ಇಲ್ಲಿ ಇಂಟರ್ನ್‌ಶಿಪ್‌ ಅವಕಾಶವೂ ಇರುವುದರಿಂದ ಉದ್ಯೋಗವೂ ಶಿಕ್ಷಣ ಪಡೆಯುವ ಹಂತದಲ್ಲಿಯೇ ಖಚಿತ. ಕೈಗಾರಿಕೆಗಳ ಬೇಡಿಕೆಗೆ ಅನುಗುಣವಾಗಿ ಪಠ್ಯಕ್ರಮವನ್ನು ರೂಪಿಸಲಾಗಿದೆ. ರಿಯಲ್‌ ಟೈಂ ಶಾಪ್‌ ಫ್ಲೋರ್‌ ಪ್ರಾಕ್ಟಿಕಲ್‌ ಟ್ರೈನಿಂಗ್‌ ಇಲ್ಲಿನ ವಿಶೇಷ. ಉತ್ತಮವಾದ ಪ್ರಯೋಗಾಲಯಗಳೂ ಶಿಕ್ಷಣಕ್ಕೆ ಪೂರಕ.

ಅವಕಾಶಗಳು ಅಧಿಕ

ಈಗಂತೂ ಕೌಶಲ್ಯಕ್ಕೆ ತಂತ್ರಜ್ಞಾನದ ಮಿಳಿತ ಆಗಿರುವುದರಿಂದ ಹೊಸ ವಿಷಯವನ್ನು ತಿಳಿದುಕೊಳ್ಳುವ ಜತೆಗೆ ವೃತ್ತಿಯ ಭಾಗವಾಗಿ ಆಯ್ಕೆ ಮಾಡಿಕೊಳ್ಳುವವರಿಗೆ ಬಿ ವಕೇಷನ್‌ ಕೋರ್ಸ್‌ ಸಹಕಾರಿ. ಇಲ್ಲಿನ ಶಿಕ್ಷಣ, ಕೌಶಲ್ಯ ತರಬೇತಿ, ತಂತ್ರಜ್ಞಾನ ಉನ್ನತೀಕರಣ ಆಧರಿತ ಪಠ್ಯವೂ ಸಹಕಾರಿಯಾಗಲಿದೆ. ಬೆಂಗಳೂರಿನ ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವಿದ್ದು. ಇಲ್ಲಿಯೇ ಶಿಕ್ಷಣ ನೀಡಲಾಗುತ್ತದೆ ಎನ್ನುವುದು ಪ್ರಾಂಶುಪಾಲರು ನೀಡುವ ವಿವರಣೆ.

ಇಲ್ಲಿ ಸಂಪರ್ಕಿಸಿ

ಮಾಹಿತಿಗೆ ಕಾಲೇಜಿನ ಪ್ರಾಂಶುಪಾಲರನ್ನು 9141629584/ 9880217473 / 080 23500808 ಸಂಪರ್ಕಿಸಬಹುದು.

IPL_Entry_Point