Mandya Sahitya Sammelana: ಇಂದಿನಿಂದ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ: ಸಕ್ಕರೆ ನಾಡಲ್ಲಿ ಮೂರು ದಿನ ಕನ್ನಡ ಸಾಹಿತ್ಯ ಜಾತ್ರೆಗೆ ಕ್ಷಣಗಣನೆ
ಕನ್ನಡ ಸುದ್ದಿ  /  ಕರ್ನಾಟಕ  /  Mandya Sahitya Sammelana: ಇಂದಿನಿಂದ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ: ಸಕ್ಕರೆ ನಾಡಲ್ಲಿ ಮೂರು ದಿನ ಕನ್ನಡ ಸಾಹಿತ್ಯ ಜಾತ್ರೆಗೆ ಕ್ಷಣಗಣನೆ

Mandya Sahitya Sammelana: ಇಂದಿನಿಂದ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ: ಸಕ್ಕರೆ ನಾಡಲ್ಲಿ ಮೂರು ದಿನ ಕನ್ನಡ ಸಾಹಿತ್ಯ ಜಾತ್ರೆಗೆ ಕ್ಷಣಗಣನೆ

Mandya Sahitya Sammelana: ಮಂಡ್ಯದಲ್ಲಿ ಮೂರು ದಶಕಗಳ ಬಳಿಕ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿದ್ದು. ಮೂರು ದಿನ ಕನ್ನಡದ ಹಬ್ಬ ಇರಲಿದೆ. ಸಮ್ಮೇಳನ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ.

ಮಂಡ್ಯ ನಗರದಲ್ಲಿ ಮೂರು ದಿನ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಶುರುವಾಗಿದೆ.
ಮಂಡ್ಯ ನಗರದಲ್ಲಿ ಮೂರು ದಿನ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಶುರುವಾಗಿದೆ.

ಮಂಡ್ಯ: ಕನ್ನಡದ ಮನಸುಗಳನ್ನು ಬೆಸೆಯುವ, ಕನ್ನಡಾಭಿಮಾನವನ್ನು ಹೆಚ್ಚಿಸುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕರುನಾಡಿನ ಸಕ್ಕರೆ ನಗರಿ ಮಂಡ್ಯ ಅಣಿಯಾಗಿದ್ದು, ಸಾಹಿತ್ಯ ಸಮ್ಮೇಳನ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ. ಅದರಲ್ಲೂ ಒಂದು ವರ್ಷದಿಂದ ಹಲವು ಕಾರಣಗಳಿಂದ ಮೂರು ಬಾರಿ ಮುಂದೆ ಹೋಗಿದ್ದ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿಯೇ ಅಂತಿಮಗೊಂಡು ಮೂರು ದಿನಗಳ ಕನ್ನಡ ಜಾತ್ರೆ ಸಡಗರ ಶುರುವಾಗಿದೆ. ಸತತ ಮೂರು ತಿಂಗಳಿನಿಂದ ತಯಾರಿ, ಸಮ್ಮೇಳನಪೂರ್ವವಾಗಿಯೇ ಎದುರಾದ ವಿವಾದಗಳ ನಡುವೆಯೂ ಕನ್ನಡದ ಮನಸುಗಳ ಹಬ್ಬಕ್ಕೆ ಡಿಸೆಂಬರ್‌ 20 ರ ಶುಕ್ರವಾರ ಚಾಲನೆ ಸಿಗಲಿದೆ. ಇದಾದ ನಂತರ ಮೂರು ದಿನಗಳ ಕಾಲ ಕನ್ನಡ ಹಾಗೂ ಕರ್ನಾಟಕದ ಭಾಷೆ, ಗಡಿ, ಮಾಧ್ಯಮ, ತಂತ್ರಜ್ಞಾನ, ಮಹಿಳೆಯರ, ಸಾಹಿತ್ಯ ಒಳಗೊಂಡ ಹಲವು ವಿಚಾರಗಳ ಕುರಿತು ಚರ್ಚೆ, ಸಂವಾದ, ಹೊಸ ವಿಚಾರಗಳಿಗೆ ಸಮ್ಮೇಳನ ವೇದಿಕೆಯಾಗಲಿದೆ.

