ವಿಜಯಪುರ ಹೂಟಗಿ ನಡುವೆ ಹಳಿ ತಪ್ಪಿದ ಲೋಕೋ ರೈಲು: ಹಲವು ರೈಲುಗಳು ರದ್ದು, ಮೈಸೂರು- ಫಂಡರಪುರ ರೈಲು ಭಾಗಶಃ ಸಂಚಾರ
ವಿಜಯಪುರ ಹಾಗೂ ಹೂಟಗಿ ನಡುವಿನ ಮಾರ್ಗದಲ್ಲಿ ಲೋಕೋ ರೈಲು ಹಳಿ ತಪ್ಪಿದ್ದರಿಂದ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಕೆಲವು ರೈಲು ರದ್ದಾದರೆ, ಇನ್ನಷ್ಟು ರೈಲುಗಳ ಸಂಚಾರ ಭಾಗಶಃ ರದ್ದಾಗಿದೆ.
ವಿಜಯಪುರ: ಗದಗ ಹೂಟಗಿ ನಡುವಿನ ಮಾರ್ಗದಲ್ಲಿ ಲೋಕೋ ರೈಲು ಹಳಿ ತಪ್ಪಿದ ಪರಿಣಾಮವಾಗಿ ಹಲವು ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ಕೆಲವು ರೈಲುಗಳ ಸಂಚಾರದ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. ಹುಬ್ಬಳ್ಳಿ ರೈಲ್ವೆ ವಿಭಾಗದ ವಿಜಯಪುರ ಹಾಗೂ ಕಲಬುರಗಿ ಮಾರ್ಗದ ನಡುವೆ ಬರುವ ಹಾಗೂ ಸೊಲ್ಲಾಪುರ ಸಮೀಪದ ಭೀಮ ನದಿ ಸೇತುವೆ ಬಳಿ ಲೋಕೋ ರೈಲು ಬುಧವಾರ ಬೆಳಗಿನ ಜಾವ ಹಳಿ ತಪ್ಪಿದ್ದರಿಂದ ರೈಲು ಸಂಚಾರ ವ್ಯತ್ಯಯವಾಗಿದೆ. ಇದರಿಂದ ಭಾರತೀಯ ರೈಲ್ವೆ ಹುಬ್ಬಳ್ಳಿ ವಿಭಾಗದಿಂದ ಪ್ರಯಾಣಿಕರಿಗೆ ವಿಜಯಪುರದಲ್ಲಿ ಬಸ್ ವ್ಯವಸ್ಥೆ ಮಾಡಲಾಯಿತು.
ಭಾಗಶಃ ರದ್ದತಿ
⦁ ರೈಲು ಸಂಖ್ಯೆ. 17307 ಮೈಸೂರು - ಬಾಗಲಕೋಟ, 2024ರ ಸೆಪ್ಟಂಬರ್ 25 ರಂದು ಪ್ರಾರಂಭವಾಗುವ ಪ್ರಯಾಣವನ್ನು ಸೋಲಾಪುರ ಮತ್ತು ಬಾಗಲಕೋಟ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತದೆ. ಈ ರೈಲು ಸೇವೆ ಸೊಲ್ಲಾಪುರದಲ್ಲಿ ಕೊನೆಗೊಳ್ಳಲಿದೆ.
⦁ ರೈಲು ಸಂಖ್ಯೆ 17308 ಬಾಗಲಕೋಟ - ಮೈಸೂರು, 2024ರ ಸೆಪ್ಟಂಬರ್ 26ರಂದು ಪ್ರಾರಂಭವಾಗುವ ಪ್ರಯಾಣವು ಬಾಗಲಕೋಟ ಮತ್ತು ಸೋಲಾಪುರ ನಡುವೆ ಭಾಗಶಃ ರದ್ದುಗೊಳ್ಳುತ್ತದೆ. ಮತ್ತು ಅದರ ನಿಗದಿತ ಸಮಯದಲ್ಲಿ ಸೊಲ್ಲಾಪುರದಲ್ಲಿ ಪ್ರಯಾಣ ಅಂತ್ಯಗೊಳ್ಳಲಿದೆ.
ರೈಲು ಸಂಖ್ಯೆ 16535 ಮೈಸೂರು - ಪಂಢರಪುರ, ಸೆಪ್ಟಂಬರ್ 25 ರಂದು ಪ್ರಾರಂಭವಾಗುವ ಪ್ರಯಾಣವನ್ನು ವಿಜಯಪುರ ಮತ್ತು ಪಂಢರಪುರ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತದೆ. ಈ ರೈಲು ಸಂಚಾರ ವಿಜಯಪುರದಲ್ಲಿ ಕೊನೆಗೊಳ್ಳಲಿದೆ.
