Madurai Bangalore Vande Bharat: ಮಧುರೈ- ಬೆಂಗಳೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಇಂದು ಉದ್ಘಾಟನೆ, ಪ್ರಯಾಣ ಸಮಯ, ದರ ಹೇಗಿದೆ
ಕನ್ನಡ ಸುದ್ದಿ  /  ಕರ್ನಾಟಕ  /  Madurai Bangalore Vande Bharat: ಮಧುರೈ- ಬೆಂಗಳೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಇಂದು ಉದ್ಘಾಟನೆ, ಪ್ರಯಾಣ ಸಮಯ, ದರ ಹೇಗಿದೆ

Madurai Bangalore Vande Bharat: ಮಧುರೈ- ಬೆಂಗಳೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಇಂದು ಉದ್ಘಾಟನೆ, ಪ್ರಯಾಣ ಸಮಯ, ದರ ಹೇಗಿದೆ

Indian Railways ತಮಿಳುನಾಡಿನ ಮಧುರೈ ಹಾಗೂ ಬೆಂಗಳೂರು ನಡುವೆ ವಂದೇ ಭಾರತ್‌ ರೈಲಿಗೆ(Madurai Bangalore Vande Bharat Express) ಶನಿವಾರ ಚಾಲನೆ ಸಿಗಲಿದ್ದು. ಸೋಮವಾರದಿಂದ ಆರು ದಿನದ ಸಂಚಾರ ಶುರುವಾಗಲಿದೆ.

ಮಧುರೈ ಬೆಂಗಳೂರು ನಡುವಿನ ವಂದೇ ಭಾರತ್‌ ಎಕ್ಸ್‌ ಪ್ರೆಸ್‌ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡುವರು.
ಮಧುರೈ ಬೆಂಗಳೂರು ನಡುವಿನ ವಂದೇ ಭಾರತ್‌ ಎಕ್ಸ್‌ ಪ್ರೆಸ್‌ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡುವರು.

ಬೆಂಗಳೂರು: ಬೆಂಗಳೂರು ಹಾಗೂ ತಮಿಳುನಾಡಿನ ಪ್ರಮುಖ ನಗರಗಳ ನಡುವೆ ಸಂಪರ್ಕ ವೃದ್ದಿಸುವ ಪ್ರಯತ್ನದ ಭಾಗವಾಗಿ ಮತ್ತೊಂದು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸೇವೆ ಆರಂಭವಾಗಲಿದೆ. ತಮಿಳುನಾಡಿನ ದೇಗುಲ ನಗರಿ ಮಧುರೈಗೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು(Madurai Bangalore Vande Bharat express) ಸೇವೆ ಆರಂಭಗೊಳ್ಳುತ್ತಿದೆ. ಬೆಳಿಗ್ಗೆ ಬೆಂಗಳೂರಿನಿಂದ ಹೊರಡುವ ರೈಲು ರಾತ್ರಿ ಮತ್ತೆ ಬೆಂಗಳೂರಿಗೆ ಬರಲಿದೆ. ಕರ್ನಾಟಕ ಹಾಗೂ ತಮಿಳುನಾಡು ನಡುವೆ ಚೆನ್ನೈ, ಕೊಯಮತ್ತೂರು ಬಳಿಕ ಮಧುರೈ ಸಹಿತ ಪ್ರಮುಖ ನಗರಗಳನ್ನು ಸಂಪರ್ಕಿಸುವ ಮೂರನೇ ರೈಲು ಇದಾಗಿದೆ. ಮಧುರೈ ಬೆಂಗಳೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್‌ 31ರ ಶನಿವಾರ ಚಾಲನೆ ನೀಡುವರು.

