ಸಾಲ ಕೊಡಿಸುವುದಾಗಿ ನಂಬಿಸಿ 100 ಮಹಿಳೆಯರಿಂದ ಲಕ್ಷಾಂತರ ರೂಪಾಯಿ ದೋಚಿದ ತಾಯಿ ಮಗಳ ಜೋಡಿಯ ಬಂಧನ; ಕೇಸ್‌ ದಾಖಲು
ಕನ್ನಡ ಸುದ್ದಿ  /  ಕರ್ನಾಟಕ  /  ಸಾಲ ಕೊಡಿಸುವುದಾಗಿ ನಂಬಿಸಿ 100 ಮಹಿಳೆಯರಿಂದ ಲಕ್ಷಾಂತರ ರೂಪಾಯಿ ದೋಚಿದ ತಾಯಿ ಮಗಳ ಜೋಡಿಯ ಬಂಧನ; ಕೇಸ್‌ ದಾಖಲು

ಸಾಲ ಕೊಡಿಸುವುದಾಗಿ ನಂಬಿಸಿ 100 ಮಹಿಳೆಯರಿಂದ ಲಕ್ಷಾಂತರ ರೂಪಾಯಿ ದೋಚಿದ ತಾಯಿ ಮಗಳ ಜೋಡಿಯ ಬಂಧನ; ಕೇಸ್‌ ದಾಖಲು

ಸಾಲ ಕೊಡಿಸುವುದಾಗಿ ನಂಬಿಸಿ ನೂರು ಮಹಿಳೆಯರಿಂದ ಲಕ್ಷಾಂತರ ರೂಪಾಯಿ ದೋಚಿದ ತಾಯಿ ಮಗಳ ಜೋಡಿಯನ್ನು ಬೆಂಗಳೂರು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ಧಾರೆ. ಅವರುಖಾತೆ ತೆರೆಯಲು ಸಂಗ್ರಹಿಸಿದ್ದ ಹಣವನ್ನು ಸರಿಯಾಗಿ ಬಳಸದೇ ವಂಚಿಸಿದ್ದು, ಈ ಕುರಿತು ದೂರು ದಾಖಲಾಗಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಸಾಲ ಕೊಡಿಸುವುದಾಗಿ ನಂಬಿಸಿ 100 ಮಹಿಳೆಯರಿಂದ ಲಕ್ಷಾಂತರ ರೂಪಾಯಿ ದೋಚಿದ ತಾಯಿ ಮಗಳ ಜೋಡಿಯ ಬಂಧನವಾಗಿದ್ದು, ಪೊಲೀಸರು ಕೇಸ್‌ ದಾಖಲು ಮಾಡಿದ್ದಾರೆ. (ಸಾಂಕೇತಿಕ ಚಿತ್ರ)
ಸಾಲ ಕೊಡಿಸುವುದಾಗಿ ನಂಬಿಸಿ 100 ಮಹಿಳೆಯರಿಂದ ಲಕ್ಷಾಂತರ ರೂಪಾಯಿ ದೋಚಿದ ತಾಯಿ ಮಗಳ ಜೋಡಿಯ ಬಂಧನವಾಗಿದ್ದು, ಪೊಲೀಸರು ಕೇಸ್‌ ದಾಖಲು ಮಾಡಿದ್ದಾರೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ನೂರಕ್ಕೂ ಹೆಚ್ಚು ಮಹಿಳೆಯರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪದಡಿಯಲ್ಲಿ ತಾಯಿ, ಮಗಳು ಸೇರಿ ಮೂವರನ್ನು ಬೆಂಗಳೂರಿನ ಹೈ ಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ರೇಷ್ಮಾ ಭಾನು, ಆಕೆಯ ಪುತ್ರಿ ತೌಸಿಯಾ ಅಂಜುಂ ಹಾಗೂ ಶ್ರೀಕಾರ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ನೌಕರ ಆನಂದ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಬ್ಯಾಂಕ್ ಖಾತೆಗಳ ವಿವರಗಳನ್ನು ಕಲೆ ಹಾಕಲಾಗುತ್ತಿದೆ. ನಂತರವಷ್ಟೇ ವಂಚಿಸಿರುವ ಮೊತ್ತದ ನಿಖರ ಮಾಹಿತಿ ಗೊತ್ತಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

