ಬೆಂಗಳೂರು ಅಪರಾಧ ಸುದ್ದಿ; ಮಹಿಳೆಯ ಅಶ್ಲೀಲ ಫೋಟೋ, ವಿಡಿಯೋ ಚಿತ್ರಿಸಿ ಹಣ ವಸೂಲಿಗೆ ಯತ್ನಿಸಿದ್ದ ಇಬ್ಬರ ಬಂಧನ, ಸೈಬರ್‌ ವಂಚಕರ ಸೆರೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಅಪರಾಧ ಸುದ್ದಿ; ಮಹಿಳೆಯ ಅಶ್ಲೀಲ ಫೋಟೋ, ವಿಡಿಯೋ ಚಿತ್ರಿಸಿ ಹಣ ವಸೂಲಿಗೆ ಯತ್ನಿಸಿದ್ದ ಇಬ್ಬರ ಬಂಧನ, ಸೈಬರ್‌ ವಂಚಕರ ಸೆರೆ

ಬೆಂಗಳೂರು ಅಪರಾಧ ಸುದ್ದಿ; ಮಹಿಳೆಯ ಅಶ್ಲೀಲ ಫೋಟೋ, ವಿಡಿಯೋ ಚಿತ್ರಿಸಿ ಹಣ ವಸೂಲಿಗೆ ಯತ್ನಿಸಿದ್ದ ಇಬ್ಬರ ಬಂಧನ, ಸೈಬರ್‌ ವಂಚಕರ ಸೆರೆ

Bengaluru Crime: ಬೆಂಗಳೂರು ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಹಿಳೆಯ ಅಶ್ಲೀಲ ಫೋಟೋ, ವಿಡಿಯೋ ಚಿತ್ರಿಸಿ ಹಣ ವಸೂಲಿಗೆ ಯತ್ನಿಸಿದ್ದ ಇಬ್ಬರ ಬಂಧನವಾಗಿದೆ. ಇನ್ನೊಂದು ಪ್ರಕರಣದಲ್ಲಿ ಸೈಬರ್‌ ವಂಚನೆ ಎಸಗಿ 5 ಲಕ್ಷ ವಂಚಿಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. (ವರದಿ- ಎಚ್.‌ ಮಾರುತಿ, ಬೆಂಗಳೂರು)

ಬೆಂಗಳೂರು ಅಪರಾಧ ಸುದ್ದಿ; ಮಹಿಳೆಯ ಅಶ್ಲೀಲ ಫೋಟೋ, ವಿಡಿಯೋ ಚಿತ್ರಿಸಿ ಹಣ ವಸೂಲಿಗೆ ಯತ್ನಿಸಿದ್ದ ಇಬ್ಬರ ಬಂಧನವಾಗಿದೆ. ಪ್ರತ್ಯೇಕ ಪ್ರಕರಣದಲ್ಲಿ ಸೈಬರ್‌ ವಂಚಕರನ್ನು ಮತ್ತು ಕಳ್ಳನ್ನೊಬ್ಬನನ್ನು ಸೆರೆ ಹಿಡಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.(ಸಾಂಕೇತಿಕ ಚಿತ್ರ)
ಬೆಂಗಳೂರು ಅಪರಾಧ ಸುದ್ದಿ; ಮಹಿಳೆಯ ಅಶ್ಲೀಲ ಫೋಟೋ, ವಿಡಿಯೋ ಚಿತ್ರಿಸಿ ಹಣ ವಸೂಲಿಗೆ ಯತ್ನಿಸಿದ್ದ ಇಬ್ಬರ ಬಂಧನವಾಗಿದೆ. ಪ್ರತ್ಯೇಕ ಪ್ರಕರಣದಲ್ಲಿ ಸೈಬರ್‌ ವಂಚಕರನ್ನು ಮತ್ತು ಕಳ್ಳನ್ನೊಬ್ಬನನ್ನು ಸೆರೆ ಹಿಡಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.(ಸಾಂಕೇತಿಕ ಚಿತ್ರ)

