ಮಾರತ್ತಹಳ್ಳಿಯಲ್ಲಿ ಭಾನುವಾರ ಸಂಭವಿಸಿದ ಭೀಕರ ರಸ್ತೆ ದುರಂತದಲ್ಲಿ ಬೆಂಗಳೂರು ಟೆಕ್ಕಿ ಮಾತ್ರ ಪಾರು, ಕಾರಣ ಹೀಗಿದೆ ನೋಡಿ-bengaluru news techie escapes accident that kills injures others thanks to a seat belt marathahalli road accident uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಮಾರತ್ತಹಳ್ಳಿಯಲ್ಲಿ ಭಾನುವಾರ ಸಂಭವಿಸಿದ ಭೀಕರ ರಸ್ತೆ ದುರಂತದಲ್ಲಿ ಬೆಂಗಳೂರು ಟೆಕ್ಕಿ ಮಾತ್ರ ಪಾರು, ಕಾರಣ ಹೀಗಿದೆ ನೋಡಿ

ಮಾರತ್ತಹಳ್ಳಿಯಲ್ಲಿ ಭಾನುವಾರ ಸಂಭವಿಸಿದ ಭೀಕರ ರಸ್ತೆ ದುರಂತದಲ್ಲಿ ಬೆಂಗಳೂರು ಟೆಕ್ಕಿ ಮಾತ್ರ ಪಾರು, ಕಾರಣ ಹೀಗಿದೆ ನೋಡಿ

ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ಭಾನುವಾರ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಕಾರಿನಲ್ಲಿದ್ದ ಆರು ಜನರೂ 23- 25 ವರ್ಷದೊಳಗಿನ ಯುವಕರು. ಇಬ್ಬರು ಮೃತಪಟ್ಟಿದ್ದು ಮೂವರ ಸ್ಥಿತಿ ಗಂಭೀರ. ಈ ಭೀಕರ ರಸ್ತೆ ದುರಂತದಲ್ಲಿ ಬೆಂಗಳೂರು ಟೆಕ್ಕಿ ಮಾತ್ರ ಪಾರು, ಕಾರಣ ಹೀಗಿದೆ ನೋಡಿ ಎಂದು ಡಾಕ್ಟರ್ ಮಿರ್ಜಾ ಅಲಮ್ದಾರ್ ಅಲಿ ವಿವರಿಸಿದ್ದಾರೆ.

ಮಧುರೈ ತಿರುಮಂಗಲಂ ಸಮೀಪ ಚತುಷ್ಪಥ ಹೆದ್ದಾರಿಯಲ್ಲಿ ಬುಧವಾರ ಭೀಕರ ಅಪಘಾತಕ್ಕೆ ಒಳಗಾದ ವಾಹನ. (ಸಾಂದರ್ಭಿಕ ಚಿತ್ರ)
ಮಧುರೈ ತಿರುಮಂಗಲಂ ಸಮೀಪ ಚತುಷ್ಪಥ ಹೆದ್ದಾರಿಯಲ್ಲಿ ಬುಧವಾರ ಭೀಕರ ಅಪಘಾತಕ್ಕೆ ಒಳಗಾದ ವಾಹನ. (ಸಾಂದರ್ಭಿಕ ಚಿತ್ರ) (PTI)

ಬೆಂಗಳೂರು: ಮಧುರೈ ತಿರುಮಂಗಲಂ ಸಮೀಪ ಚತುಷ್ಪಥ ಹೆದ್ದಾರಿಯಲ್ಲಿ ಬುಧವಾರ ಸಂಭವಿಸಿದ ಭೀಕರ ರಸ್ತೆ ದುರಂತದ ಸಿಸಿಟಿವಿ ವಿಡಿಯೋ ಮೈ ನಡುಕ ಹುಟ್ಟಿಸಿರುವಂತೆಯೇ, ವೈದ್ಯರೊಬ್ಬರು ಕಾರು ಪ್ರಯಾಣದ ವೇಳೆ ಸೀಟ್ ಬೆಲ್ಟ್ ಧರಿಸುವುದರ ಮಹತ್ವವನ್ನು ವಿವರಿಸಿದ್ದಾರೆ. ಇದಕ್ಕಾಗಿ ಅವರು ಅಪಘಾತದ ವಿವರಣೆಯನ್ನೂ ಒದಗಿಸಿದ್ದಾರೆ.

