EV Clusters: ಚಿಕ್ಕಬಳ್ಳಾಪುರ, ಬಿಡದಿ, ಹುಬ್ಬಳ್ಳಿ ಧಾರವಾಡದಲ್ಲಿ ಹೊಸ ಎಲೆಕ್ಟ್ರಿಕ್‌ ವೆಹಿಕಲ್‌ ಕ್ಲಸ್ಟರ್‌, ಏನಿದರ ವಿಶೇಷ-business news chikkaballapur bidadi hubli dharwad will be new electric vehicle clusters of karnataka kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Ev Clusters: ಚಿಕ್ಕಬಳ್ಳಾಪುರ, ಬಿಡದಿ, ಹುಬ್ಬಳ್ಳಿ ಧಾರವಾಡದಲ್ಲಿ ಹೊಸ ಎಲೆಕ್ಟ್ರಿಕ್‌ ವೆಹಿಕಲ್‌ ಕ್ಲಸ್ಟರ್‌, ಏನಿದರ ವಿಶೇಷ

EV Clusters: ಚಿಕ್ಕಬಳ್ಳಾಪುರ, ಬಿಡದಿ, ಹುಬ್ಬಳ್ಳಿ ಧಾರವಾಡದಲ್ಲಿ ಹೊಸ ಎಲೆಕ್ಟ್ರಿಕ್‌ ವೆಹಿಕಲ್‌ ಕ್ಲಸ್ಟರ್‌, ಏನಿದರ ವಿಶೇಷ

Business News ಕರ್ನಾಟಕದಲ್ಲಿ ಎಲೆಕ್ಟ್ರಿಕ್‌ ವಾಹನ ಬಳಕೆ ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಹೊಸ ಕ್ಲಸ್ಟರ್‌ಗಳನ್ನು ಘೋಷಿಸಿದೆ.

ವಿದ್ಯುತ್‌ ಚಾಲಿತ ವಾಹನಗಳಿಗೆ ಕರ್ನಾಟಕ ಸರ್ಕಾರವೂ ಒತ್ತು ನೀಡಿದ್ದು., ಮೂರು ಕ್ಲಸ್ಟರ್‌ ಗಳನ್ನು ಗುರುತಿಸಿದೆ.
ವಿದ್ಯುತ್‌ ಚಾಲಿತ ವಾಹನಗಳಿಗೆ ಕರ್ನಾಟಕ ಸರ್ಕಾರವೂ ಒತ್ತು ನೀಡಿದ್ದು., ಮೂರು ಕ್ಲಸ್ಟರ್‌ ಗಳನ್ನು ಗುರುತಿಸಿದೆ. (city journal)

ಬೆಂಗಳೂರು: ಕೇಂದ್ರ ಸರ್ಕಾರ ಎಲೆಕ್ಟ್ರಿಕ್‌ ವಾಹನಗಳಿಗೆ ಇನ್ನಿಲ್ಲದ ಒತ್ತು ನೀಡುತ್ತಿದೆ. ಪರಿಸರ ಮಾಲಿನ್ಯ ತಡೆ ಒಂದು ಕಡೆಯಾದರೆ, ಇಂಧನದ ಮೇಲೆ ಅವಲಂಬನೆ ತಗ್ಗಿಸಿ ವಿದ್ಯುತ್‌ ವಾಹನ ಬಳಕೆ ಹೆಚ್ಚಿಸುವುದು ಇನ್ನೊಂದು ಉದ್ದೇಶ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲೂ ಎಲೆಕ್ಟ್ರಿಕ್‌ ವಾಹನಗಳ ಪ್ರಮಾಣ ಹೆಚ್ಚಿದೆ. ಉದ್ಯಮವೂ ಬೆಳಯುತ್ತದೆ. ಕರ್ನಾಟಕ ಸರ್ಕಾರವೂ ಪರಿಷ್ಕೃತ ಕರ್ನಾಟಕ ಎಲೆಕ್ಟ್ರಿಕ್ ವೆಹಿಕಲ್ (ಇವಿ) ನೀತಿ 2023-28 ರ ಭಾಗವಾಗಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನ ಬಳಿ ಬಿಡದಿ ಮತ್ತು ಹುಬ್ಬಳ್ಳಿ-ಧಾರವಾಡವನ್ನು ಉದ್ದೇಶಿತ ಹೊಸ ಇವಿ ಕ್ಲಸ್ಟರ್‌ಗಳಿಗೆ ಸ್ಥಳಗಳಾಗಿ ಅಂತಿಮಗೊಳಿಸಿದೆ. ಈ ಭಾಗದಲ್ಲಿ ವಾಹನಗಳು, ಬಿಡಿ ಭಾಗಗಳ ಉತ್ಪಾದನೆಗೆ ಒತ್ತು ನೀಡಲಾಗುತ್ತದೆ.

ಎಲೆಕ್ಟ್ರಿಕ್‌ ವೆಹಿಕಲ್‌(EV) ಉದ್ಯಮದ ಶಿಫಾರಸುಗಳ ಆಧಾರದ ಮೇಲೆ, ಎಲೆಕ್ಟ್ರಿಕ್‌ ವೆಹಿಕಲ್‌ ಮಾದರಿ ನಗರಗಳು ಎಂದು ಕರೆಯಲ್ಪಡುವ ಈ ಕ್ಲಸ್ಟರ್‌ಗಳನ್ನು ಕರ್ನಾಟಕದಲ್ಲಿ

ಎಲೆಕ್ಟ್ರಿಕ್‌ ವೆಹಿಕಲ್‌ ಗಳ ಅಳವಡಿಕೆಯನ್ನು ಬಲಪಡಿಸಲು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕ್ಲಸ್ಟರ್‌ಗಳಿಗಾಗಿ ಸರ್ಕಾರ ಸುಮಾರು 800 ಎಕರೆ ಭೂಮಿಯನ್ನು ಗುರುತಿಸಿದೆ ಎಂದು ದಿ ಹಿಂದೂ ವರದಿ ಮಾಡಿದೆ.

ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್. ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (BEE) ದ ಮಾಹಿತಿಯು ಕರ್ನಾಟಕವು ಭಾರತದಲ್ಲಿ ಅತಿ ಹೆಚ್ಚು (5,765) ಸಾರ್ವಜನಿಕ ಎಲೆಕ್ಟ್ರಿಕ್‌ ವೆಹಿಕಲ್‌ ಚಾರ್ಜಿಂಗ್ ಸ್ಟೇಷನ್‌ಗಳನ್ನು ಹೊಂದಿದೆ ಎಂದು ತೋರಿಸುತ್ತದೆ.

ಕರ್ನಾಟಕದ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ ಉತ್ತೇಜನ ನೀಡುವ ಸಲುವಾಗಿ ಮೂರು ಸ್ಥಳಗಳನ್ನು ಕ್ಲಸ್ಟರ್‌ಗಳಾಗಿ ಗುರುತಿಸಿದ್ದು. ಅಲ್ಲಿಂದ ಇತರೆ ನಗರ, ಪಟ್ಟಣಗಳಿಗೆ ಅಗತ್ಯ ಸೇವೆಯನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ.

ಇವಿ ಮಾದರಿ ನಗರಗಳು ಎಂದೂ ಕರೆಯಲ್ಪಡುವ ಈ ಕ್ಲಸ್ಟರ್‌ಗಳನ್ನು ಕರ್ನಾಟಕದಲ್ಲಿ ಇವಿಗಳ ಅಳವಡಿಕೆ ಮತ್ತು ತಯಾರಿಕೆಯನ್ನು ಬಲಪಡಿಸಲು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕ್ಲಸ್ಟರ್‌ಗಳಿಗಾಗಿ ಸರ್ಕಾರವು ಸರಿಸುಮಾರು 800 ಎಕರೆ ಭೂಮಿಯನ್ನು ಗುರುತಿಸಿದೆ, ಅಲ್ಲಿ ಎಲೆಕ್ಟ್ರಿಕ್‌ ವೆಹಿಕಲ್‌ ಉತ್ಪಾದನೆ ಮತ್ತು ಮೂಲ ಸಲಕರಣೆ ತಯಾರಕರು ತಮ್ಮ ಕಾರ್ಖಾನೆಗಳನ್ನು ಸ್ಥಾಪಿಸಬಹುದು. ನಾವು ಎಲೆಕ್ಟ್ರಿಕ್‌ ವೆಹಿಕಲ್‌ ತಯಾರಿಕೆ ಮತ್ತು ಮೂಲ ಸಲಕರಣೆ ತಯಾರಕರು ಒಂದೇ ಸ್ಥಳದಲ್ಲಿರಲು ಬಯಸುತ್ತೇವೆ. ಆದ್ದರಿಂದ, ನಾವು ಈ ಕ್ಲಸ್ಟರ್‌ಗಳನ್ನು ರಚಿಸಿದ್ದೇವೆ. ತಯಾರಕರು ಬಂದು ನಾವು ನೀಡಿದ ಜಮೀನಿನಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಬಹುದು ಎಂದು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣ ಹೇಳುತ್ತಾರೆ.

ಕರ್ನಾಟಕ ಎಲೆಕ್ಟ್ರಿಕ್ ವೆಹಿಕಲ್ (ಇವಿ) ನೀತಿ 2023–28 ಅನ್ನು ಪರಿಷ್ಕರಣೆಯಲ್ಲಿ ಬೆಳಗಾವಿ ನಗರವೂ ಇರುವ ವಿಶ್ವಾಸವಿತ್ತು. ನಗರವನ್ನು ಭವಿಷ್ಯದ ಕೇಂದ್ರವಾಗಿ ಇರಿಸುವ ಪ್ರಯತ್ನಗಳ ಹೊರತಾಗಿಯೂ ಬೆಳಗಾವಿಯನ್ನು ಪ್ರಸ್ತಾವಿತ ಹೊಸ ಇವಿ ಕ್ಲಸ್ಟರ್‌ಗಳ ಪಟ್ಟಿಯಿಂದ ಹೊರಗಿಡಲಾಗಿದೆ. ಎಲೆಕ್ಟ್ರಿಕ್‌ ವೆಹಿಕಲ್‌ ಗಳು ಮತ್ತು ಡ್ರೋನ್‌ಗಳಿಗಾಗಿ ಪರಿಷ್ಕೃತ ನೀತಿಯು ಈಗ ಚಿಕ್ಕಬಳ್ಳಾಪುರ, ಬೆಂಗಳೂರು ಸಮೀಪದ ಬಿಡದಿ ಮತ್ತು ಹುಬ್ಬಳ್ಳಿ-ಧಾರವಾಡವನ್ನು ರಾಜ್ಯದ ಇವಿ ಕ್ಲಸ್ಟರ್‌ಗಳಿಗೆ ಪ್ರಾಥಮಿಕ ಸ್ಥಳಗಳಾಗಿ ಅಭಿವೃದ್ಧಿಪಡಿಸಲು ಕೇಂದ್ರೀಕರಿಸಿದ್ದರೂ ಬೆಳಗಾವಿ ಕೈಬಿಟ್ಟಿದ್ದು ಯಾಕೆ ಎಂದು ತಿಳಿದಿಲ್ಲ ಎಂದು ಉದ್ಯಮಿಗಳು ಹೇಳುತ್ತಾರೆ.