Relationship Tips: ತಪ್ಪು ಯಾರದೇ ಇದ್ದರು ಯಾವಾಗಲೂ ನೀವೇ ಕ್ಷಮೆ ಕೇಳುತ್ತೀರಾ? ಹಾಗಾದ್ರೆ ನೀವಿದನ್ನೊಮ್ಮೆ ಓದಲೇಬೇಕು
ಕ್ಷಮೆ ಕೇಳಬೇಡಿ: ಸಂಬಂಧದಲ್ಲಿ ಒಮ್ಮೆ ಒಬ್ಬರು, ಇನ್ನೊಮ್ಮೆ ಇನ್ನೊಬ್ಬರು ತಪ್ಪು ಮಾಡುತ್ತಾ ಇರುತ್ತಾರೆ. ಆದರೆ ಅದು ತನ್ನದೇ ತಪ್ಪು ಎಂದು ಅಂದುಕೊಂಡು ಪ್ರತಿಬಾರಿಯೂ ಒಬ್ಬರೇ ಕ್ಷಮೆ ಕೇಳುವುದು ಸರಿ ಅಲ್ಲ. ಇದು ನಿಮ್ಮ ಆತ್ವವಿಶ್ವಾಸವನ್ನು ಕಡಿಮೆ ಮಾಡುತ್ತಾ ಹೋಗುತ್ತದೆ. ಹಾಗಾಗಿ ಈ ಸಲಹೆಯನ್ನು ಪಾಲಿಸಿ.
ಸಂಬಂಧದಲ್ಲಿ ಯಾವಾಗಲೂ ಇಬಬ್ರೂ ಸಮಾನರಾಗಿರಬೇಕು. ಇಲ್ಲವಾದರೆ ಅಸಮತೋಲನ ಸೃಷ್ಟಿ ಆಗುತ್ತದೆ. ಒಬ್ಬರಿಗಿಂತ ಇನ್ನೊಬ್ಬರು ಹೆಚ್ಚು ಪ್ರಾಭಲ್ಯ ತೋರಿಸುತ್ತಾ ಹೋಗುತ್ತಾರೆ. ಆಗ ಇನ್ನೊಬ್ಬರಿಗೆ ತಾನು ಅಡಿಆಳು ಎಂಬ ಭಾವನೆ ಬರುತ್ತದೆ. ಈ ರೀತಿ ಆದಾಗ ಸಂಬಂಧ ಕೆಡುವ ಸಾಧ್ಯತೆ ತುಂಬಾ ಇರುತ್ತದೆ. ಯಾಕೆಂದರೆ ಸಂಗಾತಿ ತಾನು ಹೇಳಿದ ಯಾವ ಮಾತನ್ನೂ ಕೇಳುವುದಿಲ್ಲ. ಯಾವಾಗಲೂ ನಾನೇ ಕ್ಷಮೆ ಯಾಚಿಸಬೇಕು ಎಂದು ಇನ್ನೊಬ್ಬರಿಗೆ ಅನಿಸುವುದು ಸಹಜ. ಈ ರೀತಿ ಆಗದಂತೆ ನೀಡಿಕೊಳ್ಳಬೇಕಾಗುತ್ತದೆ.
ಇದರಿಂದ ಏನೆಲ್ಲ ಸಮಸ್ಯೆ ಆಗುತ್ತದೆ ಎಂಬುದನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ. ಸಂಬಂಧದಲ್ಲಿ, ನಾವು ಸಾಕಷ್ಟು ಕ್ಷಮೆ ಕೇಳಿದಾಗ, ಅದು ನಮ್ಮ ಮೌಲ್ಯ ಮತ್ತು ಉಪಸ್ಥಿತಿಯನ್ನು ದುರ್ಬಲಗೊಳಿಸುತ್ತದೆ. ಆಗ ಬೇಸರ ಮತ್ತು ಅಸಮಾಧಾನ ಉಂಟಾಗುತ್ತದೆ. ನಾವು ಎಲ್ಲದಕ್ಕೂ ಕ್ಷಮೆಯಾಚಿಸುವ ಅಭ್ಯಾಸವನ್ನು ಮಾಡಿಕೊಂಡಾಗ ಅದು ನಮಗೆ ತೊಂದರೆ ಎನಿಸಲು ಆರಂಭವಾಗಬಹುದು. ನಮ್ಮ ಆತ್ಮವಿಶ್ವಾಸವು ಕಡಿಮೆಯಾಗುತ್ತಾ ಬರಬಹುದು.
