ಕೊಪ್ಪದಲ್ಲಿ 60 ಅಡಿ ಬಾವಿಗೆ ಬಿದ್ದ 94 ವರ್ಷದ ಅಜ್ಜಿ ಸೇಫ್‌, ಒಂದು ಗಂಟೆಗೂ ಹೆಚ್ಚು ಬಾವಿಯಲ್ಲಿದ್ದ ಅಜ್ಜಿಯ ರಕ್ಷಣೆಯ ವಿಡಿಯೋ ವೈರಲ್‌
ಕನ್ನಡ ಸುದ್ದಿ  /  ಕರ್ನಾಟಕ  /  ಕೊಪ್ಪದಲ್ಲಿ 60 ಅಡಿ ಬಾವಿಗೆ ಬಿದ್ದ 94 ವರ್ಷದ ಅಜ್ಜಿ ಸೇಫ್‌, ಒಂದು ಗಂಟೆಗೂ ಹೆಚ್ಚು ಬಾವಿಯಲ್ಲಿದ್ದ ಅಜ್ಜಿಯ ರಕ್ಷಣೆಯ ವಿಡಿಯೋ ವೈರಲ್‌

ಕೊಪ್ಪದಲ್ಲಿ 60 ಅಡಿ ಬಾವಿಗೆ ಬಿದ್ದ 94 ವರ್ಷದ ಅಜ್ಜಿ ಸೇಫ್‌, ಒಂದು ಗಂಟೆಗೂ ಹೆಚ್ಚು ಬಾವಿಯಲ್ಲಿದ್ದ ಅಜ್ಜಿಯ ರಕ್ಷಣೆಯ ವಿಡಿಯೋ ವೈರಲ್‌

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗ್ರಾಮ ಒಂದರಲ್ಲಿ 94 ವರ್ಷದ ಅಜ್ಜಿ ಕಾಲುಜಾರಿ 60 ಅಡಿ ಆಳದ ತೆರೆದ ಬಾವಿಗೆ ಬಿದ್ದಿದ್ದರು. ಅವರು ತಮ್ಮ ಪ್ರಾಣ ಉಳಿಸಿಕೊಳ್ಳಲು 1 ಗಂಟೆಗೂ ಹೆಚ್ಚು ಕಾಲ ಪೈಪ್ ಹಿಡಿದು ಬಾವಿ ಬದಿಗೆ ನಿಂತು ಹರಸಾಹಸ ಪಟ್ಟಿದ್ದರು.

ಕೊಪ್ಪದಲ್ಲಿ 60 ಅಡಿ ಬಾವಿಗೆ ಬಿದ್ದ 94 ವರ್ಷದ ಅಜ್ಜಿ, ಒಂದು ಗಂಟೆ ಕಾಲ ಪೈಪ್ ಹಿಡಿದು ಪ್ರಾಣ ಉಳಿಸಿಕೊಂಡ ವೃದ್ಧೆಯ ರಕ್ಷಣಾ ಕಾರ್ಯದ ವಿಡಿಯೋದಿಂದ ತೆಗೆದ ಚಿತ್ರ.
ಕೊಪ್ಪದಲ್ಲಿ 60 ಅಡಿ ಬಾವಿಗೆ ಬಿದ್ದ 94 ವರ್ಷದ ಅಜ್ಜಿ, ಒಂದು ಗಂಟೆ ಕಾಲ ಪೈಪ್ ಹಿಡಿದು ಪ್ರಾಣ ಉಳಿಸಿಕೊಂಡ ವೃದ್ಧೆಯ ರಕ್ಷಣಾ ಕಾರ್ಯದ ವಿಡಿಯೋದಿಂದ ತೆಗೆದ ಚಿತ್ರ.

