Decode VIN: ಕಾರು ತಯಾರಿಕಾ ವರ್ಷ ಮತ್ತು ತಿಂಗಳು ತಿಳಿಯುವುದು ಹೇಗೆ? ಹೊಸ ಕಾರು ಖರೀದಿ ಸಂದರ್ಭದಲ್ಲಿ ವಿಐಎನ್ ಸಂಖ್ಯೆ ಹೀಗೆ ಡಿಕೋಡ್ ಮಾಡಿ
Decode Car VIN Number: ವಿಐಎನ್ ಸಂಖ್ಯೆಯ ಮೂಲಕ ಕಾರಿನ ನಿರ್ಮಾಣ ವರ್ಷ ಮತ್ತು ತಿಂಗಳು ಕಂಡುಹಿಡಿಯಬಹುದು. ಬಹುತೇಕ ಕಾರು ಕಂಪನಿಗಳ ವಿಐಎನ್ ಸಂಖ್ಯೆಯ ಮಾದರಿ ಒಂದೇ ರೀತಿ ಇರುತ್ತದೆ. ಆದರೆ, ಕೆಲವು ಕಾರು ಕಂಪನಿಗಳ ವಿಐಎನ್ ಸಂಖ್ಯೆಯಲ್ಲಿ ನಿರ್ಮಾಣ ವರ್ಷ ಮತ್ತು ತಿಂಗಳನ್ನು ತಿಳಿಯುವ ಬಗೆ ಬೇರೆಬೇರೆ ಇರುತ್ತದೆ.
Decode Car VIN Number: ಹೊಸ ಕಾರು ಖರೀದಿ ಸಂದರ್ಭದಲ್ಲಿ ಡೀಲರ್‌ಗಳು ಆರು ತಿಂಗಳು ಅಥವಾ ಒಂದು ವರ್ಷದ ಹಿಂದೆ ನಿರ್ಮಾಣ ಮಾಡಿದ ಕಾರನ್ನು ನಿಮಗೆ ನೀಡಬಹುದು. ಹೊಸ ಬ್ರ್ಯಾಂಡ್ ಕಾರು ಖರೀದಿಗೆ ಹಣ ನೀಡಿದ ನಿಮಗೆ ಕಳೆದ ವರ್ಷ ಮ್ಯಾನುಫ್ಯಾಕ್ಚರ್ ಆದ ಕಾರು ನೀಡಬಹುದು. ಸಾಮಾನ್ಯವಾಗಿ ವಾಹನದ ವಿಐಎನ್ ಸಂಖ್ಯೆ ಡಿಕೋಡ್ ಮಾಡಲು ತಿಳಿಯದೆ ಇದ್ದರೆ ಈ ರೀತಿ ಮೋಸ ಹೋಗುವ ಸಾಧ್ಯತೆ ಇರುತ್ತದೆ. ವಿಐಎನ್ ಸಂಖ್ಯೆಯ ಮೂಲಕ ಕಾರಿನ ನಿರ್ಮಾಣ ವರ್ಷ ಮತ್ತು ತಿಂಗಳು ಕಂಡುಹಿಡಿಯಬಹುದು. ಬಹುತೇಕ ಕಾರು ಕಂಪನಿಗಳ ವಿಐಎನ್ ಸಂಖ್ಯೆಯ ಮಾದರಿ ಒಂದೇ ರೀತಿ ಇರುತ್ತದೆ. ಆದರೆ, ಕೆಲವು ಕಾರು ಕಂಪನಿಗಳ ವಿಐಎನ್ ಸಂಖ್ಯೆಯಲ್ಲಿ ನಿರ್ಮಾಣ ವರ್ಷ ಮತ್ತು ತಿಂಗಳನ್ನು ತಿಳಿಯುವ ಬಗೆ ಬೇರೆಬೇರೆ ಇರುತ್ತದೆ. ವಿಐಎನ್ ಸಂಖ್ಯೆಯನ್ನು ಎಂಜಿನ್‌ಬೇ ಅಥವಾ ಬೇರೆ ಕಡೆಗಳಲ್ಲಿ ಅಂಟಿಸಲಾಗಿರುತ್ತದೆ.
ಕಾರಿನಲ್ಲಿ ವಿಐಎನ್ ಸಂಖ್ಯೆ ಎಲ್ಲಿರುತ್ತದೆ?