Bengaluru Crime: ಬೆಂಗಳೂರು ಮಹಾನಗರದ ಬೇರೆ ಬೇರೆ ಕಡೆ ನಡೆದ ಮೂರು ಅಪರಾಧ ಪ್ರಕರಣಗಳಲ್ಲಿ 4 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಹಿಳೆಯ ಅಶ್ಲೀಲ ಫೋಟೋ, ವಿಡಿಯೋ ಚಿತ್ರಿಸಿ ಹಣ ವಸೂಲಿಗೆ ಯತ್ನಿಸಿದ್ದ ಇಬ್ಬರ ಬಂಧನವಾಗಿದೆ. ಅದೇ ರೀತಿ, ಅಂತಾರಾಜ್ಯ ಕಳ್ಳನನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದು, ಆತನಿಂದ 40 ಲಕ್ಷ ರೂ ಮೌಲ್ಯದ ಆಭರಣ ವಶಪಡಿಸಿಕೊಂಡಿದ್ದಾರೆ. ಇನ್ನೊಂದೆಡೆ, ಸೈಬರ್‌ ವಂಚನೆ ಕೇಸ್‌ ತನಿಖೆ ನಡೆಸಿದ ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು 5 ಲಕ್ಷ ವಂಚಿಸಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

ಮಹಿಳೆಯ ಅಶ್ಲೀಲ ಫೋಟೋ, ವಿಡಿಯೋ ಚಿತ್ರಿಸಿ ಹಣ ವಸೂಲಿಗೆ ಯತ್ನಿಸಿದ್ದ ಇಬ್ಬರ ಬಂಧನ

ಲಿವಿಂಗ್‌ ಟುಗೆದರ್‌ನಲ್ಲಿದ್ದಾಗ ಮಹಿಳೆಯ ಜತೆಗಿನ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿಕೊಂಡು ಬ್ಲಾಕ್‌ಮೇಲ್‌ ಮಾಡುತ್ತಿದ್ದ ಆರೋಪಿ ಮತ್ತು ಆತನ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಎಲೆಕ್ಟ್ರಾನಿಕ್ಸ್ ಉಪಕರಣಗಳ ಅಂಗಡಿಯ ಮಾಲೀಕನೂ ಆಗಿರುವ ಆರೋಪಿಗೆ 2017 ರಲ್ಲಿ ದೂರುದಾರ ಮಹಿಳೆ ಪರಿಚಯವಾಗಿರುತ್ತಾಳೆ. ಪರಸ್ಪರ ಸಮ್ಮತಿಯೊಂದಿಗೆ ಲಿವಿಂಗ್ ಟುಗೆದರ್ ಹೆಸರಿನಲ್ಲಿ ಒಂದೇ ಮನೆಯಲ್ಲಿ ವಾಸವಿದ್ದರು. ಆ ಸಂದರ್ಭದಲ್ಲಿ ಆರೋಪಿಯು ಆಕೆಗೆ ತಿಳಿಯದಂತೆ ಖಾಸಗಿ ಕ್ಷಣಗಳ ವಿಡಿಯೋ ಮಾಡಿಕೊಂಡಿರುತ್ತಾನೆ. ನಂತರ ಆಕೆಯನ್ನು ಕಪಲ್ಸ್ ಪಾರ್ಟಿಗಳಿಗೆ ಕರೆದುಕೊಂಡು ಹೋಗಿ, ಅಲ್ಲಿ ಸೇರುವ ಬೇರೆ ವ್ಯಕ್ತಿಗಳ ಜೊತೆ ಸಹಕರಿಸುವಂತೆ ಒತ್ತಾಯಸಿದ್ದಾನೆ. ಇದನ್ನು ತಿರಸ್ಕರಿದ ಆಕೆ 2021 ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು.

ಇದನ್ನು ಸಹಿಸದ ಆರೋಪಿಗಳಿಬ್ಬರು ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಮುಂದಿಟ್ಟುಕೊಂಡು ಆಕೆಯನ್ನು ಬೆದರಿಸಿ ತಮ್ಮ ಜೊತೆ ಸಹಕರಿಸುವಂತೆ ಪೀಡಿಸಿತ್ತಿರುತ್ತಾನೆ. ಇಲ್ಲವಾದಲ್ಲಿ ಹಣ ನೀಡುವಂತೆ ಬೆದರಿಕೆ ಒಡ್ಡುತ್ತಿರುತ್ತಾರೆ. ಇದರಿಂದ ಬೇಸತ್ತ ಅಕೆ ಸಿಸಿಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾಳೆ. ಪ್ರಕರಣದ ತನಿಖೆಯನ್ನು ನಡಸಿದ ಪೊಲೀಸರು, ಆರೋಪಿಗಳಿಬ್ಬರನ್ನು ಬಂಧಿಸುತ್ತಾರೆ. ಅವರಿಂದ ಒಟ್ಟು 7 ಮೊಬೈಲ್ ಮತ್ತು ಒಂದು ಲ್ಯಾಪ್‌ಟಾಪ್‌ನ್ನು ವಶಪಡಿಸಿಕೊಳ್ಳಲಾಗಿದೆ. ಮೊಬೈಲ್ ಮತ್ತು ಲ್ಯಾಪ್‌ಟಾಪ್‌ನ್ನು ಪರಿಶೀಲಿಸಿದಾಗ, ಆರೋಪಿಗಳಿಬ್ಬರು ಕಪಲ್ಸ್ ಪಾರ್ಟಿಗಳನ್ನು ಆಯೋಜಿಸಿ ಅಕ್ರಮ ಚಟುವಟಿಕೆಯನ್ನು ನಡೆಸುತ್ತಿರುವ ಮತ್ತು ಬೇರೆ ಹೆಣ್ಣು ಮಕ್ಕಳ ಅಶ್ಲೀಲ ಪೋಟೋ ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಬೆದರಿಕೆ ಹಾಕುತ್ತಿರುವ ವಿಷಯ ತಿಳಿದು ಬಂದಿದೆ.

ಅಂತಾರಾಜ್ಯ ಕಳ್ಳನ ಬಂಧನ; 40 ಲಕ್ಷ ರೂ ಮೌಲ್ಯದ ಆಭರಣ ವಶ

ಬೆಂಗಳೂರು ಹಾಗೂ ವಿವಿಧ ರಾಜ್ಯಗಳಲ್ಲಿ ಮನೆ ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಹೆಣ್ಣೂರು ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಠಾಣಾ ವ್ಯಾಪ್ತಿಯ ನಿವಾಸಿಯೊಬ್ಬರು ಕೆಲಸಕ್ಕೆ ಹೋಗಿ ಹಿಂತಿರುಗುವಷ್ಟರಲ್ಲಿ ಮನೆಯ ಬೀಗ ಒಡೆದು ಮನೆಯಲ್ಲಿದ್ದ 20 ಗ್ರಾಂ ಚಿನ್ನಾಭರಣ, 200 ಗ್ರಾಂ ಬೆಳ್ಳಿ, ಹಾಗೂ 30 ಸಾವಿರ ನಗದನ್ನು ಕಳವು ಮಾಡಿರುವುದಾಗಿ ದೂರು ನೀಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಹೆಚ್‌ಬಿಆರ್ ಲೇಔಟ್‌ನ 4ನೇ ಬ್ಲಾಕ್ ಬಳಿ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದಾಗ ಕಳವು ಮಾಡಿದ್ದನ್ನು ಒಪ್ಪಿಕೊಳ್ಳುತ್ತಾನೆ. ಈತನ ಬ್ಯಾಗ್‌ನಲ್ಲಿ ಒಂದು ಸ್ಕೂಡ್ರೈವರ್‌, ಚಿಕ್ಕ ಕಬ್ಬಿಣದ ರಾಡ್, ಹಾಗೂ ಕಟ್ಟಿಂಗ್ ಪ್ಲೇಯರ್‌ ಪತ್ತೆಯಾಗಿವೆ.

ಬೆಂಗಳೂರು ನಗರ ಹಾಗೂ ವಿವಿಧ ರಾಜ್ಯಗಳಲ್ಲೂ ಸಹ ಮನೆ ಕಳವು ಮಾಡಿರುವುದಾಗಿ ಒಪ್ಪಿಕೊಳ್ಳುತ್ತಾನೆ. ಕಳವು ಮಾಡಿದ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಕುಣಿಗಲ್‌ನಲ್ಲಿರುವ ಆತನ ಸ್ನೇಹಿತನಿಗೆ ನೀಡಿರುವುದಾಗಿ ತಿಳಿಸಿರುತ್ತಾನೆ. ಕುಣಿಗಲ್‌ನಲ್ಲಿರುವ ಸ್ನೇಹಿತನನ್ನು ವಿಚಾರಣೆ ಮಾಡಿದಾಗ ಆತ ಚಿನ್ನಾಭರಣಗಳನ್ನು ಚಿಕ್ಕಪೇಟೆಯ ಜ್ಯುವೆಲ್ಲರಿ ಅಂಗಡಿಯಲ್ಲಿ ಮಾರಾಟ ಮಾಡಿರುತ್ತಾನೆ. ಜ್ಯೂವೆಲರಿ ಶಾಪ್‌ನ ಮಾಲೀಕನಿಂದ 556 ಗ್ರಾಂ ಚಿನ್ನಾಭರಣ ಹಾಗೂ ಕೆ.ಜಿ 200 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ಈ ಕಳ್ಳನಿಂದ ಸುಮಾರು 40 ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದ ಆರೋಪಿಯ ಬಂಧನದಿಂದ ಹೆಣ್ಣೂರು ಪೊಲೀಸ್‌ ಠಾಣೆಯ ಒಟ್ಟು 11 ಮನೆ ಕಳವು ಪ್ರಕರಣಗಳು ಪತ್ತೆಯಾಗಿವೆ.

