Bengaluru Power Cut: ಬೆಂಗಳೂರಿನ ಬಹಳಷ್ಟು ಕಡೆ ಶನಿವಾರ ವಿದ್ಯುತ್ ವ್ಯತ್ಯಯ; ಯಾವ ಏರಿಯಾದಲ್ಲಿ ಎಷ್ಟು ಗಂಟೆಗೆ ಪವರ್‌ ಕಟ್‌, ಇಲ್ಲಿದೆ ವಿವರ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Power Cut: ಬೆಂಗಳೂರಿನ ಬಹಳಷ್ಟು ಕಡೆ ಶನಿವಾರ ವಿದ್ಯುತ್ ವ್ಯತ್ಯಯ; ಯಾವ ಏರಿಯಾದಲ್ಲಿ ಎಷ್ಟು ಗಂಟೆಗೆ ಪವರ್‌ ಕಟ್‌, ಇಲ್ಲಿದೆ ವಿವರ

Bengaluru Power Cut: ಬೆಂಗಳೂರಿನ ಬಹಳಷ್ಟು ಕಡೆ ಶನಿವಾರ ವಿದ್ಯುತ್ ವ್ಯತ್ಯಯ; ಯಾವ ಏರಿಯಾದಲ್ಲಿ ಎಷ್ಟು ಗಂಟೆಗೆ ಪವರ್‌ ಕಟ್‌, ಇಲ್ಲಿದೆ ವಿವರ

Bengaluru Power Cut: ಬೆಂಗಳೂರಿನ ಹಲವೆಡೆ ಶನಿವಾರ ವಿದ್ಯುತ್ ವ್ಯತ್ಯಯವಾಗಲಿದೆ. ತುರ್ತು ನಿರ್ವಹಣಾ ಕಾಮಗಾರಿಯನ್ನು ಕೆಪಿಟಿಸಿಎಲ್ ಕೈಗೆತ್ತಿಕೊಂಡಿರುವ ಕಾರಣ ಯಾವ ಏರಿಯಾದಲ್ಲಿ ಎಷ್ಟು ಗಂಟೆಗೆ ಪವರ್‌ ಕಟ್‌ ಎಂಬ ವಿವರ ಇಲ್ಲಿದೆ. (ವರದಿ - ಎಚ್ ಮಾರುತಿ, ಬೆಂಗಳೂರು)

BESCOM Updates; ಬೆಂಗಳೂರಿನ ಬಹಳಷ್ಟು ಕಡೆ ಶನಿವಾರ ವಿದ್ಯುತ್ ವ್ಯತ್ಯಯವಾಗಲಿದ್ದು ಯಾವ ಏರಿಯಾದಲ್ಲಿ ಎಷ್ಟು ಗಂಟೆಗೆ ಪವರ್‌ ಕಟ್‌ ಎಂಬ ವಿವರ ಈ ವರದಿಯಲ್ಲಿದೆ. (ಸಾಂಕೇತಿಕ ಚಿತ್ರ)
BESCOM Updates; ಬೆಂಗಳೂರಿನ ಬಹಳಷ್ಟು ಕಡೆ ಶನಿವಾರ ವಿದ್ಯುತ್ ವ್ಯತ್ಯಯವಾಗಲಿದ್ದು ಯಾವ ಏರಿಯಾದಲ್ಲಿ ಎಷ್ಟು ಗಂಟೆಗೆ ಪವರ್‌ ಕಟ್‌ ಎಂಬ ವಿವರ ಈ ವರದಿಯಲ್ಲಿದೆ. (ಸಾಂಕೇತಿಕ ಚಿತ್ರ)

