ಮೆಟ್ರೋ ಸ್ಟೇಷನ್ನೋ, ಸೂಸೈಡ್ ಸ್ಪಾಟ್ಟೋ; ಮತ್ತೊಬ್ಬ ಆತ್ಮಹತ್ಯೆಗೆ ಯತ್ನ, ಸ್ವಲ್ಪದರಲ್ಲೇ ಬಚಾವ್, VIDEO-bengaluru news 30 year old mans suicide attempt disrupts namma metro purple line at jnanabharathi metro prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಮೆಟ್ರೋ ಸ್ಟೇಷನ್ನೋ, ಸೂಸೈಡ್ ಸ್ಪಾಟ್ಟೋ; ಮತ್ತೊಬ್ಬ ಆತ್ಮಹತ್ಯೆಗೆ ಯತ್ನ, ಸ್ವಲ್ಪದರಲ್ಲೇ ಬಚಾವ್, Video

ಮೆಟ್ರೋ ಸ್ಟೇಷನ್ನೋ, ಸೂಸೈಡ್ ಸ್ಪಾಟ್ಟೋ; ಮತ್ತೊಬ್ಬ ಆತ್ಮಹತ್ಯೆಗೆ ಯತ್ನ, ಸ್ವಲ್ಪದರಲ್ಲೇ ಬಚಾವ್, VIDEO

ಬೆಂಗಳೂರು ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಅವಘಡಗಳು ಮುಂದುವರೆದಿವೆ. 30 ವರ್ಷದ ಯುವಕನೊಬ್ಬ ಮೆಟ್ರೋ ಟ್ರೈನ್ ಬರುತ್ತಿದ್ದಂತೆ ಟ್ರ್ಯಾಕ್​ಗೆ ಹಾಕಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜ್ಞಾನಭಾರತಿ ಮೆಟ್ರೋ ಸ್ಟೇಷನ್​​ನಲ್ಲಿ ನಡೆದಿದೆ.

ಮೆಟ್ರೋ ರೈಲಿನ ಟ್ರ್ಯಾಕ್​ನ ಮಧ್ಯದಲ್ಲಿ ಸಿಲುಕಿಕೊಂಡ ಯುವಕನನ್ನು ರಕ್ಷಿಸುತ್ತಿರುವುದು
ಮೆಟ್ರೋ ರೈಲಿನ ಟ್ರ್ಯಾಕ್​ನ ಮಧ್ಯದಲ್ಲಿ ಸಿಲುಕಿಕೊಂಡ ಯುವಕನನ್ನು ರಕ್ಷಿಸುತ್ತಿರುವುದು

ಬೆಂಗಳೂರು: ನಮ್ಮ ಮೆಟ್ರೋ ಸೂಸೈಡ್ ಸ್ಪಾಟ್ ಆಗಿ ಪರಿವರ್ತನೆ ಆಗ್ತಿದ್ಯಾ? ಮೆಟ್ರೋ ಟ್ರ್ಯಾಕ್​ಗೆ ಹಾರುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಅದಕ್ಕೆ ಮತ್ತೊಂದು ಘಟನೆ ಹೊಸದಾಗಿ ಸೇರ್ಪಡೆಯಾಗಿದೆ. 30 ವರ್ಷದ ಯುವಕನೊಬ್ಬ ಮೆಟ್ರೋ ಟ್ರೈನ್ ಬರುತ್ತಿದ್ದಂತೆ ಟ್ರ್ಯಾಕ್​ಗೆ ಹಾಕಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಬಚಾವ್​ ಆಗಿದ್ದು, ಪ್ರಾಥಮಿಕ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜ್ಞಾನ ಭಾರತಿ ಮೆಟ್ರೋ ನಿಲ್ದಾಣದಲ್ಲಿ ಇಂದು (ಸೆಪ್ಟೆಂಬರ್​ 17) ಮಧ್ಯಾಹ್ನ 2.20ರ ಸುಮಾರಿಗೆ ಯುವಕನೊಬ್ಬ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪವಾಡ ಸದೃಶವಾಗಿ ಪಾರಾಗಿದ್ದಾನೆ. ವೈಟ್ ಫೀಲ್ಡ್ ಕಡೆಯಿಂದ ಕೆಂಗೇರಿ ಕಡೆಗೆ ಹೊರಟಿದ್ದ ಮೆಟ್ರೋ ರೈಲು ಜ್ಞಾನಭಾರತಿ ನಿಲ್ದಾಣಕ್ಕೆ ಬರುತ್ತಿದ್ದಂತೆ ಈ ವ್ಯಕ್ತಿ ಏಕಾಏಕಿ ಟ್ರ್ಯಾಕ್​ಗೆ ಧುಮುಕಿದ.

