ಬೆಂಗಳೂರು ಅಪರಾಧ ಸುದ್ದಿ; 2.3 ಕೋಟಿ ರೂ ಮೌಲ್ಯದ ನಿಷೇಧಿತ ಮಾದಕ ವಸ್ತುಗಳ ವಶ, ನೇತ್ರ ತಜ್ಞ ಸೇರಿ 4 ಆರೋಪಿಗಳ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಅಪರಾಧ ಸುದ್ದಿ; 2.3 ಕೋಟಿ ರೂ ಮೌಲ್ಯದ ನಿಷೇಧಿತ ಮಾದಕ ವಸ್ತುಗಳ ವಶ, ನೇತ್ರ ತಜ್ಞ ಸೇರಿ 4 ಆರೋಪಿಗಳ ಬಂಧನ

ಬೆಂಗಳೂರು ಅಪರಾಧ ಸುದ್ದಿ; 2.3 ಕೋಟಿ ರೂ ಮೌಲ್ಯದ ನಿಷೇಧಿತ ಮಾದಕ ವಸ್ತುಗಳ ವಶ, ನೇತ್ರ ತಜ್ಞ ಸೇರಿ 4 ಆರೋಪಿಗಳ ಬಂಧನ

ಬೆಂಗಳೂರು ಅಪರಾಧ ಸುದ್ದಿ: ನೆದರ್‌ಲ್ಯಾಂಡ್ಸ್‌ನಿಂದ ಅಂತಾರಾಷ್ಟ್ರೀಯ ಕೊರಿಯರ್ ಕಂಪನಿ ಮೂಲಕ ಕಳ್ಳ ಸಾಗಣೆ ಮಾಡಿದ್ದ ನೇತ್ರ ತಜ್ಞ ಸೇರಿ 4 ಆರೋಪಿಗಳ ಬಂಧನವಾಗಿದೆ. ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 2.3 ಕೋಟಿ ರೂ ಮೌಲ್ಯದ ನಿಷೇಧಿತ ಮಾದಕ ವಸ್ತುಗಳ ವಶಪಡಿಸಿಕೊಂಡಿದ್ದಾರೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು ಅಪರಾಧ ಸುದ್ದಿ; 2.3 ಕೋಟಿ ರೂ ಮೌಲ್ಯದ ನಿಷೇಧಿತ ಮಾದಕ ವಸ್ತುಗಳ ವಶ ಪಡಿಸಿಕೊಂಡು ನೇತ್ರ ತಜ್ಞ ಸೇರಿ 4 ಆರೋಪಿಗಳ ಬಂಧನ ಮಾಡಲಾಗಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ. (ಸಾಂಕೇತಿಕ ಚಿತ್ರ)
ಬೆಂಗಳೂರು ಅಪರಾಧ ಸುದ್ದಿ; 2.3 ಕೋಟಿ ರೂ ಮೌಲ್ಯದ ನಿಷೇಧಿತ ಮಾದಕ ವಸ್ತುಗಳ ವಶ ಪಡಿಸಿಕೊಂಡು ನೇತ್ರ ತಜ್ಞ ಸೇರಿ 4 ಆರೋಪಿಗಳ ಬಂಧನ ಮಾಡಲಾಗಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ. (ಸಾಂಕೇತಿಕ ಚಿತ್ರ) (HT Kannada)

ಬೆಂಗಳೂರು: ನೆದರ್‌ಲ್ಯಾಂಡ್ಸ್‌ನಿಂದ ಅಂತಾರಾಷ್ಟ್ರೀಯ ಕೊರಿಯರ್ ಕಂಪನಿ ಮೂಲಕ ಕಳ್ಳ ಸಾಗಣೆ ಮಾಡಿದ್ದ 3 ಲಕ್ಷ ರೂಪಾಯಿ ಮೌಲ್ಯದ 42 ಗ್ರಾಂ ಜಲ ಗಾಂಜಾವನ್ನು ಬೆಂಗಳೂರಿನ ನೇತ್ರ ತಜ್ಞರೊಬ್ಬರ ನಿವಾಸದಿಂದ ಕೇಂದ್ರ ಅಪರಾಧ ವಿಭಾಗದ ಮಾದಕ ದ್ರವ್ಯ ನಿಗ್ರಹ ದಳವು ವಶಪಡಿಸಿಕೊಂಡಿದೆ.

ಕೊರಿಯರ್ ಸೇವಾ ಕಂಪನಿ ನೀಡಿದ ಮಾಹಿತಿ ಮೇರೆಗೆ ಸಿಸಿಬಿ ದಳವು ನೇತ್ರ ತಜ್ಞ ನಿಖಿಲ್ ಗೋಪಾಲಕೃಷ್ಣನ್ ಅವರ ಯಶವಂತಪುರದ ಅಪಾರ್ಟ್ ಮೆಂಟ್ ಮೇಲೆ ದಾಳಿ ನಡೆಸಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ. ಈ ವೈದ್ಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಮಾದಕ ವಸ್ತು ವ್ಯಸನಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಟೆಲಿಗ್ರಾಂ ಆಪ್ ಮೂಲಕ ಮಾದಕ ವಸ್ತುಗಳ ಸಾಗಾ ಸಂಪರ್ಕಿಸಿ ಅವರಿಗೆ ಬಿಟ್ ಕಾಯಿನ್ ಮೂಲಕ ಹಣ ಪಾವತಿ ಮಾಡುತ್ತಿದ್ದರು. ಪ್ರತಿ ಬಾರಿಯೂ ಇದೇ ರೀತಿ ಮಾದಕ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಕೊರಿಯರ್ ಕಂಪನಿ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಬಲೆಗೆ ಬಿದ್ದಿದ್ದಾರೆ.

