ತುಮಕೂರಿನ ಜನ ನಿಬಿಡ ರಸ್ತೆ ದಾಟುತ್ತಿದ್ದ ಮಹಿಳೆ ಮೇಲೆ ವೇಗವಾಗಿ ಬಂದು ಹರಿದ ಕೆಎಸ್ಆರ್‌ಟಿಸಿ ಬಸ್; ವಿಡಿಯೋ ವೈರಲ್-viral video tumkur road crossing woman ksrtc bus rammed over woman damaging legs video went viral kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ತುಮಕೂರಿನ ಜನ ನಿಬಿಡ ರಸ್ತೆ ದಾಟುತ್ತಿದ್ದ ಮಹಿಳೆ ಮೇಲೆ ವೇಗವಾಗಿ ಬಂದು ಹರಿದ ಕೆಎಸ್ಆರ್‌ಟಿಸಿ ಬಸ್; ವಿಡಿಯೋ ವೈರಲ್

ತುಮಕೂರಿನ ಜನ ನಿಬಿಡ ರಸ್ತೆ ದಾಟುತ್ತಿದ್ದ ಮಹಿಳೆ ಮೇಲೆ ವೇಗವಾಗಿ ಬಂದು ಹರಿದ ಕೆಎಸ್ಆರ್‌ಟಿಸಿ ಬಸ್; ವಿಡಿಯೋ ವೈರಲ್

ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರ ಮೇಲೆ ಕೆಎಸ್‌ಆರ್‌ಟಿಸಿ ಬಸ್‌ ಹರಿದು ಮಹಿಳೆ ಕಾಲು ಮುರಿದಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ.

ತುಮಕೂರಿನಲ್ಲಿ ಸಾರಿಗೆ ಬಸ್‌ ಡಿಕ್ಕಿಯಾಗಿ ಮಹಿಳೆಗೆ ತೀವ್ರ ಗಾಯವಾಗಿದೆ.
ತುಮಕೂರಿನಲ್ಲಿ ಸಾರಿಗೆ ಬಸ್‌ ಡಿಕ್ಕಿಯಾಗಿ ಮಹಿಳೆಗೆ ತೀವ್ರ ಗಾಯವಾಗಿದೆ.

ತುಮಕೂರು: ತುಮಕೂರಿನಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆ ಮೇಲೆ ಕೆಎಸ್‌ ಆರ್‌ಟಿಸಿ ಬಸ್‌ ಹರಿದಿರುವ ಘಟನೆ ನಡೆದಿದ್ದು, ಘಟನೆಯ ವಿಡಿಯೋ ವೈರಲ್‌ ಆಗಿದೆ. ತುಮಕೂರಿನ ಬಸ್ ಟರ್ಮಿನಲ್ ಬಳಿ ರಸ್ತೆ ದಾಟುತ್ತಿದ್ದ ಮಹಿಳೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಬಸ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಏಕಾಏಕಿ ಬಂದ ಬಸ್‌ ಹರಿದಾಗ ಕುಸಿದು ಬಿದ್ದ ಮಹಿಳೆಯನ್ನು ಅಲ್ಲಿದ್ದವರು ಆಸ್ಪತ್ರೆಗೆ ದಾಖಲಿಸಲು ಮುಂದಾಗಿರುವುದು ವಿಡಿಯೋದಲ್ಲಿ ದಾಖಲಾಗಿದೆ. ತುಮಕೂರಿನ ತುರ್ತು ಸೇವೆಗಳು ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಲಾಗಿದೆ.

ಕರ್ನಾಟಕ ಪೋರ್ಟ್‌ ಪೋಲಿಯೊ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್‌ ನಲ್ಲಿ ಪೋಸ್ಟ್ ಮಾಡಿದ ವೀಡಿಯೊ ವೈರಲ್‌ ಆಗಿದೆ. ಕೆಎಸ್ಆರ್ಟಿಸಿ ಬಸ್ ವೇಗವಾಗಿ ಚಲಿಸುತ್ತಿದ್ದಾಗ ಎದುರಿಗೆ ಬರುತ್ತಿದ್ದ ವಾಹನದ ಬಗ್ಗೆ ಅರಿವಿಲ್ಲದ ಮಹಿಳೆ ರಸ್ತೆಗೆ ಇಳಿದಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ವೀಡಿಯೊದಲ್ಲಿ ನೋಡಿದಂತೆ, ಘರ್ಷಣೆಯು ತೀವ್ರವಾಗಿತ್ತು ಮತ್ತು ಮಹಿಳೆಗೆ ಗಂಭೀರ ಗಾಯಗಳಿಗೆ ಕುಸಿದೇ ಬಿದ್ದಿರುವುದು ಅಪಘಾತದ ತೀವ್ರತೆಯನ್ನು ಹೇಳುತ್ತಿತ್ತು. ಮಹಿಳೆಯ ಕಾಲು ಮೇಲೆ ಬಸ್‌ ಹರಿದಿರುವುದರಿಂದ ಒಂದು ಕಾಲಿಗೆ ತೀವ್ರ ಗಾಯವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಮಹಿಳೆ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಲಾಗಿದೆ.

ಒಂದು ವಾರದ ಹಿಂದೆ, ಬೆಂಗಳೂರಿನ ಕಾಡುಬೀಸನಹಳ್ಳಿಯ ಗೇರ್ ಸ್ಕೂಲ್ ರಸ್ತೆಯಲ್ಲಿ 31 ವರ್ಷದ ಬೆಂಗಳೂರು ಟೆಕ್ಕಿ ತನ್ನ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗಸುಮಾರು 25 ಅಡಿ ಎಳೆದೊಯ್ದಿದಿತ್ತು ಬಸ್‌.

ಆಗಸ್ಟ್‌ ನಲ್ಲಿ ಬೆಂಗಳೂರಿನಲ್ಲಿ ಇದೇ ರೀತಿಯ ಘಟನೆ ವೈರಲ್ ಆಗಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ಇಬ್ಬರು ಬೈಕ್ ಸವಾರರಿಗೆ ಡಿಕ್ಕಿ ಹೊಡೆದಿತ್ತು. ಬೈಕ್ ಸವಾರರಿಗೆ ಗಂಭೀರ ಗಾಯಗಳಾಗಿದ್ದವು.

mysore-dasara_Entry_Point