ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ನೀರಿನ ಸಮಸ್ಯೆಗೆ ಝೆರೋದಾ ಸಂಸ್ಥಾಪಕ ನಿತಿನ್ ಕಾಮತ್ ಸಲಹೆ ಎಫೆಕ್ಟ್; ಒಂದೇ ದಿನ ಬಂತು 300 ಫೋನ್ ಕಾಲ್ಸ್

ಬೆಂಗಳೂರು ನೀರಿನ ಸಮಸ್ಯೆಗೆ ಝೆರೋದಾ ಸಂಸ್ಥಾಪಕ ನಿತಿನ್ ಕಾಮತ್ ಸಲಹೆ ಎಫೆಕ್ಟ್; ಒಂದೇ ದಿನ ಬಂತು 300 ಫೋನ್ ಕಾಲ್ಸ್

ಬೆಂಗಳೂರು ನೀರಿನ ಬಿಕ್ಕಟ್ಟಿಗೆ ಝೆರೋದಾ ಸಂಸ್ಥಾಪಕ ನಿತಿನ್ ಕಾಮತ್ ಒಂದಷ್ಟು ಸಲಹೆಗಳನ್ನು ನೀಡಿದ್ದರು. ಇದರ ಪರಿಣಾಮವಾಗಿ ಬೋಸನ್ ವೈಟ್ ವಾಟರ್ ಕಂಪನಿಗೆ ಒಂದೇ ದಿನದಲ್ಲಿ 300 ಫೋನ್ ಕಾಲ್ಸ್ ಬಂದಿದೆ ಎಂದು ವರದಿಯಾಗಿದೆ.

ಬೆಂಗಳೂರು ನೀರಿನ ಸಮಸ್ಯೆಗೆ ಝೆರೋದಾ ಸಂಸ್ಥಾಪಕ ನಿತಿನ್ ಕಾಮತ್ ಸಲಹೆ ನೀಡಿದ ಬೆನ್ನಲ್ಲೇ ಅವರ ಕಂಪನಿಗೆ ಒಂದೇ ದಿನ 300 ಫೋನ್ ಕಾಲ್ಸ್ ಬಂದಿವೆ ಎಂದು ವರದಿಯಾಗಿದೆ.
ಬೆಂಗಳೂರು ನೀರಿನ ಸಮಸ್ಯೆಗೆ ಝೆರೋದಾ ಸಂಸ್ಥಾಪಕ ನಿತಿನ್ ಕಾಮತ್ ಸಲಹೆ ನೀಡಿದ ಬೆನ್ನಲ್ಲೇ ಅವರ ಕಂಪನಿಗೆ ಒಂದೇ ದಿನ 300 ಫೋನ್ ಕಾಲ್ಸ್ ಬಂದಿವೆ ಎಂದು ವರದಿಯಾಗಿದೆ.

ಬೆಂಗಳೂರು: ಝೆರೋದಾ ಸಂಸ್ಥಾಪಕ ನಿತಿನ್ ಕಾಮತ್ (Zerodha Co Founder Nithin Kamath) ಅವರು ಇತ್ತೀಚೆಗೆ ಬೆಂಗಳೂರಿನ ನೀರಿನ ಬಿಕ್ಕಟ್ಟಿನ (Bangalore Water Crisis) ಪರಿಣಾಮವನ್ನು ಸೂಚಿಸಿದ್ದರು. ಭವಿಷ್ಯದಲ್ಲಿ ಆಗಾಗೆ ವಿಪರೀತ ಹವಾಮಾನ ಘಟನೆಗಳು ಪುನರಾವರ್ತನೆಯಾಗುವ ಸಾಧ್ಯತೆಯಿದೆ ಎಂದು ಹೇಳಿದರು. ಕಾಮತ್ ಈ ತಿಂಗಳ ಆರಂಭದಲ್ಲಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾತನಾಡಿ, "ಕೇವಲ ಒಂದು ಕೆಟ್ಟ ಮಲೆಗಾಲದಿಂದಾಗಿ ಬೆಂಗಳೂರು ಭಾರಿ ನೀರಿನ ಕೊರತೆಯ ಬಿಕ್ಕಟ್ಟನ್ನು ಎದುರಿಸಬೇಕಾಯಿತು. ವಿಪರೀತ ಹವಾಮಾನ ಪರಿಸ್ಥಿತಿಗಳು ಹೆಚ್ಚು ಸಾಮಾನ್ಯವಾಗುವುದರಿಂದ, ನಾವು ಈ ಬಿಕ್ಕಟ್ಟನ್ನು ಎದುರಿಸುವುದು ಬಹುಶಃ ಇದು ಕೊನೆಯ ಬಾರಿಯಲ್ಲ. ತ್ಯಾಜ್ಯನೀರು ಇದಕ್ಕೆ ಪರಿಹಾರದ ಭಾಗವಾಗಬಹುದು ಎಂದು ನಾನು ಇತ್ತೀಚೆಗೆ ಕಲಿತಿದ್ದೇನೆ ಎಂದು ಹೇಳಿದ್ದರು.

