ಕನ್ನಡ ಸುದ್ದಿ / ಕರ್ನಾಟಕ /
LIVE UPDATES
Karnataka News Live September 14, 2024 : ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ; ಬನ್ನಂಜೆ ಸಂಜೀವ ಸುವರ್ಣ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sat, 14 Sep 202402:37 PM IST
ಕರ್ನಾಟಕ News Live: ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ; ಬನ್ನಂಜೆ ಸಂಜೀವ ಸುವರ್ಣ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ
- ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಅವರಿಗೆ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ ಘೋಷಣೆಯಾಗಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಕೊಡಮಾಡುವ ಈ ಪ್ರಶಸ್ತಿಯು ಒಂದು ಲಕ್ಷ ರೂ ನಗದು ಹಾಗೂ ಫಲಕಗಳನ್ನು ಒಳಗೊಂಡಿದೆ. (ವರದಿ: ಹರೀಶ ಮಾಂಬಾಡಿ)
Sat, 14 Sep 202401:27 PM IST
ಕರ್ನಾಟಕ News Live: MLA Munirathna: ಜೀವ ಬೆದರಿಕೆ, ಜಾತಿ ನಿಂದನೆ ಪ್ರಕರಣ; ಬಿಜೆಪಿ ಶಾಸಕ ಮುನಿರತ್ನ ಪೊಲೀಸರ ವಶಕ್ಕೆ
- MLA Munirathna: ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ನಾಯ್ಡು ಅವರನ್ನು ಕೋಲಾರದ ನಂಗಲಿ ಗ್ರಾಮದ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುನಿರತ್ನ ವಿರುದ್ಧ ಜೀವ ಬೆದರಿಕೆ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
Sat, 14 Sep 202410:00 AM IST
ಕರ್ನಾಟಕ News Live: ಮಹಿಳೆಗೆ ಅಂಟಿಕೊಂಡಂತೆ ಕೂತ ಕಂಡಕ್ಟರ್; ನಿರ್ವಾಹಕನ ಜತೆಗೆ ವಿಡಿಯೋ ತೆಗೆದವನಿಗೂ ಬೆಂಡೆತ್ತಿದ ನೆಟ್ಟಿಗರು, ಕಾರಣ ಇಷ್ಟೆ!
- BMTC Conductor behaviour: ಎಂಟಿಸಿ ಕಂಟಕ್ಟರ್ವೊಬ್ಬರು ಮಹಿಳೆಯೊಬ್ಬರು ಸೀಟ್ಗೆ ಅಂಟಿಕೊಂಡಂತೆ ಕೂತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನಿರ್ವಾಹಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Sat, 14 Sep 202407:05 AM IST
ಕರ್ನಾಟಕ News Live: ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಖತರ್ನಾಕ್ ಕೆಲಸದಾಕೆ ಬಂಧನ; ವಜ್ರ ಸೇರಿ 53 ಲಕ್ಷದ ಮೌಲ್ಯದ ಚಿನ್ನಾಭರಣ ವಶ
- Bengaluru Crime News: ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಖತರ್ನಾಕ್ ಮನೆ ಕೆಲಸದಾಕೆಯನ್ನು ವೈಟ್‌ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಮತ್ತೆರಡು ಪ್ರತ್ಯೇಕ ಪ್ರಕರಣಗಳಲ್ಲಿ ಮನೆ ಕಳ್ಳರ ಬಂಧನವಾಗಿದ್ದು, ಆರೋಪಿಗಳ ಇನ್ನಷ್ಟು ಪ್ರಕರಣಗಳು ಬಯಲಿಗೆ ಬಂದಿವೆ. (ವರದಿ-ಎಚ್ ಮಾರುತಿ)
Sat, 14 Sep 202406:02 AM IST
ಕರ್ನಾಟಕ News Live: ಬೆಂಗಳೂರಿನಲ್ಲಿ ಈದ್-ಮಿಲಾದ್ಗೆ ಮಾರ್ಗ ಬದಲಾವಣೆ; ಅಪ್ಪಿತಪ್ಪಿಯೂ ಈ ರಸ್ತೆಗಳಲ್ಲಿ ಹೋಗ್ಬೇಡಿ, ಪಾರ್ಕಿಂಗ್ ಮಾಡ್ಬೇಡಿ
- Bengaluru Traffic Advisory: ಈದ್-ಮಿಲಾದ್ ಹಬ್ಬದಂದು ಬೆಂಗಳೂರಿನಲ್ಲಿ ಸಂಚರಿಸುವ ಉದ್ದೇಶ ಇದೆಯೆ? ಯಾವ ಯಾವ ರಸ್ತೆಯಲ್ಲಿ ಸಾಗಬೇಕು, ಎಲ್ಲೆಲ್ಲಿ ಪಾರ್ಕಿಂಗ್ ನಿಷೇಧ ಇದೆ, ಒಮ್ಮೆ ನೋಡಿಕೊಳ್ಳಿ; ಹಾಗೆಯೇ ಸಾರ್ವಜನಿಕರು ಪಾಲಿಸಬೇಕಾದ ಸೂಚನೆಗಳು ಇಲ್ಲಿವೆ. (ವರದಿ-ಎಚ್.ಮಾರುತಿ)
Sat, 14 Sep 202405:05 AM IST
ಕರ್ನಾಟಕ News Live: ಹೆಬ್ಬಾವು ಮರಿಯೆಂದು ಹಿಡಿಯಲೆತ್ನಿಸಿ ಕನ್ನಡಿ ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ ಸಾವು; ಡ್ರಾ ಮಾಡಿದ್ದ ಹಣ ಬ್ಯಾಂಕ್ನಲ್ಲೇ ಮಂಗಮಾಯ
- Mangaluru Crime News: ಹೆಬ್ಬಾವು ಮರಿಯೆಂದು ಹಿಡಿದ ವ್ಯಕ್ತಿಗೆ ಕನ್ನಡಿ ಹಾವು ಕಚ್ಚಿದ್ದು, ವಿಷವೇರಿ ಆ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಡ್ರಾ ಮಾಡಿದ್ದ ಹಣ ಬ್ಯಾಂಕ್ನಲ್ಲೇ ಮಂಗಮಾಯವಾಗಿದೆ.
Sat, 14 Sep 202405:04 AM IST
ಕರ್ನಾಟಕ News Live: ಗರಿಷ್ಠ ವಯೋಮಿತಿ 3 ವರ್ಷ ಸಡಿಲಿಕೆ ಅನ್ವಯವಾಗುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ; ಪಿಎಸ್‌ಐ ಪರೀಕ್ಷೆ ಅಕ್ಟೋಬರ್ 3
- Karnataka Government Jobs: ಉದ್ಯೋಗಾಂಕ್ಷಿಗಳಿಗೆ ಬಂಪರ್ ಅವಕಾಶ. ಅಕ್ಟೋಬರ್ 3ರಂದು ಪಿಎಸ್‌ಐ ನೇಮಕಾತಿ ಪರೀಕ್ಷೆ ನಡೆಯಲಿದೆ. ಗರಿಷ್ಠ ವಯೋಮಿತಿ 3 ವರ್ಷ ಸಡಿಲಿಕೆ ಅನ್ವಯವಾಗುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆ ರದ್ದು ಮಾಡಲಾಗಿದೆ. (ವರದಿ-ಎಚ್. ಮಾರುತಿ)