2. ರೈಲು ಸಂಖ್ಯೆ 16536 ಪಂಢರಪುರ - ಮೈಸೂರು, 2024ರ ಸೆಪ್ಟಂಬರ್ 26ರಂದು ಪ್ರಾರಂಭವಾಗುವ ಪ್ರಯಾಣವನ್ನು ಪಂಢರಪುರ ಮತ್ತು ವಿಜಯಪುರ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ನಿಗದಿತ ಸಮಯದಲ್ಲಿ ವಿಜಯಪುರದಿಂದ ರೈಲು ಪ್ರಯಾಣ ಮುಂದುವರಿಯಲಿದೆ.
ರೈಲುಗಳ ಸೇವೆ ರದ್ದತಿ
⦁ ರೈಲು ಸಂಖ್ಯೆ 07332 SSS ಹುಬ್ಬಳ್ಳಿ - ಸೊಲ್ಲಾಪುರ, 2024ರ ಸೆಪ್ಟಂಬರ್ 25 ರಂದು ಪ್ರಾರಂಭವಾಗುವ ಪ್ರಯಾಣವನ್ನು ರದ್ದುಗೊಳಿಸಲಾಗಿದೆ.
⦁ ರೈಲು ಸಂಖ್ಯೆ 07331 ಸೋಲಾಪುರ - ಎಸ್‌ಎಸ್‌ಎಸ್ ಹುಬ್ಬಳ್ಳಿ, 2024ರ ಸೆಪ್ಟಂಬರ್ 26ರಂದು ಪ್ರಾರಂಭವಾಗುವ ಪ್ರಯಾಣವನ್ನು ರದ್ದುಗೊಳಿಸಲಾಗಿದೆ.
⦁ ರೈಲು ಸಂಖ್ಯೆ 07322 ಧಾರವಾಡ - ಸೋಲಾಪುರ, 2024ರ ಸೆಪ್ಟಂಬರ್ 26ರಂದು ಪ್ರಾರಂಭವಾಗುವ ಪ್ರಯಾಣವನ್ನು ರದ್ದುಗೊಳಿಸಲಾಗಿದೆ.
⦁ ರೈಲು ಸಂಖ್ಯೆ 07321 ಸೋಲಾಪುರ - ಧಾರವಾಡ, 2024ರ ಸೆಪ್ಟಂಬರ್ 26ರಂದು ಪ್ರಾರಂಭವಾಗುವ ಪ್ರಯಾಣವನ್ನು ರದ್ದುಗೊಳಿಸಲಾಗಿದೆ.
ಕೆಲ ರೈಲು ತಿರುವು
⦁ ರೈಲು ಸಂಖ್ಯೆ. 16588 ಬಿಕಾನೇರ್ ಜಂಕ್ಷನ್ - ಯಶವಂತಪುರ ಎಕ್ಸ್‌ಪ್ರೆಸ್ ಪ್ರಯಾಣವು ಬಿಕಾನೇರ್ ಜಂಕ್ಷನ್ ನಿಂದ ಪ್ರಾರಂಭವಾಗಿದ್ದು ಪುಣೆ, ಮೀರಜ್, ಬೆಳಗಾವಿ ಮತ್ತು ಎಸ್‌ಎಸ್‌ಎಸ್ ಹುಬ್ಬಳ್ಳಿ ಮೂಲಕ ಪಯಣಿಸಲಿದ್ದು. ಸೊಲ್ಲಾಪುರ, ವಿಜಯಪುರ, ಆಲಮಟ್ಟಿ, ಬಾಗಲಕೋಟ ಮತ್ತು ಗದಗ ರೈಲು ನಿಲ್ದಾಣಗಳ ಪ್ರಯಾಣ ಇರುವುದಿಲ್ಲ
- ರೈಲು ಸಂಖ್ಯೆ 17319 ಎಸ್‌ಎಸ್‌ಎಸ್ ಹುಬ್ಬಳ್ಳಿ - ಹೈದರಾಬಾದ್ ಎಕ್ಸ್‌ಪ್ರೆಸ್ ಪ್ರಯಾಣವು ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಪ್ರಾರಂಭವಾಗಿದ್ದು, ಗದಗ, ಬಳ್ಳಾರಿ, ಗುಂತಕಲ್ ಬೈಪಾಸ್, ರಾಯಚೂರು, ವಾಡಿ ಮೂಲಕ ಮಾರ್ಗದ ಮೂಲಕ ಪ್ರಯಾಣ ಬದಲಿಸಿದೆ. ಇಂಡಿ ರಸ್ತೆ, ಹೊಟಗಿ, ಗಾಣಗಾಪುರ ರಸ್ತೆ, ಕಲಬುರ್ಗಿ ಮತ್ತು ಶಹಾಬಾದ್‌ನಲ್ಲಿ ನಿಲುಗಡೆ ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.