ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಖತರ್ನಾಕ್ ಕೆಲಸದಾಕೆ ಬಂಧನ; ವಜ್ರ ಸೇರಿ 53 ಲಕ್ಷದ ಮೌಲ್ಯದ ಚಿನ್ನಾಭರಣ ವಶ-bengaluru crime news theft in home worker arrest and jewelery worth rs 53 lakh including diamond seized mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಖತರ್ನಾಕ್ ಕೆಲಸದಾಕೆ ಬಂಧನ; ವಜ್ರ ಸೇರಿ 53 ಲಕ್ಷದ ಮೌಲ್ಯದ ಚಿನ್ನಾಭರಣ ವಶ

ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಖತರ್ನಾಕ್ ಕೆಲಸದಾಕೆ ಬಂಧನ; ವಜ್ರ ಸೇರಿ 53 ಲಕ್ಷದ ಮೌಲ್ಯದ ಚಿನ್ನಾಭರಣ ವಶ

Bengaluru Crime News: ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಖತರ್ನಾಕ್ ಮನೆ ಕೆಲಸದಾಕೆಯನ್ನು ವೈಟ್‌ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಮತ್ತೆರಡು ಪ್ರತ್ಯೇಕ ಪ್ರಕರಣಗಳಲ್ಲಿ ಮನೆ ಕಳ್ಳರ ಬಂಧನವಾಗಿದ್ದು, ಆರೋಪಿಗಳ ಇನ್ನಷ್ಟು ಪ್ರಕರಣಗಳು ಬಯಲಿಗೆ ಬಂದಿವೆ. (ವರದಿ-ಎಚ್ ಮಾರುತಿ)

ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಖತರ್ನಾಕ್ ಕೆಲಸದಾಕೆ ಬಂಧನ
ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಖತರ್ನಾಕ್ ಕೆಲಸದಾಕೆ ಬಂಧನ

ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳವು ಮಾಡಿದ್ದ ಮನೆ ಕೆಲಸದಾಕೆಯನ್ನು (Home Worker Arrest) ಬಂಧಿಸಿರುವ ಪೊಲೀಸರು (Bengaluru Crime News) 53 ಲಕ್ಷ ರೂಪಾಯಿ ಮೌಲ್ಯದ 13 ಗ್ರಾಂ ಡೈಮಂಡ್, 570 ಗ್ರಾಂ ಚಿನ್ನಾಭರಣ ಮತ್ತು 470 ಗ್ರಾಂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮನೆ ಮಾಲೀಕರು ಬೀರುವಿನಲ್ಲಿ ಚಿನ್ನಾಭರಣಗಳನ್ನು ಇರಿಸಿದ್ದರು. ಕೆಲವು ದಿನಗಳ ನಂತರ ಪರಿಶೀಲಿಸಿದಾಗ ಆಭರಣಗಳು ಕಳವಾಗಿದ್ದವು. ಮನೆ ಮಾಲೀಕರು ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈತ ಮೂಲತಃ ತಮಿಳುನಾಡಿನ ಕೃಷ್ಣಗಿರಿಯ ನಿವಾಸಿ ಎಂದು ತಿಳಿದು ಬಂದಿದೆ.

6 ತಿಂಗಳ ಹಿಂದೆ ಮನೆಕೆಲಸಕ್ಕೆ ಸೇರಿಕೊಂಡಿದ್ದ ಕೆಲಸದಾಕೆಯ ಮೇಲೆ ಅನುಮಾನ ಇರುವುದಾಗಿ ದೂರಿನಲ್ಲಿ ತಿಳಿಸಿದ್ದರು. ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು ಮನೆಯ ಕೆಲಸದಾಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಕೆಲಸದಾಕೆಯು ಕಳವು ಮಾಡಿರುವುದನ್ನು ಒಪ್ಪಿಕೊಂಡು ಕದ್ದಿದ್ದ 13 ಗ್ರಾಂ ಡೈಮಂಡ್, 570 ಗ್ರಾಂ ಚಿನ್ನಾಭರಣ, 470 ಗ್ರಾಂ ಬೆಳ್ಳಿಯ ವಸ್ತುಗಳನ್ನು ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿದ್ದಳು. ಬಿಹಾರ ರಾಜ್ಯದ ತನ್ನ ಸ್ವಂತ ಊರಿಗೆ ಆಭರಣಗಳನ್ನು ತೆಗೆದುಕೊಂಡು ಹೋಗುವ ಉದ್ದೇಶವಿತ್ತು ಎಂದು ಪೊಲೀಸರಿಗೆ ತಿಳಿಸಿದ್ದಳು.

ಸರಗಳ್ಳನ ಬಂಧನ

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಎದುರುಗಡೆಯಿಂದ ದ್ವಿ-ಚಕ್ರ ವಾಹನದಲ್ಲಿ ಬಂದ ಓರ್ವ ವ್ಯಕ್ತಿಯು ತನ್ನ ಕೊರಳಲ್ಲಿದ್ದ 6 ಗ್ರಾಂ ಮಾಂಗಲ್ಯದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂದು ದೂರು ನೀಡಿದ್ದರು. ತಲಘಟ್ಟಪುರ ಪೊಲೀಸ್ ಠಾಣೆ ಪೊಲೀಸರು ಅಂಚೇಪಾಳ್ಯದಲ್ಲಿರುವ ಬೃಂದಾವನ ಲೇ ಔಟ್‌ನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಈತ ಸರವನ್ನು ಆನೇಕಲ್​ನಲ್ಲಿರುವ ಜ್ಯುವಲರಿ ಶಾಪ್​ವೊಂದರಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ. ಈತನನ್ನು ಬಂಧಿಸಿ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಮಾಂಗಲ್ಯ ಸರ, 4 ದ್ವಿಚಕ್ರ ವಾಹನ ಮತ್ತು ಒಂದು ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ಈತನ ಬಂಧನದಿಂದ ತಲಘಟ್ಟಪುರ, ಕುಂಬಳಗೋಡು ಮತ್ತು ಬ್ಯಾಟರಾಯನಪುರ ಪೊಲೀಸ್ ಠಾಣೆಯ ಹಲವು ಕಳವು ಪ್ರಕರಣಗಳು ಪತ್ತೆಯಾಗಿವೆ.

ಇಬ್ಬರು ಮನೆ ಕಳ್ಳರು ಅರೆಸ್ಟ್

ರಾತ್ರಿ ವೇಳೆ ಮನೆಗಳ ಬೀಗ ಮುರಿದು ಚಿನ್ನಾಭರಣ ಕಳವು ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಹನುಮಂತನಗರ ಪೊಲೀಸ್‌ ಠಾಣಾ ಪೊಲೀಸರು ಬಂಧಿಸಿದ್ದಾರೆ. ಇವರಿಂದ 31 ಲಕ್ಷ ರೂಪಾಯಿ ಮೌಲ್ಯದ 500 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಳಗಿನ ಜಾವ ಮುಂಬಾಗಿಲನ್ನು ಸ್ವಚ್ಛಗೊಳಿಸಿ ಹಾಲ್​ನಲ್ಲಿ ಚಿನ್ನದ ಸರ ತೆಗೆದಿರಿಸಿ ಮನೆಯ ಚಿಲಕ ಹಾಕದೆ ಸ್ನಾನಕ್ಕೆ ಹೋಗಿದ್ದಾಗ ಕಳವಾಗಿದೆ ಎಂದು ಶ್ರೀನಗರದಲ್ಲಿ ವಾಸವಾಗಿರುವ ಹಿರಿಯ ನಾಗರಿಕರೊಬ್ಬರು ದೂರು ನೀಡಿದ್ದರು. ಶ್ರೀನಗರದ ಬಸ್ ನಿಲ್ದಾಣದ ಹತ್ತಿರ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ಕಳವು ಮಾಡಲು ಬಳಸಿದ್ದ.

1 ದ್ವಿಚಕ್ರ ವಾಹನ ಮತ್ತು 20 ಗ್ರಾಂ ಚಿನ್ನದ ಸರವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಹಲವು ಬಾರಿ ಕಳವು ಮಾಡಿದ್ದ ಚಿನ್ನಾಭರಣಗಳನ್ನು ಮೈಸೂರು ಜಿಲ್ಲೆಯ ವಿವಿಧ ಫೈನಾನ್ಸ್ ಕಂಪನಿಗಳಲ್ಲಿ, ಮಂಡ್ಯ ಜಿಲ್ಲೆಯ ಜ್ಯುವೆಲರಿ ಶಾಪ್‌ನಲ್ಲಿ ಅಡವಿಟ್ಟಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದ ಆರೋಪಿಗಳ ಪತ್ತೆಯಿಂದ ಹನುಮಂತನಗರ, ಮೈಸೂರಿನ ವಿಜಯನಗರ, ಜಯಪುರ ಹಾಗೂ ಮೈಸೂರಿನ ಇಲವಾಲ ಪೊಲೀಸ್ ಠಾಣೆಗಳ ತಲಾ ಒಂದು ಮನೆ ಕಳವು ಪ್ರಕರಣ ಪತ್ತೆಯಾಗಿವೆ.

mysore-dasara_Entry_Point