ರಾಜಮಾತೆ ಕೆಂಪನಂಜಮ್ಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆ, ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಮಹಾಮಂಟಪ, ಯಕ್ಷಕವಿ ಕೆಂಪಣ್ಣಗೌಡ ಮತ್ತು ಉಭಯ ಕವಿತಾ ವಿಶಾರದ ಷಡಕ್ಷರದೇವ ಮಹಾದ್ವಾರ , ಶ್ರೇಷ್ಠ ರಾಜಕೀಯ ಮುತ್ಸದ್ಧಿ ಎಸ್. ಎಂ. ಕೃಷ್ಣ ಮತ್ತು ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಪ್ರವೇಶ ದ್ವಾರಗಳು ಸಮ್ಮೇಳನದ ಆಕರ್ಷಣೆಯಾಗಲಿವೆ.

ಮೂರು ದಶಕಗಳ ಬಳಿಕ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ಆಯೋಜನೆಗೊಂಡಿದೆ. ಆಗ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿದ್ದ ಜನಪದವಿದ್ವಾಂಸ ಗೊ.ರು.ಚನ್ನಬಸಪ್ಪ ಅವರೇ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ವಿಶೇಷ.

ಧ್ವಜಾರೋಹಣ ಕಾರ್ಯಕ್ರಮ

ಡಿಸೆಂಬರ್ 20 ರಂದು ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಎನ್. ಚಲುವರಾಯಸ್ವಾಮಿ ಅವರು ರಾಷ್ಟ್ರಧ್ವಜಾರೋಹಣವನ್ನು, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಹಾಗೂ ಸಮ್ಮೇಳನ ಸ್ವಾಗತ ಸಮಿತಿಯ ಗೌರವ ಕಾರ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಪರಿಷತ್ತಿನ ಧ್ವಜಾರೋಹಣವನ್ನು ಹಾಗೂ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕಿ ಮೀರಾ ಶಿವಲಿಂಗಯ್ಯ ಅವರು ನಾಡಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ.

ಸಮ್ಮೇಳನಾಧ್ಯಕ್ಷರ ಮೆರವಣಿಗೆ

ಬೆಳಿಗ್ಗೆ 7 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯು ಮಂಡ್ಯ ನಗರದ ಸರ್ ಎಂ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗದಿಂದ ಪ್ರಾರಂಭವಾಗಿ ಮೈಸೂರು - ಬೆಂಗಳೂರು ರಸ್ತೆ ಮಾರ್ಗವಾಗಿ ಸ್ಯಾಂಜೋ ಆಸ್ಪತ್ರೆ ಹಾಗೂ ಹೋಟೆಲ್ ಅಮರಾವತಿ ಹಿಂಭಾಗ ಸಮ್ಮೇಳನದ ವೇದಿಕೆಗೆ ತಲುಪುವುದು. ಮೈಸೂರು ರಾಜವಂಶಸ್ಥರಾದ ಪ್ರಮೋದಾದೇವಿ ಅವರು ಮೆರವಣಿಗೆ ಉದ್ಘಾಟನೆ ಮಾಡಲಿದ್ದಾರೆ.

ಸಿಎಂ ಸಿದ್ದರಾಮಯ್ಯ ಉದ್ಘಾಟನೆ

ಬೆಳಿಗ್ಗೆ 10.30 ಗಂಟೆಗೆ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭವು ಪ್ರಧಾನ ವೇದಿಕೆಯಲ್ಲಿ ನಡೆಯಲಿದೆ. ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ.

ಸಮ್ಮೇಳನಾಧ್ಯಕ್ಷರ ಭಾಷಣವನ್ನು ನಾಡೋಜ ಡಾ ಗೊ.ರು. ಚನ್ನಬಸಪ್ಪ ಅವರು ಮಾಡಲಿದ್ದಾರೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ . ಶುಭನುಡಿ ಆಡುವರು. ಕೇಂದ್ರ ಸಚಿವ ಹಾಗೂ ಸಂಸದ ಹೆಚ್. ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ದೊಡ್ಡ ರಂಗೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಎನ್. ಚಲುವರಾಯಸ್ವಾಮಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಸಮ್ಮೇಳನ ಸ್ವಾಗತ ಸಮಿತಿಯ ಗೌರವ ಕಾರ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಉಪಸ್ಥಿತರಿರಲಿದ್ದಾರೆ.

