Teachers day: ಕರ್ನಾಟಕ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ; ಇಲ್ಲಿದೆ ಸಂಪೂರ್ಣ ಪಟ್ಟಿ
ಕನ್ನಡ ಸುದ್ದಿ  /  ಕರ್ನಾಟಕ  /  Teachers Day: ಕರ್ನಾಟಕ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ; ಇಲ್ಲಿದೆ ಸಂಪೂರ್ಣ ಪಟ್ಟಿ

Teachers day: ಕರ್ನಾಟಕ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ; ಇಲ್ಲಿದೆ ಸಂಪೂರ್ಣ ಪಟ್ಟಿ

ಕರ್ನಾಟಕ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಇದರಲ್ಲಿ ಪ್ರಾಥಮಿಕ ಶಾಲೆಯ 20 ಹಾಗೂ ಪ್ರೌಢಶಾಲೆಯ 11 ಶಿಕ್ಷಕರಿಗೆ ಪ್ರಶಸ್ತಿ ಒಲಿದಿದೆ. ಶಿಕ್ಷಕರ ದಿನಾಚರಣೆ ಸಮಾರಂಭದಂದು ಪ್ರಶಸ್ತಿ ವಿತರಣೆ ಮಾಡಲಾಗುತ್ತದೆ.

ಕರ್ನಾಟಕ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ; ಇಲ್ಲಿದೆ ಸಂಪೂರ್ಣ ಪಟ್ಟಿ
ಕರ್ನಾಟಕ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ; ಇಲ್ಲಿದೆ ಸಂಪೂರ್ಣ ಪಟ್ಟಿ (Pexel)

ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆಯು, ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕರ ಪಟ್ಟಿಯನ್ನು ಪ್ರಕಟಿಸಿದೆ. ಪ್ರಾಥಮಿಕ ಶಾಲೆಯ 20 ಶಿಕ್ಷಕರು, ಪ್ರೌಢಶಾಲೆಯ 11 ಶಿಕ್ಷಕರು (ಒಬ್ಬರು ವಿಶೇಷ ಶಿಕ್ಷಕ), ಪಿಯುಸಿಯ 10 ಉಪನ್ಯಾಸಕರು ಸೇರಿದಂತೆ ಒಟ್ಟು 41 ಶಿಕ್ಷಕರು ಈ ಬಾರಿಯ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ಶಿಕ್ಷಕರಿಗೆ ಸೆಪ್ಟೆಂಬರ್‌ 5ರಂದು ನಡೆಯಲಿರುವ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಗೌರವ ಸಲ್ಲಿಸಲಾಗುತ್ತದೆ. ಪ್ರಶಸ್ತಿಯು 25 ಸಾವಿರ ರೂ.ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಇದೇ ವೇಳೆ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕಿಯರಿಗೆ, ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆಯಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಗೆ ಆಯ್ಕೆಯಾಗಿರುವ ಪ್ರಾಥಮಿಕ ಹಾಗೂ ಪ್ರಾಢಶಾಲಾ ಶಿಕ್ಷಕರ ಪಟ್ಟಿ ಇಲ್ಲಿದೆ.

