ಸ್ಟ್ಯಾನ್ ಪೋರ್ಡ್‌ ವಿಶ್ವವಿಜ್ಞಾನಿಗಳ ಪಟ್ಟಿಯಲ್ಲಿ ದಾವಣಗೆರೆಯ ಪ್ರೊ.ಪ್ರಸನ್ನ ಕುಮಾರ್‌, ಡಾ.ವರುಣ್‌, ಪುನೀತ್‌ ಸಹಿತ ಐವರ ಹೆಸರು
ಕನ್ನಡ ಸುದ್ದಿ  /  ಕರ್ನಾಟಕ  /  ಸ್ಟ್ಯಾನ್ ಪೋರ್ಡ್‌ ವಿಶ್ವವಿಜ್ಞಾನಿಗಳ ಪಟ್ಟಿಯಲ್ಲಿ ದಾವಣಗೆರೆಯ ಪ್ರೊ.ಪ್ರಸನ್ನ ಕುಮಾರ್‌, ಡಾ.ವರುಣ್‌, ಪುನೀತ್‌ ಸಹಿತ ಐವರ ಹೆಸರು

ಸ್ಟ್ಯಾನ್ ಪೋರ್ಡ್‌ ವಿಶ್ವವಿಜ್ಞಾನಿಗಳ ಪಟ್ಟಿಯಲ್ಲಿ ದಾವಣಗೆರೆಯ ಪ್ರೊ.ಪ್ರಸನ್ನ ಕುಮಾರ್‌, ಡಾ.ವರುಣ್‌, ಪುನೀತ್‌ ಸಹಿತ ಐವರ ಹೆಸರು

ವಿಶ್ವ ವಿಜ್ಞಾನಿಗಳ ಪಟ್ಟಿಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ಗಣಿತಶಾಸ್ತ್ರ ಪ್ರಾಧ್ಯಾಪಕರಾದ ಪ್ರೊ.ಪ್ರಸನ್ನಕುಮಾರ್‌, ಸಂಶೋಧಕರಾದ ಡಾ. ಆರ್‌.ಜೆ.ಪುನೀತ್ ಗೌಡ, ಡಾ.ಆರ್‌.ನವೀನ್‌ ಕುಮಾರ್ , ಡಾ. ಜೆ.ಕೆ.ಮಧುಕೇಶ್‌ ಮತ್ತು ಡಾ. ಆರ್‌.ಎಸ್‌.ವರುಣ್‌ ಕುಮಾರ್‌ ಹೆಸರೂ ಇದೆ.

ದಾವಣಗೆರೆಯ ವಿವಿಯ ಪ್ರೊ.ಪ್ರಸನ್ನಕುಮಾರ್‌ ಅವರೊಂದಿಗೆ ಡಾ. ಆರ್‌.ಜೆ.ಪುನೀತ್ ಗೌಡ, ಡಾ.ಆರ್‌.ನವೀನ್‌ ಕುಮಾರ್ , ಡಾ. ಆರ್‌.ಎಸ್‌.ವರುಣ್‌ ಕುಮಾರ್‌ ಹಾಗೂ ಡಾ. ಜೆ.ಕೆ.ಮಧುಕೇಶ್‌.
ದಾವಣಗೆರೆಯ ವಿವಿಯ ಪ್ರೊ.ಪ್ರಸನ್ನಕುಮಾರ್‌ ಅವರೊಂದಿಗೆ ಡಾ. ಆರ್‌.ಜೆ.ಪುನೀತ್ ಗೌಡ, ಡಾ.ಆರ್‌.ನವೀನ್‌ ಕುಮಾರ್ , ಡಾ. ಆರ್‌.ಎಸ್‌.ವರುಣ್‌ ಕುಮಾರ್‌ ಹಾಗೂ ಡಾ. ಜೆ.ಕೆ.ಮಧುಕೇಶ್‌.