ವಿವಿಧ ಕೇಂದ್ರಗಳ ಉದ್ಘಾಟನೆ

ವೇದಿಕೆಗಳ ಉದ್ಘಾಟನೆ - ಸಮಾಜ ಕಲ್ಯಾಣ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹಾದೇವಪ್ಪ,

ಮಹಾಮಂಟಪ ಉದ್ಘಾಟನೆ-ಮಳವಳ್ಳಿ ವಿಧಾನಸಭಾ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ

ಮಹಾದ್ವಾರಗಳ ಉದ್ಘಾಟನೆ-ಮಂಡ್ಯ ವಿಧಾನಸಭಾ ಶಾಸಕ ಪಿ ರವಿಕುಮಾರ್

ಪ್ರವೇಶ ದ್ವಾರಗಳ ಉದ್ಘಾಟನೆ- ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಅಧ್ಯಕ್ಷ ಎ.ಬಿ. ರಮೇಶ ಬಂಡಿಸಿದ್ದೇಗೌಡ

ಪುಸ್ತಕ ಮಳಿಗೆ ಉದ್ಘಾಟನೆ - ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎಚ್ ಟಿ ಮಂಜು

ವಾಣಿಜ್ಯ ಮಳಿಗೆ ಉದ್ಘಾಟನೆ - ವಿಧಾನಪರಿಷತ್ ಶಾಸಕ ಕೆ ವಿವೇಕಾನಂದ

ವಸ್ತು ಪ್ರದರ್ಶನ ಮಳಿಗೆ ಉದ್ಘಾಟನೆ - ವಿಧಾನ ಪರಿಷತ್ ಶಾಸಕ ಮಧು ಜಿ ಮಾದೇಗೌಡ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪುಸ್ತಕ ಬಿಡುಗಡೆ - ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಡಾ ಚಂದ್ರಶೇಖರ ಕಂಬಾರ

ಮಂಡ್ಯ ಜಿಲ್ಲಾ ಪುಸ್ತಕಗಳ ಬಿಡುಗಡೆ - ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ

ಸ್ಮರಣ ಸಂಚಿಕೆ ಬಿಡುಗಡೆ - ಮದ್ದೂರು ಶಾಸಕ ಕೆ ಎಂ ಉದಯ

ಪ್ರಧಾನ ವೇದಿಕೆ ಗೋಷ್ಠಿಗಳು

ಮಧ್ಯಾಹ್ನ 2 ರಿಂದ 3.30 ಗಂಟೆಯವರೆಗೆ ಪ್ರಧಾನ ವೇದಿಕೆಯಲ್ಲಿ ಮಂಡ್ಯ ಜಿಲ್ಲೆಗೆ ಕೊಡುಗೆ ನೀಡಿದ ಮಹನೀಯರು ವಿಷಯದ ಬಗ್ಗೆ ಗೋಷ್ಠಿ - 1 ನಡೆಯಲಿದೆ. ಖ್ಯಾತ ಇತಿಹಾಸ ತಜ್ಞ ಪ್ರೊ. ಎಂ. ವಿ. ಶ್ರೀನಿವಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ವಿಷಯ ಮಂಡನೆ

ರಾಜಮಾತೆ ಕೆಂಪನಂಜಮ್ಮಣ್ಣಿ: ಮಾದರಿ ಮೈಸೂರಿನ ತಾಯಿಬೇರು - ಡಾ. ಗಜಾನನ ಶರ್ಮಾ

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ : ಮೈಸೂರು ಪ್ರಾಂತ್ಯಕ್ಕೆ ನೀಡಿದ ಕೊಡುಗೆ - ಚಿನ್ನಸ್ವಾಮಿ ಸೋಸಲೆ,

ಸರ್ ಎಂ ವಿಶ್ವೇಶ್ವರಯ್ಯ : ಮಂಡ್ಯ ಜಿಲ್ಲೆಯ ಅನ್ನದಾತ - ಪ್ರೊ. ಚಂದ್ರಶೇಖರ ಎಸ್. ಉಷಾಲ,

ಸರ್ ಮಿರ್ಜಾ ಇಸ್ಮಾಯಿಲ್ : ಮೈಸೂರು ಪ್ರಾಂತ್ಯದ ಅಭಿವೃದ್ಧಿ - ಡಾ ನಯಿಂಉರ್ ರಹಮಾನ್ ಅವರು ವಿಷಯ ಮಂಡನೆ ಮಾಡಲಿದ್ದಾರೆ.

