ಕನ್ನಡ ಸುದ್ದಿ  /  Nation And-world  /  Lok Sabha Election 2024 Date Ec Announces 7 Phase Election Dates Apr 19 To Jun 04 Know Phases Voting Result Schedule Uks

Lok Sabha 2024 Poll Dates: ಲೋಕಸಭೆ ಚುನಾವಣೆ 2024 ರ ವೇಳಾಪಟ್ಟಿ ಪ್ರಕಟ; ಏ 19 ರಿಂದ 07 ಹಂತಗಳ ಚುನಾವಣೆ; ಫಲಿತಾಂಶ ಜೂನ್ 4ಕ್ಕೆ

Lok Sabha Election 2024 Dates: ಲೋಕಸಭೆ ಚುನಾವಣೆ 2024ರ ದಿನಾಂಕ ಮತ್ತು ವೇಳಾಪಟ್ಟಿಯನ್ನು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಪ್ರಕಟಿಸಿದರು. ಲೋಕಸಭೆಯ 543 ಸ್ಥಾನಗಳಿಗೆ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಪೂರ್ಣ ವಿವರ ಇಲ್ಲಿದೆ.

ಲೋಕಸಭೆ ಚುನಾವಣೆ 2024 ದಿನಾಂಕ ಮತ್ತು ವೇಳಾಪಟ್ಟಿ ಪ್ರಕಟ (ಸಾಂಕೇತಿಕ ಚಿತ್ರ)
ಲೋಕಸಭೆ ಚುನಾವಣೆ 2024 ದಿನಾಂಕ ಮತ್ತು ವೇಳಾಪಟ್ಟಿ ಪ್ರಕಟ (ಸಾಂಕೇತಿಕ ಚಿತ್ರ)

ನವದೆಹಲಿ: ಲೋಕಸಭೆ ಚುನಾವಣೆ 2024ರ ದಿನಾಂಕ ಮತ್ತು ವೇಳಾಪಟ್ಟಿ ಪ್ರಕಟವಾಗಿದೆ. ಲೋಕಸಭೆಯ 543 ಸ್ಥಾನಗಳಿಗೆ 07 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ಈ 543 ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿಗೆ 84 ಕ್ಷೇತ್ರ, ಪರಿಶಿಷ್ಟ ಪಂಗಡಕ್ಕೆ 47 ಕ್ಷೇತ್ರಗಳು ಮೀಸಲು. ಉಳಿದ 412 ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ ಎಂದು ಆಯೋಗ ತಿಳಿಸಿದೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಲೋಕಸಭೆ ಚುನಾವಣೆ 2024ರ ಚುನಾವಣಾ ದಿನಾಂಕ, ವೇಳಾಪಟ್ಟಿ ಮತ್ತು ಪೂರಕ ವಿವರಗಳನ್ನು ಪ್ರಕಟಿಸಿದರು.

ಮೊದಲ ಹಂತದ ಮತದಾನ ಏಪ್ರಿಲ್‌ 19 ರಂದು ನಡೆಯಲಿದ್ದು, ಕೊನೆಯ ಹಂತದ ಮತದಾನ ಜೂನ್‌ 1 ರಂದು ನಡೆಯಲಿದೆ. ಜೂನ್ 04 ರಂದು ಫಲಿತಾಂಶ ಪ್ರಕಟವಾಗಲಿದೆ. ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಸಿಕ್ಕಿಂ ವಿಧಾನಸಭೆ ಚುನಾವಣೆಗಳೂ ಈ ಲೋಕಸಭೆ ಚುನಾವಣೆ ಜೊತೆ ನಡೆಯಲಿದೆ.

ಲೋಕಸಭೆ ಚುನಾವಣೆ 2024ರ 1ನೇ ಹಂತದ ಚುನಾವಣೆ ಪ್ರಕ್ರಿಯೆ

ಅಧಿಸೂಚನೆ - 20.03.2024 (ಬುಧವಾರ)

ನಾಮಪತ್ರ ಸಲ್ಲಿಕೆಗೆ ಕೊನೇ ದಿನ - 27.03.2024 (ಬುಧವಾರ)

ನಾಮಪತ್ರ ಪರಿಶೀಲನೆ - 28.03.2024 (ಗುರುವಾರ)

ನಾಮಪತ್ರ ಹಿಂಪಡೆಯಲು ಕೊನೆದಿನ - 30.03.2024 (ಶನಿವಾರ)

ಮತದಾನ ದಿನಾಂಕ - 19.04.2024 (ಶುಕ್ರವಾರ)