ದಾವಣಗೆರೆ: ವಿಶ್ವದ ಉನ್ನತ ವಿಜ್ಞಾನಿಗಳ ಕುರಿತು ಅಮೇರಿಕಾದ ಪ್ರತಿಷ್ಠಿತ ಸ್ಟ್ಯಾನ್ ಪೋರ್ಡ್‌ ವಿಶ್ವವಿದ್ಯಾನಿಲಯವು ಹೊರತಂದಿರುವ ವಿಶ್ವದ ಟಾಪ್‌ ಶೇ.2 ರಷ್ಟು ವಿಜ್ಞಾನಿಗಳ ಪಟ್ಟಿಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ‌ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಬಿ.ಸಿ.ಪ್ರಸನ್ನಕುಮಾರ್‌ (ಕ್ಯಾಲೆಂಡರ್ ವರ್ಷ 2023 – 10866) ಸ್ಥಾನ ಪಡೆದಿದ್ದು, ಇದರ ಜತೆಗೆ ಅವರ ಮಾರ್ಗದರ್ಶನದಲ್ಲಿನ ನಾಲ್ಕು ಸಂಶೋಧನಾರ್ಥಿಗಳಾದ ಡಾ. ಆರ್‌.ಜೆ.ಪುನೀತ್ ಗೌಡ (36192), ಡಾ.ಆರ್‌.ನವೀನ್‌ ಕುಮಾರ್ (52478), ಡಾ. ಜೆ.ಕೆ.ಮಧುಕೇಶ್‌ (151615) ಮತ್ತು ಡಾ. ಆರ್‌.ಎಸ್‌.ವರುಣ್‌ ಕುಮಾರ್‌ (197048) ಇವರುಗಳು ಕೂಡ ಸೇರ್ಪಡೆಯಾಗಿದ್ದಾರೆ.

ಸ್ಟ್ಯಾನ್‌ ಪೋರ್ಡ್‌ ವಿವಿಯು ಅಂತರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಸಂಶೋಧನೆ, ಸಂಶೋಧನಾ ವರದಿ, ಸಂಶೋಧನಾ ಉಲ್ಲೇಖಗಳು, ಲೇಖನಗಳನ್ನು ಒಳಗೊಂಡ ಹೆಚ್-ಇಂಡೆಕ್ಸ್, ಐ-ಟೆನ್ ಇಂಡೆಕ್ಸ್ ಸೇರಿದಂತೆ ವಿವಿಧ ಮಾನದಂಡಗಳನ್ನು ಪರಿಗಣಿಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಈ ಮಾನದಂಡಗಳ ಪ್ರಕಾರ ವಿಜ್ಞಾನಿಗಳನ್ನು 22 ವೈಜ್ಞಾನಿಕ ಕ್ಷೇತ್ರಗಳು ಮತ್ತು 174 ಉಪ-ಕ್ಷೇತ್ರಗಳಾಗಿ ವರ್ಗೀಕರಿಸಲಾಗಿದೆ.

ಇದರಲ್ಲಿ ದಾವಣಗೆರೆ ವಿವಿಯ ಗಣಿತಶಾಸ್ತ್ರ ವಿಭಾಗದ ಪ್ರೊ. ಬಿ.ಸಿ.ಪ್ರಸನ್ನಕುಮಾರ್ ರವರು ಸ್ಥಾನ ಪಡೆದಿದ್ದು, ಇದರ ಜತೆಗೆ ವೃತ್ತಿ ಜೀವನದ ಸಾಧನೆಯಲ್ಲಿ ಶ್ರೇಯಾಂಕವನ್ನು ಪಡೆದಿರುವುದು ಗಮನರ್ಹವಾಗಿದೆ.

ಪ್ರೊ. ಬಿ.ಸಿ.ಪ್ರಸನ್ನ ಕುಮಾರ್‌ ಮಾತ್ರವಲ್ಲದೆ ಅವರ ಮಾರ್ಗದರ್ಶದಲ್ಲಿ ಸಂಶೋಧನೆಯನ್ನು ನಡೆಸುತ್ತಿರುವ ಡಾ. ಆರ್‌.ಜೆ. ಪುನೀತ್ ಗೌಡ, ಡಾ. ಆರ್‌. ನವೀನ್‌ ಕುಮಾರ್, ಡಾ. ಜೆ.ಕೆ. ಮಧುಕೇಶ್‌ ಮತ್ತು ಡಾ. ಆರ್‌.ಎಸ್‌. ವರುಣ್‌ ಕುಮಾರ್‌ ಇವರುಗಳು ಗಣಿತಶಾಸ್ತ್ರದ ಶಾಖ ಮತ್ತು ಸಮೂಹ ವರ್ಗಾವಣೆ, ದ್ರವಚನ ಶಾಸ್ತ್ರ ವಿಷಯಗಳ ಸಂಶೋಧನೆಯಲ್ಲಿ ತೊಡಗಿದ್ದು, ಮಾರ್ಗದರ್ಶಕರೊಡನೆಯೇ ವಿಜ್ಞಾನಿಗಳ ಪಟ್ಟಿಗೆ ಸೇರಿರುವುದು ಸ್ಪೂರ್ತಿದಾಯಕವಾಗಿದೆ.

