Dogs Festival: ಅಕ್ಟೋಬರ್ 17 ರಂದು ಬಿಬಿಎಂಪಿಯಿಂದ 'ನಾಯಿಗಳ ಹಬ್ಬ' ಆಚರಣೆ; ಕಾರಣವೇನು?
ಕನ್ನಡ ಸುದ್ದಿ  /  ಕರ್ನಾಟಕ  /  Dogs Festival: ಅಕ್ಟೋಬರ್ 17 ರಂದು ಬಿಬಿಎಂಪಿಯಿಂದ 'ನಾಯಿಗಳ ಹಬ್ಬ' ಆಚರಣೆ; ಕಾರಣವೇನು?

Dogs Festival: ಅಕ್ಟೋಬರ್ 17 ರಂದು ಬಿಬಿಎಂಪಿಯಿಂದ 'ನಾಯಿಗಳ ಹಬ್ಬ' ಆಚರಣೆ; ಕಾರಣವೇನು?

Bengaluru News: ಬಿಬಿಎಂಪಿ ಅಕ್ಟೋಬರ್ 17 ರಂದು 'ಕುಕುರ್ ತಿಹಾರ್' ಎಂದು ಕರೆಯಲ್ಪಡುವ 'ಶ್ವಾನಗಳ ಹಬ್ಬ'ವನ್ನು ಆಚರಿಸಲು ಸಜ್ಜಾಗಿದೆ. ಮನುಷ್ಯರು ಮತ್ತು ಪ್ರಾಣಿಗಳ ನಡುವಿನ ಪ್ರೀತಿ ಮತ್ತು ಬಾಂಧವ್ಯವನ್ನು ಎತ್ತಿ ತೋರಿಸುವ ಉದ್ದೇಶ ಇದಾಗಿದೆ.

This event aims to recognise the valuable contributions of dogs to the ecosystem.
This event aims to recognise the valuable contributions of dogs to the ecosystem. (Pexels)

ಬೆಂಗಳೂರು: ಶ್ವಾನಗಳ ಹಬ್ಬ ಎಂದು ಕರೆಯಲ್ಪಡುವ ಕುಕುರ್ ತಿಹಾರ್ ಹಬ್ಬವನ್ನು ಅಕ್ಟೋಬರ್ 17 ರಂದು ಬೆಂಗಳೂರಿನಲ್ಲಿ ಆಚರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಜ್ಜಾಗಿದೆ. ಈ ಕಾರ್ಯಕ್ರಮವು ಪರಿಸರ ವ್ಯವಸ್ಥೆಗೆ ಶ್ವಾನಗಳ ಅಮೂಲ್ಯ ಕೊಡುಗೆಗಳನ್ನು ಗುರುತಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮನುಷ್ಯರು ಮತ್ತು ಪ್ರಾಣಿಗಳ ನಡುವಿನ ಪ್ರೀತಿ ಮತ್ತು ಬಾಂಧವ್ಯ ಎತ್ತಿ ತೋರಿಸುವ ಕಾರ್ಯಕ್ರಮ ಇದಾಗಿರಲಿದೆ. ನಗರದ ವಸತಿ ಕಲ್ಯಾಣ ಸಂಘಗಳು ಮತ್ತು ಪ್ರಾಣಿ ಪಾಲಕರನ್ನು ಒಟ್ಟಿಗೆ ಸೇರಿಸುವ ಕಾರ್ಯಕ್ರಮ ಇದು.