ಗೋಷ್ಠಿ - 2:- ಮಧ್ಯಾಹ್ನ 3.30 ರಿಂದ 4.30 ರವರೆಗೆ ಕವಿ ಗೋಷ್ಠಿ - 1 ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ ನಡೆಯಲಿದೆ. ಪ್ರಾಧ್ಯಪಕರು ಡಾ. ಶಿವರಾಜ ಶಾಸ್ತ್ರಿ ಹೇರೂರ ಅವರು ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿಗಳಾದ ಮುದಿಗೆರೆ ರಮೇಶ್ ಕುಮಾರ್ ಅವರು ಆಶಯ ನುಡಿಯನ್ನು ನೆರವೇರಿಸಲಿದ್ದಾರೆ. ಕವಿಗಳಾದ ಬಾಪು ಖಾಡೆ, ಹರೀಶ್ ಸಿ, ಹೇಮಂತ ಕುಮಾರ್, ಜಯನಂದಾ ಟೋಪುಗೋಳು, ರಮಾ ಫಣಿಭಟ್ ಗೋಪಿ, ಸೋಮಶೇಖರ್ ಬಳೆಗಾರ್, ಶಿವಸ್ವಾಮಿ ಚೀನಕೇರ, ಟಿ. ಎಂ. ತೋಟಯ್ಯ, ಡಾ. ಕೃಷ್ಣ ಹೊಂಬಾಳ, ಡಾ. ಆನಂದ್ ಇಂದೂರಾ ಅವರು ಗೋಷ್ಠಿ ನಡೆಸಲಿದ್ದಾರೆ.

ಗೋಷ್ಠಿ -3 :- ಸಂಜೆ 4.30 ರಿಂದ 6 ಗಂಟೆಯವರೆಗೆ ಕವಿ ಗೋಷ್ಠಿ - 2 ಮಹಿಳಾ ವಿಶೇಷ ಗೋಷ್ಠಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಕವಯಿತ್ರಿ ಸವಿತಾ ನಾಗಭೂಷಣ ಅವರು ವಹಿಸಲಿದ್ದಾರೆ. ಹಿರಿಯ ಕವಯಿತ್ರಿ ಡಾ. ಕೆ. ಎನ್.ಲಾವಣ್ಯಪ್ರಭಾ ಅವರು ಆಶಯ ನುಡಿಯನ್ನಾಡಲಿದ್ದಾರೆ. ಕವಯಿತ್ರಿಗಳಾದ ಡಾ. ಶೃತಿ ಬಿ. ಆರ್., ಸಾವಿತ್ರಿ ಮುಜುಂದಾರ್, ನೂತನ್ ದೋಶೆಟ್ಟಿ, ಲಲಿತಾ ಕೆ. ಹೊಸಪ್ಯಾಟಿ, ವಾಸಂತಿ ಅಂಬಲಪಾಡಿ, ಡಾ. ಸಿ. ಸುಮರಾಣಿ ಶಂಭು, ಡಾ. ಪ್ಲೇವಿಯಾ ಕ್ಯಾಸ್ಟಲಿನೋ, ಗೀತಾ ಮಕ್ಕಿಮನೆ, ಇಂದಿರಾ ಜಾನಕಿ (ಹವ್ಯಕ ಕನ್ನಡ), ಜ್ಯೋತಿ ಕಡಕೋಳ, ಲಕ್ಷ್ಮೀ ವಿ. ಭಟ್, ಡಾ. ನಿಕೇತನಾ (ತುಳು ಭಾಷೆ), ಅಭಿಜ್ಞಾ ಪಿ.ಎಮ್. ಗೌಡ, ಅನುರಾಧಾ ಆನಂದ್, ವಸು ವತ್ಸಲೆ ಅವರುಗಳು ಮಹಿಳಾ ಕವಿ ಗೋಷ್ಠಿ ನಡೆಸಿಕೊಡಲಿದ್ದಾರೆ.

ಸಾಧಕರಿಗೆ ಸನ್ಮಾನ

ಸಂಜೆ 6 ರಿಂದ 7.30 ಗಂಟೆಯವರೆಗೆ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಾಗೂ ಸುವರ್ಣ ಮಹೋತ್ಸವದ ನೆನಪಿನಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಸಾನಿಧ್ಯವನ್ನು ವಹಿಸಲಿದ್ದಾರೆ. ಗದಗ ಡಂಬಳದ ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಸನ್ನಿಧಾನ ವಹಿಸಲಿದ್ದಾರೆ. ಆಂಧ್ರಪ್ರದೇಶ ರಾಜ್ಯಪಾಲ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಅವರು ಸನ್ಮಾನಿಸಲಿದ್ದಾರೆ.

ಸನ್ಮಾನಿತರು: ಶ್ರೀ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು (ಕನ್ನಡ ಮಠ, ಕನ್ನಡ ಸೇವೆ) ನ್ಯಾಯಮೂರ್ತಿ ಕೆ. ಶ್ರೀಧರರಾವ್ (ನ್ಯಾಯಾಂಗ ಕ್ಷೇತ್ರದಲ್ಲಿ ಕನ್ನಡ ಸೇವೆ), ನ್ಯಾಯಮೂರ್ತಿ ನಾಗಮೋಹನದಾಸ್ (ನ್ಯಾಯಾಂಗ ಕ್ಷೇತ್ರದಲ್ಲಿ ಕನ್ನಡ ಸೇವೆ), ನ್ಯಾಯಮೂರ್ತಿ ಬಿಎ ಪಾಟೀಲ್ (ನ್ಯಾಯಾಂಗ ಕ್ಷೇತ್ರದಲ್ಲಿ ಕನ್ನಡ ಸೇವೆ), ಬಾಳಾಸಾಹೇಬ ಲೋಕಪುರ (ಸಾಹಿತ್ಯ), ಮಲಿಕಜಾನ್ ಶೇಖ (ಕನ್ನಡ ಸೇವೆ), ಡಾ. ಪಿ. ಕೃಷ್ಣ ಭಟ್ (ಸಾಹಿತ್ಯ), ಸ.ರಾ. ಸುಳಕೊಡೆ (ಸಾಹಿತ್ಯ), ಕರ್ನಾಟಕ ಸಾಂಸ್ಕೃತಿಕ ಸಂಘ ದಕ್ಷಿಣ ಕ್ಯಾಲಿಫೋರ್ನಿಯಾ ಅಮೆರಿಕಾ, ವಿದೇಶದಲ್ಲಿ ಕನ್ನಡ ಸಂಘಟನೆ ಸ್ವೀಕರಿಸುವವರು : ಅನಂತ ಪ್ರಸಾದ್ ಅಧ್ಯಕ್ಷರು, ಪ್ರೊ. ಪ್ರಭುಲಿಂಗ ಜಿ. ದಂಡಿನ್ (ಸಾಹಿತ್ಯ), ಡಾ. ಚನ್ನಬಸವಯ್ಯ ಹಿರೇಮಠ (ಶಿಕ್ಷಣ), ಸಗೀರ್ ಅಹ್ಮದ್ (ಸಮಾಜ ಸೇವೆ), ಮೈಕೋ ಕನ್ನಡ ಬಳಗ, ಬೆಂಗಳೂರು ಬಾಷ್ ಸಂಸ್ಥೆ, ಬಿಡದಿ ಘಟಕ, ಕನ್ನಡ ಸಂಘಟನೆ ಸ್ವೀಕರಿಸುವವರು : ರಾಮತೀರ್ಥ ಕೆ.ಎಸ್. ಅಧ್ಯಕ್ಷರು, ಎಂ. ನರಸಿಂಹ, ಬೆಂಗಳೂರು (ಕನ್ನಡ ಸೇವೆ), ಕೆ.ವಿ. ಶರತ್‌ ಚಂದ್ರ ಆಡಳಿತ (ಕನ್ನಡ), ಡಾ. ಮ.ನ. ನಂಜುಂಡಸ್ವಾಮಿ ಭಾ.ಪೊಸೇ ಆಡಳಿತ (ಕನ್ನಡ), ಡಾ. ಅರುಂಧತಿ ಚಂದ್ರಶೇಖರ್ ಆಡಳಿತ (ಕನ್ನಡ), ರಶ್ಮಿ ಜೆ.ಕೆ. ಆಡಳಿತ (ಕನ್ನಡ), ನರಸಿಂಹ ಕೋಮರ ಗುಜರಾತಿನಲ್ಲಿ ಕನ್ನಡ ಸಂಘಟನೆ, ಸಿ.ವಿ. ಸುಧೀಂದ್ರ (ಕಾನೂನು), ನಿಸಾರ್ ಅಹಮದ್ ಆಡಳಿತ (ಕನ್ನಡ), ಡಾ. ವಿಶ್ವನಾಥ ವಿ. ಮಳಗಿ (ಶಿಕ್ಷಣ), ಡಾ. ಸುರೇಶ್ ಆರ್. ಸಜ್ಜನ್ (ಸಮಾಜ ಸೇವೆ), ಸುಮುಖಾನಂದ ಜಲವಳ್ಳಿ (ಸಾಹಿತ್ಯ), ಪ್ರವೀಣ ಕುಮಾರ್ ಶೆಟ್ಟಿ ಅರಬ್ ದೇಶ, ಕನ್ನಡ ಸಂಘಟನೆ, ಅಜಿತ ಭಾಸ್ಕರ್ ನ್ಯೂಯಾರ್ಕ್, ಅಮೆರಿಕಾ, ಕ್ರೀಡೆ, ಕನ್ನಡ ಸಂಘಟನೆ, ಡಾ. ಬಿ. ಜನಾರ್ದನ ಭಟ್ (ಸಾಹಿತ್ಯ), ವಿಜಯಕುಮಾರ ಹಲಗಲಿ ಸಿಡ್ನಿ, ಆಸ್ಟ್ರೇಲಿಯಾ, ಕನ್ನಡ ಸಂಘಟನೆ, ಡಾ. ಹೆಚ್.ಎಸ್. ನಿಷ್ಕಲ್ ಗೌಡ (ಸಮಾಜ ಸೇವೆ), ಆರತಿ ಕೃಷ್ಣ ವಿದೇಶಗಳಲ್ಲಿ ಕನ್ನಡ ಸಂಘಟನೆ, ಡಾ. ಪವನ್ ವಿ.ಎಸ್. ತೈವಾನ್, ಕನ್ನಡ ಸಂಘಟನೆ, ಡಾ. ಎನ್. ಶಿವಶಂಕರ್ ಭಾ.ಆ.ಸೇ.ಆಡಳಿತ (ಕನ್ನಡ), ಡಿ.ಆರ್. ಮಧುಸೂದನ (ಸಮಾಜ ಸೇವೆ), ಡಾ. ಶಂಕರೇಗೌಡ (ವೈದ್ಯಕೀಯ ಸೇವೆ), ರವಿ ಟಿ. ವಿಜ್ಞಾನಿ, ಇಸ್ರೋ, ರಾಜು ಮಳವಳ್ಳಿ (ಮಾಧ್ಯಮ ಕ್ಷೇತ್ರ), ಟಿ.ಎನ್. ಶಿವಕುಮಾರ್ (ಸಾಹಿತ್ಯ), ಡಿ.ಸಿ. ಮಹದೇವ್ (ಸಾಹಿತ್ಯ), ಎಂ. ಎಸ್ ನಾಗಲಿಂಗೇಗೌಡ (ಶಿಕ್ಷಣ), ಡಾ. ಮೂಡಂಬೈಲ್ ರವಿ ಶೆಟ್ಟಿ ಅರಬ್ ದೇಶ, ಕನ್ನಡ ಸಂಘಟನೆ, ಡಾ. ಪಿ.ಎಂ. ಜಗದೀಶ್ ಕುಮಾರ್ (ವೈದ್ಯಕೀಯ) ಪ್ರಕಾಶ್‌ ಗೌಡ ಆಡಳಿತ (ಕನ್ನಡ), ಶಿಕಾಗೋ ವಿಶ್ವವಿದ್ಯಾಲಯ, ಮೆಲ್ಬರ್ನ್‌ ಕನ್ನಡ ಸಂಘ ಆಸ್ಟ್ರೇಲಿಯಾ, ಕನ್ನಡ ಸಂಘಟನೆ ಮತ್ತು ಸ್ವಂತ ಕನ್ನಡ ಭವನ. ಬಸವರಾಜು ಮಾಲಗತ್ತಿ ಆಡಳಿತ.

Whats_app_banner