ಮಧುರೈ ತಿರುಮಂಗಲಂ ದುರಂತದಲ್ಲಿ ಐವರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಕೆಲವರಷ್ಟೇ ಅಲ್ಲ, ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರರೂ ಮೃತಪಟ್ಟಿದ್ದಾರೆ. ಹೀಗಾಗಿ ಜಾಗರೂಕತೆಯ ಚಾಲನೆಯ ಮಹತ್ವದ ಬಗ್ಗೆ ಪದೇಪದೆ ಎಚ್ಚರಿಸಬೇಕಾದ್ದು ಅವಶ್ಯ ಎಂಬುದು ಸಾಮಾಜಿಕವಾಗಿ ಚರ್ಚೆಗೆ ಬರುವ ಸಹಜ ವಿಚಾರ. ಇನ್ನು ಡಾಕ್ಟರ್‌ ಒಬ್ಬರು ಮಾಡಿರುವ ಟ್ವೀಟ್ ವಿಚಾರಕ್ಕೆ ಬರೋಣ.

ಇತ್ತೀಚೆಗೆ ಬೆಂಗಳೂರಿನಲ್ಲಿ ಸಂಭವಿಸಿದ ಕಾರು ಅಪಘಾತದ ಸಂತ್ರಸ್ತರಿಗೆ ಚಿಕಿತ್ಸೆ ನೀಡಿದ್ದೇನೆ ಎಂದು ಹೇಳಿಕೊಂಡ ಡಾ.ಮಿರ್ಜಾ ಅಲಮ್ದಾರ್ ಅಲಿ, ಘಟನೆಯಲ್ಲಿ ಒಬ್ಬ ವ್ಯಕ್ತಿ ಮಾತ್ರ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಇದಕ್ಕೆ ಕಾರಣ ಅವರು ಧರಿಸಿದ್ದ ಸೀಟ್ ಬೆಲ್ಟ್. ಬದುಕುಳಿದ ವ್ಯಕ್ತಿ ವೃತ್ತಿಯಲ್ಲಿ ಐಟಿ ಎಂಜಿನಿಯರ್.

ಡಾ.ಮಿರ್ಜಾ ಅಲಮ್ದಾರ್‌ ಅಲಿ ಟ್ವೀಟ್‌ನಲ್ಲಿ ಏನಿದೆ

ಡಾಕ್ಟರ್‌ ಮಿರ್ಜಾ ಅಲಮ್ದಾರ್‌ ಅಲಿ ಅವರು ಸೀಟ್‌ ಬೆಲ್ಟ್ ಧರಿಸುವುದರ ಮಹತ್ವ ವಿವರಿಸುವ ಟ್ವೀಟ್ ಶುರುಮಾಡಿರುವುದು ಹೀಗೆ -

“ವೃತ್ತಿ ಸಂಬಂಧಿಸಿ ಹೇಳುವುದಾದರೆ ಭಾನುವಾರ ತ್ರಾಸದಾಯಕ ದಿನವಾಗಿತ್ತು. ಒಡಿಶಾ ಮೂಲದ ಐವರು ಐಟಿ ಎಂಜಿನಿಯರ್‌ಗಳಿದ್ದ ಕಾರು ಬೆಂಗಳೂರು ಸಮೀಪ ಅಪಘಾತಕ್ಕೀಡಾಗಿತ್ತು. ಎಲ್ಲರೂ ಗಂಭೀರ ಗಾಯಗೊಂಡಿದ್ದರು. ಭಾನುವಾರದ ರಾತ್ರಿ ಹೇಗಿತ್ತು ಎಂದರೆ ಸಮಯದ ಜೊತೆಗೆ ಸ್ಪರ್ಧೆಗೆ ಬಿದ್ದವರಂತೆ ಕೆಲಸ ಮಾಡಬೇಕಾದ ತುರ್ತು ಇತ್ತು. ಐವರನ್ನು ಬದುಕಿ ಉಳಿಸಬೇಕಾಗಿತ್ತು. ನಿರಂತರ ಪ್ರಯತ್ನಗಳ ಹೊರತಾಗಿಯೂ ಇಬ್ಬರು ಉಸಿರು ಚೆಲ್ಲಿದರು. ಇನ್ನು ಮೂವರು ಐಸಿಯುನಲ್ಲಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದೆ. ಇನ್ನೊಬ್ಬರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಚಿಕಿತ್ಸೆಗೆ ಸ್ಪಂದಿಸಿದ್ದಾರೆ. ಇವೆಲ್ಲದರ ನಡುವೆ ಆರನೇ ವ್ಯಕ್ತಿ ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವ್ ಆಗಿದ್ದರು. ಅವರು ಸೀಟ್ ಬೆಲ್ಟ್ ಧರಿಸಿದ್ದೇ ಇದಕ್ಕೆ ಕಾರಣ”.

“ಮೃತ ಯುವಕರ ಪಾಲಕರು ಬೆಂಗಳೂರಿಗೆ ಆಗಮಿಸಿದ್ದಾರೆ. ಮಕ್ಕಳ ಮೃತದೇಹಗಳನ್ನು ತಮ್ಮೂರಿಗೆ ಕೊಂಡೊಯ್ಯುವ ಭಾವುಕ, ಹೃದಯ ಭಾರವಾಗುವ ಸನ್ನಿವೇಶ. ಇದನ್ನು ಅರ್ಥಮಾಡಿಕೊಳ್ಳಲು ಆ ಯುವಕರು ಇಲ್ಲವಲ್ಲ. ಇಷ್ಟೆಲ್ಲ ಪ್ರಸ್ತಾಪಿಸಿರುವುದಕ್ಕೆ ಇಷ್ಟೇ ಕಾರಣ - ವಾಹನವನ್ನು ಸುರಕ್ಷಿತವಾಗಿ ಚಲಾಯಿಸಿ. ಮದ್ಯಪಾನ ಮಾಡಿ ವಾಹನ ಓಡಿಸಬೇಡಿ. ವಾಹನ ಚಲಾಯಿಸುವಾಗ ಸೀಟ್ ಬೆಲ್ಟ್‌ ಧರಿಸವುದನ್ನು ಮರೆಯಬೇಡಿ. ಅಪಘಾತವಾದಾಗ ಸಂಭವಿಸುವ ಸಾವು ಕೇವಲ ಸಂಖ್ಯೆ ಅಲ್ಲ!” ಎಂದು ಅವರು ಎಚ್ಚರಿಸಿದ್ದಾರೆ.

ಡಾ.ಮಿರ್ಜಾ ಅಲಮ್ದಾರ್‌ ಅಲಿ ಸಂಪೂರ್ಣ ಟ್ವೀಟ್ ಇಲ್ಲಿದೆ ನೋಡಿ

ಡಾ.ಮಿರ್ಜಾ ಅಲಮ್ದಾರ್‌ ಅಲಿ ಅವರು ಏಪ್ರಿಲ್ 9ರಂದು ರಾತ್ರಿ 10 ಗಂಟೆಗೆ ಈ ಪೋಸ್ಟ್ ಮಾಡಿದ್ದು, 1.6 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. 200ಕ್ಕೂ ಹೆಚ್ಚು ರೀಟ್ವೀಟ್ ಆಗಿದೆ. 600ಕ್ಕೂ ಹೆಚ್ಚು ಮೆಚ್ಚುಗೆ ಪಡೆದುಕೊಂಡಿದ್ದು, 60ಕ್ಕೂ ಹೆಚ್ಚು ಕಾಮೆಂಟ್‌ಗಳಿವೆ.

ಈ ವೈದ್ಯರ ಪೋಸ್ಟ್ ಬಗ್ಗೆ ಎಕ್ಸ್ ಬಳಕೆದಾರರ ಪ್ರತಿಕ್ರಿಯೆ

"ಜಾಗೃತಿ ಮಾಹಿತಿ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ಡಾಕ್ಟರ್‌ ಈ ಘಟನೆಯು ಸೀಟ್ ಬೆಲ್ಟ್ ಎಷ್ಟು ಮುಖ್ಯ ಮತ್ತು ಜೀವ ಉಳಿಸುತ್ತದೆ ಎಂಬುದನ್ನು ತೋರಿಸುತ್ತದೆ. ನಾನು ಅದನ್ನು ಯಾವಾಗಲೂ ಬಳಸುತ್ತೇನೆ; ಕೆಲವೊಮ್ಮೆ, ನಾನು ಸಹ ಸೋಮಾರಿ ಅಥವಾ ಅಜಾಗರೂಕನಾಗಿದ್ದೇನೆ. ಅಗಲಿದ ಆತ್ಮಗಳಿಗೆ ಶಾಂತಿ ಸಿಗಲಿ. ಜೀವನ್ಮರಣ ಹೋರಾಟ ನಡೆಸುತ್ತಿರುವವರಿಗೆ ಮತ್ತು ಅವರ ಕುಟುಂಬಗಳಿಗೆ ದೇವರು ಶಕ್ತಿ ನೀಡಲಿ" ಎಂದು ಎಕ್ಸ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

, "ಪ್ರಕರಣದ ಬಗ್ಗೆ ನೀವು ಹೆಚ್ಚಿನ ವಿವರಗಳನ್ನು ನೀಡಬಹುದೇ, ಅಂದರೆ ಅದು ನಿಖರವಾಗಿ ಎಲ್ಲಿ ಮತ್ತು ಯಾವಾಗ ಸಂಭವಿಸಿತು? ಎಂದು ಇನ್ನೊಬ್ಬ ಬಳಕೆದಾರರು ಕೇಳಿದರು. ಇದಕ್ಕೆ, "ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ವರ್ತೂರು-ಮಾರತ್ತಹಳ್ಳಿ ರಸ್ತೆಯ ಒಳಭಾಗದ ಬಳಗೆರೆ ಜಂಕ್ಷನ್ ನಲ್ಲಿ!" ಎಂದು ವೈದ್ಯರು ಉತ್ತರಿಸಿದರು.

ಮೂರನೆಯವರು, "ನನ್ನ 3 ವರ್ಷದ ಮಗುವನ್ನು ಪ್ಲೇ ಸ್ಕೂಲ್‌ಗೆ ಬಿಡುವಾಗ ಸೀಟ್ ಬೆಲ್ಟ್ ಧರಿಸುವಂತೆ ಮಾಡಿದ್ದೇನೆ. ವಯಸ್ಕರು ಅದರ ಮಹತ್ವವನ್ನು ಏಕೆ ಅರ್ಥಮಾಡಿಕೊಳ್ಳುವುದಿಲ್ಲ? ಎಂದು ಹೇಳಿಕೊಂಡಿದ್ದಾರೆ.

“ ದೊಡ್ಡ ದುರಂತ! ಜನರು ಸೀಟ್ ಬೆಲ್ಟ್ ಧರಿಸದಿದ್ದರೆ ವಾಹನ ಸ್ಟಾರ್ಟ್ ಆಗಬಾರದು! ಅಲಾರಂ ಮೊಳಗುತ್ತಲೇ ಇರುತ್ತದೆ. ಆದರೆ ಅದು ಆ ವಾಹನದಲ್ಲಿ ಕೆಲಸ ಮಾಡದಿರಬಹುದು!” ಎಂದು ಮತ್ತೊಬ್ಬರು ಹೇಳಿದ್ದಾರೆ.

mysore-dasara_Entry_Point