ದಕ್ಷಿಣ ಕನ್ನಡ ಜಿಲ್ಲೆಗೆ ಬರಲಿವೆ ಎಲೆಕ್ಟ್ರಿಕ್ ಬಸ್‌ಗಳು; ಅಕ್ಟೋಬರ್ ವೇಳೆಗೆ ಪರಿಸರ ಸ್ನೇಹಿ ವಾಹನ ರಸ್ತೆಗಿಳಿಯೋದು ಖಚಿತ-mangalore news electric buses for dakshina kannada eco friendly vehicle sure to be on the road by october 2024 rmy ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ದಕ್ಷಿಣ ಕನ್ನಡ ಜಿಲ್ಲೆಗೆ ಬರಲಿವೆ ಎಲೆಕ್ಟ್ರಿಕ್ ಬಸ್‌ಗಳು; ಅಕ್ಟೋಬರ್ ವೇಳೆಗೆ ಪರಿಸರ ಸ್ನೇಹಿ ವಾಹನ ರಸ್ತೆಗಿಳಿಯೋದು ಖಚಿತ

ದಕ್ಷಿಣ ಕನ್ನಡ ಜಿಲ್ಲೆಗೆ ಬರಲಿವೆ ಎಲೆಕ್ಟ್ರಿಕ್ ಬಸ್‌ಗಳು; ಅಕ್ಟೋಬರ್ ವೇಳೆಗೆ ಪರಿಸರ ಸ್ನೇಹಿ ವಾಹನ ರಸ್ತೆಗಿಳಿಯೋದು ಖಚಿತ

Electric Bus in Dakshin Kannada: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2024ರ ಅಕ್ಟೋಬರ್ ವೇಳೆಗೆ ಎಲೆಕ್ಟ್ರಿಕ್ ಬಸ್‌ಗಳು ರಸ್ತೆಗಿಳಿಯಲಿವೆ. ಈ ಪರಿಸರಸ್ನೇಹಿ ವಾಹನಗಳಲ್ಲಿ ಸಂಚರಿಸಲು ಜಿಲ್ಲೆಯ ಜನ ಕಾತುರದಿಂದ ಕಾಯುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಗೆ ಅತಿ ಶೀಘ್ರದಲ್ಲೇ ಎಲೆಕ್ಟ್ರಿಕ್ ಬಸ್‌ಗಳು  ಬರಲಿವೆ. ಈ ವರ್ಷದ ಅಕ್ಟೋಬರ್ ವೇಳೆಗೆ ಪರಿಸರ ಸ್ನೇಹಿ ಬಸ್‌ಗಳು ಜಿಲ್ಲೆಯ ಜನರ ಪ್ರಯಾಣಕ್ಕೆ ಲಭ್ಯವಾಗಲಿವೆ.
ದಕ್ಷಿಣ ಕನ್ನಡ ಜಿಲ್ಲೆಗೆ ಅತಿ ಶೀಘ್ರದಲ್ಲೇ ಎಲೆಕ್ಟ್ರಿಕ್ ಬಸ್‌ಗಳು ಬರಲಿವೆ. ಈ ವರ್ಷದ ಅಕ್ಟೋಬರ್ ವೇಳೆಗೆ ಪರಿಸರ ಸ್ನೇಹಿ ಬಸ್‌ಗಳು ಜಿಲ್ಲೆಯ ಜನರ ಪ್ರಯಾಣಕ್ಕೆ ಲಭ್ಯವಾಗಲಿವೆ. (HT File Photo)

ಮಂಗಳೂರು (ದಕ್ಷಿಣ ಕನ್ನಡ): Electric Bus in Dakshin Kannada: ಸುಮಾರು ಆರು ತಿಂಗಳ ಬಳಿಕ, ಅಂದರೆ 2024ರ ಅಕ್ಟೋಬರ್ ವೇಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ರಸ್ತೆಗಳಲ್ಲಿ ಅಂದಾಜು ನೂರರಷ್ಟು ವಿದ್ಯುತ್ ಚಾಲಿತ ಬಸ್‌ಗಳು ಓಡಾಡಲಿವೆ. ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗಕ್ಕೆ ಈಗಾಗಲೇ 45 ಬಸ್ಸುಗಳು ಹಂಚಿಕೆಯಾಗಿವೆ. ಈ ಬಸ್ಸುಗಳು ನಿಗಮಕ್ಕೆ ಸೇರಿದ ಬಳಿಕ ಮಂಗಳೂರು, ಉಡುಪಿ ಮಾರ್ಗವಾಗಿ ಮಣಿಪಾಲ, ಮಂಗಳೂರು ಕಾಸರಗೋಡು, ಮಂಗಳೂರು ಧರ್ಮಸ್ಥಳ ಮಾರ್ಗಗಳಲ್ಲಿ ತೆರಳಲು ಚಿಂತನೆ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಧಾನಮಂತ್ರಿ ಇ-ಬಸ್ ಯೋಜನೆಯಡಿ 100 ಇ-ಬಸ್ (ಎಲೆಕ್ಟ್ರಿಕಲ್ ಬಸ್)ಗಳನ್ನು ಒದಗಿಸಲಾಗುತ್ತದೆ. ಪಿಎಂ ಇ-ಬಸ್ ಯೋಜನೆಯಲ್ಲಿ ರಾಜ್ಯದ ಬೆಳಗಾವಿ ಜಿಲ್ಲೆಗೆ 50, ಧಾರವಾಡ ಜಿಲ್ಲೆಗೆ 50, ಶಿವಮೊಗ್ಗ ಜಿಲ್ಲೆಗೆ 50, ಮೈಸೂರಿಗೆ 100 ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ 100 ಬಸ್ ಗಳನ್ನು ನೀಡಲು ಆಯ್ಕೆ ಪ್ರಕ್ರಿಯೆ ನಡೆದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲೆಕ್ಟ್ರಿಕ್ ಬಸ್ ಗಳು ಓಡಾಡಲಿವೆ.

ಕೆಎಸ್‌ಆರ್‌ಟಿಸಿಯಿಂದ ಮಂಜೂರಾದ ಬಸ್‌ಗಳಿಗೆ ಬಿಜೈ ಕೆಎಸ್‌ಆರ್‌ಟಿಸಿ ನಿಲ್ದಾಣ ಹಾಗೂ ಕುಂಟಿಕಾನದ ಮೂರನೇ ವಿಭಾಗ ಕಚೇರಿ ಬಸ್‌ ಶೆಡ್‌ನಲ್ಲಿ ಚಾರ್ಜಿಂಗ್‌ ವ್ಯವಸ್ಥೆಗೆ ಯೋಜನೆ ಹಾಕಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಕುಂಟಿಕಾನದಲ್ಲಿ ಒಂದೇ ಸಮಯಕ್ಕೆ 15 ಬಸ್‌ಗಳು ಚಾರ್ಜಿಂಗ್‌ ಮಾಡಲು ವ್ಯವಸ್ಥೆ ಮಾಡಲಾಗುತ್ತದೆ. ಇದರ ನಿರ್ವಹಣೆ, ಪಾರ್ಕಿಂಗ್‌ ಮಾಡಲು ಇಲ್ಲೇ ವ್ಯವಸ್ಥೆ ಮಾಡಲಾಗುತ್ತಿದೆ. ಬಸ್‌ಗಳ ಸಂಚಾರ ಮಾಡುವ ಸಂದರ್ಭ ಚಾರ್ಜಿಂಗ್‌ ಮಾಡಲು ಬಿಜೈ ಕೆಎಸ್‌ಆರ್‌ಟಿಸಿಯಲ್ಲಿ ಅವಕಾಶ ಮಾಡಲಾಗುತ್ತಿದ್ದು, 5 ಚಾರ್ಜಿಂಗ್‌ ಪಾಯಿಂಟ್‌ ಇರಲಿದ್ದು, 5 ಬಸ್‌ಗಳು ಒಂದೇ ಸಮಯದಲ್ಲಿ ಚಾರ್ಜ್‌ ಆಗಲಿದೆ.

ಕೆಎಸ್‌ಆರ್‌ಟಿಸಿಯ ಪರಿಸರ ಸ್ನೇಹಿ ವಿದ್ಯುತ್ ಚಾಲಿತ ಬಸ್ಸುಗಳು ನಗರ ಸಾರಿಗೆ ಬಸ್ ಗಳಾಗಲಿವೆ. ಇದರಿಂದ ಪರಿಸರಕ್ಕೆ ಹಾನಿಯೂ ಇಲ್ಲ. ಹೊಗೆಯುಗುಳುವ ಬಸ್ಸುಗಳು ಕ್ರಮೇಣ ಕಡಿಮೆಯಾಗುವ ಸೂಚನೆ ಇದು. ಆದರೆ ಸದ್ಯದ ಮಾಹಿತಿ ಪ್ರಕಾರ ಒಂದು ಬಸ್ ಒಮ್ಮೆ ಚಾರ್ಜ್ ಮಾಡಿದರೆ, 200 ಕಿ.ಮೀ. ಓಡುವ ಕ್ಷಮತೆಯನ್ನು ಹೊಂದಿದೆ. ಒಂದು ಬಸ್ ಚಾರ್ಜ್ ಆಗಲು ಸುಮಾರು ಎರಡು ಗಂಟೆಗಳು ಬೇಕು. ಭವಿಷ್ಯದಲ್ಲಿ ಎಲ್ಲ ಡಿಪೊಗಳಲ್ಲೂ ಇವಿ ಸ್ಟೇಷನ್‌ಗಳು ಕಡ್ಡಾಯ ಎಂದಾಗಲಿದೆ. ಸದ್ಯ ಮಂಗಳೂರು ಕೆಎಸ್‌ಆರ್‌ಟಿಸಿಯಲ್ಲಿ 565 ಬಸ್ ಗಳಿವೆ. 505 ಸಂಚಾರಗಳು ಆಗುತ್ತಿವೆ. 1.1 ಲಕ್ಷಕ್ಕೂ ಹೆಚ್ಚಿನ ಮಂದಿ ಪ್ರಯಾಣಿಸುತ್ತಿದ್ದಾರೆ. ಹೆಚ್ಚಿನ ಇ-ಬಸ್ಸುಗಳು ಬಂದರೆ ಪ್ರಯಾಣಿಕರಿಗೂ ಅನುಕೂಲ. ಪರಿಸರಕ್ಕೂ ಒಳ್ಳೆಯದು.

ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಎಲೆಕ್ಟ್ರಿಕ್ ಬಸ್, ಕಾರು, ಸ್ಕೂಟರ್, ಬೈಕ್ ಹಾಗೂ ಗೂಡ್ಸ್ ಇವಿಗಳತ್ತ ಜನರು ಆಸಕ್ತಿ ತೋರುತ್ತಿದ್ದಾರೆ. ವಿಶೇಷವಾಗಿ ಎಲೆಕ್ಟ್ರಿಕ್ ಕಾರುಗಳಲ್ಲಿ ದೊಡ್ಡ ಕ್ರಾಂತಿಯೇ ಆಗುತ್ತಿದೆ. ಬಜೆಟ್ ಸ್ನೇಹಿಯಿಂದ ಹಿಡಿದು ಐಶಾರಾಮಿ ಇವಿ ಕಾರುಗಳು ಮಾರುಕಟ್ಟೆಗೆ ಬಂದಿದ್ದು, ವರ್ಷದ ಕೊನೆಯ ವೇಳೆಗೆ ಒಂದಷ್ಟು ಹೊಸ ಇವಿಗಳು ಗ್ರಾಹಕರ ಕೈಸೇರಲಿವೆ. (ವರದಿ: ಹರೀಶ್ ಮಾಂಬಾಡಿ)

(This copy first appeared in Hindustan Times Kannada website. To read more like this please logon to kannada.hindustantimes.com )

mysore-dasara_Entry_Point