ಟ್ರೆಂಡಿಂಗ್​ ಸುದ್ದಿ

ನಿತಿನ್ ಕಾಮತ್ ವಿಡಿಯೊ ಸಹಿತ ಒಂದಷ್ಟು ಸಲಹೆಗಳನ್ನು ಕೊಟ್ಟಿದ್ದೇ ತಡ ಬೋಸನ್ ವೈಟ್ ವಾಟರ್ (Boson White Water) ಕಂಪನಿಗೆ ಒಂದೇ ದಿನ 300 ಫೋನ್ ಕಾಲ್ಸ್ ಬಂದಿದೆ ಎಂದು ವರದಿಯಾಗಿದೆ. ನೀರಿನ ಸಮಸ್ಯೆಗೆ ಕಾಮತ್ ಅವರು ಸಲಹೆಗೂ ಬೋಸನ್ ವೈಟ್ ವಾಟರ್ ಕಂಪನಿಗೆ ಇಷ್ಟೊಂದು ಫೋನ್ ಕರೆಗಳು ಬರೋದಿಕ್ಕೆ ಏನು ಕಾರಣ ಅನ್ನೋದನ್ನು ಇಲ್ಲಿ ತಿಳಿಯಿರಿ. ಅದಕ್ಕೂ ಮುನ್ನ ಕಾಮತ್ ಅವರು ನೀರಿನ ಸಮಸ್ಯೆಗೆ ಏನೆಲ್ಲಾ ಹೇಳಿದ್ರು ಎಂಬುರ ವಿವರ ಇಲ್ಲಿದೆ.

ನಗರದಲ್ಲಿ ದಿನಕ್ಕೆ 2632 ಎಂಎಲ್‌ಡಿ ಸಿಹಿನೀರಿನ ಬೇಡಿಕೆ ಇದೆ. ಆದರೆ ತ್ಯಾಜ್ಯ ನೀರಿನಿಂದ 2000 ಎಂಎಲ್‌ಡಿ ಕುಡಿಯುವ ನೀರನ್ನು ಉತ್ಪಾದಿಸಬಹುದು. ಇದರಲ್ಲಿ, ಕೇಂದ್ರೀಕೃತ ಒಳಚರಂಡಿ ಸಂಸ್ಕರಣಾ ಘಟಕಗಳಿಂದ 1,300 ಎಂಎಲ್‌ಡಿಯನ್ನು ಸಂಸ್ಕರಿಸಲಾಗುತ್ತದೆ. ಈ ನೀರನ್ನು ಕೃಷಿ ಉದ್ದೇಶಗಳಿಗಾಗಿ ಬಳಸಲಾಗುತ್ತದೆ" ಎಂದು ಜಾಲತಾಣದಲ್ಲಿ ಬರೆದಿದ್ದಾರೆ.

"ಸುಮಾರು 3,500 ಅಪಾರ್ಟ್‌ಮೆಂಟ್‌ಗಳು ಮತ್ತು ವಾಣಿಜ್ಯ ಸಂಸ್ಥೆಗಳು ವಿಕೇಂದ್ರೀಕೃತ ಒಳಚರಂಡಿ ಸಂಸ್ಕರಣಾ ಘಟಕಗಳನ್ನು (ಎಸ್‌ಟಿಪಿ) ಹೊಂದಿವೆ. ಎಸ್‌ಟಿಪಿಗಳ ಶೇಕಡಾ 80 ರಷ್ಟನ್ನು ನೀರನ್ನು ವ್ಯರ್ಥ ಮಾಡಲಾಗುತ್ತಿದೆ. ಈ ಎಸ್‌ಟಿಪಿ ನೀರು ಕಡಿಮೆ ಗುಣಮಟ್ಟದ್ದಾಗಿದೆ. ಹೀಗಾಗಿ ಇದನ್ನು ಶೌಚಾಲಯದಲ್ಲಿ ಫ್ಲಶಿಂಗ್ ಹಾಗೂ ತೋಟಗಾರಿಕೆಗೆ ಬಳಸಲಾಗುತ್ತಿಲ್ಲ. ಈ ಹೆಚ್ಚುವರಿ ಎಸ್‌ಟಿಪಿ ನೀರನ್ನು ಉತ್ತಮ ಗುಣಮಟ್ಟದ ನೀರಾಗಿ ಪರಿವರ್ತಿಸಿದರೆ, ವಿಕೇಂದ್ರೀಕೃತ ಸಂಸ್ಕರಣಾ ಯೋಜನೆಗಳಿಂದ ಸುಮಾರು 450-500 ಎಂಎಲ್ ಡಿ ನೀರಿನ ಬೇಡಿಕೆಯನ್ನು ಪೂರೈಸಬಹುದು ಎಂದು ಅವರು ಹೇಳಿದರು.