ಕುಕುರ್ ತಿಹಾರ್ ನೇಪಾಳದ ಸಾಂಪ್ರದಾಯಿಕ ಹಬ್ಬವಾಗಿದೆ. ಇದು ನಾಯಿಗಳನ್ನು ಗೌರವಿಸಲು ಮತ್ತು ಪೂಜಿಸುವ ಹಬ್ಬ. ಬಿಬಿಎಂಪಿಯ ಪಶುಸಂಗೋಪನಾ ಇಲಾಖೆ ಅಭಿಯಾನದ #BITEFREELOCALITY ಅಡಿಯಲ್ಲಿ ಅನೇಕ ಉಪಕ್ರಮಗಳನ್ನು ಪರಿಚಯಿಸುವ ಉದ್ದೇಶವಾಗಿದೆ. ಬಿಬಿಎಂಪಿಯು 4 ವಾರ್ಡ್‌ಗಳಿಂದ ಪೌರ ಕಾರ್ಮಿಕರನ್ನು ನೇಮಿಸುವ ಮೂಲಕ ಪ್ರಾಯೋಗಿಕ ಫೀಡಿಂಗ್ ಉಪಕ್ರಮವನ್ನು ಪ್ರಾರಂಭಿಸಲಿದೆ. ಇದು ನಗರದ ರೆಸ್ಟೋರೆಂಟ್‌ಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ಸಮುದಾಯ ನಾಯಿಗಳಿಗೆ ಆಹಾರ ನೀಡಲು ನೆರವಾಗುತ್ತದೆ.

ಇತ್ತೀಚೆಗೆ ಸಾರ್ವಜನಿಕರ ಮೇಲೆ ಬೀದಿ ನಾಯಿಗಳು ದಾಳಿ ನಡೆಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ನಾಯಿಗಳನ್ನು ಕಂಡರೆ ಜನರು ಭಯಪಡುತ್ತಿದ್ದಾರೆ. ಆದರೆ, ಈ ಹಬ್ಬದ ಮೂಲಕ ಅವುಗಳ ನಿಷ್ಠೆ, ವಿಧೇಯತೆ, ರಕ್ಷಣೆ ಮತ್ತು ಒಡನಾಟವನ್ನು ಜನರಿಗೆ ಪರಿಚಯಿಸುವ ಕೆಲಸ ಮಾಡಲಾಗುತ್ತದೆ. ಶ್ವಾನಗಳ ಜನನ ನಿಯಂತ್ರಣ, ವ್ಯಾಕ್ಸಿನೇಷನ್​ಗಳ ಹೊರತಾಗಿ ಪ್ರಾಣಿಗಳ ನಡವಳಿಕೆ ಅರ್ಥಮಾಡಿಕೊಳ್ಳುವುದು ಸಹ ಮುಖ್ಯವಾಗಿದೆ. ಶ್ವಾನಗಳನ್ನು ಸ್ವೀಕರಿಸುವುದು ಸಹ ಅಷ್ಟೇ ನಿರ್ಣಾಯಕ ಎಂದು ಬಿಬಿಎಂಪಿ ಕಲ್ಯಾಣ ವಿಶೇಷ ಆಯುಕ್ತ ಸುರಲ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

ಇತ್ತೀಚೆಗೆ ಬಿಬಿಎಂಪಿ ನಗರದ ಮತ್ತಿಕೆರೆ ಮತ್ತು ಮಲ್ಲೇಶ್ವರಂ ಪ್ರದೇಶಗಳಲ್ಲಿ ಬೀದಿ ನಾಯಿಗಳ ಟ್ರ್ಯಾಕಿಂಗ್ ಮತ್ತು ನಿರ್ವಹಣೆಯನ್ನು ಸುಧಾರಿಸುವ ಉದ್ದೇಶದಿಂದ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಿದೆ. ಪ್ರಾಯೋಗಿಕ ಕಾರ್ಯಕ್ರಮವು ಬೀದಿ ನಾಯಿಗಳಲ್ಲಿ ಮೈಕ್ರೊಚಿಪ್​​​ಗಳನ್ನು ಅಳವಡಿಸುವುದೂ ಒಳಗೊಂಡಿದೆ. ಇದು ಕರ್ನಾಟಕ ರಾಜಧಾನಿಯಲ್ಲಿ ನಾಯಿಗಳ ಸಂಖ್ಯೆಯನ್ನು ನಿರ್ವಹಿಸುವಲ್ಲಿನ ಸವಾಲುಗಳನ್ನು ಎದುರಿಸಲು ತಂತ್ರಜ್ಞಾನ ಬಳಸುವತ್ತ ಬದಲಾವಣೆ ಸೂಚಿಸುತ್ತದೆ.

Whats_app_banner