ವಿಐಎನ್ ಸಂಖ್ಯೆಯ ಪ್ಲೇಟ್ ಅನ್ನು ಆಯಾ ಕಂಪನಿಗಳು ಕಾರಿನ ವಿವಿಧ ಕಡೆ ಅಂಟಿಸಿರಬಹುದು. ವೈಂಡ್‌ಶೀಲ್ಡ್ ಬೇಸ್‌ನಲ್ಲಿ ಇರಬಹುದು. ಡ್ರೈವರ್ ಸೈಡ್‌ಡೋರ್‌ನಲ್ಲಿ ಇರಬಹುದು. ವಾಹನ ನೋಂದಣಿ ದಾಖಲೆ ಪತ್ರಗಳಲ್ಲಿಯೂ ವಿಐಎನ್ ಸಂಖ್ಯೆ ಇರುತ್ತದೆ. ವಿಮಾ ಪೇಪರ್‌ಗಳಲ್ಲಿಯೂ ಇರುತ್ತದೆ. ವಾಹನ್ ಖಾತೆಯಲ್ಲೂ ಇರುತ್ತದೆ. ಸ್ಪೇರ್‌ಟೈರ್‌ನಡಿ ಇರಬಹುದು. ರೇಡಿಯೇಟರ್ ಕೋರ್ ಸಫೊರ್ಟ್ ಅಥವಾ ಫ್ರೇಮ್‌ನಲ್ಲಿ ವಿಐಎನ್ ಸಂಖ್ಯೆಯನ್ನು ಅಂಟಿಸಿರಬಹುದು. ಕಾರು ಡೀಲರ್‌ಶಿಪ್‌ನಲ್ಲೇ ವಿಐಎನ್ ಸಂಖ್ಯೆಯನ್ನು ಕೇಳಿ ಪಡೆಯಬಹುದು.
ಏನಿದು ಕಾರಿನ ವಿಐಎನ್ ಸಂಖ್ಯೆ?
ಇದು 17 ಡಿಜಿಟ್‌ನ ಸಂಖ್ಯೆ ಮತ್ತು ಅಕ್ಷರಗಳನ್ನು ಹೊಂದಿರುವ ಗುರುತಾಗಿದೆ. ಇದರಲ್ಲಿ ಕಾರಿನ ನಿರ್ಮಾಣ ಮತ್ತು ನೋಂದಣಿ ವಿವರ ಇರುತ್ತದೆ. ಈ ಹದಿನೇಳು ಕ್ಯಾರೇಕ್ಟರ್‌ಗಳಲ್ಲಿ ಮೊದಲ ಎರಡು ಮೂರು ಅಕ್ಷರಗಳು ಕಾರಿನ ಕಂಪನಿಗಳಿಗೆ ತಕ್ಕಂತೆ ಬದಲಾವಣೆಯಾಗಿರುತ್ತವೆ.
ಇಲ್ಲಿ ಉದಾಹರಣೆಯಾಗಿ ಟಾಟಾ ಮೋಟಾರ್ಸ್‌ನ 17 ಕ್ಯಾರೆಕ್ಟರ್‌ನ ವಿಐಎನ್ ಕೋಡ್ ಹೇಗೆ ಡಿಕೋಡ್ ಮಾಡೋದು ನೋಡೋಣ. ಐ ಒ ಕ್ಯು ಅಕ್ಷರಗಳನ್ನು ವಿಐಎನ್‌ನಲ್ಲಿ ಬಳಸಲಾಗುವುದಿಲ್ಲ.
ತಿಂಗಳ ಕೋಡ್‌ಗಳು
- ಎ = ಜನವರಿ
- ಬಿ = ಫೆಬ್ರವರಿ
- ಸಿ = ಮಾರ್ಚ್
- ಡಿ = ಏಪ್ರಿಲ್
- ಇ = ಮೇ
- ಎಫ್ = ಜೂನ್
- ಜಿ = ಜುಲೈ
- ಎಚ್ = ಆಗಸ್ಟ್
- ಜೆ = ಸೆಪ್ಟೆಂಬರ್
- ಕೆ = ಅಕ್ಟೋಬರ್
- ಎನ್ = ನವೆಂಬರ್
- ಪಿ = ಡಿಸೆಂಬರ್
ವರ್ಷದ ಕೋಡ್‌ಗಳು
- ಎ = 2010
- ಬಿ = 2011
- ಸಿ = 2012
- ಡಿ = 2013
- ಇ = 2014
- ಎಫ್ = 2015
- ಜಿ = 2016
- ಎಚ್ = 2017
- ಜೆ = 2018
- ಕೆ = 2019
- ಎಲ್ = 2020
- ಎಂ = 2021
- ಎನ್ = 2022
- ಪಿ = 2023
- ಆರ್ = 2024
- ಎಸ್ = 2025
- ಟಿ = 2026
- ವಿ = 2027
- ಡಬ್ಲ್ಯು = 2028
- ಎಕ್ಸ್ = 2029
- ವೈ = 2030
ಟಾಟಾ ಮೋಟಾರ್ಸ್
- ಇದರಲ್ಲಿ 10ನೇ ವಿಐಎನ್ ಅಕ್ಷರ ಎ ಆಗಿದ್ದರೆ, 2010 ತಯಾರಿಕಾ ವರ್ಷ ಎಂದು ತಿಳಿಯಿರಿ.
