ಹಣ್ಣು-ತರಕಾರಿಯನ್ನು ಹಸಿಯಾಗಿ ತಿನ್ನುವುದು ಒಳ್ಳೇದಾ ಅಥವಾ ಜ್ಯೂಸ್ ಮಾಡಿ ಕುಡಿಯುವುದು ಒಳ್ಳೇದಾ? ಉತ್ತಮ ಆರೋಗ್ಯಕ್ಕೆ ಇಲ್ಲಿದೆ ಸಲಹೆ
ಹಣ್ಣುಗಳು ಮತ್ತು ತರಕಾರಿಗಳನ್ನು ಜ್ಯೂಸ್ ಮಾಡಿದಾಗ ಅದರಲ್ಲಿರುವ ಹಲವಾರು ಅಂಶಗಳು ಇಲ್ಲದಂತಾಗುತ್ತದೆ. ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಲು ಪ್ರಮುಖ ಕಾರಣವೆಂದರೆ ಅವುಗಳಲ್ಲಿ ಫೈಬರ್ ಇರುತ್ತದೆ ಎಂಬುದು. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ಇದನ್ನು ಓದಲೇಬೇಕು.
ಹಣ್ಣುಗಳು ಮತ್ತು ತರಕಾರಿಗಳನ್ನು ಸಂಪೂರ್ಣವಾಗಿ ತಿನ್ನುವುದಕ್ಕಿಂತ ಹೆಚ್ಚಾಗಿ ಜ್ಯೂಸ್ ಮಾಡಿಕೊಂಡು ಕೆಲವರು ಕುಡಿಯುತ್ತಾರೆ. ಜ್ಯೂಸ್ ಕುಡಿದರೆ ಹೆಚ್ಚಿನ ಪ್ರಯೋಜನವಿದೆ ಎಂದು ಹಲವರು ಅಂದುಕೊಂಡಿದ್ದಾರೆ. ಆದರೆ ಜ್ಯೂಸ್ ಕುಡಿಯುವುದು ಉತ್ತಮವೋ ಅಥವಾ ಹಸಿಯಾಗಿ ಹಣ್ಣು ಮತ್ತು ತರಕಾರಿಗಳನ್ನು ತಿನ್ನುವುದು ಉತ್ತಮವೋ ಎಂಬುದನ್ನು ನಾವು ನಿಮಗಿಲ್ಲಿ ನೀಡಿದ್ದೇವೆ. ನಿಮ್ಮ ಅಭಿಪ್ರಾಯ ಈ ಬಗ್ಗೆ ಹೇಗಿದೆ ಎಂಬುದನ್ನು ನೀವೇ ಪರೀಕ್ಷೆ ಮಾಡಿಕೊಳ್ಳಿ.
ಜ್ಯೂಸ್ ಇಷ್ಟಪಡುವವರ ಗಮನಕ್ಕೆ
ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸದೇ ಇರುವ ಬದಲು ಜ್ಯೂಸ್ ಮಾಡುವುದು ಖಂಡಿತವಾಗಿಯೂ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಹಣ್ಣುಗಳು ಮತ್ತು ತರಕಾರಿಗಳನ್ನು ಜ್ಯೂಸ್ ಮಾಡಿದಾಗ ಅದರಲ್ಲಿರುವ ಹಲವಾರು ಅಂಶಗಳು ಇಲ್ಲದಂತಾಗುತ್ತದೆ. ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಲು ಪ್ರಮುಖ ಕಾರಣವೆಂದರೆ ಅವುಗಳಲ್ಲಿ ಫೈಬರ್ ಇರುತ್ತದೆ ಎಂಬುದು. ಫೈಬರ್ ಅಂಶವು ಜಠರಗರುಳಿನ ಆರೋಗ್ಯವನ್ನು ಹೆಚ್ಚಿಸಲು ಮತ್ತು ದೇಹದಲ್ಲಿನ ರಕ್ತದ ಸಕ್ಕರೆ ಮಟ್ಟವನ್ನು ಕ್ರಮಬದ್ಧಗೊಳಿಸಲು ಸಹಾಯ ಮಾಡುತ್ತದೆ.
ತರಕಾರಿಗಳಲ್ಲಿನ ಫೈಬರ್ ಅಂಶ ಮುಖ್ಯ
ಜ್ಯೂಸಿಂಗ್ ಹಣ್ಣುಗಳು ಮತ್ತು ತರಕಾರಿಗಳಲ್ಲಿನ ಫೈಬರ್ ಅಂಶವನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ. ನಾವು ಹಣ್ಣು ಅಥವಾ ತರಕಾರಿಯನ್ನು ಜ್ಯೂಸ್ ಮಾಡಿದಾಗ, ಅದಕ್ಕೆ ನೀರು ಮತ್ತು ಸಕ್ಕರೆಯನ್ನು ಸೇರಿಸುತ್ತೇವೆ. ಮೂಲ ರೂಪದಲ್ಲಿ ಹಣ್ಣನ್ನು ತಿನ್ನುವುದಕ್ಕಿಂತ ಇದು ವಿಭಿನ್ನವಾಗಿರುತ್ತದೆ. ಹೆಚ್ಚಾಗಿ ಎಲ್ಲರೂ ಸಕ್ಕರೆ ಹಾಗೂ ನೀರನ್ನು ಸೇರಿಸಿಯೇ ಜ್ಯೂಸ್ ಮಾಡುತ್ತಾರೆ.
ನಾವು ಸಂಪೂರ್ಣ ಹಣ್ಣು ಅಥವಾ ತರಕಾರಿಗಳನ್ನು ಸೇವಿಸಿದಾಗ ಪಡೆಯುವ ಆರೋಗ್ಯಕರ ಲಾಭಗಳು ಜ್ಯೂಸಿಗಿಂತ ಹೆಚ್ಚು. ಇನ್ನು ಹಲವಾರು ಜನ ಜ್ಯೂಸ್ ಕುಡಿದು ತೂಕ ಇಳಿಕೆ ಮಾಡಿಕೊಳ್ಳಬಹುದು ಎಂದು ಅಂದುಕೊಂಡಿರುತ್ತಾರೆ. ಇದರಲ್ಲಿ ಒಂದು ಅಂಶವಿದೆ. ನಾವು ಎಷ್ಟು ಕ್ಯಾಲೊರಿ ಸೇವನೆ ಮಾಡುತ್ತೇವೆಯೋ ಅದಕ್ಕಿಂತ ಹೆಚ್ಚು ಕ್ಯಾಲೊರಿಯನ್ನು ಬರ್ನ್ ಮಾಡಬೇಕು. ನೀವು ಏನೇ ತಿಂದರೂ ಅದನ್ನು ಕರಗಿಸುವಷ್ಟು ವ್ಯಾಯಾಮವನ್ನು ಮಾತ್ರ ಮಾಡಲೇಬೇಕು.
ಪದೇ ಪದೇ ಹಸಿವಾಗಬಹುದು
ಇನ್ನು ಜ್ಯೂಸ್ ಮಾಡಿ ಕುಡಿದಾಗ ನಿಮಗೆ ಸಂಪೂರ್ಣ ಹೊಟ್ಟೆ ತುಂಬುವುದಿಲ್ಲ. ಆಗಾಗ ಹಸಿವಾಗುತ್ತಾ ಇರುತ್ತದೆ. ಆ ಸಂದರ್ಭದಲ್ಲಿ ನೀವು ಬೇರೆ ಇನ್ನೇನಾದರೂ ತಿಂದರೆ ಇದು ನಿಮ್ಮ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ, ಹೊರತಾಗಿ ನಿಮ್ಮ ತೂಕ ಇಳಿಕೆ ಆಗುವುದಿಲ್ಲ. ಇದನ್ನು ಸರಿಯಾಗಿ ನೆನಪಿನಲ್ಲಿಟ್ಟುಕೊಳ್ಳಿ.
ನಾವು ಫೈಬರ್ ಅಂಶವಿಲ್ಲದೆ ಹಣ್ಣಿನ ರಸವನ್ನು ಸೇವನೆ ಮಾಡಿದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ.
ಗಮನಿಸಿ: ಈ ಲೇಖನವನ್ನು ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಬರೆಯಲಾಗಿದೆ. ನೀವು ವೈದ್ಯರ ಸಲಹೆ ಪಡೆದು ನಿರ್ಣಯ ತೆಗೆದುಕೊಳ್ಳಿ.
ವಿಭಾಗ