ರೈಲು ಹತ್ತು ಮೀಟರ್ ದೂರ ಕ್ರಮಿಸಿತಾದರೂ ಆ ವ್ಯಕ್ತಿ ರೈಲ್ವೆ ಟ್ರ್ಯಾಕ್ ನಡುವೆ ಸಿಲುಕಿದ ಕಾರಣ ಜೀವಕ್ಕೆ ತೊಂದರೆಯಾಗಿಲ್ಲ. ರೈಲ್ವೆ ಚಾಲಕರು ವೇಗವನ್ನು ಗಣನೀಯವಾಗಿ ತಗ್ಗಿಸಿದರು. ಘಟನೆಯ ನಂತರ ತುರ್ತು ಟ್ರಿಪ್ ಸಿಸ್ಟಮ್ (ಇಟಿಎಸ್) ಅನ್ನು ನಿರ್ವಹಣೆ ಮಾಡಲಾಗಿದ್ದು, ತಕ್ಷಣವೇ ರೈಲು ಸಂಚಾರ ಬಂದ್ ಮಾಡಿ ಈ ವ್ಯಕ್ತಿಯನ್ನು ರಕ್ಷಿಸಿ ಕರೆದೊಯ್ದರು.

ಈ ಹಿಂದಿನ ಘಟನೆಗಳ ಮೆಲುಕು

  • ಜನವರಿ 1ರಂದೇ ಮಹಿಳೆಯೊಬ್ಬರು ಟ್ರ್ಯಾಕ್​ ಮೇಲೆ ಮೊಬೈಲ್ ಬಿದ್ದಿತ್ತೆಂದು ಹಳಿಗೆ ಜಿಗಿದಿದ್ದರು. ಇಂದಿರಾ ನಗರ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು. 15 ನಿಮಿಷಗಳ ಮೆಟ್ರೋ ಸಂಪರ್ಕ ಕಡಿತಗೊಳಿಸಲಾಗಿತ್ತು.
  • ಇದೇ ವರ್ಷ ಜನವರಿ 5ರಂದು ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದ. ಈ ಘಟನೆ ಜಾಲಹಳ್ಳಿ ಮೆಟ್ರೋ ಸ್ಟೇಷನ್​​ನಲ್ಲಿ ನಡೆದಿತ್ತು. ಆತ 23 ವರ್ಷದ ಶ್ಯಾರೋನ್. ಮೆಜೆಸ್ಟಿಕ್​ಗೆ ಹೋಗಲು ಮೆಟ್ರೋ ಬರುತ್ತಿದ್ದಂತೆ ಹಳಿಗೆ ಹಾರಿದ್ದ. ಆದರೆ ಬಚಾವ್ ಆಗಿದ್ದ.
  • ಮಾರ್ಚ್​ 21ರಂದು ಸುಮಾರು 20 ವರ್ಷದ ಯುವಕನೊಬ್ಬ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಸೂಸೈಡ್ ಮಾಡಿಕೊಂಡಿದ್ದ. ಟ್ರೈನ್ ಬರುತ್ತಿದ್ದಂತೆ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಹೆಸರು ಧ್ರುವ್. ಆತ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎಂಬುದು ಪ್ರಾಥಮಿಕ ವರದಿಯಲ್ಲಿ ಬಂದಿತ್ತು.
  • ಜೂನ್ 10ರಂದು ಯುವಕನೊಬ್ಬ ಟ್ರ್ಯಾಕ್​ಗೆ ಹಾರಿದ್ದ. ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದ. 
  • ಆಗಸ್ಟ್​ 8ರಂದು ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಮಗು ಜಾರಿ ಟ್ರ್ಯಾಕ್ ಮೇಲೆ ಬಿದ್ದಿತ್ತು.
  • ಇದೀಗ ಇಂದು (ಸೆ.17) ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತ ಬಿಹಾರ ಮೂಲದ ಸಿದ್ಧಾರ್ಥ ಎಂದು ತಿಳಿದು ಬಂದಿದೆ.

mysore-dasara_Entry_Point