Mahisha Dasara: ಮಹಿಷಾ ಮಂಡಲೋತ್ಸವ ಆಚರಣೆ; ಚಾಮುಂಡಿ ಬೆಟ್ಟ ಸೇರಿ ಮೈಸೂರಿನಲ್ಲಿ ನಿಷೇದಾಜ್ಞೆ ಜಾರಿ-mysuru news mahisha dasara prohibition order in mysore city till september 30 prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Mahisha Dasara: ಮಹಿಷಾ ಮಂಡಲೋತ್ಸವ ಆಚರಣೆ; ಚಾಮುಂಡಿ ಬೆಟ್ಟ ಸೇರಿ ಮೈಸೂರಿನಲ್ಲಿ ನಿಷೇದಾಜ್ಞೆ ಜಾರಿ

Mahisha Dasara: ಮಹಿಷಾ ಮಂಡಲೋತ್ಸವ ಆಚರಣೆ; ಚಾಮುಂಡಿ ಬೆಟ್ಟ ಸೇರಿ ಮೈಸೂರಿನಲ್ಲಿ ನಿಷೇದಾಜ್ಞೆ ಜಾರಿ

Mahisha Dasara Row: ಮಹಿಷಾ ಮಂಡಲೋತ್ಸವ ಆಚರಿಸುವ ಹಿನ್ನೆಲೆ ಮೈಸೂರಿನಲ್ಲಿ ನಿಷೇದಾಜ್ಞೆ ಹೇರಲಾಗಿದೆ. ಮೈಸೂರು ನಗರದ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.

ಮಹಿಷಾ ಮಂಡಲೋತ್ಸವ ಆಚರಣೆ; ಚಾಮುಂಡಿ ಬೆಟ್ಟ ಸೇರಿ ಮೈಸೂರಿನಲ್ಲಿ ನಿಷೇದಾಜ್ಞೆ ಜಾರಿ
ಮಹಿಷಾ ಮಂಡಲೋತ್ಸವ ಆಚರಣೆ; ಚಾಮುಂಡಿ ಬೆಟ್ಟ ಸೇರಿ ಮೈಸೂರಿನಲ್ಲಿ ನಿಷೇದಾಜ್ಞೆ ಜಾರಿ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸೆಪ್ಟೆಂಬರ್​ 28ರ ಭಾನುವಾರ ಮಹಿಷಾ ಮಂಡಲೋತ್ಸವ ಆಚರಿಸುವ ಹಿನ್ನೆಲೆಯಲ್ಲಿ ಮೈಸೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಚಾಮುಂಡಿ ಬೆಟ್ಟ ಸೇರಿ ನಗರದಲ್ಲಿ ನಿಷೇ ಹೇರಲಾಗಿದೆ ಎಂದು ನಗರದ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ. ಕಲಂ 163 ಬಿಎನ್ಎಸ್ಎಸ್ ಅಡಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.

ಅಕ್ಟೋಬರ್ 3ರಂದು ಚಾಲನೆ ಸಿಗಲಿರುವ ಮೈಸೂರು ದಸರಾ, ಅಕ್ಟೋಬರ್ 12ರಂದು ನಡೆಯುವ ಜಂಬೂ ಸವಾರಿಯೊಂದಿಗೆ ತೆರೆ ಬೀಳಲಿದೆ. ಇದರ ನಡುವೆಯೇ ಮಹಿಷಾ ದಸರಾ ನಡೆಸುವ ಕುರಿತೂ ಚರ್ಚೆ ನಡೆಯುತ್ತಿವೆ. ಅದರಂತೆ ಸೆಪ್ಟೆಂಬರ್​ 28ರಂದು ವಿವಿಧ ಸಂಘಟನೆಗಳು ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರನಿಗೆ ಪುಷ್ಪಾರ್ಚನೆ ಮಾಡಲು ಸಜ್ಜಾಗಿವೆ. ಇದಕ್ಕೆ ಬಿಜೆಪಿ ವಿರೋಧಿಸುತ್ತಿದ್ದರೆ, ಕಾಂಗ್ರೆಸ್ ಬೆಂಬಲಿಸಿದೆ. ಹೀಗಾಗಿ ದೊಡ್ಡ ಗಲಾಟೆಗಳ ಮುನ್ಸೂಚನೆ ಕಾರಣ ನಿಷೇದಾಜ್ಞೆ ಹೇರಲಾಗಿದೆ.

