Bengaluru Potholes: ತಾಯಿ ಮಹಾಲಕ್ಷ್ಮೀ, ಇನ್ನಾದ್ರೂ ಈ ದಪ್ಪಚರ್ಮದವರಿಗೆ ಬುದ್ಧಿಕೊಡು; ವರಲಕ್ಷ್ಮೀ ಹಬ್ಬದ ದಿನ ರಸ್ತೆಗುಂಡಿಯಲ್ಲಿ ಪೂಜೆ-bengaluru potholes menace residents perform pothole puja inprotest against bad roads on varamahalakshmi habba dmg ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Potholes: ತಾಯಿ ಮಹಾಲಕ್ಷ್ಮೀ, ಇನ್ನಾದ್ರೂ ಈ ದಪ್ಪಚರ್ಮದವರಿಗೆ ಬುದ್ಧಿಕೊಡು; ವರಲಕ್ಷ್ಮೀ ಹಬ್ಬದ ದಿನ ರಸ್ತೆಗುಂಡಿಯಲ್ಲಿ ಪೂಜೆ

Bengaluru Potholes: ತಾಯಿ ಮಹಾಲಕ್ಷ್ಮೀ, ಇನ್ನಾದ್ರೂ ಈ ದಪ್ಪಚರ್ಮದವರಿಗೆ ಬುದ್ಧಿಕೊಡು; ವರಲಕ್ಷ್ಮೀ ಹಬ್ಬದ ದಿನ ರಸ್ತೆಗುಂಡಿಯಲ್ಲಿ ಪೂಜೆ

ರಸ್ತೆಗುಂಡಿ ಸಮಸ್ಯೆಯಿಂದ ಹೈರಾಣಾದ ಬೆಂಗಳೂರಿಗರು ಈ ಬಾರಿ ವಿನೂತನ ರೀತಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಯನಗರ ಪ್ರದೇಶದ ನಿವಾಸಿಗಳು ವರಮಹಾಲಕ್ಷ್ಮಿ ಹಬ್ಬದ ದಿನ, ಸಮಸ್ಯೆ ಉಂಟು ಮಾಡುತ್ತಿರುವ ಗುಂಡಿಯಲ್ಲಿ ಪೂಜೆ ನಡೆಸಿದರು. ಈ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಗುಂಡಿಗಳಿಂದ ರೋಸಿ ಹೋಗಿರುವ ಬೆಂಗಳೂರು ಜನರು ರಸ್ತೆಗಳಲ್ಲಿರುವ ಗುಂಡಿಗಳನ್ನೇ ವರಮಹಾಲಕ್ಷ್ಮೀ ಹಬ್ಬದ ದಿನ ಪೂಜಿಸಿದರು.
ಗುಂಡಿಗಳಿಂದ ರೋಸಿ ಹೋಗಿರುವ ಬೆಂಗಳೂರು ಜನರು ರಸ್ತೆಗಳಲ್ಲಿರುವ ಗುಂಡಿಗಳನ್ನೇ ವರಮಹಾಲಕ್ಷ್ಮೀ ಹಬ್ಬದ ದಿನ ಪೂಜಿಸಿದರು. (X)

ಬೆಂಗಳೂರು: ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳ ಸಂಖ್ಯಾಸ್ಫೋಟದ ಬಗ್ಗೆ ಎಲ್ಲರಿಗೂ ಗೊತ್ತಿದೆ. ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವವರು ಬೆನ್ನುನೋವು ಬಂದಾಗಲೆಲ್ಲ ರಸ್ತೆಗುಂಡಿಗಳನ್ನು ನೆನಪಿಸಿಕೊಂಡು ಅಧಿಕಾರಿಗಳು, ರಾಜಕಾರಿಣಿಗಳಿಗೆ ಹಿಡಿಶಾಪ ಹಾಕುತ್ತಾರೆ. ಇದು ಬೆಂಗಳೂರಿಗರನ್ನು ವರ್ಷವಿಡೀ ಕಾಡುವ ಸಮಸ್ಯೆಯೇ ಆದರೂ, ಮಳೆಗಾಲದಲ್ಲಿ ಸಮಸ್ಯೆಯ ತೀವ್ರತೆ ಹೆಚ್ಚು. ಮಳೆನೀರಿಗೆ ರಸ್ತೆಯ ಮೇಲಿನ ಮಣ್ಣು ಕೊಚ್ಚಿಹೋದಾಗ ಗುಂಡಿಗಳು ಎದ್ದುಕಾಣುತ್ತವೆ. ಈ ಗುಂಡಿಗಳು ಅಪಘಾತಗಳಿಗೂ ಕಾರಣವಾಗುತ್ತವೆ. ಚಾಲಕರು ಮತ್ತು ಪಾದಚಾರಿಗಳಿಗೆ ಸುರಕ್ಷೆಯ ಅಪಾಯಗಳನ್ನೂ ಹೆಚ್ಚಿಸುತ್ತವೆ. ಬೆಂಗಳೂರನ್ನು ರಸ್ತೆಗುಂಡಿ ರಹಿತ ನಗರವಾಗಿಸುವುದಾಗಿ ಅಧಿಕಾರಿಗಳು ಹಲವು ಬಾರಿ ಭರವಸೆ ನೀಡಿದ್ದಾರೆ. ಆದರೆ ರಸ್ತೆಯ ಮೇಲೆ ಗುಂಡಿಗಳ ಉಪಟಳ ಮಾತ್ರ ಕಡಿಮೆಯಾಗಿಲ್ಲ.

ರಸ್ತೆಗುಂಡಿ ಸಮಸ್ಯೆಯಿಂದ ಹೈರಾಣಾದ ಬೆಂಗಳೂರಿಗರು ಈ ಬಾರಿ ವಿನೂತನ ರೀತಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಯನಗರ ಪ್ರದೇಶದ ನಿವಾಸಿಗಳು ವರಮಹಾಲಕ್ಷ್ಮಿ ಹಬ್ಬದ ದಿನ, ಸಮಸ್ಯೆ ಉಂಟು ಮಾಡುತ್ತಿರುವ ಗುಂಡಿಯಲ್ಲಿ ಪೂಜೆ ನಡೆಸಿದರು. ಈ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಈ ವಿಡಿಯೊದಲ್ಲಿ ನೀರಿನಿಂದ ತುಂಬಿದ ದೊಡ್ಡ ಗುಂಡಿಯ ಅಂಚಿನಲ್ಲಿ ಪುರುಷ ಮತ್ತು ಮಹಿಳೆ ಪೂಜೆ ಮಾಡುತ್ತಿದ್ದಾರೆ. ಗುಂಡಿಗೆ ಹೂವಿನ ದಳಗಳು, ಅರಿಶಿನ ಮತ್ತು ಕುಂಕುಮ ಅರ್ಪಿಸಿದ್ದಾರೆ. 'ಗುಂಡಿ ಪೂಜೆ' ಎಂದು ಕರೆಯಲ್ಪಡುವ ಈ ರೀತಿಯ ಪ್ರತಿಭಟನೆಯು ಮಳೆಯ ನಡುವೆ ನಗರದ ಕುಸಿಯುತ್ತಿರುವ ಮೂಲಸೌಕರ್ಯಗಳತ್ತ ಅಧಿಕಾರಿಗಳ ಗಮನವನ್ನು ಸೆಳೆಯುವ ಉದ್ದೇಶ ಹೊಂದಿದೆ.

ಗುಂಡಿಗಳಿಂದ ಆಗುತ್ತಿರುವ ಸಮಸ್ಯೆ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ನಿವಾಸಿ ಜ್ಯೋತಿ ವಿ., ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕಾರ್ಯನಿರ್ವಹಣೆ ಕುರಿತು ಹತಾಶೆ ವ್ಯಕ್ತಪಡಿಸಿದರು. ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಹಂಚಿಕೊಂಡು ನಮ್ಮ ಸಮಸ್ಯೆಯನ್ನು ಎಲ್ಲರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದರೂ ಏನೂ ಪ್ರಯೋಜನವಾಗಿಲ್ಲ.

ತಮ್ಮ ಅಕ್ಕಪಕ್ಕದ ಮನೆಯವರೊಂದಿಗೆ ಶುಕ್ರವಾರ ಮುಂಜಾನೆ ಗುಂಡಿಯಲ್ಲಿ ಪೂಜೆ ಸಲ್ಲಿಸಿದರು. ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ಸಿ.ಕೆ.ರಾಮಮೂರ್ತಿ ಅವರಂತಹ ಪ್ರಮುಖ ವ್ಯಕ್ತಿಗಳು ಈ ರಸ್ತೆಯನ್ನು ಬಳಸುತ್ತಿದ್ದರೂ, ಈ ನಿರ್ದಿಷ್ಟ ಗುಂಡಿಯ ಸಮಸ್ಯೆ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಮುಂದುವರೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಚುನಾವಣೆ ಬಹುಕಾಲದಿಂದ ಬಾಕಿಯಿದೆ. ಬಿಬಿಎಂಪಿ ಚುನಾವಣೆ ನಡೆದರೆ ಇಂಥ ಎಷ್ಟೋ ಸಮಸ್ಯೆಗಳು ಪರಿಹಾರವಾಗುತ್ತವೆ. ನಮ್ಮ ಸಮಸ್ಯೆಗಳನ್ನು ಪಾಲಿಕೆ ಸದಸ್ಯರು ಮುತುವರ್ಜಿಯಿಂದ ಸಂಬಂಧಿಸಿದವರ ಗಮನಕ್ಕೆ ತರುತ್ತಾರೆ ಎಂದು ಅವರು ನುಡಿದರು.