ಪ್ರಶಸ್ತಿಗೆ ಆಯ್ಕೆಯಾದ ಪ್ರಾಥಮಿಕ ಶಾಲಾ ಶಿಕ್ಷಕರು

  • ಚಿಕ್ಕೋಡಿ ಉಳ್ಳಾಗಡ್ಡಿವಾಡಿ ಶಾಲೆಯ ಪದ್ಮಶ್ರೀ ಸುರೇಶ್‌
  • ಕಲಬುರಗಿಯ ಭೂಸಣಗಿ ಶಾಲೆಯ ಮಲ್ಲಿಕಾರ್ಜುನ ಎಸ್‌ ಸಿರಸಿಗಿ
  • ದಾವಣಗೆರೆ ಜಿಲ್ಲೆಯ ಹರಿಹರದ ಹಿಂಡಸಘಡ್ಡ ಶಾಲೆಯ ಬಿ ಅರುಣ್‌ ಕುಮಾರ್‌
  • ಮೈಸೂರು ಗ್ರಾಮಾಂತರ ಹಿನಕಲ್‌ ಶಾಲೆಯ ಕೆಎಸ್‌ ಮಧುಸೂದನ್‌
  • ಬೆಳಗಾವಿ ಅಂಬೇವಾಡಿ ಶಾಲೆಯ ಅಸ್ಮಾ ಇಸ್ಮಾಯಿಲ ನದಾಫ
  • ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರಿಯ ನೀರ್ಕೆರೆ ಶಾಲೆಯ ಕೆ ಯಮುನಾ
  • ಹಾವೇರಿ ಬ್ಯಾಡಗಿಯ ಜಮೀರ ಅಬ್ದುಲ್‌ ಗಫಾರಸಾಬ ರಿತ್ತಿ
  • ಬೆಂಗಳೂರು ದಕ್ಷಿಣ ಚಂದಾಪುರ ಶಾಲೆಯ ಜಿ ರಂಗನಾಥ
  • ಚಿಕ್ಕಬಳ್ಳಾಪುರ ಇನಮಿಂಚೇನಹಳ್ಳಿಯ ಸುಶೀಲಮ್ಮ
  • ಮಧುಗಿರಿ- ಬಸವನಹಳ್ಳಿ ಶಾಲೆಯ ಎಸ್‌ವಿ ರಮೇಶ್‌
  • ಧಾರವಾಡ ಇಂಡಿಪಂಪ ಶಾಲೆಯ ಹನುಮಪ್ಪ ಎಂ ಕುಂದರಗಿ
  • ಚಿತ್ರದುರ್ಗ ಮ್ಯಾಕ್ಲೂರಹಳ್ಳಿಯ ಆರ್‌ಟಿ ಪರಮೇಶ್ವರಪ್ಪ
  • ಶಿರಸಿ ಮುಂಡಗೋಡ ಶಾಲೆಯ ರಾಮಚಂದ್ರಪ್ಪ ಶೇಷಾಜಪ್ಪ ಕಲಾಲ
  • ಶಿವಮೊಗ್ಗದ ಗುತ್ಯಪ್ಪ ಕಾಲೊನೆ ಶಾಲೆಯ ಎಂ ಭಾಗೀರಥಿ
  • ವಿಜಯನಗರ ಹಡಗಲಿಯ ಎಲ್‌ ಮಧುನಾಯ್ಕ
  • ರಾಮನಗರ ಅರಳಾಳುಸಂದ್ರದ ಪಿ ಸುರೇಶ
  • ಯಾದಗಿರಿ ಸುರಪುರದ ನೀಲಪ್ಪ ಎಸ್‌ ತೆಗ್ಗಿ
  • ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ರಾಘವೇಂದ್ರ ಎಸ್‌ ಮಡಿವಾಳ
  • ದೊಡ್ಡಬಳ್ಳಾಪುರದ ಬೀಡಿಕೆರೆ ಶಾಲೆಯ ಮಂಗಳ ಕುಮಾರಿ
  • ಗದಗದ ಬಸಾಪೂರ ಶಾಲೆಯ ರತ್ನಾಬಯಿ ಗಿರೋಸ ಬದಿ

ಇದನ್ನೂ ಓದಿ | ಶಿಕ್ಷಕರ ದಿನಾಚರಣೆಯಂದು ಬದುಕು ರೂಪಿಸಿದ ಗುರುಗಳಿಗೆ ವಿಶ್ ಮಾಡದಿದ್ರೆ ಹೇಗೆ; ಇಲ್ಲಿವೆ ಶುಭಾಶಯ ಹಾಗೂ ಸಂದೇಶಗಳ ಗುಚ್ಛ

ಪ್ರೌಢಶಾಲಾ ಶಿಕ್ಷಕರು

  • ಚಿಕ್ಕಮಗಳೂರು ಲೋಕನಾಥಪುರದ ಆರ್‌ಡಿ ರವೀಂದ್ರ
  • ಬೆಂಗಳೂರು ಗ್ರಾಮಾಂತರ ನೆಲಮಂಗಲದ ರವಿಕುಮಾರ್‌ ಟಿಕೆ
  • ಉತ್ತರ ಕನ್ನಡ ಜಿಲ್ಲೆ ಕುಮಟಾದ ಮಹಾದೇವ ಬೊಮ್ಮುಗೌಡ
  • ಶಿವಮೊಗ್ಗ ತೀರ್ಥಹಳ್ಳಿಯ ಟಿ ವೀರೇಶ
  • ಧಾರವಾಡ ಹುಬ್ಬಳ್ಳಿಯ ಕಳಕಮಲ್ಲೇಶ ಪಟ್ಟಣಶೆಟ್ಟಿ
  • ಬೆಂಗಳೂರು ಉತ್ತರ ನೆಲಗದರನಹಳ್ಳಿ ಎಸ್‌ ಶ್ಯಾಮಲಾ
  • ಉಡುಪಿ ರೆಂಜಾಳದ ವಿನಾಯಕ ನಾಯ್ಕ
  • ಬೆಂಗಳೂರು ದಕ್ಷಿಣ ಕೋನಪ್ಪನ ಅಗ್ರಹಾರದ ಸಿ ಪದ್ಮಾವತಿ
  • ವಿಜಯಪುರ ಇಂಡಿಯ ಶಶಿಕಲಾ ಲಕ್ಷ್ಮಣ ಬಡಿಗೇರ
  • ಚಿಕ್ಕಬಳ್ಳಾಪುರ ಹಂಪಸಂದ್ರದ ಹರೀಶ್‌ ರಾಜ ಅರಸ್‌
  • ದಕ್ಷಿಣ ಕನ್ನಡ ಬೆಳ್ತಂಗಡಿಯ ಕೆ ವಿಶ್ವನಾಥಗೌಡ

ಶಿಕ್ಷಕರ ದಿನದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ | Teachers Day Short Speech: 1ರಿಂದ 5ನೇ ತರಗತಿ ಮಕ್ಕಳಿಗಾಗಿ ಇಲ್ಲಿದೆ ನೋಡಿ ಸುಲಭ ಹಾಗೂ ಸರಳ ಭಾಷಣ, ನಾಳೆ ವೇದಿಕೆ ಮೇಲೆ ಇದೇ ರೀತಿ ಮಾತನಾಡಿ

Whats_app_banner