2025 Plans: ಹೊಸ ವರ್ಷದ ಸಂತಸದಲ್ಲಿ ನಮ್ಮನ್ನು ನಾವು ರಿಲಾಂಚ್ ಮಾಡಿಕೊಳ್ಳುವುದು ಹೇಗೆ, ಹೀಗಿರಲಿ ಆ ನಿಮ್ಮ ಪಯಣ
ಕನ್ನಡ ಸುದ್ದಿ  /  ಕರ್ನಾಟಕ  /  2025 Plans: ಹೊಸ ವರ್ಷದ ಸಂತಸದಲ್ಲಿ ನಮ್ಮನ್ನು ನಾವು ರಿಲಾಂಚ್ ಮಾಡಿಕೊಳ್ಳುವುದು ಹೇಗೆ, ಹೀಗಿರಲಿ ಆ ನಿಮ್ಮ ಪಯಣ

2025 Plans: ಹೊಸ ವರ್ಷದ ಸಂತಸದಲ್ಲಿ ನಮ್ಮನ್ನು ನಾವು ರಿಲಾಂಚ್ ಮಾಡಿಕೊಳ್ಳುವುದು ಹೇಗೆ, ಹೀಗಿರಲಿ ಆ ನಿಮ್ಮ ಪಯಣ

New Year 2025: ನಮ್ಮನ್ನು ನಾವು ಮರು ರೂಪಿಸಿಕೊಳ್ಳುವುದು ಹೇಗೆ, ರೀಲಾಂಚ್‌ ಆಗಬೇಕೆಂದರೆ ನಮ್ಮ ಯೋಚನೆ ಹಾಗೂ ಯೋಜನೆಗಳು ಹೇಗಿರಬೇಕು. ಇಲ್ಲಿದೆ ಕೆಲ ಟಿಪ್ಸ್‌.

ವಲಸೆ ಎನ್ನುವುದು ಹಕ್ಕಿಯ ಬದುಕಿನ ರೀಲಾಂಚ್‌ನ ಮುಖ್ಯ ಘಟ್ಟ.
ವಲಸೆ ಎನ್ನುವುದು ಹಕ್ಕಿಯ ಬದುಕಿನ ರೀಲಾಂಚ್‌ನ ಮುಖ್ಯ ಘಟ್ಟ. (Git Hub)

ಆನೆ ಎಂಬ ದೈತ್ಯಾಕಾರದ ಪ್ರಾಣಿ ಹೇಗೆ ರೀಲಾಂಚ್‌ ಆಗುತ್ತದೆ. ತನ್ನನ್ನು ತಾನು ಮರುರೂಪಿಸಿಕೊಳ್ಳುತ್ತಲೇ ಏಳೆಂಟು ದಶಕಗಳ ಕಾಲ ಬದುಕಬಲ್ಲದು ಎನ್ನುವುದಾದರು ಗೊತ್ತಿದದೆಯಾ. ಅದು ನಿಜಕ್ಕೂ ಆಸಕ್ತಿಕರವೇ. ಕಾಡಿನಲ್ಲಿ ವಾಸಿಸುವ ಆನೆ ಎಷ್ಟೇ ವರ್ಷವಾದರೂ ತಾನು ಬಂದ ಹಾದಿಯನ್ನು ಮರೆಯುವುದಿಲ್ಲವಂತೆ. ಆ ಹಾದಿನ ನೆನಪುಗಳು ಅದರಲ್ಲಿ ಸದಾ ಹಸಿರಾಗಿರುತ್ತವೆ. ಅಲ್ಲಿ ಸಿಕ್ಕ ಆಹಾರ, ಅದರಲ್ಲೂ ತನಗೆ ಪ್ರಿಯವಾದ ಆಹಾರ ಸಿಕ್ಕಿದ್ದನ್ನಂತೂ ಅದು ಮರೆಯುವುದಿಲ್ಲ. ಹಳೆಯ ಮಾರ್ಗದುದ್ದಕ್ಕೂ ಹೋಗುವ ಮೂಲಕ ಆನೆ ತನ್ನನ್ನು ತಾನು ರೀಲಾಂಚ್‌ ಮಾಡಿಕೊಳ್ಳುತ್ತಾ ಹೋಗುತ್ತದೆ. ಆನೆಯಂತಹ ಸಂಘಜೀವಿ. ಭಾವಜೀವಿಯ ಬದುಕೇ ನಮ್ಮನ್ನು ನಾವು ಮರು ರೂಪಿಸಿಕೊಳ್ಳಲು ಮಾದರಿಯಾಗಬಲ್ಲದು.

ಪುಟ್ಟ ಹಕ್ಕಿಗಳು ತಮ್ಮನ್ನು ತಾವು ರೀಲಾಂಚ್‌ ಮಾಡಿಕೊಳ್ಳುತ್ತಲೇ ಪುಟಿದೇಳುವ ಕ್ರಮವನ್ನು ರೂಢಿಸಿಕೊಂಡಿರುವುದು ಹೇಗೆಂದುಕೊಂಡಿದ್ದೀರಿ. ಸಾವಿರಾರು ಕಿ.ಮಿ ದೂರದಲ್ಲೆಲ್ಲೋ ಇದ್ದು ಅಲ್ಲಿನ ಹವಾಮಾನ ಬದಲಾಗುತ್ತಿದ್ದಂತೆ ಅತೀ ಶೀತದ ಪ್ರದೇಶದಿಂದ ಸಮತೋಲಿತ ಹವಾಮಾನ ಇರುವ ಪ್ರದೇಶಗಳಿಗೆ ಹಕ್ಕಿಗಳು ವಲಸೆ ಬರುತ್ತವೆ. ಅದೂ ಸಂತಾನಾಭಿವೃದ್ದಿಗೆ ಖಂಡಗಳನ್ನು ದಾಟಿಕೊಂಡು ಬರುವ ಹಕ್ಕಿಗಳು ಮರುಹುಟ್ಟು ಪಡೆದೇ ಹೋಗುತ್ತವೆ. ಆರು ತಿಂಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಬರುವ ಹಿಂದೆ ಇರುವುದು ಇಂತಹ ರೀಲಾಂಚ್‌ ಮನೋಭಾವವೇ. ಒಂಟಿಯಾಗಿ ಬಂದು ಜಂಟಿಯಾಗಿ ಅಂದರೆ ತನ್ನ ಮರಿಯೊಂದಿಗೆ ಆ ಹಕ್ಕಿ ಸ್ವಸ್ಥಾನಕ್ಕೆ ಮರಳುತ್ತದೆ. ಹೀಗೆ ಆ ವರ್ಷದ ವಲಸೆ ಪ್ರಕ್ರಿಯೆ ಮುಗಿಸುವ ಹಕ್ಕಿಯ ಬದುಕನ್ನು ರೀಲಾಂಚ್‌ ಅಲ್ಲದೇ ಬೇರೆ ಏನು ಹೇಳಬಹುದು.

ಮನುಷ್ಯ ಒಂದು ರೀತಿಯಲ್ಲಿ ಮರುಹುಟ್ಟು ಪಡುವುದು, ತನ್ನನ್ನು ತಾನು ಮರು ರೂಪಿಸಿಕೊಳ್ಳುವುದು. ತನ್ನಿಂದ ಈವರೆಗೂ ಆಗದ್ದನ್ನು ಆಗು ಮಾಡಿಕೊಳ್ಳುವ ಕ್ರಮವನ್ನೂ ರಿಲಾಂಚ್‌ ಎಂತಲೇ ವ್ಯಾಖ್ಯಾನಿಸಬಹುದು. ಇದೊಂದು ಬರೀ ಯಾಂತ್ರಿಕ ಕ್ರಮ ಅಲ್ಲವೇ ಅಲ್ಲ. ಅದೊಂದು ರೀತಿ ಧ್ಯಾನಸ್ಥ ಮನಸ್ಥಿತಿ. ನನ್ನನ್ನು ಹೀಗೆ ನೋಡಿಕೊಂಡು ಒಂದಷ್ಟು ಸುಸ್ಥಿರ ಮಾರ್ಗದತ್ತ ನನ್ನ ದೇಹ ಹಾಗೂ ಮನಸಿನ ಜೋಡಣೆಯೊಂದಿಗೆ ಮುಂದೆ ಹೋಗಬಲ್ಲೆ ಎನ್ನುವುದು ಪ್ರತಿಯೊಬ್ಬರಿಗೆ ಬೇಕು. ಪ್ರಾಣಿ- ಪಕ್ಷಿಗಳಲ್ಲೇ ಅಂತ ರೀಲಾಂಚ್‌ನ ಮಾರ್ಗ ಇರುವಾಗ ಮನುಷ್ಯನಿಗೆ ಬೇಡವೇ ಎನ್ನುವುದು ಸಾಮಾನ್ಯ ಪ್ರಶ್ನೆ. ಅದರಕ್ಕೆ ಉತ್ತರವೂ ನಾವೇ. ನಮ್ಮ ಕ್ರಿಯೆಯೇ.

ರೀಲಾಂಚ್‌ನ ಸಣ್ಣ ಹಾದಿಗಳು

  • ನಾನು ಈವರೆಗೂ ಏನು ಮಾಡಿದೆ. ಏನೇನೂ ಓದಿದೆ. ಏನನ್ನಾದರೂ ಸಾಧಿಸಿದೆ ಎಂದು ಒಂದೇ ಕ್ಷಣ ಕುಳಿತು ಯೋಚಿಸಿ. ಆಗ ನಿಮ್ಮ ಸಾಧನೆ, ವೈಫಲ್ಯಗಳ ಪಟ್ಟಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಆಗ ಇದು ಸರಿಯಾಗಿದೆ. ಇದು ತಪ್ಪಾಗಿದೆ. ಹೀಗೆ ಆಗಬೇಕಿತ್ತು ಎನ್ನುವುದು ನಿಮ್ಮ ಅರಿವಿಗೆ ಬರಬಹುದು. ಅಂತಹ ಅರಿವಿನ ಕ್ಷಣವೇ ನಿಮ್ಮನ್ನು ನೀವು ರೀಲಾಂಚ್‌ ಮಾಡಿಕೊಳ್ಳುವ ಕ್ಷಣವೂ ಆಗಬಹುದು.
  • ನಾವು ನಾವಾಗಿ ಯೋಚಿಸುವ ಕ್ರಮವನ್ನು ಬೆಳೆಸಿಕೊಳ್ಳುವುದು. ಇಂತಹ ನಾವು ಏನಾಗಿದ್ದೇವೆ. ಏನಾಗಬೇಕಿತ್ತು ಎಂದು ಯೋಚಿಸಿಕೊಳ್ಳುವ ಕ್ರಮ
  • ನಮ್ಮೊಳಗೆ ಇರುವ ಆ ಶಕ್ತಿ ನನ್ನನ್ನು ಎಂತಹ ಸನ್ನಿವೇಶವನ್ನು ಕೈ ಹಿಡಿದು ಮುನ್ನಡೆಸಬಲ್ಲದು ಎನ್ನುವ ಅಪರಿಮಿತ ನಂಬಿಕೆ ಇಟ್ಟುಕೊಳ್ಳುವುದು
  • ಈವರೆಗೂ ನಾನು ಹಾಕಿಕೊಂಡ ಯೋಜನೆ, ಕಾರ್ಯಕ್ರಮಗಳು ಹೇಗೆ ರೂಪಿತಗೊಂಡಿವೆ. ನಾನು ಅಂದುಕೊಂಡಷ್ಟು ರೀತಿ ಬದಲಾವಣೆ ಆಗಿದೆಯಾ ಎನ್ನುವ ಪರಾಮರ್ಶೆ
  • ನನ್ನ ದಾರಿ ಸರಿಯಾದ ದಿಕ್ಕಿನಲ್ಲಿ ಸಾಗಿದೆಯಾ. ಆ ದಿಕ್ಕಿನಲ್ಲಿ ಹೋಗುವಾಗ ವ್ಯತ್ಯಾಗಳೇನಾದರೂ ಆದವಾ ಎನ್ನುವುದನ್ನು ಓರೆಗೆ ಹಚ್ಚುವುದು
  • ಯಾವುದೇ ಮನುಷ್ಯ ತಾನು ನಂಬಿ ಹೋಗುವ ಹಾದಿಯ ಕುರಿತು ಆರಂಭದಲ್ಲೇ ಸ್ಪಷ್ಟತೆ ಇರಲೇಬೇಕು. ಆ ಹಾದಿಯಲ್ಲಿ ಹೋಗುವಾಗಿನ ಕಷ್ಟ ಸುಖಗಳ ಅರಿವಿರಬೇಕು.