ಅಮೇರಿಕಾದ ಪ್ರತಿಷ್ಠಿತ ಸ್ಟ್ಯಾನ್ ಪೋರ್ಡ್‌ ವಿಶ್ವವಿಜ್ಞಾನಿಗಳ ಪಟ್ಟಿಯಲ್ಲಿರುವ 4 ಗಣಿತ ವಿಜ್ಞಾನಿಗಳು ಪ್ರಸುತ್ತ ರಾಜ್ಯದ ಹಾಗೂ ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ದಾವಣಗೆರೆಯ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಲ್ಲಿ ಡಾ. ಆರ್‌.ಜೆ.ಪುನೀತ್ ಗೌಡ, ಬೆಂಗಳೂರಿನ ಅಮೃತ ವಿಶ್ವವಿದ್ಯಾಪೀಠಂನ ಗಣಿತಶಾಸ್ತ್ರ ವಿಭಾಗದಲ್ಲಿ ಡಾ. ಆರ್‌. ನವೀನ್‌ ಕುಮಾರ್, ಜಿ.ಎಂ. ವಿಶ್ವವಿದ್ಯಾಲಯದಲ್ಲಿ ಡಾ. ಜೆ.ಕೆ. ಮಧುಕೇಶ್‌ ಹಾಗೂ ಮಲೇಷಿಯಾದ ಸನ್‌-ವೇ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದಲ್ಲಿ ಡಾ. ಆರ್‌.ಎಸ್‌. ವರುಣ್‌ ಕುಮಾರ್‌ ಸಹಾಯಕ ಪ್ರಾಧ್ಯಾಪಕರುಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಈ ಹಿಂದೆಯೂ ಕೂಡ 2020, 2021 ಮತ್ತು 2022 ನೇ ಸಾಲಿನಲ್ಲಿ ಬಿಡುಗಡೆಯಾದ ಪಟ್ಟಿಯಲ್ಲಿ ಡಾ.ಆರ್‌.ಜೆ. ಪುನೀತ್ ಗೌಡ ಹಾಗೂ ಡಾ. ಆರ್‌.ನವೀನ್‌ ಕುಮಾರ್ ರವರುಗಳು ಸ್ಥಾನ ಪಡೆದಿದ್ದರು ಹಾಗೂ 2022 ನೇ ಸಾಲಿನಲ್ಲಿ ಬಿಡುಗಡೆಯಾದ ಪಟ್ಟಿಯಲ್ಲಿ ಡಾ. ಜೆ.ಕೆ. ಮಧುಕೇಶ್‌ ಮತ್ತು ಡಾ. ಆರ್‌.ಎಸ್‌. ವರುಣ್‌ ಕುಮಾರ್‌ ಸ್ಥಾನ ಪಡೆದಿದ್ದರು.

ವಿಜ್ಞಾನಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಡಾ.ಬಿ.ಸಿ.ಪ್ರಸನ್ನಕುಮಾರ್, ಡಾ.ಆರ್‌.ಜೆ.ಪುನೀತ್ ಗೌಡ, ಡಾ. ಆರ್‌. ನವೀನ್‌ ಕುಮಾರ್, ಡಾ.ಜೆ.ಕೆ.ಮಧುಕೇಶ್‌ ಮತ್ತು ಡಾ.ಆರ್‌.ಎಸ್‌. ವರುಣ್‌ ಕುಮಾರ್‌ ಇವರುಗಳಿಗೆ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ ಬಿ.ಡಿ. ಕುಂಬಾರ, ದಾವಣಗೆರೆ ಬಿಐಇಟಿ ನಿರ್ದೇಶಕರಾದ ಪ್ರೊ.ವೈ.ವೃಷಭೇಂದ್ರಪ್ಪ ಮತ್ತು ಪ್ರಾಂಶುಪಾಲರಾದ ಡಾ.ಎಚ್.ಬಿ. ಅರವಿಂದ ಹಾಗೂ ಅಮೃತ ವಿಶ್ವವಿದ್ಯಾಪೀಠಂನ ಕುಲಪತಿಗಳಾದ ಶ್ರೀ ಮಾತಾ ಅಮೃತಾನಂದಮಯಿ ದೇವಿ ಮತ್ತು ಆಡಳಿತ ವರ್ಗದವರು ಅಭಿನಂದಿಸಿದ್ದಾರೆ.

Whats_app_banner