ಕನ್ನಡ ಸುದ್ದಿ  /  ಕರ್ನಾಟಕ  /  ಷೋಡಷಾವಧಾನ ತಂತ್ರ ಕರಗತ ಮಾಡಿಕೊಂಡ 9ನೇ ತರಗತಿ ವಿದ್ಯಾರ್ಥಿ, ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಅನ್ವೇಶ್ ಅಂಬೆಕಲ್ಲು

ಷೋಡಷಾವಧಾನ ತಂತ್ರ ಕರಗತ ಮಾಡಿಕೊಂಡ 9ನೇ ತರಗತಿ ವಿದ್ಯಾರ್ಥಿ, ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಅನ್ವೇಶ್ ಅಂಬೆಕಲ್ಲು

ಷೋಡಷಾವಧಾನ ತಂತ್ರ ಕರಗತ ಮಾಡಿಕೊಂಡ 9ನೇ ತರಗತಿ ವಿದ್ಯಾರ್ಥಿ ಅನ್ವೇಶ್ ಅಂಬೆಕಲ್ಲು ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ್ದು, ಹೊಸ ದಾಖಲೆ ಬರೆದಿದ್ದಾರೆ. ಹದಿನಾರು ಮಂದಿ ಕೊಟ್ಟ 16 ವಿಷಯಗಳನ್ನು ಏಕಕಾಲಕ್ಕೆ ನೋಡಿ, ಕೇಳಿ, ಗಮನಿಸಿ ಅದನ್ನು ಪುನಃ ಹೇಳುವ ತಂತ್ರ ಇದಾಗಿದ್ದು, ಅನ್ವೇಶ್ ಸಾಧನೆಯ ವಿವರ ಇಲ್ಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಷೋಡಷಾವಧಾನ ತಂತ್ರ ಕರಗತ ಮಾಡಿಕೊಂಡ 9ನೇ ತರಗತಿ ವಿದ್ಯಾರ್ಥಿ, ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಅನ್ವೇಶ್ ಅಂಬೆಕಲ್ಲು
ಷೋಡಷಾವಧಾನ ತಂತ್ರ ಕರಗತ ಮಾಡಿಕೊಂಡ 9ನೇ ತರಗತಿ ವಿದ್ಯಾರ್ಥಿ, ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಅನ್ವೇಶ್ ಅಂಬೆಕಲ್ಲು

ಮಂಗಳೂರು : ಒಬ್ಬರು ಒಮ್ಮೆ ಹೇಳಿದ ವಿಷಯವನ್ನು ಮತ್ತೆ ಪುನಾರವರ್ತನೆ ಮಾಡುವುದು ಬಹಳ ಕಷ್ಟದ ಕೆಲಸ. ಆದರೆ ಬಾಲಕನೊಬ್ಬ 16 ಮಂದಿ ಹೇಳಿದ ವಿಷಯಗಳನ್ನು ನೆನಪಿಟ್ಟು ಇಂಡಿಯಾ ಬುಕ್ ರೆಕಾರ್ಡ್ ಸೇರಿ ದಾಖಲೆ ಬರೆದಿದ್ದಾನೆ.

ಹದಿನಾರು ಮಂದಿ ಕೊಟ್ಟ 16 ವಿಷಯಗಳನ್ನು ಏಕಕಾಲಕ್ಕೆ ನೋಡಿ, ಕೇಳಿ, ಗಮನಿಸಿ, ಸ್ಮರಣಶಕ್ತಿಯೊಳಗೆ ದಾಖಲಿಸಿಕೊಂಡು, ಪ್ರದರ್ಶನ ನೀಡುವ "ಷೋಡಷಾವಧಾನ"ದ ಮೂಲಕ ಮಂಗಳೂರು ಸ್ವರೂಪ ಅಧ್ಯಯನ ಕೇಂದ್ರದ ಅನೇಶ್ ಅಂಬೆಕಲ್ಲು 'ಇಂಡಿಯಾ ಬುಕ್ ಆಫ್ ರೆಕಾರ್ಡ್' ಸಂಸ್ಥೆಯ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಷೋಡಷಾವಧಾನ ತಂತ್ರ ಎಂದರೆ…

ನೆನಪಿನ ಹತ್ತು ತಂತ್ರಗಳ ಮೂಲಕ ಮಕ್ಕಳಲ್ಲಿರುವ ಅಗಾಧ ಸಾಮರ್ಥ್ಯವನ್ನು ಸ್ವರೂಪ ಶಿಕ್ಷಣದ ಮೂಲಕ ಪರಿಚಯಿಸುವ ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್ ಅವರ ಮಾರ್ಗದರ್ಶನದಲ್ಲಿ ಈ ದಾಖಲೆಯು ಬರೆಯಲ್ಪಟ್ಟಿದೆ. ಪುಸ್ತಕಗಳ ಹೆಸರುಗಳು, ಪ್ರಶ್ನೆಗಳು, ಸಂಖ್ಯೆಗಳು, ವಸ್ತುಗಳ ಹೆಸರು, ಚಿತ್ರಗಳ ಹೆಸರುಗಳು, ಹಾಡುಗಳ ಹೆಸರುಗಳು, ಘಂಟೆ ಶಬ್ದಗಳು, ಕ್ರಿಯೇಟಿವ್ ಆರ್ಟ್...ಜೊತೆಗೆ ಎರಡು ಕೈಗಳಿಗೂ, ಯೋಚನೆಗಳಿಗೂ ನಿರಂತರ ಕೆಲಸದೊಂದಿಗೆ ಹೀಗೆ ಇನ್ನೂ ಹಲವು ವಿಚಾರಗಳ ಜೊತೆಗೆ ರೂಬಿಕ್ಸ್ ಕ್ಯೂಬ್ ಪರಿಹರಿಸಿಕೊಂಡು ಕಾಳುಗಳನ್ನು ಎಣಿಸುತ್ತಾ, ಮಧ್ಯೆ ಮಧ್ಯೆ ಪ್ರವೇಶ ಮಾಡಿ ಕಿರಿ ಕಿರಿ ಮಾಡುವ ಅಧಿಕ ಪ್ರಸಂಗಿಯನ್ನು ಸಹಿಸಿಕೊಂಡು 16 ವಿಷಯಗಳ ಅಂಶಗಳನ್ನು ನೆನಪಿನಲ್ಲಿಟ್ಟುಕೊಂಡು ದಾಖಲಿಸುವ ಮೂಲಕ ಈ ಅದ್ಭುತ ಸಾಧನೆಯ ಪ್ರದರ್ಶನ ಮಾಡಿ ದಾಖಲೆ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸುಳ್ಯ ಮೂಲದ ಅನ್ವೇಶ್ ಅಂಬೆಕಲ್ಲು

ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ 1ರಿಂದ 7 ನೆಯ ತರಗತಿ ಅಭ್ಯಾಸವನ್ನು ಪೂರ್ಣಗೊಳಿಸಿ ಪ್ರಸ್ತುತ ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದಲ್ಲಿ 9 ನೆಯ ತರಗತಿ ವ್ಯಾಸಂಗ ಮಾಡುತ್ತಿದ್ದು ಪಠ್ಯಪುಸ್ತಕಗಳ ಕಲಿಕೆಯೊಂದಿಗೆ ವಿಶೇಷ ಸಾಮರ್ಥ್ಯಗಳನ್ನು ಮೈಗೂಡಿಸಿಕೊಂಡು ಬೆಳೆಯುತ್ತಿರುವ ಅನ್ವೇಶ್, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಮಿಮಿಕ್ರಿ ಬೀಟ್‌ಬಾಕ್ಸ್, ನೆನಪು ಶಕ್ತಿಯ ಪ್ರತಿಭಾ ಪ್ರದರ್ಶನ ಹಾಗೂ ವಯೋಲಿನ್ ಅಭ್ಯಾಸ ನಡೆಸುತ್ತಿರುವ ಜೊತೆಗೆ ಚಿತ್ರಕಲೆಯಲ್ಲಿಯೂ ಗುರುತಿಸಿಕೊಂಡಿದ್ದು ಉದಯೋನ್ಮುಖ ಪ್ರತಿಭೆಯಾಗಿದ್ದಾರೆ.

ಮೂಲತಃ ಸುಳ್ಯದವರಾಗಿದ್ದು ಪ್ರಸ್ತುತ ಮಂಗಳೂರಿನ ಬಂಟ್ವಾಳದ ಮೆಲ್ಕಾರ್‌ನಲ್ಲಿ ವಾಸವಿರುವ ಇಂಜಿನಿಯರ್ ಮಧುಸೂದನ್ ಅಂಬೆಕಲ್ಲು ಹಾಗೂ ಶಿಕ್ಷಕಿ ತೇಜಸ್ವಿ ಅಂಬೆಕಲ್ಲು ಅವರ ಪುತ್ರನಾಗಿರುವ ಅನ್ವೇಶ್ ಅಂಬೆಕಲ್ಲು ಇದೀಗ ಸ್ವರೂಪದಲ್ಲಿ 9ನೇ ತರಗತಿಯ ವಿಷಯ ಜೊತೆ ಜೊತೆಗೆ 10ನೇ ತರಗತಿಯ ವಿಷಯ ಒಂದೇ ತಿಂಗಳಲ್ಲಿ ಮುಗಿಸಿಕೊಂಡು ಇನ್ನೂ ಇತರ ಹಲವು ವಿಷಯಗಳಲ್ಲಿ 10 ವಿಶ್ವದಾಖಲೆಯ ಸಾಧನೆಗಳನ್ನು ಮಾಡುವ ಸಿದ್ಧತೆಯಲ್ಲಿದ್ದಾನೆ.

ಮಕ್ಕಳಿಗೆ ಕಲಿಕೆ, ಸಾಧನೆ ಶೋಧನೆ ಮೂಲಕ ಬೆಳೆಯುವ ಹಾದಿಯನ್ನು ತೋರಿಸಿಕೊಡುತ್ತಿರುವ ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್, ಸುಮಾಡ್ಕರ್ ಹಾಗೂ ಆದಿ ಸ್ವರೂಪ ಈ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಈ ಬಗ್ಗೆ ಮಾತನಾಡಿದ ಸ್ವರೂಪ‌ ಅಧ್ಯಯನ ಕೇಂದ್ರದ ಗೋಪಾಡ್ಕರ್ " ಅನ್ವೆಷ್ ನೆನಪಿನ ಅಧ್ಯಯನದಲ್ಲಿ ಪ್ರಥಮ ಸ್ಥಾನದಲ್ಲಿದ್ದಾನೆ.ಅವನ ಸಾಮರ್ಥ್ಯ ವಿಶೇಷವಾಗಿದೆ. ನೆನಪಿನ ಹತ್ತು ತಂತ್ರಗಳನ್ನು ಅಭ್ಯಾಸ ಮಾಡುತ್ತಾ ಇದೀಗ 16 ಮಂದಿ ಹೇಳುವ ವಿಷಯಗಳನ್ನು ಪೂರ್ಣವಾಗಿ ನೆನಪಿನಲ್ಲಿಟ್ಟುಕೊಂಡು ದಾಖಲೆ ಮಾಡಿದ್ದು, ವಿಶೇಷ ಸಾಧನೆಯಾಗಿದೆ ಎಂದರು

ಈ ಬಗ್ಗೆ ಮಾತನಾಡಿದ ಅನ್ವೇಷ್ ತಾಯಿ ತೇಜಸ್ವಿ ಅಂಬೆಕಲ್ಲು ಅವರು " ಅನ್ವೇಷ್ ಗೆ ಬಾಲ್ಯದಿಧ ಸಂಗೀತದಲ್ಲಿ ಆಸಕ್ತಿ ಇತ್ತು. ಸ್ವರೂಪ ಅಧ್ಯಯನ ಕೇಂದ್ರಕ್ಕೆ ಬಂದ ಬಳಿಕ ಅವನಲ್ಲಿ ತುಂಬಾ ಬದಲಾವಣೆಯಾಗಿದೆ. ಮೆಮೊರಿ ತಂತ್ರ, ಬೀಟ್ ಬಾಕ್ಸ್ ಮೂಲಕ ಸಾಧನೆ ಮಾಡುತ್ತಿದ್ದಾನೆ. ಅವನ ಈ ದಾಖಲೆ ಸ್ವರೂಪ ಅಧ್ಯಯನ ಕೇಂದ್ರದಿಂದ ಸಾಧ್ಯವಾಗಿದೆ ಎಂದರು.

ದಾಖಲೆ ಬರೆದ ಅನ್ವೇಷ್ ಮಾತನಾಡಿ ಸ್ವರೂಪಕ್ಕೆ ಕಳುಹಿಸಿದ ಅಪ್ಪ, ಅಮ್ಮ ನಿಗೆ ಧನ್ಯವಾದ ಹೇಳುತ್ತೇನೆ. ಷೋಡವಧಾನ ಮಾಡುವ ಮೊದಲು ಅಷ್ಟವಧಾನ , ದಶವಧಾನ, ತ್ರಯದಶಾವಧಾನ ಮಾಡಿ ಪ್ರದರ್ಶನ ನೀಡಿದೆ. ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಇದು ಸಾಧ್ಯವಾಗಿದೆ ಎನ್ನುತ್ತಾರೆ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)