ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಪ್ರಕಟ, ದುಬೈನಲ್ಲಿ ಭಾರತದ ಪಂದ್ಯಗಳು; ಫೆಬ್ರವರಿ 23ರಂದು ಇಂಡೋ-ಪಾಕ್ ಕಾದಾಟ, ಹೀಗಿದೆ ಶೆಡ್ಯೂಲ್
ಕನ್ನಡ ಸುದ್ದಿ  /  ಕ್ರಿಕೆಟ್  /  ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಪ್ರಕಟ, ದುಬೈನಲ್ಲಿ ಭಾರತದ ಪಂದ್ಯಗಳು; ಫೆಬ್ರವರಿ 23ರಂದು ಇಂಡೋ-ಪಾಕ್ ಕಾದಾಟ, ಹೀಗಿದೆ ಶೆಡ್ಯೂಲ್

ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಪ್ರಕಟ, ದುಬೈನಲ್ಲಿ ಭಾರತದ ಪಂದ್ಯಗಳು; ಫೆಬ್ರವರಿ 23ರಂದು ಇಂಡೋ-ಪಾಕ್ ಕಾದಾಟ, ಹೀಗಿದೆ ಶೆಡ್ಯೂಲ್

ICC Mens Champions Trophy 2025 schedule announced: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಅಧಿಕೃತ ವೇಳಾಪಟ್ಟಿ ಪ್ರಕಟಗೊಂಡಿದೆ. ಫೆಬ್ರವರಿ 19ರಿಂದ ಆರಂಭವಾಗುವ ಟೂರ್ನಿ ಮಾರ್ಚ್​ 9ಕ್ಕೆ ಮುಕ್ತಾಯವಾಗಲಿದೆ.ಫೆಬ್ರವರಿ 23 ಇಂಡೋ-ಪಾಕ್ ಪಂದ್ಯ ನಡೆಯಲಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಪ್ರಕಟ, ದುಬೈನಲ್ಲಿ ಭಾರತದ ಪಂದ್ಯಗಳು; ಫೆಬ್ರವರಿ 23 ಇಂಡೋ-ಪಾಕ್ ಪಂದ್ಯ
ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಪ್ರಕಟ, ದುಬೈನಲ್ಲಿ ಭಾರತದ ಪಂದ್ಯಗಳು; ಫೆಬ್ರವರಿ 23 ಇಂಡೋ-ಪಾಕ್ ಪಂದ್ಯ

ಪಾಕಿಸ್ತಾನ ಆತಿಥ್ಯದಲ್ಲಿ ನಡೆಯಲಿರುವ ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ-2025 ಅಧಿಕೃತ ವೇಳಾಪಟ್ಟಿಯನ್ನು ಡಿಸೆಂಬರ್​​ 24ರಂದು ಐಸಿಸಿ ಪ್ರಕಟಿಸಿದೆ. ಟೂರ್ನಿಯು ಫೆಬ್ರವರಿ 19ರಂದು ಕರಾಚಿಯಲ್ಲಿ ಪ್ರಾರಂಭವಾಗಲಿದ್ದು, ಮಾರ್ಚ್ 9 ರಂದು ಫೈನಲ್ ನಡೆಯಲಿದೆ. ಟೀಮ್ ಇಂಡಿಯಾದ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಹೈಬ್ರಿಡ್​ ಮಾದರಿಯಲ್ಲಿ ಜರುಗುವ ಈ ಟೂರ್ನಿಯಲ್ಲಿ 8 ತಂಡಗಳು ಭಾಗವಹಿಸಲಿದ್ದು, ಅವುಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ.

ಎಂಟು ತಂಡಗಳ ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳ ಪಾಕಿಸ್ತಾನ ಮತ್ತು ದುಬೈನಲ್ಲಿ ಪಂದ್ಯಗಳು ಜರುಗಲಿವೆ. ಪಾಕಿಸ್ತಾನದಲ್ಲಿ ರಾವಲ್ಪಿಂಡಿ, ಲಾಹೋರ್ ಮತ್ತು ಕರಾಚಿ ಮೈದಾನಗಳಲ್ಲಿ ಪಂದ್ಯಗಳು ನಡೆದರೆ, ಲಾಹೋರ್ 2ನೇ ಸೆಮಿಫೈನಲ್ ಪಂದ್ಯಕ್ಕೆ ಆತಿತ್ಯ ವಹಿಸಲಿದೆ. ಭಾರತದ ಮೂರು ಗುಂಪು ಪಂದ್ಯಗಳು ಮತ್ತು ಮೊದಲ ಸೆಮಿಫೈನಲ್ ದುಬೈನಲ್ಲಿ ನಡೆಯಲಿದೆ. ಮಾರ್ಚ್ 9 ರಂದು ಲಾಹೋರ್ ಫೈನಲ್‌ಗೆ ಆತಿಥ್ಯ ವಹಿಸಲಿದೆ. ಭಾರತ ಅರ್ಹತೆ ಪಡೆದರೆ ಈ ಪಂದ್ಯ ದುಬೈನಲ್ಲಿ ನಡೆಯಲಿದೆ. ಸೆಮಿಫೈನಲ್, ಫೈನಲ್ ಎರಡೂ ಮೀಸಲು ದಿನಗಳನ್ನು ಹೊಂದಿರುತ್ತದೆ.

ಫೆಬ್ರವರಿ 19 ರಂದು ಗ್ರೂಪ್ ಎ ಟೂರ್ನಮೆಂಟ್​ನ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ- ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಇದು ಕರಾಚಿಯಲ್ಲಿ ನಡೆಯಲಿದೆ. ಮರುದಿನ ಭಾರತ ಮತ್ತು ಬಾಂಗ್ಲಾದೇಶ ನಡುವೆ ಸೆಣಸಾಟ ನಡೆಯಲಿದೆ. ಆ ಮೂಲಕ ಭಾರತ ತನ್ನ ಅಭಿಯಾನ ಆರಂಭಿಸಲಿದೆ. ಗ್ರೂಪ್ ಬಿ ಪಂದ್ಯಗಳು ಫೆಬ್ರವರಿ 21 ರಂದು ಶುರುವಾಗುತ್ತೆ. ಇದು ಅಫ್ಘಾನಿಸ್ತಾನ ಮತ್ತು ಸೌತ್ ಆಫ್ರಿಕಾ ನಡುವೆ ನಡೆಯುತ್ತದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಒಂಬತ್ತನೇ ಆವೃತ್ತಿಯು 19 ದಿನಗಳ ಕಾಲ ನಡೆಯಲಿದೆ.

ಭಾರತ vs ಪಾಕಿಸ್ತಾನ ಪಂದ್ಯ ಯಾವಾಗ?

ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಫೆಬ್ರವರಿ 23ರಂದು ದುಬೈನಲ್ಲಿ ನಡೆಯಲಿದೆ. ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರ ಎಂಟು ಸ್ಥಾನಗಳಲ್ಲಿ ಸ್ಥಾನ ಪಡೆದ ತಂಡಗಳಾಗಿವೆ.

ಗುಂಪುಗಳು

ಗುಂಪು ಎ - ಪಾಕಿಸ್ತಾನ, ಭಾರತ, ನ್ಯೂಜಿಲೆಂಡ್, ಬಾಂಗ್ಲಾದೇಶ

ಗುಂಪು ಬಿ - ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಇಂಗ್ಲೆಂಡ್

ಚಾಂಪಿಯನ್ಸ್ ಟ್ರೋಫಿ 2025 ತಾತ್ಕಾಲಿಕ ವೇಳಾಪಟ್ಟಿ

  • ಫೆಬ್ರವರಿ 19, 2025 - ಪಾಕಿಸ್ತಾನ vs ನ್ಯೂಜಿಲೆಂಡ್ (ಮಧ್ಯಾಹ್ನ 2:30, ಕರಾಚಿ)
  • ಫೆಬ್ರವರಿ 20, 2025 - ಬಾಂಗ್ಲಾದೇಶ vs ಭಾರತ (ಮಧ್ಯಾಹ್ನ 2:30, ದುಬೈ)
  • ಫೆಬ್ರವರಿ 21, 2025 - ಅಫ್ಘಾನಿಸ್ತಾನ vs ದಕ್ಷಿಣ ಆಫ್ರಿಕಾ (ಮಧ್ಯಾಹ್ನ 2:30, ಕರಾಚಿ)
  • ಫೆಬ್ರವರಿ 22, 2025 - ಆಸ್ಟ್ರೇಲಿಯಾ vs ಇಂಗ್ಲೆಂಡ್ (ಮಧ್ಯಾಹ್ನ 2:30, ಲಾಹೋರ್)
  • ಫೆಬ್ರವರಿ 23, 2025 - ಪಾಕಿಸ್ತಾನ vs ಭಾರತ (ಮಧ್ಯಾಹ್ನ 2:30, ದುಬೈ)
  • ಫೆಬ್ರವರಿ 24, 2025 - ಬಾಂಗ್ಲಾದೇಶ vs ನ್ಯೂಜಿಲೆಂಡ್ (ಮಧ್ಯಾಹ್ನ 2:30, ರಾವಲ್ಪಿಂಡಿ)
  • ಫೆಬ್ರವರಿ 25, 2025 - ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ (ಮಧ್ಯಾಹ್ನ 2:30, ರಾವಲ್ಪಿಂಡಿ)
  • ಫೆಬ್ರವರಿ 26, 2025 - ಅಫ್ಘಾನಿಸ್ತಾನ vs ಇಂಗ್ಲೆಂಡ್ (ಮಧ್ಯಾಹ್ನ 2:30, ಲಾಹೋರ್)
  • ಫೆಬ್ರವರಿ 27, 2025 - ಪಾಕಿಸ್ತಾನ vs ಬಾಂಗ್ಲಾದೇಶ (ಮಧ್ಯಾಹ್ನ 2:30, ರಾವಲ್ಪಿಂಡಿ)
  • ಫೆಬ್ರವರಿ 28, 2025 - ಅಫ್ಘಾನಿಸ್ತಾನ vs ಆಸ್ಟ್ರೇಲಿಯಾ (ಮಧ್ಯಾಹ್ನ 2:30, ಲಾಹೋರ್)
  • ಮಾರ್ಚ್ 1, 2025 - ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್ (ಮಧ್ಯಾಹ್ನ 2:30, ಕರಾಚಿ)
  • ಮಾರ್ಚ್ 2, 2025 - ನ್ಯೂಜಿಲೆಂಡ್ vs ಭಾರತ (ಮಧ್ಯಾಹ್ನ 2:30, ದುಬೈ)
  • ಮಾರ್ಚ್ 4, 2025 - ಸೆಮಿ-ಫೈನಲ್ 1 (ಮಧ್ಯಾಹ್ನ 2:30, ದುಬೈ)
  • ಮಾರ್ಚ್ 5, 2025 - ಸೆಮಿ-ಫೈನಲ್ 2 (ಮಧ್ಯಾಹ್ನ 2:30, ತಟಸ್ಥ)
  • ಮಾರ್ಚ್ 9, 2025 - ಫೈನಲ್, ಲಾಹೋರ್ (ಭಾರತ ಅರ್ಹತೆ ಪಡೆಯದಿದ್ದರೆ ಲಾಹೋರ್​​ನಲ್ಲಿ ನಡೆಯಲಿದೆ. ಅರ್ಹತೆ ಪಡೆದ ದುಬೈನಲ್ಲಿ ಫೈನಲ್​​​ ನಡೆಯಲಿದೆ)
  • ಮಾರ್ಚ್ 10, 2025 - ಫೈನಲ್​ಗೆ ಮೀಸಲು ದಿನ

ಎಲ್ಲಾ ಪಂದ್ಯಗಳು ಹಗಲು ರಾತ್ರಿ ನಡೆಯುತ್ತವೆ.

Whats_app_banner