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮಧುರೈ-ಬೆಂಗಳೂರು ಕ್ಯಾಂಟೋನ್ಮೆಂಟ್‌ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಚೆನ್ನೈ-ನಾಗರ್‌ಕೋಯಿಲ್ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಲಿದ್ದಾರೆ. ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಟರ್ಮಿನಲ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭಾಗವಹಿಸಿದರೆ, ಮಧುರೈ ರೈಲ್ವೆ ಜಂಕ್ಷನ್‌ನಲ್ಲಿ ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ ಭಾಗವಹಿಸಲಿದ್ದಾರೆ. 8ಬೋಗಿಗಳೊಂದಿಗೆ ಮಧುರೈ-ಬೆಂಗಳೂರು ವಂದೇ ಭಾರತ್ ರೈಲು ಉದ್ಘಾಟನೆ ದಿನದ ಸೇವೆ ಆರಂಭಿಸಲಿದೆ. ಮೊದಲ ದಿನ ಮಧ್ಯಾಹ್ನ 12.30ಕ್ಕೆ ಮಧುರೈ ಬಿಡುವ ರೈಲು ರಾತ್ರಿ 9.30ಕ್ಕೆ ಬೆಂಗಳೂರು ಕ್ಯಾಂಟೋನ್ಮೆಂಟ್‌ ನಿಲ್ದಾಣವನ್ನು ತಲುಪುತ್ತದೆ.

ಮಧುರೈ ರೈಲು ವಾರದಲ್ಲಿ ಆರು ದಿನ ಬೆಳಿಗ್ಗೆ5.15ಕ್ಕೆ ಹೊರಡಲಿದ್ದು ಮಧಾಹ್ನ 1ಕ್ಕೆ ಬೆಂಗಳೂರು ತಲುಪಲಿದೆ. ದಿಂಡಿಗಲ್, ತಿರುಚ್ಚಿ, ಕರೂರ್, ನಾಮಕ್ಕಲ್, ಸೇಲಂ ಮತ್ತು ಕೃಷ್ಣರಾಜಪುರಂನಲ್ಲಿ ರೈಲು ನಿಲುಗಡೆಯಾಗಲಿದೆ. ಒಟ್ಟು 8 ಗಂಟೆ 15 ನಿಮಿಷ ಪ್ರಯಾಣ ಇರುವ ಈ ರೈಲು 6 ಕಡೆ ನಿಲುಗಡೆಯಾಗಲಿದೆ. ನಿತ್ಯ 573 ಕಿ.ಮಿ ದೂರ ಸಂಚರಿಸಲಿದೆ.

ಬೆಳಿಗ್ಗೆ 5.15ಕ್ಕೆ ಮಧುರೈ ಬಿಡುವ ರೈಲು 5.59ಕ್ಕೆ ದಿಂಡಿಗಲ್‌, 6.50ಕ್ಕೆ ತಿರುಚಾನಪಳ್ಳಿ, 8.08ಕ್ಕೆ ಕರೂರು, 8.32ಕ್ಕೆ ನಾಮಕ್ಕಲ್‌. 9.15ಕ್ಕೆ ಸೇಲಂ, ಮಧ್ಯಾಹ್ನ 12.50ಕ್ಕೆ ಕೃಷ್ಣರಾಜಪುರಂ, ಮಧ್ಯಾಹ್ನ 1ಕ್ಕೆ ಬೆಂಗಳೂರು ಕಂಟೋನ್ಮಂಟ್‌ ತಲುಪಲಿದೆ.

ಅದೇ ರೀತಿ ಬೆಂಗಳೂರಿನಿಂದ ಮಧ್ಯಾಹ್ನ 1:30ಕ್ಕೆ ಹೊರಡುವ ರೈಲು ಮಧ್ಯಾಹ್ನ 1.55ಕ್ಕೆ ಕೃಷ್ಣರಾಜಪುರಂ. ಸಂಜೆ 4.50ಕ್ಕೆ ಸೇಲಂ, ಸಂಜೆ 5.40ಕ್ಕೆ ನಾಮಕ್ಕಲ್‌, ಸಂಜೆ 6ಕ್ಕೆ ಕರೂರು, ರಾತ್ರಿ7.25ಕ್ಕೆ. 9.08 9.45ಕ್ಕೆ ದಿಂಡಿಗಲ್‌ ರಾತ್ರಿ 9 :45ಕ್ಕೆ ಮಧುರೈ ತಲುಪಲಿದೆ