ನೂರು ಮಹಿಳೆಯರಿಂದ ಲಕ್ಷಾಂತರ ರೂ. ದೋಚಿದ ತಾಯಿ ಮಗಳ ಜೋಡಿ: ಏನಿದು ಪ್ರಕರಣ

ರೇಷ್ಮಾ ಬಾನು, ತೌಸಿಯಾ ಅಂಜುಂ ಕ್ವಿನ್ಸ್ ರಸ್ತೆಯಲ್ಲಿ ಕಚೇರಿ ಹೊಂದಿದ್ದಾರೆ. ಈ ತಾಯಿ ಮಗಳ ಜೋಡಿ ಶ್ರೀಕಾರ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ 50 ಸಾವಿರ ರೂ. ಸಾಲ ಕೊಡಿಸುವುದಾಗಿ ನಂಬಿಸಿದ್ದರು. ದೂರು ನೀಡಿರುವ ಅಂಚೆಪಾಳ್ಯ ನಿವಾಸಿ ಶ್ವೇತಾ ಪಂಡ ಅವರೊಬ್ಬರೇ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ಕೊಟ್ಟಿದ್ದಾರೆ. ಇದೀಗ ಇವರು ದೂರು ನೀಡಿದ್ದಾರೆ.

ಧರ್ಮಸ್ಥಳ ಸಂಘದ ಮುಖ್ಯಸ್ಥೆಯಾಗಿರುವ ನನಗೆ ಹಲವು ಸದಸ್ಯರ ಪರಿಚಯವಿತ್ತು. ಆರೋಪಿಗಳ ಸೂಚನೆಯಂತೆ ಬ್ಯಾಂಕ್ ಖಾತೆ ತೆರಯುವ ಉದ್ದೇಶದಿಂದ 75 ಮಹಿಳಾ ಸದಸ್ಯರಿಂದ ತಲಾ ರೂ. 2,500 ಸಂಗ್ರಹಿಸಿ ತಾಯಿ ಮಗಳಿಗೆ ನೀಡಿದ್ದೆ. ನನಗೆ ಪರಿಚಯವಿರುವ 24 ಮಹಿಳೆಯರಿಂದ ತಲಾ 3 ಸಾವಿರ ರೂಪಾಯಿ ಹಾಗೂ 40 ಮಹಿಳೆಯರಿಂದ ತಲಾ 5 ಸಾವಿರ ಸಂಗ್ರಹಿಸಿ ತಾಯಿ ಮತ್ತು ಮಗಳಿಗೆ ಫೋನ್ ಪೇ ಮೂಲಕ ಹಣ ವರ್ಗಾವಣೆ ಮಾಡಿದ್ದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಹಣ ನೀಡಿ ಹದಿನೈದು ದಿನ ಕಳೆದರೂ ಸಾಲ ಮಂಜೂರು ಮಾಡಿಸಿರಲಿಲ್ಲ. ಮೊಬೈಲ್ ಕರೆಗೂ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ. ಹಣ ಕಟ್ಟಿದ್ದ ಮಹಿಳೆಯರ ಜತೆ ತಾಯಿ ಮಗಳ ಕಚೇರಿಗೆ ತೆರಳಿ ಸಾಲ ಮಂಜೂರಾತಿ ಕುರಿತು ಪ್ರಶ್ನಿಸಿದಾಗ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ಶ್ರೀಕಾರ್ ಸೌಹಾರ್ದ ಸೊಸೈಟಿ ನಿರ್ದೇಶಕ ಆನಂದ್ ಎಂಬಾತ ಸಾಲ ಕೊಡುವುದಿಲ್ಲ ಎಂದು ಜೋರು ಮಾಡಿದ್ದಾನೆ. ಆದ್ದರಿಂದ ಹಣ ಪಡೆದು ವಂಚನೆ ಮಾಡಿರುವ ತಾಯಿ ಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶ್ವೇತಾ ಪೊಲೀಸರನ್ನು ಕೋರಿದ್ದಾರೆ.

ತನಿಖೆ ಮುಂದುವರಿಸಿದ ಪೊಲೀಸರು

ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ಖಾತೆ ತೆರೆಯುವ ಹೆಸರಿನಲ್ಲಿ ಮಹಿಳೆಯರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿದ್ದಾರೆ. ಸಾಲಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ನಮೂದಿಸಿದ್ದ ಮೊಬೈಲ್ ನಂಬರ್ ಅನ್ನೇ ಸಾಲದ ಖಾತೆ ನಂಬರ್ ಎಂದು ಆರೋಪಿಗಳು ನೀಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಕಟ್ಟಿರುವ ಹಣ ವಾಪಸ್ ಮಾಡುವಂತೆ ಕೇಳಿದಾಗ ರಾಜಕಾರಣಿಗಳ ಪರಿಚಯ ಇದೆ ಎಂದು ನಮ್ಮನ್ನೇ ಬೆದರಿಸುತ್ತಿದ್ದಾರೆ ಎಂದು ದೂರುದಾರರು ಬೆಂಗಳೂರಿನ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಗೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ.

(ವರದಿ- ಎಚ್. ಮಾರುತಿ, ಬೆಂಗಳೂರು)

Whats_app_banner