Bengaluru Power Cut: ಬೆಸ್ಕಾಂನ ವ್ಯಾಪ್ತಿಯಲ್ಲಿ ಹಲವು ಕೇಂದ್ರಗಳಲ್ಲಿ ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವ ಕಾರಣ ನಾಳೆ (ಡಿಸೆಂಬರ್ 21) ಶನಿವಾರ ವಿದ್ಯುತ್ ವತ್ಯಯವಾಗಲಿದೆ. ಪರಿಣಾಮ ಬೆಂಗಳೂರಿನ ಹಲವೆಡೆ ಪವರ್‌ ಕಟ್‌ ಉಂಟಾಗಲಿದೆ. ಬೆಳಗ್ಗೆಯಿಂದ ಸಂಜೆವರೆಗೆ ಪವರ್ ಕಟ್ ಇದ್ದು, ವಾರಾಂತ್ಯದ ಹಿನ್ನೆಲೆಯಲ್ಲಿ ಈ ಅಡಚಣೆಯನ್ನು ಗಮನದಲ್ಲಿಟ್ಟುಕೊಂಡು ದಿನಚರಿ ಕಡೆಗೆ ಗಮನ ಹರಿಸುವುದು ಉತ್ತಮ. ಯಾವ ಏರಿಯಾದಲ್ಲಿ ಎಷ್ಟು ಗಂಟೆಗೆ ಪವರ್‌ ಕಟ್‌ ಇರಲಿದೆ ಎಂಬ ವಿವರ ಇಲ್ಲಿದೆ.

ಬೆಂಗಳೂರು ಸಹಕಾರನಗರ ಕೇಂದ್ರದ ವ್ಯಾಪ್ತಿಯ ಪವರ್‌ಕಟ್ ವಿವರ

ಸಹಕಾರನಗರದ 66/11ಕೆವಿಎ ಕೇಂದ್ರದಿಂದ ವಿದ್ಯುತ್ ಪೂರೈಕೆ ಡಿಸೆಂಬರ್ 21ರ ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ತನಕ ವ್ಯತ್ಯಯವಾಗಲಿದೆ. ಇದರ ಪರಿಣಾಮ ಈ ಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುವ ಪ್ರದೇಶಗಳಲ್ಲಿ ಈ ಅವಧಿಯಲ್ಲಿ ಪವರ್‌ ಕಟ್‌ ಇರಲಿದೆ. ಎಬ್ಲಾಕ್, ಇ ಬ್ಲಾಕ್, ಬಳ್ಳಾರಿ ಮುಖ್ಯ ರಸ್ತೆ, ಎಫ್ ಬ್ಲಾಕ್, ತಲಕಾವೇರಿ ಲೇಔಟ್, ಅಮೃತಹಳ್ಳಿ, ಬಿಜಿಎಸ್ ಲೇಔಟ್, ನವ್ಯ ನಗರ ಬ್ಲಾಕ್, ಶಬರಿ ನಗರ ಬೈತರಾಯನಪುರ, ಜಕ್ಕೂರು ಬಡಾವಣೆ, ಜಿಕೆವಿಕೆ ಲೇಔಟ್, ಜಕ್ಕೂರು ಪ್ಲಾಂಟೇಶನ್, ಯೋಷಾದ ನಗರಾಮೃತಹಳ್ಳಿ, ಡಿ ಅಮೃತಹಳ್ಳಿ ಬಿ ಬ್ಲಾಕ್, ಸಿ ಬ್ಲಾಕ್, ಸಿಕ್ಯೂಎಎಲ್ ಲೇಔಟ್, ಡಿ ಬ್ಲಾಕ್, ಇ ಬ್ಲಾಕ್, ಸಂಪಿಗೆಹಳ್ಳಿ, ಅಗ್ರಹಾರ ಗ್ರಾಮ, ಜಯಸೂರ್ಯ ಲೇಔಟ್, ವಿಧಾನಸೌಧ ಲೇಔಟ್, ಸಾಯಿಬಾಬಾ ಲೇಔಟ್, ಟೆಲಿಕಾಂ ಲೇಔಟ್, ಎಂಸಿಇಸಿಎಚ್ ಎಸ್ ಲೇಔಟ್, ಸುರ್ಯೋದಯ ನಗರ.2, ಅಗ್ರಹಾರ ಲೇಔಟ್, ಕೋಗಿಲು ಲೇಔಟ್, ಶ್ರೀನಿವಾಸಪುರ ಜಕ್ಕೂರು, ವಿಆರ್ ಲ್ ರಸ್ತೆ ( ಸಂತೆ ರಸ್ತೆ), ಐಎಎಸ್ ರಸ್ತೆ, ಅರ್ಕಾವತಿ ಲೇಔಟ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಪವರ್‌ ಕಟ್‌ ಇರಲಿದೆ.