  • ಎಲ್ಲವೂ ಆಗುವುದೇ ಇಲ್ಲ. ನನ್ನಿಂದ ಅಸಾಧ್ಯ ಎನ್ನುವ ಋಣಾತ್ಮಕ ಮನೋಭಾವದಿಂದ ಆದಷ್ಟು ದೂರ ಇರುವುದನ್ನು ರೂಢಿಸಿಕೊಳ್ಳುವುದು
  • ಇದು ನಾನೇ ಮಾಡಿಯೇ ತೀರುತ್ತದೆ. ಇದು ನನ್ನಿಂದ ಆಗಬಹುದಾದ ಕೆಲಸ. ಇದನ್ನು ಮಾಡಿದರೆ ನನಗೆ ಆತ್ಮತೃಪ್ತಿ ಎಂಬ ಭಾವ ಬೆಳೆಸಿಕೊಳ್ಳುವುದು
  • ಯಾವುದೇ ವಿಚಾರವಾದರೂ ಅದರಲ್ಲಿ ಒಂದಿಷ್ಟು ಪೂರಕವಾಗಿ ಯೋಚಿಸುತ್ತಲೇ ಅದರಲ್ಲಿ ಯಶ ಕಾಣುತ್ತೇನೆ ಎನ್ನುವ ಬಲವಾದ ಆತ್ಮವಿಶ್ವಾಸ ಬೇಕು.
  • ಹೊಸತನ್ನು ಏನಾದರೂ ಕಲಿತೇ ತೀರುತ್ತೇನೆ. ತಿಳಿಯಲು ಪ್ರಯತ್ನಿಸುತ್ತೇನೆ. ಮಾಡಿಯೇ ಬಿಡುತ್ತೇನೆ ಎಂಬ ಬಲವಾದ ನಂಬಿಕೆಯ ಹಾದಿಯೂ ಬೇಕೇಬೇಕು
  • ನಾನು ಅಂದುಕೊಂಡಿದ್ದು ಏನೂ ಆಗಲೇ ಇಲ್ಲ. ಆಗುವುದೂ ಇಲ್ಲ ಎನ್ನುವ ವಿಷಣ್ಣ ಭಾವದಿಂದ ಹೊರ ಬರುವ ಪ್ರಯತ್ನವೇ ನಿಮ್ಮ ಹೊಸ ಹಾದಿಯ ಆರಂಭ
  • ಕಲಿಕೆ ಎನ್ನುವುದು ಅರಿವಿನ ಮಹಾದ್ವಾರ. ಅರಿವು ನಿಮ್ಮ ಮನಸಿನ ಮೂಲಕ ನಮ್ಮೊಳಿಗಿನ ಶಕ್ತಿಯನ್ನು ಉದ್ದೀಪಿಸಿ ಆಗಿಸಿಕೊಡುವ ಹಂತಕ್ಕೂ ತಲುಪಿಸಬಹುದು.

ಹೊಸ ವರ್ಷ ಎನ್ನುವುದು ನಮ್ಮ ಬದುಕಿನಲ್ಲಿ ಹೊಸತೇನನ್ನೂ ತೆರೆದುಕೊಳ್ಳುವ ಸಮಯ ಎನ್ನುವ ಮನೋಭಾವ ಬೆಳೆಸಿಕೊಂಡು ಮುಂದಡಿ ಇರಲಿ ಆರಂಭಿಸಿ. ನಿಮ್ಮ ಮನಸನ್ನು ನಂಬಿ ಹೆಜ್ಜೆ ಇಟ್ಟರೆ ನೀವು ಮತ್ತೆ ನೀವಾಗುವ ಕ್ಷಣವೂ ಅದೇ ಆಗಿರಬಹುದು. ಅದಕ್ಕೆ ನಾವು ಅಣಿಯಾಗಬೇಕಷ್ಟೇ.

Whats_app_banner