Deepavali Holidays: ಕರ್ನಾಟಕದ ಶಾಲೆಗಳಿಗೆ ದೀಪಾವಳಿ ರಜೆ ಯಾವತ್ತಿನಿಂದ ಆರಂಭ, ಯಾವತ್ತೆಲ್ಲ ರಜೆ ಇರಲಿದೆ?
ಕರ್ನಾಟಕದಲ್ಲಿ ದೀಪಾವಳಿ ಹಬ್ಬದ ಸಡಗರ ಶುರುವಾಗಿದೆ. ದೀಪಾವಳಿ ಜತೆಯಲ್ಲಿ ಕನ್ನಡ ರಾಜ್ಯೋತ್ಸವ, ವಾರಾಂತ್ಯ ಭಾನುವಾರವೂ ಬಂದಿರುವುದರಿಂದ ನಾಲ್ಕು ದಿನಗಳ ಕಾಲ ನಿರಂತರ ರಜೆ ಶಾಲೆಗಳು ಹಾಗೂ ಕಚೇರಿಗಳಿಗೆ ಸಿಗಲಿದೆ.
ಬೆಂಗಳೂರು: ದೀಪಾವಳಿ, ಕನ್ನಡ ರಾಜ್ಯೋತ್ಸವ ಹಾಗೂ ವಾರಾಂತ್ಯ ಇರುವ ಕಾರಣ ಈ ಬಾರಿ ಸಾಲು ಸಾಲು ರಜೆಗಳು ಕರ್ನಾಟಕ ಜನರಿಗೆ ಲಭಿಸಿವೆ. ಶಾಲೆಗಳಿಗೂ ನಾಲ್ಕು ದಿನಗಳ ರಜೆ ಇದೆ. ಅದರಲ್ಲೂ ಸರ್ಕಾರಿ ನೌಕರರು, ಖಾಸಗಿ ಉದ್ಯೋಗಿಗಳಿಗೆ ಸತತ ನಾಲ್ಕು ದಿನಗಳ ರಜೆಗಳು ಸಿಗಲಿವೆ. 2024ರ ಅಕ್ಟೋಬರ್ 31ರ ಗುರುವಾರದಿಂದಲೇ ರಜೆಗಳ ಸಾಲು ಶುರುವಾಗಲಿದ್ದು, ಮುಂದಿನ ಭಾನುವಾರದವರೆಗೂ ಅಂದರೆ 2024ರ ನವೆಂಬರ್ 3 ರವರೆಗೂ ಮುಂದುವರಿಯಲಿದೆ. ದೀಪಾವಳಿಗೆ ಎರಡು ದಿನ ದಿನ ಸಿಗುವುದು ಸಾಮಾನ್ಯವಾದರೂ ನಡುವಿನಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಭಾನುವಾರವೂ ಬಂದಿರುವ ಕಾರಣದಿಂದ ರಜೆಗಳ ಸಂಖ್ಯೆ ಹೆಚ್ಚಿದೆ. ಅಂದರೆ ಜನ ಈ ವಾರಾಂತ್ಯವನ್ನು ಭರ್ಜರಿ ಹಬ್ಬದ ಸಡಗರದೊಂದಿಗೆ ಕುಟುಂಬದವರೊಂದಿಗೆ ಕಳೆಯಲು ಅವಕಾಶ ಸಿಗಲಿದೆ.
ಹಿಂದಿನ ವರ್ಷಗಳಲ್ಲಿ ದೀಪಾವಳಿಗೆ ಎರಡು ದಿನ ಮಾತ್ರ ಸಿಗುತ್ತಿತ್ತು. ನರಕ ಚತುರ್ದಶಿ ಹಾಗೂ ಬಲಿಪಾಡ್ಯಮಿಗೆ ರಜೆ ನೀಡಲಾಗುತ್ತಿತ್ತು. ಅದರಲ್ಲೂ ಒಂದು ದಿನ ಶಾಲೆ, ಕಚೇರಿಗಳು ಇರುತ್ತಿದ್ದವು. ನರಕ ಚತುರ್ದಶಿ ಹಾಗೂ ಬಲಿಪಾಡ್ಯಮಿ ನಡುವೆ ಒಂದು ಶಾಲೆ, ಕಚೇರಿಗೆ ಹೋಗಬೇಕಿತ್ತು. ಈ ವರ್ಷ ನಡುವಿನ ದಿನವೂ ರಜೆ ಬಂದಿರುವುದರಿಂದ ಶಾಲೆಗೆ ಹೋಗುವ ಗೊಡವೆ ಇಲ್ಲ.