ಸೆಪ್ಟೆಂಬರ್ 30ರ ತನಕ ನಿಷೇದಾಜ್ಞೆ ಜಾರಿ

ಸೆಪ್ಟೆಂಬರ್ 28ರ ರಾತ್ರಿ 12 ಗಂಟೆಯಿಂದ ಮೈಸೂರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ. ಇದು 144 ಸೆಕ್ಷನ್​ ಸೆಪ್ಟೆಂಬರ್​ 30ರ ಬೆಳಿಗ್ಗೆ 6 ಗಂಟೆಯವರೆಗೆ ಇರಲಿದೆ. ಟೌನ್​ಹಾಲ್ ಒಳ ಆವರಣ ಹೊರತುಪಡಿಸಿ ಉಳಿದೆಡೆ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ಸಭೆ-ಸಮಾರಂಭ, ಮೆರವಣಿಗೆ, ರ್ಯಾಲಿ ನಡೆಸದಂತೆ ನಿಷೇಧಿಸಲಾಗಿದೆ. ಬೈಕ್‌ ರ್‍ಯಾಲಿ, ಪರ-ವಿರೋಧ ಘೋಷಣೆ ಕೂಗುವುದು, ಪಟಾಕಿ ಸಿಡಿಸಿ ಸಂಭ್ರಮಿಸುವುದು, 5 ಜನರಿಗಿಂತ ಮಂದಿ ಗುಂಪು ಇರಬಾರದು.

ಪರ-ವಿರೋಧ ಚರ್ಚೆ

ಧ್ವನಿವರ್ಧಕ ಬಳಸುವುದು, ಕರ-ಪತ್ರ ಹಂಚುವುದು, ಸಾರ್ವಜನಿಕ ಸ್ಥಳದಲ್ಲಿ ಪ್ರಚಾರ, ಫ್ಲೆಕ್ಸ್, ಬ್ಯಾನರ್ ಅಳವಡಿಸುವುದು, ಮೂರ್ತಿ ಮೆರವಣಿಗೆ ಮಾಡಬಾರದು. ಮಹಿಷಾ ದಸರಾ ಆಚರಣಾ ಸಮಿತಿಯು ಮಹಿಷಾ ದಸರಾ 2024ರ ಆಚರಿಸುವುದಕ್ಕೆ ವಿವಿಧ ಸಂಘಟನೆಗಳು, ಬುದ್ದಿ ಜೀವಿಗಳು, ಕಾರ್ಯಕರ್ತರು ಸೇರಿ ಬಹುತೇಕ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದನ್ನು ಕೆಲವರು ವಿರೋಧಿಸಿ ಪ್ರತಿಭಟಿಸುವ ಸಾಧ್ಯತೆ ಇದೆ.

ಹೀಗಾಗಿ, ಪರಿಸ್ಥಿತಿಗಳು ವಿಕೋಪಕ್ಕೆ ತಿರುಗುವ ಸಾಧ್ಯತೆ ಇದ್ದು, ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವ ಸಾಧ್ಯತೆ ದಟ್ಟವಾಗಿದೆ. ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆಗೆ ಅವಕಾಶ ನೀಡಿದರೆ ಹಾಗೂ ಮಹಿಷಾ ಮಂಡಲೋತ್ಸವ ಕಾರ್ಯಕ್ರಮ ನಡೆಸಲು ಅವಕಾಶ ನೀಡಿದರೆ ಚಾಮುಂಡಿ ಬೆಟ್ಟಕ್ಕೆ ಚಾಮುಂಡಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ಮಾಜಿ ಎಂಪಿ ಪ್ರತಾಪ್‌ ಸಿಂಹ ಹಾಗೂ ಬಿಜೆಪಿ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ. ಪ್ರಸ್ತುತ ಪರ-ವಿರೋಧ ಚರ್ಚೆಗಳು ಸಂದೇಶಗಳು ಹರಿದಾಡುತ್ತಿದೆ.

mysore-dasara_Entry_Point