ಎಲೆಕ್ಟ್ರಾನಿಕ್ ಸಿಟಿ ಫೇಸ್ 2 ವ್ಯಾಪ್ತಿಯಲ್ಲಿ ಪವರ್ ಕಟ್‌

66/11ಕೆವಿಎ ಎಲೆಕ್ಟ್ರಾನಿಕ್ ಸಿಟಿ ಫೇಸ್-2 (ವಿ.ವಿ.ಕೇಂದ್ರ ಮತ್ತು ಚೋಕ್ಕಸಂದ್ರ ವಿ.ವಿ.ಕೇಂದ್ರ, ಪ್ರೈಮಲ್ ಟೆಕ್ ಪಾರ್ಕ್) ಕೇಂದ್ರದ ವ್ಯಾಪ್ತಿಯಲ್ಲಿ ಶನಿವಾರ (ಡಿ.21) ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಇದರಂತೆ, ಎಲೆಕ್ಟ್ರಾನಿಕ್ ಸಿಟಿ ಫೇಸ್-2, ವೀರಸಂದ್ರ, ದೊಡ್ಡನಾಗಮಂಗಳ, ಟೆಕ್ ಮಹೀಂದ್ರ, ಇ.ಹೆಚ್.ಟಿ.ಟಾಟಾ ಬಿ.ಪಿ ಸೋಲಾರ್, 12ನೇ ಹಂತ, 7ನೇ ಹಂತ, 11ನೇ ಹಂತ, ರ್.ಜಿ.ಎ. ಇನ್ ಫ್ರಾಸ್ಟ್ರಕ್ಚರ್ 1, 2 ಮತ್ತು 9ನೇ ಬಿ ಹಂತ, ಟೆಲ್, ಷ್ಟೇಷನ್ ಆಕ್ಸಿಲರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಅವಧಿಯಲ್ಲಿ ಕರೆಂಟ್ ಇರಲ್ಲ.

ಉಳಿದಂತೆ ಇನ್ನೆಲ್ಲಿ ವಿದ್ಯುತ್ ವ್ಯತ್ಯಯ

66/11ಕೆವಿಎ ಬನಶಂಕರಿ ಉಪಕೇಂದ್ರದ ವ್ಯಾಪ್ತಿಯಲ್ಲಿ ಶನಿವಾರ (ಡಿ.21) ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಇದರಂತೆ, ಶ್ರೀನಗರ, ಹೊಸಕೆರೆಹಳ್ಳಿ, ಪಿಇಎಸ್ ಕಾಲೇಜು, ವೀರಬದ್ರನಗರ, ಬ್ಯಾಕ್ ಕಾಲೋನಿ, ಎನ್ ಟಿ ವೈ ಲೇಔಟ್, ತ್ಯಾಗರಾಜನಗರ, ಬಸವನಗುಡಿ, ಬಿ.ಎಸ್.ಕೆ 3ನೇ ಹಂತ, ಕತ್ತರಿಗುಪ್ಪೆ ಗಿರಿನಗರ 4ನೇ ಹಂತ, ಟಿಐ ಲೇಔಟ್, 100 ರಿಂಗ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ.

ಕೋರಮಂಗಲ ವಿಭಾಗದಲ್ಲಿನ 220/66/11ಕೆ.ವಿ. ನಿಮ್ಹಾನ್ಸ್ ಉಪಕೇಂದ್ರ ಮತ್ತು 66/11ಕೆ.ವಿ. ಜಯದೇವ ಉಪಕೇಂದ್ರ ಗಳಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ 21.12.2024 (ಶನಿವಾರ) ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಇದರಂತೆ, ಐಬಿಮಮ್, ಅಸ್ಸೆಂಚರ್, ಐಬಿಎಮ್’ಡಿ’ ಬ್ಲಾಕ್, ಗುರಪ್ಪನ ಪಾಳ್ಯ, ಸೋಬಾ ಮಜಾರಿಯಾ ಅಪಾರ್ಟ್ಮೆಂಟ್, ಬಿ.ಜಿ.ರಸ್ತೆ, ಬಿ.ಟಿ.ಎಂ 1 ನೇ ಹಂತ, ವಕೀಲ್ ಸ್ಕೋಯರ್ ಬಿಲ್ಡಿಂಗ್, ಮಡಿವಾಳ ಮಾರುತಿ ನಗರ, ಭಿಸ್ಮಿಲ್ಲಾ ನಗರ, ಶೋಭಾ ಡೆವೆಲಪರ್ಸ, ಜೈಭೀಮ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ.