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕು ಮರಕಟ್ಟೆ ಗ್ರಾಮದಲ್ಲಿ 94 ವರ್ಷದ ಅಜ್ಜಿಯೊಬ್ಬರು ಕಾಲುಜಾರಿ 60 ಅಡಿ ಬಾವಿಗೆ ಬಿದ್ದು, ಒಂದು ಗಂಟೆಯೂ ಹೆಚ್ಚು ಕಾಲ ಪೈಪ್ ಹಿಡಿದು ಪ್ರಾಣ ಉಳಿಸಿಕೊಂಡ ಘಟನೆ ವರದಿಯಾಗಿದೆ. ಈ ಅಜ್ಜಿಯ ಹೆಸರು ಕಮಲ. ಅಗ್ನಿಶಾಮಕ ಸೇವೆ ಸಿಬ್ಬಂದಿ ಅವರನ್ನು ಬಾವಿಯಿಂದ ಮೇಲೆತ್ತಿದ್ದಾರೆ.

ಕೊಪ್ಪದಲ್ಲಿ 60 ಅಡಿ ಬಾವಿಗೆ ಬಿದ್ದ 94 ವರ್ಷದ ಅಜ್ಜಿ, ಏನಿದು ಘಟನೆ?

ಕೊಪ್ಪ ತಾಲೂಕು ಮರಕಟ್ಟೆ ಗ್ರಾಮದಲ್ಲಿ 94 ವರ್ಷದ ಅಜ್ಜಿ ಕಮಲ ಎಂಬುವವರು ಮನೆ ಸಮೀಪದ ಬಾವಿಗೆ ಕಾಲು ಜಾರಿ ಬಿದ್ದುಬಿಟ್ಟಿದ್ದರು. ಬೀಳುತ್ತಲೇ ಬಾವಿಯಿಂದ ನೀರೆತ್ತಲು ಹಾಕಿದ್ದ ಪಂಪ್‌ನ ಪೈಪ್‌ ಅನ್ನು ಹಿಡಿದು ನೀರೊಳಗೆ ಮುಳುಗದಂತೆ ಕಷ್ಟಪಟ್ಟು ಬದಿಗೆ ನಿಂತುಕೊಂಡಿದ್ದರು. ಬಾವಿಗೆ ಸುತ್ತಲು ಇರುವ ವೃತ್ತಾಕಾರದ ಕಿರಿದಾದ ಉಬ್ಬಿನ ಮೇಲೆ ಕಾಲಿಟ್ಟು ಕಷ್ಟ ಪಟ್ಟು ಒಂದು ಗಂಟೆ ಕಾಲ ಅಲ್ಲೇ ನಿಂತು ಪ್ರಾಣ ಉಳಿಸಿಕೊಂಡಿದ್ದರು.

ಅಜ್ಜಿ ಬಾವಿಗೆ ಬಿದ್ದಿರುವುದು ಮನೆಯವರಿಗೆ ಗೊತ್ತಾದ ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿದ್ದು, 94 ವರ್ಷದ ಅಜ್ಜಿ ಕಮಲ ಅವರನ್ನು ರಕ್ಷಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬರುವ ತನಕವೂ ಅಜ್ಜಿ ಬಾವಿಯೊಳಗೆ ನೀರಿನ ಪೈಪ್ ಹಿಡಿದು ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸಿದ್ದರು. ಅಗ್ನಿಶಾಮಕ ಸಿಬ್ಬಂದಿ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

94 ವರ್ಷದ ಅಜ್ಜಿಯ ರಕ್ಷಣೆಯ ವಿಡಿಯೋ ವೈರಲ್‌

ವಿಡಿಯೋದಲ್ಲಿರುವ ದೃಶ್ಯ ಗಮನಿಸಿದರೆ 60 ಅಡಿ ಆಳದ ಬಾವಿಯೊಳಗೆ ಬಿದ್ದ ಅಜ್ಜಿ ಪೈಪ್ ಹಿಡಿದು ಬಹಳ ಹೊತ್ತು ಜೀವ ಕೈಯಲ್ಲಿ ಹಿಡಿದಂತೆ ನಿಂತಿದ್ದರು,. ಅವರನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ಬಾವಿಯೊಳಗಿಂದ ಮೇಲೆತ್ತಿದ್ದು, ಅವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Whats_app_banner