ಸೈಬರ್‌ ವಂಚನೆ; 5 ಲಕ್ಷ ವಂಚಿಸಿದ್ದ ಆರೋಪಿಗಳ ಬಂಧನ

ತಮ್ಮ ಕಂಪನಿಯ ಲೋಗೊ ಹಾಗೂ ವ್ಯವಸ್ಥಾಪಕ ನಿರ್ದೇಶಕರ ಪೋಟೊವನ್ನು ವ್ಯಾಟ್ಸ್ಆಪ್‌ ಡಿಪಿಯಲ್ಲಿ ಹಾಕಿಕೊಂಡು ವ್ಯಾಟ್ಸ್‌ ಆಫ್‌ ನಂಬರ್‌ನಿಂದ ಕಂಪನಿಯ ಯೋಜನೆಯೊಂದಕ್ಕೆ ಆಡ್ವಾನ್ಸ್ ಸೆಕ್ಯೂರಿಟಿ ಡಿಪಾಜಿಟ್‌ಗಾಗಿ 5 ಲಕ್ಷ 60 ಸಾವಿರ ಹಣವನ್ನು ವರ್ಗಾವಣೆ ಮಾಡುವಂತೆ ವ್ಯಾಟ್ಸ್ ಆಫ್ ಮೇಸೆಜ್ ಮೂಲಕ ಸಂದೇಶ ಬಂದಿರುತ್ತದೆ. ಇದನ್ನು ನಂಬಿದ ಕಂಪನಿಯ ಉದ್ಯೋಗಿ, ಮೇಸೆಜ್‌ನಲ್ಲಿ ತಿಳಿಸಿದ್ದ ಖಾತೆಗೆ ಹಣವನ್ನು ಜಮೆ ಮಾಡಿರುತ್ತಾರೆ. ನಂತರ ಮೋಸ ಹೋಗಿರುವುದು ತಿಳಿದು ಬರುತ್ತದೆ. ಕೊನೆಗೆ ಅವರು ಬೆಂಗಳೂರು ಆಗ್ನೇಯ ವಿಭಾಗದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಸೈಬರ್ ಅಪರಾಧ ದೂರು ದಾಖಲಿಸಿರುತ್ತಾರೆ.

ತನಿಖೆಯನ್ನು ಕೈಗೊಂಡ ಸಿ.ಇ.ಎನ್ ಪೊಲೀಸರು ಆರೋಪಿಗಳ ಬ್ಯಾಂಕ್‌ ಖಾತೆಗಳ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಹಣ ಹೈದರಬಾದ್ ಮೂಲದ ಆರೋಪಿಯ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿದ್ದು, ಆತನನ್ನು ಹೈದರಬಾದ್‌ನಲ್ಲಿಯೇ ಬಂಧಿಸಲಾಗಿರುತ್ತದೆ. ಈತನ ವಿಚಾರಣೆ ಮಾಡಿದಾಗ ತಪ್ಪನ್ನು ಒಪ್ಪಿಕೊಂಡು ಇತರೆ ಐವರು ಸಹಚರರಿಗೆ ಹಣವನ್ನು ವರ್ಗಾಯಿಸಿರುವುದಾಗಿ ತಿಳಿಸಿರುತ್ತಾನೆ. ಆರೋಪಿಗಳಿಂದ ಮೊಬೈಲ್ ಹಾಗೂ ವಂಚನೆ ಹಣದಿಂದ ಖರೀದಿಸಿದ್ದ ಆಡಿ ಕಾರು ಮತ್ತು ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಬ್ಯಾಂಕ್‌ ಖಾತೆಗಳಲ್ಲಿದ್ದ 5 ಲಕ್ಷ ರೂ. ಹಣವನ್ನು ದೂರುದಾರರಿಗೆ ಹಿಂತಿರುಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

(ವರದಿ- ಎಚ್.‌ ಮಾರುತಿ, ಬೆಂಗಳೂರು)

Whats_app_banner