ವೃಷಭಾವತಿ, ಸರ್ ಎಂ.ವಿ. ಲೇಔಟ್ ಹಾಗೂ ಬನಶಂಕರಿಯ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಕರೆಂಟ್ ಇರಲ್ಲ

ಇದೇ ರೀತಿ, ವೃಷಭಾವತಿ, ಸರ್ ಎಂ.ವಿ. ಲೇಔಟ್ ಹಾಗೂ ಬನಶಂಕರಿಯ ವಿದ್ಯುತ್ ವಿತರಣಾ ಕೇಂದ್ರದ ನಿರ್ವಹಣಾ ಕಾಮಗಾರಿ ಕಾರಣ ಡಿ.21ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ.

ವೃಷಭಾವತಿ ಕೇಂದ್ರದ ವ್ಯಾಪ್ತಿಯ ಬಾಪೂಜಿನಗರ, ಗಂಗೊಂಡನಹಳ್ಳಿ, ದೀಪಾಂಜಲಿನಗರ, ಅತ್ತಿಗುಪ್ಪೆ, ಪಂತರಪಾಳ್ಯ, ಕೆಂಚೇನಹಳ್ಳಿ, ರಾಜರಾಜೇಶ್ವರಿನಗರ, ಬೆಟ್ಟನಪಾಳ್ಯ, ಐಡಿಯಲ್ ಹೋಮ್, ಬಿ.ಎಚ್ .ಇ.ಎಲ್. ಲೇಔಟ್, ಜ್ಞಾನಭಾರತಿ, ವಿನಾಯಕ ಲೇಔಟ್, ಕೆಂಗೇರಿ ಉಪನಗರ, ಜ್ಞಾನಭಾರತಿ ಲೇಔಟ್, ಬಂಡೇಮಠ, ಮೈಲಸಂದ್ರ, ವಿಶ್ವೇಶ್ವರಯ್ಯ ಲೇಔಟ್, ಆರ್.ಆರ್.ಲೇಔಟ್, ಕೆಂಗುಂಟೆ, ಕೊಡಿಗೇಹಳ್ಳಿ, ಮುದ್ದಿನಪಾಳ್ಯ, ಮರಿಯಪ್ಪನಪಾಳ್ಯ, ಸುಭಾಷ್ ನಗರ, ಗಿರಿನಗರ, ಬ್ಯಾಂಕ್ ಕಾಲೋನಿ, ಶ್ರೀನಗರ, ಹನುಮಂತನಗರ, ವಿದ್ಯಾಪೀಠ, ತ್ಯಾಗರಾಜನಗರ, ಹೊಸಕೆರೆಹಳ್ಳಿ, ನಾಗೇಂದ್ರ ಬ್ಲಾಕ್, ಅವಲಹಳ್ಳಿ ಹಾಗೂ ಮೈಸೂರು ರಸ್ತೆಯ ಸುತ್ತಮುತ್ತ ಪ್ರದೇಶದಲ್ಲಿ ಕರೆಂಟ್‌ ಇರಲ್ಲ.