ಇದೂ ಕೂಡ ಆರು ಕಡೆ ನಿಲುಗಡೆಯಾಗಲಿದೆ. ವಾರದಲ್ಲಿ ಆರು ದಿನ ಮಾತ್ರ ಮಧುರೈ ಬೆಂಗಳೂರು ವಂದೇ ಭಾರತ್‌ ರೈಲು ಇರಲಿದ್ದು, ಮಂಗಳವಾರ ಸಂಚಾರ ಇರುವುದಿಲ್ಲ. ಬೆಂಗಳೂರಿನಿಂದ ಮಧುರೈಗೆ ಪ್ರಯಾಣ ದರವು 1200 ರೂ. ಆಗಲಿದೆ. ಈ ರೈಲುಗಳ ನಿಯಮಿತ ಸೇವೆಗಳು ಸೆಪ್ಟೆಂಬರ್ 2 ರಂದು ಪ್ರಾರಂಭವಾಗಲಿದೆ.

ಮತ್ತೊಂದು ವಂದೇ ಭಾರತ್‌

ಇದೇ ದಿನ ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ - ನಾಗರ್‌ಕೋಯಿಲ್ ವಂದೇ ಭಾರತ್‌ನ ಉದ್ಘಾಟನಾ ಸಮಾರಂಭವು ನಡೆಯಲಿದೆ. ಚೆನ್ನೈ ಸೆಂಟ್ರಲ್‌ನಿಂದ ಮಧ್ಯಾಹ್ನ 12.30 ಕ್ಕೆ ಹೊರಟು ರಾತ್ರಿ 9.30 ಕ್ಕೆ ನಾಗರ್‌ಕೋಯಿಲ್‌ಗೆ ಆಗಮಿಸಲಿದೆ. 16 ಕೋಚ್‌ಗಳಿರುವ ರೈಲು ಚೆನ್ನೈ ಎಗ್ಮೋರ್, ತಾಂಬರಂ, ವಿಲ್ಲುಪುರಂ, ತಿರುಚ್ಚಿ, ದಿಂಡಿಗಲ್, ಮಧುರೈ, ಕೋವಿಲ್‌ಪಟ್ಟಿ ಮತ್ತು ತಿರುನಲ್ವೇಲಿಯಲ್ಲಿ ನಿಲುಗಡೆಯಾಗಲಿದೆ. ರಾಜ್ಯಪಾಲ ಆರ್ ಎನ್ ರವಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್. ಮುರುಗನ್, ಸಂಸದರು ಹಾಗೂ ಚುನಾಯಿತ ಪ್ರತಿನಿಧಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಉತ್ತರ ಪ್ರದೇಶದಲ್ಲಿ11ನೇ ವಂದೇ ಭಾರತ್‌

ಶನಿವಾರ ಪಿಎಂ ನರೇಂದ್ರ ಮೋದಿ ಅವರು ತಮಿಳುನಾಡು, ಕರ್ನಾಟಕ ಮತ್ತು ಉತ್ತರ ಪ್ರದೇಶದಲ್ಲಿ ರೈಲು ಸಂಪರ್ಕವನ್ನು ಹೆಚ್ಚಿಸುವ ಮೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಶನಿವಾರ ಉದ್ಘಾಟಿಸಲಿದ್ದಾರೆ. ಮೀರತ್‌ನಿಂದ ಲಕ್ನೋ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಸ್ಟ್ 31 ರಂದು ಉದ್ಘಾಟನಾ ಚಾಲನೆಗೆ ಸಿದ್ಧವಾಗಿದೆ ಉತ್ತರ ಪ್ರದೇಶವು ತನ್ನ 11 ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಸ್ವಾಗತಿಸಲು ತಯಾರಿ ಮಾಡಿಕೊಂಡಿದೆ.

Whats_app_banner