ನೈಜೀರಿಯಾ ಪ್ರಜೆ ಬಳಿ ಇತ್ತು 1.8 ಕೋಟಿ ರೂ ಮಾದಕವಸ್ತು

ಮತ್ತೊಂದು ಪ್ರಕರಣದಲ್ಲಿ ನೈಜೀರಿಯಾ ದೇಶದ ಪ್ರಜೆ ಕಾಲು ಚುಕ್ವಾ ಎಂಬಾತನನ್ನು ಬಂಧಿಸಿ ಸುಮಾರು 1.8 ಕೋಟಿ ರೂಪಾಯಿ ಮೌಲ್ಯದ 730 ಗ್ರಾಂ ಎಂ.ಡಿ.ಎಂಎ ಕ್ರಿಸ್ಟೆಲ್ ಮತ್ತು 1273 ಎಕಸ್ಟಸಿ ಮಾತ್ರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈತ 2023 ರಲ್ಲಿ ವ್ಯವಹಾರಿಕ ವೀಸಾ ಆಧಾರದ ಮೇಲೆ ಭಾರತಕ್ಕೆ ಆಗಮಿಸಿದ್ದು, ಸೋಲದೇವನಹಳ್ಳಿ ಯಲ್ಲಿ ವಾಸವಾಗಿದ್ದ. ಈತನೂ ಮಾದಕ ವಸ್ತುಗಳನ್ನು ಕಳ್ಳ ಸಾಗಣೆ ಮೂಲಕ ತರಿಸಿಕೊಂಡು ತನ್ನದೇ ಆದ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಲದೇವನಹಳ್ಳಿಯಲ್ಲೇ ಮತ್ತೊಂದು ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಿ ಇವರಿಂದ 51 ಲಕ್ಷ ರೂಪಾಯಿ ಬೆಲೆ ಬಾಳುವ 50p ಗ್ರಾಂ ಎಂ.ಡಿ.ಎಂಎ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಘಾನಾ ದೇಶದ 32 ವರ್ಷದ ಎಮ್ಯಾನ್ಯುಯಲ್ ಮತ್ತು ಓಕಾಯೋ ದೇಶದ ಚೈನಾಸ ಸಿಪ್ರಿಲಾನ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರವಾಸಿ ವೀಸಾದ ಅಡಿಯಲ್ಲಿ ಭಾರತಕ್ಕೆ ಆಗಮಿಸಿದ್ದ ಇವರು ಮುಂಬೈ ನಿಂದ ಮಾದಕ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದರು.

ಈ ಹಿಂದೆಯೂ ಮಾದಕ ವಸ್ತುಗಳ ಮಾರಾಟ ಪ್ರಕರಣದಲ್ಲಿ ಈ ಹಿಂದೆಯೂ ಇವರನ್ನು ಬಂಧಿಸಲಾಗಿತ್ತು. ಬಿಡುಗಡೆ ನಂತರ ಮತ್ತೆ ಇದೇ ದಂಧೆಯನ್ನು ಆರಂಭಿಸಿದ್ದರು ಎಂದು ತಿಳಿದು ಬಂದಿದೆ. ಈ ಎಲ್ಲ ಪ್ರಕರಣಗಳಲ್ಲೂ ಒಂದು ವಾರದಲ್ಲಿ 2.3 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

ತರಕಾರಿ ಮೂಟೆಗಳಲ್ಲಿ ನಕಲಿ ತಂಬಾಕು ಉತ್ಪನ್ನಗಳನ್ನು ಮುಚ್ಚಿಟ್ಟು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಜ್ಞಾನಭಾರತಿಯ 35 ವರ್ಷದ ತಿಪ್ಪೇಸ್ವಾಮಿ ಹಾಗೂ 40 ವರ್ಷದ ಫಾರೂಕ್ ಬಂಧಿತ ಆರೋಪಿಗಳು. ಇವರಿಂದ ರೂ. 10 ಲಕ್ಷ ಮೌಲ್ಯದ ತಂಬಾಕು ಉತ್ಪನ್ನಗಳ ಪೊಟ್ಟಣಗಳು ಹಾಗೂ ಲಾರಿಯನ್ನು ಜಪ್ತಿ ಮಾಡಲಾಗಿದೆ. ಆದರೆ, ಈ ತಂಬಾಕು ಉತ್ಪನ್ನ ನಕಲಿ ಎಎನ್ನುವುದು ಪರಿಶೀಲನೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತರಕಾರಿ ಮೂಟೆಗಳಲ್ಲಿ ತಂಬಾಕು ಉತ್ಪನ್ನ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ರಾತ್ರಿವೇಳೆ ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ಹೊರಟಿದ್ದ ಲಾರಿಯನ್ನು ತಡೆದು ಪರಿಶೀಲಿಸಲಾಗಿದೆ. ಆಗ ಲಾರಿಯಲ್ಲಿದ್ದ ತರಕಾರಿ ಮೂಟೆಗಳನ್ನು ಬಿಚ್ಚಿಸಿ ನೋಡಿದಾಗ, ತರಕಾರಿಗಳ ನಡುವೆ ತಂಬಾಕು ಉತ್ಪನ್ನದ ಪೊಟ್ಟಣಗಳಿದ್ದವು. ಇವರು ತರಕಾರಿ ಮೂಟೆಗಳಲ್ಲಿ ಪೊಟ್ಟಣಗಳನ್ನು ಸಾಗಿಸಿ ಅಂಗಡಿಗಳಿಗೆ ತಲುಪಿಸುತ್ತಿದ್ದರು. ಅಂಗಡಿಯವರು ಇದೇ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

(ವರದಿ- ಎಚ್. ಮಾರುತಿ, ಬೆಂಗಳೂರು)

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner