ಕನ್ನಡ ಸುದ್ದಿ  /  ಕರ್ನಾಟಕ  /  Tomato Price Hike: ಮತ್ತೆ ಟೊಮೊಟೊ ಬೆಲೆಯಲ್ಲಿ ದಿಢೀರ್‌ ಏರಿಕೆ, ವರ್ಷದ ನಂತರ ದರ ಹೆಚ್ಚಳಕ್ಕೆ ಕಾರಣವೇನು?

Tomato Price Hike: ಮತ್ತೆ ಟೊಮೊಟೊ ಬೆಲೆಯಲ್ಲಿ ದಿಢೀರ್‌ ಏರಿಕೆ, ವರ್ಷದ ನಂತರ ದರ ಹೆಚ್ಚಳಕ್ಕೆ ಕಾರಣವೇನು?

Market updates ಟೊಮೆಟೊ ಬೆಲೆ( Tomato Rate) ಮತ್ತೆ ಏರಿಕೆ ಕಂಡಿದೆ. ಕೆಜಿ ಟೊಮೆಟೊ ಬೆಲೆ ಈಗಾಗಲೇ ದ್ವಿಗುಣಗೊಂಡಿದ್ದು, ಇನ್ನೂ ಹೆಚ್ಚುವ ಸಾಧ್ಯತೆಯಿದೆ.

ಟೊಮೆಟೊ ಬೆಲೆ ಮತ್ತೆ ಏರಿಕೆ ಕಂಡಿದೆ.
ಟೊಮೆಟೊ ಬೆಲೆ ಮತ್ತೆ ಏರಿಕೆ ಕಂಡಿದೆ.

ಬೆಂಗಳೂರು: ಮುಂಗಾರು ಮಳೆ ಚುರುಕುಗೊಳ್ಳುತ್ತಿರುವ ಮಂದಹಾಸದ ನಡುವೆ ಟೊಮೊಟೊ ಬೆಳೆದ ರೈತರ ಮುಖದಲ್ಲೂ ಖುಷಿ ಕಾಣುತ್ತಿದೆ. ಆದರೆ ಟೊಮೊಟೊ ಬಳಸುವವರಿಗೆ ಮಾತ್ರ ಬಿಸಿ ತಟ್ಟುತ್ತಿದೆ. ಏಕೆಂದರೆ ಕರ್ನಾಟದಲ್ಲಿ ಟೊಮೊಟೋ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಮೂರ್ನಾಲ್ಕು ದಿನದಲ್ಲಿಯೇ ಟೊಮೆಟೊ ಬೆಲೆ ದ್ವಿಗುಣಗೊಂಡಿದೆ. ಕೆ.ಜಿ.ಗೆ 40 ರೂಗಳಿದ್ದ ಟೊಮೆಟೋ ಬೆಲೆ ಈಗ 60 ರೂ.ಗಳಿಂದ 80 ರೂ.ವರೆಗೂ ಟೊಮೆಟೊ ಬೆಲೆ ತಲುಪಿದೆ. ಕರ್ನಾಟಕ ಮಾತ್ರವಲ್ಲದೇ ಇಡೀ ದೇಶದಲ್ಲಿ ವರ್ಷದ ಹಿಂದೆ ಇದೇ ರೀತಿ ಬೆಲೆ ಏರಿಕೆಯಾಗಿ ಸುಮಾರು ಎರಡು ತಿಂಗಳ ಕಾಲ ಟೊಮೆಟೊ ಬೆಲೆ ಕೆಜಿಗೆ 200 ರೂ. ದಾಟಿತ್ತು. ಈ ಬಾರಿಯೂ ಆ ಮಟ್ಟಕ್ಕೆ ಬೆಲೆ ಏರಿಕೆ ಕಾಣದೇ ಇದ್ದರೂ ಕೆಜಿಗೆ 100 ರೂ.ತಲುಪಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರಿನಲ್ಲಿಯೇ ಟೊಮೆಟೊ ಬೆಲೆ ಮೂರು ದಿನದ ಹಿಂದೆ ಕೆಜಿಗೆ 40 ರೂವರೆಗೆ ಇತ್ತು. ಈಗ ಅದು 80 ರೂ.ಗೆ ತಲುಪಿದೆ. ಬೆಂಗಳೂರಿಗೆ ಕೋಲಾರ ಸಹಿತ ನಾನಾ ಭಾಗಗಳಿಂದ ಆಗಮಿಸುತ್ತಿದ್ದ ಟೊಮೆಟೊ ಆವಕ ಕಡಿಮೆ ಆದ ಪರಿಣಾಮ ದರ ಏರಿಕೆ ಕಂಡಿರಬಹುದು ಎನ್ನಲಾಗುತ್ತಿದೆ. ಬೆಂಗಳೂರು ಮಾತ್ರವಲ್ಲದೇ ಮೈಸೂರು, ಶಿವಮೊಗ್ಗ ಸಹಿತ ಹಲವು ಕಡೆಗಳಲ್ಲಿಯೂ ಟೊಮೆಟೊ ಬೆಲೆಯಲ್ಲಿ ಏರಿಕೆ ದಾಖಲಾಗಿದೆ.

ಏಷಿಯಾದಲ್ಲಿಯೇ ಅತಿ ಹೆಚ್ಚು ಟೊಮೆಟೊ ಬೆಳೆಯುವ ಹಾಗೂ ಮಾರುಕಟ್ಟೆ ಇರುವ ಎರಡನೇ ಜಿಲ್ಲೆ ಕೋಲಾರ. ಇಲ್ಲಿಂದಲೇ ಟನ್‌ಗಟ್ಟಲೇ ಟೊಮೆಟೊ ಮಾರುಕಟ್ಟೆಗೆ ಬಂದು ದೇಶದ ನಾನಾ ಭಾಗಗಳಿಗೆ ಸರಬರಾಜು ಆಗುತ್ತಿದೆ. ಒಂದು ವಾರದಿಂದ ಇಳುವರಿ ಕಡಿಮೆಯಾಗಿರುವ ಪರಿಣಾಮವಾಗಿ ದರ ನಿಧಾನವಾಗಿ ಏರಿಕೆ ಕಂಡಿದೆ. ಇಮ್ಮೂ ಹದಿನೈದು ದಿನ ಮಾರುಕಟ್ಟೆ ಆಗಮಿಸುವ ಟೊಮೆಟೊ ಕಡಿಮೆ ಇರುವುದರಿಂದ ದರದಲ್ಲಿ ವ್ಯತ್ಯಾಸ ಆಗಬಹುದು ಎನ್ನುವ ಚರ್ಚೆಗಳು ನಡೆದಿವೆ.

ಕೋಲಾರ ಎಪಿಸಿಎಂಗೆ ಶುಕ್ರವಾರ ಬಂದಂತರ ಬಾಕ್ಸ್‌ಗಳ ಸಂಖ್ಯೆ 56,600 ತಲಾ 15ಕೆಜಿಯ ಬಾಕ್ಸ್‌ ಗಳು ಬದಿವೆ. ಇದು ಬರೀ 8,500 ಕ್ವಿಂಟಾಲ್‌ ಮಾತ್ರ. ಎರಡು ವರ್ಷದ ಹಿಂದೆ ಇದೇ ಅವಧಿಯಲ್ಲಿ ಬರೋಬ್ಬರಿ 40,000 ಕ್ವಿಂಟಾಲ್‌ ಟೊಮೆಟೋ ಮಾರುಕಟ್ಟೆಗೆ ಬಂದಿತ್ತು. ಕಳೆದ ವರ್ಷ ಟೊಮೆಟೊಗೆ ರೋಗ ಬಂದಿದ್ದರಿಂದ ಇಳುವರಿ ಕಡಿಮೆಯಾಗಿ ದರ ಗಣನೀಯವಾಗಿ ಏರಿಕೆ ಕಂಡಿತ್ತು. ಎರಡು ತಿಂಗಳ ನಂತರ ಸುಧಾರಿಸಿತ್ತು. ಇದಾದ ಒಂಬತ್ತು ತಿಂಗಳು ದರದಲ್ಲಿ ಅಂತಹ ಭಾರೀ ಏರಿಕೆಯೇನೂ ಕಂಡು ಬಂದಿರಲಿಲ್ಲ. ಈ ಬಾರಿ ಮತ್ತೆ ಇಳುವರಿ ಇಳಿಕೆಯಾಗಿರುವುದರಿಂದ ದರದಲ್ಲಿ ಏರಿಕೆಯಾಗಿದೆ ಎನ್ನುವುದು ಎಪಿಎಂಸಿ ಅಧಿಕಾರಿಗಳ ವಿವರಣೆ.

ಕೋಲಾರದಲ್ಲಿ ಟೊಮೆಟೊ ಬೆಲೆ ಏರಿಕೆ ಕಾರಣದಿಂದ ಬೆಳೆಯುವ ಪ್ರದೇಶದಲ್ಲೂ ಏರಿಕೆ ಕಂಡು ಬಂದಿತ್ತು. ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ರಾಮನಗರದಲ್ಲೂ ಕೆಲವು ಕಡೆ ಟೊಮೆಟೊ ಬೆಳೆಯುವವರ ಸಂಖ್ಯೆ ಹೆಚ್ಚಾಗಿತ್ತು. ಬೆಳೆ ಇಳಿಕೆಯಾದ ಮೇಲೆ ಕೆಲವರು ಬೇರೆ ಬೆಳೆಗಳತ್ತ ಗಮನ ಹರಿಸಿದ್ದರು.

ಇದರಿಂದಲೂ ಈಗ ಕೊಂಚ ಇಳಿಕೆಯಾಗಿದೆ. ಆದರೆ ಖಾರೀಫ್‌ ಬೆಳೆಯ ಟೊಮೆಟೋ ಜೂನ್‌ ಮೂರನೇ ವಾರದಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಆಗ ದರ ಸಹಜ ಸ್ಥಿತಿಗೆ ಮರಳಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ನಾವೇ ಟೊಮೆಟೊವನ್ನು ಕೆಜಿಗೆ 20 ರೂ.ಗೆ ತಂದು 30 ರೂ.ಗೆ ಮಾರಾಟ ಮಾಡಿದ್ದೇವೆ. ಈಗ ಸಾಮಾನ್ಯ ಟೊಮೆಟೊ ದರವೇ 60 ರೂ. ತಲುಪಿದೆ. ಉತ್ತಮ ಗುಣಮಟ್ಟದ ಟೊಮೆಟೊ ಬೆಲೆ ಕೆಜಿಗೆ 80 ರೂ. ತಲುಪಿದೆ ಎಂದು ಮೈಸೂರಿನ ವ್ಯಾಪಾರಿ ರವಿಕುಮಾರ್‌ ಹೇಳುತ್ತಾರೆ.

ಟಿ20 ವರ್ಲ್ಡ್‌ಕಪ್ 2024