ಕನ್ನಡ ಸುದ್ದಿ  /  ಕರ್ನಾಟಕ  /  Prajwal Revanna: ಪ್ರಜ್ವಲ್‌ ರೇವಣ್ಣಗೆ ಚುನಾವಣೆಯಲ್ಲೂ ಸೋಲು, ಈಗ ಜೈಲು, ಮುಂದೇನು: 10 ಅಂಶಗಳು

Prajwal Revanna: ಪ್ರಜ್ವಲ್‌ ರೇವಣ್ಣಗೆ ಚುನಾವಣೆಯಲ್ಲೂ ಸೋಲು, ಈಗ ಜೈಲು, ಮುಂದೇನು: 10 ಅಂಶಗಳು

Prajwal Revanna ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರು ಎದುರು ಕಾನೂನು ಹಾಗೂ ರಾಜಕೀಯ ಹೋರಾಟದ ಹಾದಿ ಹೀಗಿದೆ.

ಪ್ರಜ್ವಲ್‌ ರೇವಣ್ಣ ಕಾನೂನು ಹಾಗೂ ರಾಜಕೀಯ ಹೋರಾಟ ಹೇಗಿರಲಿದೆ.
ಪ್ರಜ್ವಲ್‌ ರೇವಣ್ಣ ಕಾನೂನು ಹಾಗೂ ರಾಜಕೀಯ ಹೋರಾಟ ಹೇಗಿರಲಿದೆ.

ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಪ್ರಕರಣದ ಒಂದು ಹಂತಕ್ಕೆ ಬಂದಿದೆ. ನಿರಂತರವಾಗಿ ತಲೆ ಮರೆಸಿಕೊಂಡು ಚುನಾವಣೆ ವೇಳೆ ಸಾಕಷ್ಟು ಚರ್ಚೆಗೆ ವೇದಿಕೆ ಕಲ್ಪಿಸಿದ್ದ ಪ್ರಜ್ವಲ್‌ ರೇವಣ್ಣ ಹಾಸನದಲ್ಲೂ ಸೋತು ಮಾಜಿ ಸಂಸದರಾಗಿದ್ದಾರೆ. ಪೊಲೀಸ್‌ ವಿಶೇಷ ತನಿಖಾ ತಂಡದೊಂದಿಗೆ ವಿಚಾರಣೆಯನ್ನೂ ಎದುರಿಸಿದ್ದಾರೆ. ಈಗ ಜೈಲು ಕೂಡ ಸೇರಿದ್ದಾರೆ. ಈಗ ಮುಂದೇನು ಎನ್ನುವ ಪ್ರಶ್ನೆ ಎದುರಾಗುತ್ತದೆ. ಒಂದು ಪ್ರಕರಣದಲ್ಲಿ ವಿಚಾರಣೆ ಮುಗಿಸಿ ಕಸ್ಟಡಿ ಅವಧಿ ಮುಗಿದಿರುವುದರಿಂದ ಜೈಲು ಸೇರಿರುವ ಪ್ರಜ್ವಲ್‌ ಅವರ ಕಾನೂನು ಹೋರಾಟ ಹೇಗಿರಲಿದೆ. ಅಲ್ಲದೇ ಹಾಸನ ಕ್ಷೇತ್ರವನ್ನು ಕಳೆದುಕೊಂಡಿರುವ ಪ್ರಜ್ವಲ್‌ ಹಾಗೂ ಅವರ ಕುಟುಂಬದವರು ಏನು ಮಾಡಬೇಕಾಗುತ್ತದೆ. ಕಾನೂನು ಹೋರಾಟ ಈಗ ಮೊದಲ ಆದ್ಯತೆ, ಆನಂತರ ಹಾಸನ ಕ್ಷೇತ್ರದಲ್ಲಿ ಆಗಿರುವ ಭಾರೀ ಹೊಡೆತಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿರುವುದು ಮುಂದೆ ಇರುವ ದೊಡ್ಡ ಸವಾಲು. ಇಲ್ಲಿದೆ ಆ ಬೆಳವಣಿಗೆಗಳ ಹತ್ತು ಅಂಶಗಳು.