ಈ ಬಾರಿ ಈ ಎರಡು ದಿನಗಳ ನಡುವೆ ಕನ್ನಡ ರಾಜ್ಯೋತ್ಸವ ಬಂದಿದೆ. ಇದರಿಂದ ಆ ದಿನವೂ ರಜೆ ಇರಲಿದೆ. ಇದರೊಟ್ಟಿಗೆ ವಾರಾಂತ್ಯದಲ್ಲಿ ಭಾನುವಾರವೂ ಬಂದಿರುವುದರಿಂದ ದೀಪಾವಳಿ ಹಬ್ಬದ ಎರಡು ರಜೆಗಳಿಗೆ ಮತ್ತೆರಡು ದಿನ ಸೇರಿಕೊಂಡಿದೆ. ಇದರಿಂದ ಸತತ ನಾಲ್ಕು ದಿನಗಳು ಶಾಲಾ,ಕಾಲೇಜುಗಳಿಗೆ, ಸರ್ಕಾರಿ ಕಚೇರಿಗಳಿಗೆ ರಜೆ ಇರಲಿದೆ.
ಅಕ್ಟೋಬರ್ 31 ರಂದು ನರಕ ಚತುರ್ದಶಿ ಆಚರಣೆಯ ಹಿನ್ನೆಲೆಯಲ್ಲಿ ಕರ್ನಾಟಕ ಶಾಲೆಗಳನ್ನು ಮುಚ್ಚಲಾಗುವುದು. ಇದಲ್ಲದೆ, ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ನವೆಂಬರ್ 1, 2024 ರಂದು ಶಾಲೆಗಳು ಮುಚ್ಚಲ್ಪಡುತ್ತವೆ. ಕರ್ನಾಟಕ ರಾಜ್ಯವು ನವೆಂಬರ್ 2, 2024 ರಂದು ದೀಪಾವಳಿ ಬಲಿ ಪಾಡ್ಯಮಿ ರಜಾದಿನ ಘೋಷಿಸಲಾಗಿದೆ. ಇದನ್ನು ಈ ವರ್ಷದ ಆರಂಭದಲ್ಲಿಯೇ ರಜೆ ಪಟ್ಟಿಯಲ್ಲಿ ತಿಳಿಸಲಾಗಿದೆ.
ದೀಪಾವಳಿ ಹಬ್ಬದೊಟ್ಟಿಗೆ ರಾಜ್ಯೋತ್ಸವವೂ ಬಂದಿದೆ. ವಾರಾಂತ್ಯವೂ ಇರುವುದರಿಂದ ಐಟಿ ಕಂಪೆನಿಗಳು, ಪ್ರಮುಖ ಕಚೇರಿಗಳಿಗೂ ರಜೆ ನೀಡಲಾಗಿದೆ. ಅಗತ್ಯ ಕೆಲಸ ಇರುವವರನ್ನು ಬಿಟ್ಟು ಹೆಚ್ಚಿನ ಜನರಿಗೆ ರಜೆ ಸಿಗಲಿದೆ.
ಶಾಲೆಗಳಲ್ಲಿ ಬುಧವಾರವೇ ದೀಪಾವಳಿ ಹಬ್ಬದ ಸಡಗರ ಇರಲಿದೆ. ಗುರುವಾರ ಹಾಗೂ ಶನಿವಾರ ದೀಪಾವಳಿ ಇರುವುದರಿಂದ ಈಗಲೇ ಹಬ್ಬದ ಆಚರಣೆ ಮಾಡಲಾಗುತ್ತದೆ. ಕನ್ನಡ ರಾಜ್ಯೋತ್ಸವದ ಚಟುವಟಿಕೆಗಳನ್ನು ಆಚರಿಸುವ ಚಟುವಟಿಕೆ ಇರಲಿದೆ. ಅದನ್ನು ಬಿಟ್ಟರೆ ನಾಲ್ಕು ದಿನ ಬಹುತೇಕ ರಜೆಯೇ ಎಂದು ಶಾಲೆಯ ಶಿಕ್ಷಕರು ಹೇಳಿದ್ದಾರೆ.
ಹೀಗಿದೆ ರಜೆ ಲೆಕ್ಕಾಚಾರ
ಅಕ್ಟೋಬರ್ 31 ಗುರುವಾರ - ನರಕ ಚತುರ್ದಶಿ ರಜೆ
ನವೆಂಬರ್ 1 ಶುಕ್ರವಾರ - ಕನ್ನಡ ರಾಜ್ಯೋತ್ಸವ ರಜೆ
ನವೆಂಬರ್ 2 ಶನಿವಾರ-ಬಲಿಪಾಡ್ಯಮಿ ರಜೆ
ನವೆಂಬರ್ 3 ಭಾನುವಾರ- ವಾರಾಂತ್ಯದ ರಜೆ