ಚಿಂತಾಮಣಿಯಿಂದ ನಾಪತ್ತೆಯಾಗಿದ್ದ ದಂಪತಿ ಧರ್ಮಸ್ಥಳದಲ್ಲಿ ಆತ್ಮಹತ್ಯೆ; ದೊಂಡೋಲೆ ಪವರ್ ಪ್ರಾಜೆಕ್ಟ್ ಬಳಿ ನೇತ್ರಾವತಿ ನದಿಯಲ್ಲಿ ಶವ ಪತ್ತೆ
ಕನ್ನಡ ಸುದ್ದಿ  /  ಕರ್ನಾಟಕ  /  ಚಿಂತಾಮಣಿಯಿಂದ ನಾಪತ್ತೆಯಾಗಿದ್ದ ದಂಪತಿ ಧರ್ಮಸ್ಥಳದಲ್ಲಿ ಆತ್ಮಹತ್ಯೆ; ದೊಂಡೋಲೆ ಪವರ್ ಪ್ರಾಜೆಕ್ಟ್ ಬಳಿ ನೇತ್ರಾವತಿ ನದಿಯಲ್ಲಿ ಶವ ಪತ್ತೆ

ಚಿಂತಾಮಣಿಯಿಂದ ನಾಪತ್ತೆಯಾಗಿದ್ದ ದಂಪತಿ ಧರ್ಮಸ್ಥಳದಲ್ಲಿ ಆತ್ಮಹತ್ಯೆ; ದೊಂಡೋಲೆ ಪವರ್ ಪ್ರಾಜೆಕ್ಟ್ ಬಳಿ ನೇತ್ರಾವತಿ ನದಿಯಲ್ಲಿ ಶವ ಪತ್ತೆ

ಚಿಂತಾಮಣಿಯಿಂದ ನಾಪತ್ತೆಯಾಗಿದ್ದ ದಂಪತಿ ಧರ್ಮಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿಷಾದಕರ ಘಟನೆ ನಡೆದಿದೆ. ಪ್ರತ್ಯೇಕ ಪ್ರಕರಣದಲ್ಲಿ ತುಂಬೆ ಕಡೆಗೋಳಿ ಸಮೀಪ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಚಿಂತಾಮಣಿಯಿಂದ ನಾಪತ್ತೆಯಾಗಿದ್ದ ದಂಪತಿ ಧರ್ಮಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಶವ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. (ಆತ್ಮಹತ್ಯೆ ತಡೆಯ ಚಿತ್ರವನ್ನು ಸಾಂಕೇತಿಕವಾಗಿ ಬಳಸಲಾಗಿದೆ)
ಚಿಂತಾಮಣಿಯಿಂದ ನಾಪತ್ತೆಯಾಗಿದ್ದ ದಂಪತಿ ಧರ್ಮಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಶವ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. (ಆತ್ಮಹತ್ಯೆ ತಡೆಯ ಚಿತ್ರವನ್ನು ಸಾಂಕೇತಿಕವಾಗಿ ಬಳಸಲಾಗಿದೆ) (Pexels)

ಮಂಗಳೂರು: ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ದಂಪತಿ ಶವ ಪತ್ತೆಯಾಗಿದೆ. ಅಕ್ಟೋಬರ್ 31 ರಂದು ಚಿಂತಾಮಣಿಯಿಂದ ಕಾಣೆಯಾಗಿದ್ದ ದಂಪತಿ ಶವ ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿಯ ದೊಂಡೋಲೆ ಪವರ್ ಪ್ರಾಜೆಕ್ಟ್ ಬಳಿ ಭಾನುವಾರ ಮಧ್ಯಾಹ್ನ ಪತ್ತೆಯಾಗಿದೆ. ಮೃತ ದಂಪತಿಯನ್ನು ಚಿಂತಾಮಣಿ ತಾಲೂಕಿನ ಮದ್ದಿರೆಡ್ಡಿ (61) ಈಶ್ವರಮ್ಮ (52) ಎಂದು ಗುರುತಿಸಲಾಗಿದೆ. ಅಕ್ಟೋಬರ್ 31 ರಂದು ದಂಪತಿಗಳು ನಾಪತ್ತೆಯಾಗಿದ್ದು. ಈ ಬಗ್ಗೆ ಅನುಮಾನಗೊಂಡ ಕುಟುಂಬಸ್ಥರು ಹುಡುಕಿಕೊಂಡು ಧರ್ಮಸ್ಥಳಕ್ಕೆ ಬಂದಿದ್ದರು.

ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಸಂಶಯದಲ್ಲಿ‌‌ ಶೌರ್ಯ ತಂಡ ಹಾಗೂ ಪೊಲೀಸರ ಸಹಕಾರದಲ್ಲಿ ನೇತ್ರಾವತಿ ಸ್ನಾನಘಟ್ಟ ಸೇರಿ ನದಿಯಲ್ಲಿ ಹುಡುಕಾಡಿದಾಗ ದೊಂಡೋಲೆ ಬಳಿಯ ಪವರ್ ಪ್ರಾಜೆಕ್ಟ್ ನ ಅಣೆಕಟ್ಟಿನಲ್ಲಿ ಶವಗಳು ಸಿಲುಕಿಕೊಂಡಿದ್ದವು.

ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಉಜಿರೆ, ವೇಣೂರು ತಂಡದವರು ಶವಗಳನ್ನು ಮೇಲಕ್ಕೆತ್ತಿದ್ದಾರೆ. ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ನವೆಂಬರ್ 1ರಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸಂಶಯಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಮದ್ದಿ ರೆಡ್ಡಿ ಮತ್ತು ಈಶ್ವರಮ್ಮ ದಂಪತಿ ಚಿಂತಾಮಣಿ ನಗರದ ಕನ್ನಂಪಲ್ಲಿ ಬಡಾವಣೆಯವರು. ಮದ್ದಿರೆಡ್ಡಿ ಪಶುವೈದ್ಯರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದರು ಎಂದು ಪಬ್ಲಿಕ್ ಆಪ್ ಸುದ್ದಿ ತಿಳಿಸಿದೆ.

ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.

ಖಾಸಗಿ ಬಸ್ ಬೈಕಿಗೆ ಡಿಕ್ಕಿ, ಸ್ಥಳದಲ್ಲೇ ಸವಾರ ಸಾವು, ಮತ್ತೋರ್ವ ಗಂಭೀರ

ತುಂಬೆ ಕಡೆಗೋಳಿ ಎಂಬಲ್ಲಿ ಖಾಸಗಿ‌ ಬಸ್ ಬೈಕ್ ಗೆ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿ ಯೇ ಓರ್ವ ಸಾವನ್ನಪ್ಪಿದ್ದು ಇನ್ನೋರ್ವ ಗಂಭೀರವಾಗಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಭಾನುವಾರ ರಾತ್ರಿ ಈ ದುರ್ಘಟನೆ ನಡೆದಿದೆ. ಕಡೆಗೋಳಿ ನಿವಾಸಿ ಪ್ರವೀಣ (30) ಸ್ಥಳದಲ್ಲಿಯೇ ಮೃತಪಟ್ಟ ವ್ಯಕ್ಯಿಯಾಗಿದ್ದು, ಸ್ನೇಹಿತ ಸಂದೀಪ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಬ್ಬರು ಸೇಲ್ಸ್ ಮ್ಯಾನ್ ಕೆಲಸಗಾರರಾಗಿದ್ದು, ತನ್ನ ಖಾಸಗಿ ಕೆಲಸವನ್ನು ಮುಗಿಸಿ ಮನೆಗೆ ಜೊತೆಯಾಗಿ ಪ್ರಯಾಣಿಸುತ್ತಿದ್ದ ವೇಳೆ ಬಸ್ ಡಿಕ್ಕಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ಮಂಗಳೂರುಬೆಂಗಳೂರು ರಸ್ತೆಯ ತುಂಬೆ ಸಮೀಪದ ‌ಕಡೆಗೋಳಿ ಎಂಬಲ್ಲಿ ಮಂಗಳೂರಿನಿಂದ ಬಿಸಿರೋಡಿನ ಕಡೆಗೆ ಬರುತ್ತಿದ್ದ ಸೆಲೀನಾ ಎಂಬ ಖಾಸಗಿ ಬಸ್ ಬೈಕ್ ಸವಾರರಿಬ್ಬರಿಗೆ ಡಿಕ್ಕಿಯಾಗಿದೆ.

ಬಸ್ ಚಾಲಕನ ವಿರುದ್ಧ ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವಸ್ಥಳಕ್ಕೆ ಟ್ರಾಫಿಕ್ ಎಸ್.ಐ.ಸುತೇಶ್ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಖಾಸಗಿ ಬಸ್ ಗಳು ಅತಿವೇಗದಲ್ಲಿ ಚಲಾಯಿಸುವುದು, ಪದೇ ಪದೇ ಹಾರ್ನ್ ಮಾಡಿ ಎದುರಿರುವ ವಾಹನ ಸವಾರರನ್ನು ಗಲಿಬಿಲಿಗೊಳಿಸುವ ಕೆಲಸವಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Whats_app_banner