ಮತ ಎಣಿಕೆ ದಿನ/ ಫಲಿತಾಂಶ - 04.06.2024 (ಮಂಗಳವಾರ)

ಚುನಾವಣೆ ಪ್ರಕ್ರಿಯೆ ಮುಗಿಯಬೇಕಾದ ದಿನಾಂಕ - 06.06.2024 (ಗುರುವಾರ)

ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ - 102

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ -21

ಲೋಕಸಭೆ ಚುನಾವಣೆ 2024ರ 2ನೇ ಹಂತದ ಚುನಾವಣೆ ಪ್ರಕ್ರಿಯೆ

ಅಧಿಸೂಚನೆ - 28.03.2024 (ಗುರುವಾರ)

ನಾಮಪತ್ರ ಸಲ್ಲಿಕೆಗೆ ಕೊನೇ ದಿನ - 04.04.2024 (ಗುರುವಾರ)

ನಾಮಪತ್ರ ಪರಿಶೀಲನೆ - 05.04.2024 ಶುಕ್ರವಾರ)

ನಾಮಪತ್ರ ಹಿಂಪಡೆಯಲು ಕೊನೆದಿನ - 08.04.2024 (ಸೋಮವಾರ)

ಮತದಾನ ದಿನಾಂಕ - 26.04.2024 (ಶುಕ್ರವಾರ)

ಮತ ಎಣಿಕೆ ದಿನ/ ಫಲಿತಾಂಶ - 04.06.2024 (ಮಂಗಳವಾರ)

ಚುನಾವಣೆ ಪ್ರಕ್ರಿಯೆ ಮುಗಿಯಬೇಕಾದ ದಿನಾಂಕ - 06.06.2024 (ಗುರುವಾರ)

ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ - 89

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ -13

ಲೋಕಸಭೆ ಚುನಾವಣೆ 2024ರ 3ನೇ ಹಂತದ ಚುನಾವಣೆ ಪ್ರಕ್ರಿಯೆ

ಅಧಿಸೂಚನೆ - 12.04.2024 (ಶುಕ್ರವಾರ)

ನಾಮಪತ್ರ ಸಲ್ಲಿಕೆಗೆ ಕೊನೇ ದಿನ - 19.04.2024 (ಶುಕ್ರವಾರ)

ನಾಮಪತ್ರ ಪರಿಶೀಲನೆ - 20.04.2024 (ಶನಿವಾರ)

ನಾಮಪತ್ರ ಹಿಂಪಡೆಯಲು ಕೊನೆದಿನ - 22.04.2024 (ಸೋಮವಾರ)

ಮತದಾನ ದಿನಾಂಕ - 07.05.2024 (ಶನಿವಾರ)

ಮತ ಎಣಿಕೆ ದಿನ/ ಫಲಿತಾಂಶ - 04.06.2024 (ಮಂಗಳವಾರ)

ಚುನಾವಣೆ ಪ್ರಕ್ರಿಯೆ ಮುಗಿಯಬೇಕಾದ ದಿನಾಂಕ - 06.06.2024 (ಗುರುವಾರ)

ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ - 94

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ -12

ಲೋಕಸಭೆ ಚುನಾವಣೆ 2024ರ 4ನೇ ಹಂತದ ಚುನಾವಣೆ ಪ್ರಕ್ರಿಯೆ

ಅಧಿಸೂಚನೆ - 18.04.2024 (ಗುರುವಾರ)

ನಾಮಪತ್ರ ಸಲ್ಲಿಕೆಗೆ ಕೊನೇ ದಿನ - 25.04.2024 (ಗುರುವಾರ)

ನಾಮಪತ್ರ ಪರಿಶೀಲನೆ - 26.04.2024 (ಶುಕ್ರವಾರ)

ನಾಮಪತ್ರ ಹಿಂಪಡೆಯಲು ಕೊನೆದಿನ - 29.04.2024 (ಸೋಮವಾರ)

ಮತದಾನ ದಿನಾಂಕ - 13.05.2024 (ಸೋಮವಾರ)

ಮತ ಎಣಿಕೆ ದಿನ/ ಫಲಿತಾಂಶ - 04.06.2024 (ಮಂಗಳವಾರ)

ಚುನಾವಣೆ ಪ್ರಕ್ರಿಯೆ ಮುಗಿಯಬೇಕಾದ ದಿನಾಂಕ - 06.06.2024 (ಗುರುವಾರ)

ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ - 96

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ -10

ಲೋಕಸಭೆ ಚುನಾವಣೆ 2024ರ 5 ನೇ ಹಂತದ ಚುನಾವಣೆ ಪ್ರಕ್ರಿಯೆ

ಅಧಿಸೂಚನೆ - 26.04.2024 (ಶುಕ್ರವಾರ)

ನಾಮಪತ್ರ ಸಲ್ಲಿಕೆಗೆ ಕೊನೇ ದಿನ - 03.05.2024 (ಶುಕ್ರವಾರ)

ನಾಮಪತ್ರ ಪರಿಶೀಲನೆ - 04.05.2024 (ಶನಿವಾರ)

ನಾಮಪತ್ರ ಹಿಂಪಡೆಯಲು ಕೊನೆದಿನ - 06.05.2024 (ಸೋಮವಾರ)

ಮತದಾನ ದಿನಾಂಕ - 20.05.2024 (ಸೋಮವಾರ)

ಮತ ಎಣಿಕೆ ದಿನ/ ಫಲಿತಾಂಶ - 04.06.2024 (ಮಂಗಳವಾರ)

ಚುನಾವಣೆ ಪ್ರಕ್ರಿಯೆ ಮುಗಿಯಬೇಕಾದ ದಿನಾಂಕ - 06.06.2024 (ಗುರುವಾರ)

ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ - 49

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ -08

ಲೋಕಸಭೆ ಚುನಾವಣೆ 2024ರ 6 ನೇ ಹಂತದ ಚುನಾವಣೆ ಪ್ರಕ್ರಿಯೆ

ಅಧಿಸೂಚನೆ - 29.04.2024 (ಸೋಮವಾರ)

ನಾಮಪತ್ರ ಸಲ್ಲಿಕೆಗೆ ಕೊನೇ ದಿನ - 06.05.2024 (ಸೋಮವಾರ)

ನಾಮಪತ್ರ ಪರಿಶೀಲನೆ - 07.05.2024 (ಮಂಗಳವಾರ)

ನಾಮಪತ್ರ ಹಿಂಪಡೆಯಲು ಕೊನೆದಿನ - 09.05.2024 (ಗುರುವಾರ)

ಮತದಾನ ದಿನಾಂಕ - 25.05.2024 (ಸೋಮವಾರ)

ಮತ ಎಣಿಕೆ ದಿನ/ ಫಲಿತಾಂಶ - 04.06.2024 (ಮಂಗಳವಾರ)

ಚುನಾವಣೆ ಪ್ರಕ್ರಿಯೆ ಮುಗಿಯಬೇಕಾದ ದಿನಾಂಕ - 06.06.2024 (ಗುರುವಾರ)

ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ - 57

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ -07

ಲೋಕಸಭೆ ಚುನಾವಣೆ 2024ರ 7 ನೇ ಹಂತದ ಚುನಾವಣೆ ಪ್ರಕ್ರಿಯೆ

ಅಧಿಸೂಚನೆ - 07.05.2024 (ಮಂಗಳವಾರ)

ನಾಮಪತ್ರ ಸಲ್ಲಿಕೆಗೆ ಕೊನೇ ದಿನ - 14.05.2024 (ಮಂಗಳವಾರ)

ನಾಮಪತ್ರ ಪರಿಶೀಲನೆ - 15.05.2024 (ಬುಧವಾರ)

ನಾಮಪತ್ರ ಹಿಂಪಡೆಯಲು ಕೊನೆದಿನ - 17.05.2024 (ಶುಕ್ರವಾರ)

ಮತದಾನ ದಿನಾಂಕ - 01.06.2024 (ಸೋಮವಾರ)

ಮತ ಎಣಿಕೆ ದಿನ/ ಫಲಿತಾಂಶ - 04.06.2024 (ಮಂಗಳವಾರ)

ಚುನಾವಣೆ ಪ್ರಕ್ರಿಯೆ ಮುಗಿಯಬೇಕಾದ ದಿನಾಂಕ - 06.06.2024 (ಗುರುವಾರ)

ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ - 57

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ -08

ಲೋಕಸಭಾ ಚುನಾವಣೆ; ಮೊದಲ ಬಾರಿಗೆ ಮನೆಯಿಂದಲೇ ಮತದಾನ ಮಾಡಿ

ಲೋಕಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ 85 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಲಾಗಿದೆ. 40 ವರ್ಷ ಮೇಲ್ಪಟ್ಟವರು ಶೇಕಡ 40ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿದವರು ಮನೆಯಿಂದಲೇ ಮತದಾನ ಮಾಡಲು ಬಯಸಿದರೆ ಅವರಿಗೂ ಅವಕಾಶ ಮಾಡಿಕೊಡಲಾಗುತ್ತದೆ. ಇದಕ್ಕೆ ಮೊದಲೇ 12 ಡಿ ಫಾರಂ ಭರ್ತಿ ಮಾಡಿ ಆಯೋಗಕ್ಕೆ ಕೊಡಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದರು.

ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳ ಬಗ್ಗೆ 3 ಸಲ ಸಾರ್ವಜನಿಕ ಪ್ರಕಟಣೆ

ಮತದಾರರು ತಮ್ಮ ಕ್ಷೇತ್ರದ ಅಭ್ಯರ್ಥಿಗಳ ಪೂರ್ವಾಪರ ತಿಳಿದುಕೊಳ್ಳಲು ಕೆವೈಸಿ ಎಂಬ ಆಪ್‌ ಅನ್ನು ಬಿಡುಗಡೆಗೊಳಿಸಲಾಗಿದೆ. ಅಭ್ಯರ್ಥಿಗಳ ಶಿಕ್ಷಣ, ಸಂಪತ್ತು, ಸಾಲ, ಅಪರಾಧ ಹಿನ್ನೆಲೆ ಸೇರಿ ಎಲ್ಲ ಅಗತ್ಯ ಮಾಹಿತಿಗಳೂ ಮತದಾರರಿಗೆ ಲಭ್ಯವಿರುತ್ತದೆ.

ಪಕ್ಷಗಳು ಕೂಡ ಅಭ್ಯರ್ಥಿಗಳು ಅಪರಾಧ ಹಿನ್ನೆಲೆ ಹೊಂದಿದವರ ಕುರಿತು ಕ್ಷೇತ್ರದ ಜನರಿಗೆ ಮನವರಿಕೆ ಮಾಡಿಕೊಡಲು ಮೂರು ಬಾರಿ ಪ್ರಕಟಣೆ ಕೊಡಬೇಕು. ಯಾಕೆ ಅವರನ್ನು ಆಯ್ಕೆ ಮಾಡಿದ್ದು ಎಂಬುದಕ್ಕೆ ವಿವರಣೆ ನೀಡಬೇಕು ಎಂದು ರಾಜೀವ್ ಕುಮಾರ್ ಹೇಳಿದರು.

ಚುನಾವಣಾ ಆಯೋಗ ಗುರುತಿಸಿದ 4 ಎಂ ಸವಾಲುಗಳು

1) ಮಸಲ್ ಪವರ್ - ತೋಳ್ಬಲ ಪ್ರದರ್ಶನ, ದಬ್ಬಾಳಿಕೆ ತಡೆಗೆ ಸಿಎಪಿಎಫ್‌, ಸುಧಾರಿತ ಪಹರೆ ನಿಯೋಜನೆ

2) ಮನಿ ಪವರ್‌- ಹಣಬಲ ಪ್ರದರ್ಶನ, ಆನ್‌ಲೈನ್‌ ಹಣ ವಹಿವಾಟಿನ ಮೇಲೂ ನಿಗಾ.

3) ಮಿಸ್ ಇನ್‌ಫಾರ್ಮೇಶನ್‌- ತಪ್ಪು ಮಾಹಿತಿ, ಸುಳ್ಳು ಸುದ್ದಿಗಳ ಹಾವಳಿ ತಡೆಗೆ ಕ್ರಮ, ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಫ್ಯಾಕ್ಟ್‌ಚೆಕ್‌ ಮಾಹಿತಿ ಇರಲಿದೆ

4) ಎಂಸಿಸಿ ವಯೋಲೇಷನ್‌ - ಮಾದರಿ ನೀತಿ ಸಂಹಿತೆ ಉಲ್ಲಂಘನೆ, ಇದನ್ನು ತಡೆಯಲು ಸಿವಿಜಿಲ್ ಅಪ್ಲಿಕೇಶನ್ ಬಳಸಿಕೊಂಡು ಮತದಾರರು ಚುನಾವಣಾ ಆಯೋಗದ ಗಮನಸೆಳೆಯಬಹುದು.

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)

ಮುಖ್ಯ ಚುನಾವಣಾ ಆಯುಕ್ತರ ಸುದ್ದಿಗೋಷ್ಠಿ HT ಕನ್ನಡ ಚಾನೆಲ್‌ನಲ್ಲಿ ನೇರ ಪ್ರಸಾರ

IPL_Entry_Point