ಎಸ್‌ಟಿಪಿ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿರುವ ಬೆಂಗಳೂರು ಮೂಲದ ಬೋಸನ್ ವೈಟ್ ವಾಟರ್ ಎಂಬ ಸಂಸ್ಥೆಯ ವಿಡಿಯೊವನ್ನು ನಿತಿನ್ ಕಾಮತ್ ಪೋಸ್ಟ್ ಮಾಡಿದ್ದಾರೆ. ಕಾಮತ್ ಅವರ ಪೋಸ್ಟ್ ಸುಮಾರು 3,08,700 ವೀಕ್ಷಣೆಗಳನ್ನು ಪಡೆದಿದೆ.

ತಾಜ್ಯನೀರನ್ನು ಶುದ್ಧೀಕರಿಸಲು ಘಟಕಗಳನ್ನು ಹೊಂದಿರುವ ಬೋಸಾನ್ ವೈಟ್ ವಾಟರ್‌ ಕಂಪನಿಗೆ ಒಂದೇ ದಿನ 300 ಫೋನ್ ಕರೆಗಳು ಬಂದಿವೆ ಎಂದು ವರದಿಯಾಗಿದೆ. ಕಂಪನಿಯ ಸಹ ಸಂಸ್ಥಾಪಕ ವಿಕಾಸ್ ಬ್ರಹ್ಮಾವರ್ ಅವರು ಒಂದೇ ದಿನದಲ್ಲಿ 300 ಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಿದ್ದಾರೆ. ಪ್ರತಿ ದಿನ ಒಂದು ಡಜನ್‌ಗೂ ಅಧಿಕ ಕರೆಗಳು ಬರುತ್ತಿವೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಕಾಮತ್ ಅವರ ಸಲಹೆಗಳು ಅನೇಕರನ್ನು ಪ್ರೇರೇಪಿಸಿದ ಪರಿಣಾಮ ಇಷ್ಟೊಂದು ಕರೆಗಳು ಬಂದಿವೆ ಎಂದು ಬಹುತೇಕರು ಈ ಯೋಜನೆಗೆ ಬೆಂಬಲ ವ್ಯಕ್ತಪಡಿಸಿದರೆ, ಒಂದಷ್ಟು ಮಂದಿಯಿಂದ ವಿರೋಧ ಅಭಿಪ್ರಾಯಗಳೂ ಇದ್ದವು, ಕೆಲವರು ಒಂದು ಕಾಲದಲ್ಲಿ ಒಳಚರಂಡಿಯಾಗಿದ್ದ ಕುಡಿಯುವ ನೀರಿನ ಕಲ್ಪನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ವಸತಿಗಳ ತ್ಯಾಜ್ಯಗಳ ವಿಸರ್ಜನೆಯನ್ನು ಮೇಲ್ದರ್ಜೆಗೇರಿಸುವ ವಿಕೇಂದ್ರೀಕೃತ ಪರಿಹಾರಗಳು ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಮುಂದಿನ ಗಡಿಯಾಗಬಹುದು ಎಂದು ವ್ಯಕ್ತಿಯೊಬ್ಬರು ಸಲಹೆ ನೀಡಿದ್ದಾರೆ. ತ್ಯಾಜ್ಯ ನೀರನ್ನು ಹೊಣೆಗಾರಿಕೆಯಿಂದ ಸುಸ್ಥಿರ ನಗರ ನೀರಿನ ಸುರಕ್ಷತೆಗಾಗಿ ಸಂಪನ್ಮೂಲವಾಗಿ ಪರಿವರ್ತಿಸುವ ಮಹತ್ವವನ್ನು ಒತ್ತಿ ಹೇಳಿದರು.

ಇದಲ್ಲದೆ, ಸಿಂಗಾಪುರ್‌ನಲ್ಲಿ ತ್ಯಾಜ್ಯ ನೀರನ್ನು ಕುಡಿಯುವ ನೀರಾಗಿ ಯಶಸ್ವಿಯಾಗಿ ಪರಿವರ್ತಿಸಲಾಗಿದೆ. ಬೆಂಗಳೂರಿನಲ್ಲೂ ತ್ಯಾಜ್ಯ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸಲು ಸಿಂಗಾಪುರ್‌ಗೆ ಹೋಲಿಕೆ ಮಾಡಲಾಗಿದೆ. ಸಂಸ್ಕರಿಸಿದ ನೀರಿನಲ್ಲಿ ಭಾರವಾದ ಲೋಹಗಳಂತಹ ಸಂಭಾವ್ಯ ಮಾಲಿನ್ಯಕಾರಕಗಳ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಕೆಲವರು ಸಲಹೆಗಳನ್ನು ನೀಡಿದ್ದಾರೆ ಎಂದು ಬೋಸಾನ್ ವೈಟ್ ವಾಟರ್ ಕಂಪನಿ ತಿಳಿಸಿದೆ.

IPL_Entry_Point