ಟ್ರೆಂಡಿಂಗ್​ ಸುದ್ದಿ

  • ಪ್ರಜ್ವಲ್‌ ರೇವಣ್ಣ ವಿರುದ್ದ ಮೂರು ಪ್ರಕರಣದಲ್ಲಿ ಮೊದಲ ಪ್ರಕರಣದಲ್ಲಿ ವಿಚಾರಣೆ ಮುಗಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈಗ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಕೂಡ ಸೇರಿದ್ದಾರೆ.
  • ಮೊದಲ ಪ್ರಕರಣದಲ್ಲಿ ಜಾಮೀನು ಕೋರಿ ಹೈಕೋರ್ಟ್‌ ಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಹೈಕೋರ್ಟ್‌ ಜಾಮೀನು ನೀಡಿದರೆ ಪ್ರಜ್ವಲ್‌ ರೇವಣ್ಣ ಮೊದಲ ಪ್ರಕರಣದಲ್ಲಿ ಹೊರ ಬರಬಹುದು.
  • ಇನ್ನೂ ಎರಡು ಪ್ರಕರಣಗಳು ಬಾಕಿಯಿದ್ದು, ಆ ಪ್ರಕರಣದಲ್ಲಿ ಬಾಡಿ ವಾರೆಂಟ್‌ ಜಾರಿಗೊಳಿಸಿ ಪ್ರಜ್ವಲ್‌ ಅವರನ್ನು ಎಸ್‌ಐಟಿ ಪೊಲೀಸರು ವಶಕ್ಕೆ ಪಡೆಯಬಹುದು. ಅದಕ್ಕೆ ಇನ್ನೂ ಕೆಲ ದಿನ ಸಮಯವನ್ನು ಅವರು ತೆಗೆದುಕೊಳ್ಳಬಹುದು.
  • ಬಾಕಿ ಉಳಿದಿರುವ ಇನ್ನೂ ಎರಡು ಪ್ರಕರಣದಲ್ಲೂ ಜಾಮೀನಿಗೆ ಕೋರಿಗೆ ಬೆಂಗಳೂರಿನ ಸ್ಥಳೀಯ ನ್ಯಾಯಾಲಯದಲ್ಲಿ ಪ್ರಜ್ವಲ್‌ ಅರ್ಜಿ ಸಲ್ಲಿಸಿದ್ದು ಅವುಗಳ ವಿಚಾರಣೆ ಇನ್ನೂ ಬಾಕಿಯಿದೆ.
  • ಆ ಎರಡೂ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಸಿಕ್ಕರೆ ಇನ್ನೊಮ್ಮೆ ಪ್ರಜ್ವಲ್‌ ರೇವಣ್ಣಗೆ ಬಂಧನದ ಭೀತಿ ಇರುವುದಿಲ್ಲ.
  • ಈಗಾಗಲೇ ಮೂರು ಪ್ರಕರಣದಲ್ಲಿ ಎಸ್‌ಐಟಿ ವಿಚಾರಣೆ ನಡೆಸಿ ಸ್ಥಳ ಮಹಜರು ನಡೆಸಿರುವುದರಿಂದ ಆ ಅಂಶದ ಮೇಲೆ ಜಾಮೀನಿಗೆ ಅರ್ಜಿ ಸಲ್ಲಿಸಬಹುದು
  • ಸದ್ಯಕ್ಕೆ ಪ್ರಜ್ವಲ್‌ ರೇವಣ್ಣ ಅವರು ಬಿಡುಗಡೆಯಂತೂ ಇಲ್ಲ. ಅವರು ಸದ್ಯಕ್ಕೆ ಜೈಲಿನಲ್ಲಿಯೇ ಇರಬೇಕಾಗುತ್ತದೆ. ಹೈಕೋರ್ಟ್‌ನಲ್ಲಿ ಜಾಮೀನು ಸಿಕ್ಕರೆ ಮಾತ್ರ ಹೊರ ಬರಬಹುದು. ಇದರಿಂದ ತಾವು ಪ್ರತಿನಿಧಿಸುತ್ತಿದ್ದ ಹಾಸನ ಕ್ಷೇತ್ರದ ಕಡೆಗೆ ಪ್ರಜ್ವಲ್‌ ರೇವಣ್ಣ ಅವರಂತೂ ಹೋಗಲು ಅವಕಾಶವೇ ಇಲ್ಲ. ಇದಕ್ಕೆ ಸಮಯ ಹಿಡಿಯುತ್ತದೆ.
  • ಈಗಾಗಲೇ ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿರುವುದರಿಂದ ಕ್ಷೇತ್ರದ ಜವಾಬ್ದಾರಿಯೂ ಇರುವುದಿಲ್ಲ. ಒಮ್ಮೆ ಮೂರು ಪ್ರಕರಣದಲ್ಲೂ ಜಾಮೀನು ಸಿಕ್ಕ ನಂತರ ಕ್ಷೇತ್ರಕ್ಕೆ ಹೋಗಬೇಕಾಗುತ್ತದೆ.
  • ರಾಜಕೀಯವಾಗಿ ಸಾಕಷ್ಟು ಹಿನ್ನಡೆ ಆಗಿರುವ ಎಚ್‌.ಡಿ.ರೇವಣ್ಣ ಅವರ ಕುಟುಂಬದವರು ಕೆಲ ದಿನ ತೊಂದರೆ ಅನುಭವಿಸಲೇಬೇಕಾಗುತ್ತದೆ. ಇನ್ನೂ ವಿಧಾನಸಭೆ ಚುನಾವಣೆ ದೂರ ಇರುವುದರಿಂದ ಅಷ್ಟಾಗಿ ಸಮಸ್ಯೆ ಆಗುವುದಿಲ್ಲ.
  • ಸದ್ಯದಲ್ಲೇ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳೂ ಬರಬಹುದು. ಆಗ ಹಾಸನ ಜಿಲ್ಲೆಯಲ್ಲಿ ಜೆಡಿಎಸ್‌ ನಾಯಕತ್ವದ ಸವಾಲು ಎದುರಾಗಲಿದೆ. ಪ್ರಜ್ವಲ್‌ ಆ ಹೊತ್ತಿಗೆ ಬಿಡುಗಡೆಯಾದರೆ ಇದೇ ಚುನಾವಣೆ ಸವಾಲಾಗಿ ಸ್ವೀಕರಿಸಿ ಎದುರಾಳಿಗಳಿಗೆ ಉತ್ತರ ನೀಡಬೇಕಾಗುತ್ತದೆ.

ಟಿ20 ವರ್ಲ್ಡ್‌ಕಪ್ 2024