ಇಲ್ಲ ಯಾವಾಗಲೂ ನಾನೇ ತಪ್ಪು ಮಾಡುತ್ತೇನೆ. ಯಾವಾಗಲೂ ನಾನೇ ತಪ್ಪಾಗಿ ಆಲೋಚನೆ ಮಾಡುತ್ತೇನೆ ಎಂದು ಅನಿಸಲು ಆರಂಭವಾಗುತ್ತದೆ. ನೀವು ಅದನ್ನೇ ನಂಬಲು ಆರಂಭಿಸುತ್ತೀರಾ. ನಮ್ಮ ಸ್ವಾಭಿಮಾನದ ಬಗ್ಗೆ ಇತರರಿಗೆ ವಿಶ್ವಾಸ ಹೋಗುತ್ತದೆ. ಯಾವಾಗಲೂ ಎಲ್ಲಾ ಸಂದರ್ಭದಲ್ಲೂ ನಿಮ್ಮದೇ ಸರಿ ಇದ್ದರೂ ನೀವು ಸೋಲುತ್ತಲೇ ಬರಬೇಕಾಗುತ್ತದೆ. ಅತಿಯಾಗಿ ಕ್ಷಮೆಯಾಚಿಸುವ ನಮ್ಮ ಪ್ರವೃತ್ತಿಯನ್ನು ಮೌಲ್ಯಮಾಪನ ಮಾಡುವುದು ಮತ್ತು ಈ ಅಭ್ಯಾಸವನ್ನು ಕಡಿಮೆ ಮಾಡುವುದು ಉತ್ತಮ.
ನಾವು ಅತಿಯಾಗಿ ಕ್ಷಮೆ ಕೇಳುವುದನ್ನು ಹೇಗೆ ನಿಲ್ಲಿಸಬಹುದು ಎಂಬುದರ ಕುರಿತು ಚಿಕಿತ್ಸಕರು ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ.
ಮೂಲ ಕಾರಣವನ್ನು ಗುರುತಿಸಿ:
ನಾವು ಸ್ವಯಂ-ಅರಿವಿನ ಮೇಲೆ ಕೆಲಸ ಮಾಡಬೇಕಾಗುತ್ತದೆ. ನೀವು ಯಾಕೆ ಈ ರೀತಿ ಮಾಡುತ್ತಾ ಇದ್ದೀರಿ? ಯಾವಾಗಿನಿಂದ ಈ ಅಭ್ಯಾಸ ರೂಢಿ ಆಗಿದೆ ಎಂದು ಅದರ ಮೂಲವನ್ನು ಹುಡುಕಿಕೊಂಡು ಹೋಗಬೇಕು. ನಂತರ ಈ ರೀತಿ ಆಗಲು ಇದ್ದ ಮುಖ್ಯ ಕಾರಣವನ್ನು ಹುಡುಕಿ ಅದನ್ನು ನೀವು ಮೊದಲ ಭಾರಿ ಯಾವಾಗ ಕೇಳೀದ್ದೀರಾ ಎಂದು ಹೇಳ. ಅತಿಯಾಗಿ ಕ್ಷಮೆಯಾಚಿಸಲು ಕಾರಣಗಳನ್ನು ಕಂಡುಹಿಡಿಯಬೇಕು. ಅದು ಅಭದ್ರತೆ ಅಥವಾ ಘರ್ಷಣೆಯ ಭಯದಿಂದ ಹುಟ್ಟಿದ್ದು ಎಂದು ನಿಮಗೇ ಅನಿಸುತ್ತದೆ.
ಎಲ್ಲಿ ನನ್ನ ಸಂಗಾತಿ ತನ್ನಿಂದ ದೂರ ಆಗುತ್ತಾರೋ ಏನೋ ? ಎಂಬ ಅನುಮಾನ ಬಂದಾಗ ನಾನೇ ಹೊಂದಿಕೊಂಡು ಹೋಗಬೇಕು ಎಂದು ಅನಿಸಿದಾಗ ಮಾತ್ರ ಈ ರೀತಿ ಮಾಡಲು ಆರಂಭಿಸುತ್ತೀರಾ.
ಇದಕ್ಕೆ ಪರಿಹಾರ:
ನೀವು ಕ್ಷಮೆ ಕೇಳದೇ ಇದ್ದರೂ ನಿಮ್ಮ ಸಂಗಾತಿ ಎಲ್ಲಿಗೂ ಹೋಗುವುದಿಲ್ಲ. ಅವರು ನಿಮ್ಮನ್ನು ಬಿಟ್ಟು ಹೋಗುತ್ತಾರೆ ಎಂಬ ಭಯವನ್ನು ಮನಸಿನಿಂದ ಕಿತ್ತುಹಾಕಿ ಆಗ ಇವೆಲ್ಲವೂ ಕಡಿಮೆ ಆಗುತ್ತದೆ. ಸರಳ ಹಾಗೂ ಸುಂದರವಾದ ಜೀವನ ನಿಮ್ಮದಾಗುತ್ತದೆ.
ವಿಭಾಗ