ಸರ್ ಎಂ.ವಿ.ಲೇಔಟ್ ವ್ಯಾಪ್ತಿಯಲ್ಲಿ ಉಲ್ಲಾಳ ಮೈನ್ ರೋಡ್, ಪ್ರೆಸ್ ಲೇಔಟ್, ರೈಲ್ವೆ ಲೇಔಟ್, ಜ್ಞಾನಜ್ಯೋತಿನಗರ, ಮುನೇಶ್ವರನಗರ, ಎಂಪಿಎಂ ಲೇಔಟ್, ಐಟಿಐ ಲೇಔಟ್, ಕೆಂಗುಂಟೆ, ಮಲ್ಲತ್ತಹಳ್ಳಿ, ಡಿ ಗ್ರೂಪ್ ಲೇಔಟ್, ದೊಡ್ಡಬಸ್ತಿ, ಚಿಕ್ಕಬಸ್ತಿ, ರಾಮಸಂದ್ರ, ಗಾಯಿತ್ರಿ ಲೇಔಟ್, ಸೊನ್ನೇನಹಳ್ಳಿ, ಅಮ್ಮ ಆಶ್ರಮ, ಜ್ಞಾನಭಾರತಿ ಲೇಔಟ್, ಆರ್.ಆರ್. ಲೇಔಟ್. ಅಂಜನಾನಗರ, ರತ್ನಾನಗರ, ಕೊಡಿಗೇಹಳ್ಳಿ, ಕನ್ನಲ್ಲಿ ದೊಡ್ಡಗೊಲ್ಲರಹಟ್ಟಿ, ಸರ್.ಎಂ.ವಿ.ಲೇಔಟ್ 1 ರಿಂದ 9ನೇ ಬ್ಲಾಕ್ ವರೆಗೆ ಹೇರೋಹಳ್ಳಿ, ಬಿಇಎಲ್ ಬಡಾವಣೆ, ಮಂಗನಹಳ್ಳಿ ಮತ್ತು ಸುತ್ತಮುತ್ತ ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

ಬನಶಂಕರಿ ಕೇಂದ್ರದ ವ್ಯಾಪ್ತಿಯ ಪ್ರದೇಶಗಳಾದ ಹನುಮಂತನಗರ, ಗವಿಪುರಂ, ಬಸಪ್ಪ ಲೇಔಟ್, ಶ್ರೀನಗರ, ಬುಲ್ ಟೆಂಪಲ್ ಮತ್ತು ಮೌಂಟ್ ಜಾಯ್ ರೋಡ್, ಕೆ.ಜಿ.ನಗರ, ಚಾಮರಾಜಪೇಟೆ, ಟೆಲಿಫೋನ್ ಎಕ್ಸ್‌ ಚೇಂಜ್, ಶ್ರೀನಗರ, ಪೈಪ್‌ಲೈನ್ ಏರಿಯಾ, ಗಿರಿನಗರ 2ನೇ ಹಂತ, ವಿದ್ಯಾಪೀಠ, ಸಿ.ಟಿ.ಬೆಡ್. ತ್ಯಾಗರಾಜನಗರ, ಬಿ.ಎಸ್.ಕೆ. 1ನೇ ಹಂತ, ಎನ್.ಆರ್.ಕಾಲೋನಿ, ಹೊಸಕೆರೆಹಳ್ಳಿ, ನಾಗೇಂದ್ರ ಬ್ಲಾಕ್, ಮುನೇಶ್ವರ ಬ್ಲಾಕ್, ಅವಲಹಳ್ಳಿ, ಕೆ.ಆರ್.ಹಾಸ್ಪಿಟಲ್ ರೋಡ್, ಬಿಡಿಎ ಲೇಔಟ್, ಪಿ.ಇ.ಎಸ್ ಕಾಲೇಜ್, ಎನ್.ಟಿ.ವೈ ಲೇಔಟ್, ಸುಂದರ್‌ಇಂಡಸ್ಟ್ರೀಯಲ್ ಲೇಔಟ್, ಬ್ಯಾಟರಾಯನಪುರ, ಟೆಲಿಕಾಂ ಲೇಔಟ್, ಕೆ.ಆರ್. ರೋಡ್, ಕನಕಪುರ ರೋಡ್, ಬಸವನಗುಡಿ, ಶಾಸ್ತ್ರೀನಗರ, ಅವಲಹಳ್ಳಿಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

(ವರದಿ - ಎಚ್ ಮಾರುತಿ, ಬೆಂಗಳೂರು)

Whats_app_banner