- 12ನೇ ವಿಐಎನ್ ಅಕ್ಷರ ಜಿ ಆಗಿದ್ದರೆ ಜುಲೈ ಎಂದು ತಿಳಿಯಿರಿ
ಇದನ್ನೂ ಓದಿ: 2024 Tata Punch: ಯಾವ ಪಂಚ್ ಖರೀದಿಸುವಿರಿ? ಹೊಸ ಟಾಟಾ ಪಂಚ್ ಆವೃತ್ತಿಗಳ ಪರಿಚಯ ಮಾಡಿಕೊಳ್ಳೋಣ ಬನ್ನಿ
ಹೋಂಡಾ
- 9ನೇ ವಿಐಎನ್ ಸಂಖ್ಯೆ ಜಿ ಆಗಿದ್ದರೆ ಜುಲೈ (ಒಂಬತ್ತನೇ ವಿಐಎನ್ ಅಕ್ಷರ ಬೇರೆ ಇದ್ದರೆ ಮೇಲಿನ ಲಿಸ್ಟ್‌ನಲ್ಲಿ ಯಾವ ತಿಂಗಳು ಎಂದು ತಿಳಿಯಿರಿ)
- 10ನೇ ವಿಐಎನ್ ಸಂಖ್ಯೆ ಎ ಆಗಿದ್ದರೆ 2010 (ಹತ್ತನೇ ವಿಐಎನ್ ಅಕ್ಷರ ಬೇರೆ ಇದ್ದರೆ ಮೇಲಿನ ಲಿಸ್ಟ್‌ನಲ್ಲಿ ಯಾವ ವರ್ಷ ಎಂದು ತಿಳಿಯಿರಿ)
ಮಹೀಂದ್ರ
- 10ನೇ ಕ್ಯಾರೆಕ್ಟರ್ ತಯಾರಿಕಾ ವರ್ಷ
- 12ನೇ ಕ್ಯಾರೆಕ್ಟರ್ ತಯಾರಿಕಾ ತಿಂಗಳು
ಇದನ್ನೂ ಓದಿ: ಆನಂದ್ ಮಹೀಂದ್ರ ಬೇರೆ ಕಂಪನಿಗಳ ಕಾರುಗಳನ್ನು ಹೊಂದಿದ್ದಾರೆಯೇ? ಹೃದಯಸ್ಪರ್ಶಿ ಉತ್ತರ ನೀಡಿದ ಮಹೀಂದ್ರ ಗ್ರೂಪ್ ಚೇರ್ಮನ್
ಮಿಟ್ಸುಬಿಸಿ
- 10ನೇ ಕ್ಯಾರೆಕ್ಟರ್ ತಯಾರಿಕಾ ವರ್ಷ
- 11ನೇ ಕ್ಯಾರೆಕ್ಟರ್ ತಯಾರಿಕಾ ತಿಂಗಳು
ಹ್ಯುಂಡೈ
- 10ನೇ ಕ್ಯಾರೆಕ್ಟರ್ ತಯಾರಿಕಾ ವರ್ಷ
- 19ನೇ ಕ್ಯಾರೆಕ್ಟರ್ ತಯಾರಿಕಾ ತಿಂಗಳು
ಫಿಯೆಟ್
- 18ನೇ ಕ್ಯಾರೆಕ್ಟರ್ ತಯಾರಿಕಾ ತಿಂಗಳು
- 19 ಮತ್ತು 20ನೇ ಕ್ಯಾರೆಕ್ಟರ್ ತಯಾರಿಕಾ ವರ್ಷ
ಸ್ಕೋಡಾ
- 6ನೇ ಕ್ಯಾರೆಕ್ಟರ್ ತಯಾರಿಕಾ ತಿಂಗಳು
- 10ನೇ ಕ್ಯಾರೆಕ್ಟರ್ ತಯಾರಿಕಾ ವರ್ಷ
ಟೊಯೊಟಾ
- 19 ಮತ್ತು 20 ನೇ ಕ್ಯಾರೆಕ್ಟರ್ ತಿಂಗಳು
- 21 ಮತ್ತು 22ನೇ ಕ್ಯಾರೆಕ್ಟರ್ ವರ್ಷ
(ಸಾಮಾನ್ಯವಾಗಿ 0 ಮತ್ತು ಬೇರೆ ಸಂಖ್ಯೆ ಇರುತ್ತದೆ)
ಮಾರುತಿ ಸುಜುಕಿ
- 11ನೇ ಕ್ಯಾರೆಕ್ಟರ್ ತಯಾರಿಕಾ ತಿಂಗಳು
- 10ನೇ ಕ್ಯಾರೆಕ್ಟರ್ ತಯಾರಿಕಾ ವರ್ಷ
(ಕಾರು ಕಂಪನಿಗಳು ಸಾಕಷ್ಟು ಇರುವುದರಿಂದ ಉದಾಹರಣೆಯಾಗಿ ಕೆಲವು ಕಾರು ಕಂಪನಿಗಳ ವಿವರ ನೀಡಲಾಗಿದೆ. ಹೆಚ್ಚಿನ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಪಡೆಯಬಹುದು)