PM Modi: ಕಾಂಗ್ರೆಸ್‌ನದ್ದು 85 ಪರ್ಸೆಂಟ್ ಕಮಿಷನ್ ಖ್ಯಾತಿ, ರೈತರಿಗಾಗಿ ಏನೂ ಮಾಡಿಲ್ಲ; ಕೋಲಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ
ಕಾಂಗ್ರೆಸ್ 85 ಪರ್ಸೆಂಟ್ ಕಮಿಷನ್ ಖ್ಯಾತಿ ಹೊಂದಿದೆ. ರೈತರಿಗಾಗಿ ಏನೂ ಮಾಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಕೋಲಾರದಲ್ಲಿ ಗುಡುಗಿದ್ದಾರೆ.
ಕೋಲಾರ: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಇಂದು (ಏ.30, ಭಾನುವಾರ) ಕೂಡ ಕಾಂಗ್ರೆಸ್ (Congress) ವಿರುದ್ಧದ ವಾಗ್ದಾಳಿಯನ್ನು ಮುಂದುವರಿಸಿದ್ದು, ಕಾಂಗ್ರೆಸ್‌ನದ್ದು 85 ಪರ್ಸೆಂಟ್ ಕಮಿಷನ್ (85 Percent Commission) ಖ್ಯಾತಿಯಾಗಿದೆ ಎಂದು ಆರೋಪಿದ್ದಾರೆ.
ಕಾಂಗ್ರೆಸ್ 85 ಪರ್ಸೆಂಟ್ ಕಮಿಷನ್ ಖ್ಯಾತಿ ಹೊಂದಿರುವ ಕಾರಣ ಜನರಿಗೆ ಇವರ ಸರ್ಕಾರದ ಮೇಲೆ ನಂಬಿಕೆಯೇ ಇಲ್ಲ. 1 ರೂಪಾಯಿ ಕಳುಹಿಸಿದರೆ ಜನರಿಗೆ ತಲುಪುವಷ್ಟರಲ್ಲಿ ಅದು 15 ಪೈಸೆಗೆ ಇಳಿಯುತ್ತದೆ ಎಂದು ಅವರ ಪ್ರಧಾನಿಯೊಬ್ಬರು ಹೇಳಿದ್ದಾರೆ. ಕಾಂಗ್ರೆಸ್ ಯಾವಾಗಲೂ ತುಷ್ಟೀಕರಣ ರಾಜಕಾರಣ ಮಾಡುತ್ತದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಭಾರತೀಯ ಜನತಾ ಪಾರ್ಟಿ ತೃಪ್ತಿಗಾಗಿಯೇ ಹೊರತು ಸಮಾಧಾನಕ್ಕಾಗಿ ಅಲ್ಲ. ಕಾಂಗ್ರೆಸ್ ಯಾವಾಗಲೂ ಭ್ರಷ್ಟಾರದಲ್ಲೇ ಬೆಳೆದಿದ್ದೆ. ಭ್ರಷ್ಟಾಚಾರದ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲು ಬಿಜೆಪಿಯಿಂದ ಮಾತ್ರ ಸಾಧ್ಯವಾಗಿದೆ ಎಂದಿದ್ದಾರೆ.
ನಾನು ಭ್ರಷ್ಟಾರದ ವಿರುದ್ಧ ಹೋರಾಟುತ್ತಿರುವುದರಿಂದ ಕಾಂಗ್ರೆಸ್ ನನ್ನನ್ನು ದ್ವೇಷಿಸುತ್ತಿದೆ. ಅವರು ನನಗೆ ಬೆದರಿಕೆ ಹಾಕುವುದರ ಜೊತೆಗೆ ನಿಂದನೆಯನ್ನೂ ಮಾಡ್ತಿದ್ದಾರೆ. ಈ ಬಾರಿಯ ಚುನಾವಣೆಗೆ ಕಾಂಗ್ರೆಸ್ ವಿಷದ ಹಾವು ಎಂಬ ವಿಷಯವನ್ನು ನನ್ನನ್ನು ಹಾವಿಗೆ ಹೋಲಿಸುತ್ತಿದ್ದಾರೆ. ಅವರಿಗೆ ಮೇ 10 ರಂದು ಕರ್ನಾಟಕದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ರೈತರಿಗಾಗಿ ಕಾಂಗ್ರೆಸ್ ಏನೂ ಮಾಡಿಲ್ಲ
ಕಾಂಗ್ರೆಸ್‌ನವರು ರೈತರಿಗಾಗಿ ಏನೂ ಮಾಡಿಲ್ಲ. ಬಡವರನ್ನು ನಿರ್ಲಕ್ಷಿಸಿದ್ದಾರೆ. ಭರವಸೆಗಳನ್ನು ನೀಡಿ ಸುಮ್ಮನಾದರು. ಆದರೆ ನಾವು ರೈತರಿಗೆ ಖಾತೆಗೆ 2.5 ಕೋಟಿ ರೂಪಾಯಿಗಳನ್ನು ಕೊಟ್ಟಿದ್ದೇನೆ. ರೈತರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿುತ್ತಿದ್ದೇವೆ ಎಂದಿದ್ದಾರೆ.
ಈ ಬಾರಿಯ ವಿಧಾನಸಭೆ ಚುನವಣೆ ಯಾರೋ ಶಾಸಕ ಅಥವಾ ಸಚಿವರನ್ನಾಗಿ ಮಾಡಲು ನಡೆಯುತ್ತಿರುವ ಚುನಾವಣೆಯಲ್ಲ. ರಾಜ್ಯದ ಹಾಗೂ ದೇಶದ ಅಭಿವೃದ್ಧಿಯ ನಿರ್ಮಾಣ ಮಾಡುವಂತಹದ್ದು. ಮುಂದಿನ ಎರಡೂವರೆ ದಶಕಗಳ ವಿಕಾಸದ ಭಾರತವನ್ನಾಗಿ ಮಾಡುವ ಚುನಾವಣೆ ಇದಾಗಿದೆ ಎಂದು ಹೇಳಿದ್ದಾರೆ.
ಅಸ್ಥಿರದ ಸರ್ಕಾರ ಬಂದರೆ ಪ್ರಗತಿ ಆಗುವುದಿಲ್ಲ. ಇದರಿಂದ ನಷ್ಟವೇ ಜಾಸ್ತಿ. ದೇಶದ ಪ್ರಗತಿಗೆ ಬೇಕಾದ ಯೋಜನೆಗಳನ್ನು ನಿರ್ಧಾರ ಮಾಡಲು ಅಸ್ಥಿರ ಸರ್ಕಾರ ಅಡ್ಡಿಯಾಗುತ್ತದೆ. ಭ್ರಷ್ಟಾಚಾರದಿಂದ ಕರ್ನಾಟಕವನ್ನು ಮುಕ್ತಗೊಳಿಸುವುದೇ ಈ ಬಾರಿಯ ಚುನಾವಣೆ ಗುರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನಿನ್ನೆ (ಏ.29, ಶನಿವಾರ) ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಭ್ರಷ್ಟಾಚಾರ ಮಾಡಲು ಇರುವ ಎಲ್ಲಾ ಮೂಲಗಳನ್ನು ಮುಚ್ಚಿಹಾಕಿರುವುದಕ್ಕೆ ಕಾಂಗ್ರೆಸ್‌ನವರು ನನ್ನನ್ನು ನಿಂದಿಸುತ್ತಾ ತಿರುಗಾಡುತ್ತಿದ್ದಾರೆ. ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ. ಅವರ ಸರ್ಕಾರದ್ದು ಭ್ರಷ್ಟಾಚಾರದ ಕಾಲ, ಬಿಜೆಪಿ ಸರ್ಕಾರದ್ದು ಅಮೃತ ಕಾಲ ಎಂದು ಟೀಕಿಸಿದ್ದರು. ಈ ಹೇಳಿಕೆ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಇಂದು ಚನ್ನರಾಯಪಟ್ಟಣ ಹಾಗೂ ಬೇಲೂರಿನಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದು, ಸಂಜೆ ಮೈಸೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ.
ಎರಡು ದಿನಗಳ ರಾಜ್ಯ ಚುನಾವಣಾ ಪ್ರವಾಸದಲ್ಲಿ ಇರುವ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಬೀದರ್ ಜಿಲ್ಲೆಯ ಹುಮ್ನಾಬಾದ್, ವಿಜಯಪುರ ಹಾಗೂ ಬೆಳಗಾವಿಯ ರಾಯಬಾಗದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದರು.